Ola Electric ಸ್ಕೂಟರ್ ಅನ್ನು ಆನ್ ಲೈನ್ ಮೂಲಕ ಖರೀದಿಸುವ ವಿಧಾನಗಳಿವು

ಭಾರತದಲ್ಲಿಇಂದಿನಿಂದ Ola Electric ಸ್ಕೂಟರ್ ಮಾರಾಟ ಆರಂಭವಾಗಿದೆ. ತನ್ನ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಆರಂಭವಾಗಲಿದೆ ಎಂದು Ola ಕಂಪನಿ ಕಳೆದ ವಾರ ಘೋಷಿಸಿತ್ತು. ಆದರೆ ತಾಂತ್ರಿಕ ದೋಷಗಳಿಂದಾಗಿ Ola Electric ಸ್ಕೂಟರ್ ಮಾರಾಟವನ್ನು ಮುಂದೂಡಲಾಗಿತ್ತು.

Ola Electric ಸ್ಕೂಟರ್ ಅನ್ನು ಆನ್ ಲೈನ್ ಮೂಲಕ ಖರೀದಿಸುವ ವಿಧಾನಗಳಿವು

Ola Electric ಸ್ಕೂಟರ್ ಅನ್ನು ಈಗಾಗಲೇ ಬುಕ್ ಮಾಡಿರುವವರು ಈಗ ಈ ಸ್ಕೂಟರ್ ಅನ್ನು ಖರೀದಿಸಬಹುದು. ಬುಕ್ಕಿಂಗ್ ಮಾಡುವಾಗಲೇ ಗ್ರಾಹಕರು ತಮ್ಮಿಷ್ಟದ ಮಾದರಿ ಹಾಗೂ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಬಹುದು. Ola Electric ಸ್ಕೂಟರ್ ಮಾರಾಟ ಆರಂಭವಾಗಿರುವ ಹಿನ್ನೆಲೆಯಲ್ಲಿ ಈ ಸ್ಕೂಟರ್ ಅನ್ನು ಬುಕ್ ಮಾಡಿದ್ದವರು ಸಹಜವಾಗಿಯೇ ಸಂತಸಗೊಂಡಿದ್ದಾರೆ.

Ola Electric ಸ್ಕೂಟರ್ ಅನ್ನು ಆನ್ ಲೈನ್ ಮೂಲಕ ಖರೀದಿಸುವ ವಿಧಾನಗಳಿವು

Ola ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಆಗಸ್ಟ್ 15 ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಯಿತು. Ola Electric ಸ್ಕೂಟರ್ ಅನ್ನು S 1 ಹಾಗೂ S 1 Pro ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಇವುಗಳಲ್ಲಿ S 1 ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 99,999 ಗಳಾಗಿದೆ.

Ola Electric ಸ್ಕೂಟರ್ ಅನ್ನು ಆನ್ ಲೈನ್ ಮೂಲಕ ಖರೀದಿಸುವ ವಿಧಾನಗಳಿವು

ಇದೇ ವೇಳೆ S 1 Pro ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 1,29,999 ಗಳಾಗಿದೆ. ಈ ಬೆಲೆ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಕೇಂದ್ರ ಸರ್ಕಾರವು ಫೇಮ್ 2 ಯೋಜನೆಯಡಿಯಲ್ಲಿ ನೀಡುವ ಸಬ್ಸಿಡಿಯನ್ನು ಒಳಗೊಂಡಿದೆ. ಆದರೆ ರಾಜ್ಯ ಸರ್ಕಾರಗಳು ನೀಡುವ ಸಬ್ಸಿಡಿಗಳನ್ನು ಒಳಗೊಂಡಿಲ್ಲ. ಹಾಗಾಗಿ ರಾಜ್ಯ ಸರ್ಕಾರಗಳು ಸಬ್ಸಿಡಿ ನೀಡಿದರೆ ಈ ಬೆಲೆ ಮತ್ತಷ್ಟು ಕಡಿಮೆಯಾಗುತ್ತದೆ.

Ola Electric ಸ್ಕೂಟರ್ ಅನ್ನು ಆನ್ ಲೈನ್ ಮೂಲಕ ಖರೀದಿಸುವ ವಿಧಾನಗಳಿವು

ಯಾವ ರಾಜ್ಯಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಎಷ್ಟು ಸಬ್ಸಿಡಿ ನೀಡಲಾಗುತ್ತದೆ ಎಂಬುದರ ಆಧಾರದ ಮೇಲೆ ಎಲೆಕ್ಟ್ರಿಕ್ ಸ್ಕೂಟರ್ ಗಳ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. Ola Electric ಸ್ಕೂಟರ್ ಅನ್ನು ಬುಕ್ಕಿಂಗ್ ಮಾಡುವುದು ಹಾಗೂ ಅದನ್ನು ಖರೀದಿಸುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

Ola Electric ಸ್ಕೂಟರ್ ಅನ್ನು ಆನ್ ಲೈನ್ ಮೂಲಕ ಖರೀದಿಸುವ ವಿಧಾನಗಳಿವು

1. ಈಗಾಗಲೇ Ola Electric ಸ್ಕೂಟರ್‌ ಅನ್ನು ಬುಕ್ಕಿಂಗ್ ಮಾಡಿದ್ದರೆ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು Ola Electric ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಬಹುದು. ಯಾವ ಮಾದರಿಯನ್ನು ಖರೀದಿಸಲು ಬಯಸುತ್ತೀರಿ ಎಂಬುದನ್ನು ಸಹ ಆಯ್ಕೆ ಮಾಡಿ ಕೊಳ್ಳಬಹುದು. ಇನ್ನೂ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬುಕ್ ಮಾಡದೇ ಇರುವವರು ಈಗ ಈ ಸ್ಕೂಟರ್ ಅನ್ನು ಬುಕ್ ಮಾಡಬಹುದು.

Ola Electric ಸ್ಕೂಟರ್ ಅನ್ನು ಆನ್ ಲೈನ್ ಮೂಲಕ ಖರೀದಿಸುವ ವಿಧಾನಗಳಿವು

Ola Electric ಸ್ಕೂಟರ್ ಅನ್ನು ರೂ. 499 ಪಾವತಿಸಿ ಬುಕ್ ಮಾಡಬಹುದು. ಯಾವ ಮಾದರಿ ಎಂಬುದನ್ನು ಆಯ್ಕೆ ಮಾಡಿದ ನಂತರ ಅದರ ಪಕ್ಕದಲ್ಲಿರುವ ಬಣ್ಣಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಗಮನಿಸಬೇಕಾದ ಸಂಗತಿಯೆಂದರೆ Ola Electric ಸ್ಕೂಟರ್ ಅನ್ನು ಒಟ್ಟು 10 ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.

Ola Electric ಸ್ಕೂಟರ್ ಅನ್ನು ಆನ್ ಲೈನ್ ಮೂಲಕ ಖರೀದಿಸುವ ವಿಧಾನಗಳಿವು

2. ನಂತರ ಪೇಮೆಂಟ್ ಟ್ಯಾಬ್ ಬರುತ್ತದೆ. ಆಯ್ಕೆ ಮಾಡಿರುವ ಮಾದರಿಯ ಆಧಾರದ ಮೇಲೆ ಉಳಿದ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಗ್ರಾಹಕರು Ola S 1 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾಸಿಕ ಕಂತುಗಳಲ್ಲಿ ಖರೀದಿಸಬಹುದು. ಈ ಮಾದರಿಯ ಮಾಸಿಕ ಕಂತುಗಳು ತಿಂಗಳಿಗೆ ರೂ. 2,999 ರಿಂದ ಆರಂಭವಾಗುತ್ತವೆ.

Ola Electric ಸ್ಕೂಟರ್ ಅನ್ನು ಆನ್ ಲೈನ್ ಮೂಲಕ ಖರೀದಿಸುವ ವಿಧಾನಗಳಿವು

ಇನ್ನು S 1 Pro ಮಾದರಿಯನ್ನು ಖರೀದಿಸಲು ಪ್ರತಿ ತಿಂಗಳು ರೂ. 3,199 ಪಾವತಿಸ ಬೇಕಾಗುತ್ತದೆ. ಹೊಸ Ola Electric ಸ್ಕೂಟರ್ ಅನ್ನು ಮುಂಚಿತವಾಗಿ ಖರೀದಿಸಲು ಸಾಧ್ಯವಾಗದವರಿಗೆ ಈ ಮಾಸಿಕ ಕಂತಿನ ಯೋಜನೆ ಅತ್ಯುತ್ತಮ ಆಯ್ಕೆಯಾಗಿದೆ.

Ola Electric ಸ್ಕೂಟರ್ ಅನ್ನು ಆನ್ ಲೈನ್ ಮೂಲಕ ಖರೀದಿಸುವ ವಿಧಾನಗಳಿವು

3. Ola ಫೈನಾನ್ಶಿಯಲ್ ಸರ್ವೀಸಸ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಹೆಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಟಾಟಾ ಕ್ಯಾಪಿಟಲ್‌ನಂತಹ ಹಣಕಾಸು ಕಂಪನಿಗಳೊಂದಿಗೆ ಪಾಲುದಾರಿಕೆ ಮಾಡಿ ಕೊಂಡಿದೆ. ಇದರಿಂದ ಅರ್ಹ ಗ್ರಾಹಕರಿಗೆ ವಾಹನ ಸಾಲವನ್ನು ತ್ವರಿತವಾಗಿ ಪಡೆಯಲು ಸಾಧ್ಯವಾಗಲಿದೆ.

Ola Electric ಸ್ಕೂಟರ್ ಅನ್ನು ಆನ್ ಲೈನ್ ಮೂಲಕ ಖರೀದಿಸುವ ವಿಧಾನಗಳಿವು

ಸಾಲದ ನೆರವು ಅಗತ್ಯವಿಲ್ಲದಿದ್ದರೆ, 20 ಸಾವಿರ ರೂಪಾಯಿಗಳನ್ನು ಮುಂಗಡವಾಗಿ ಪಾವತಿಸಬೇಕು. ಸ್ಕೂಟರ್ ವಿತರಣೆ ಪಡೆಯುವ ಮುನ್ನ ಬಾಕಿ ಹಣವನ್ನು ಪಾವತಿಸಬಹುದು. ಬುಕ್ಕಿಂಗ್ ಮಾಡಿರುವ ಗ್ರಾಹಕರಿಗೆ ಸ್ಕೂಟರ್ ಇಷ್ಟವಾಗದಿದ್ದರೆ ಡೌನ್ ಪೇಮೆಂಟ್ ಹಾಗೂ ಮುಂಗಡದ ಹಣವನ್ನು ಪೂರ್ತಿಯಾಗಿ ವಾಪಸ್ ಪಡೆಯಬಹುದು.

Ola Electric ಸ್ಕೂಟರ್ ಅನ್ನು ಆನ್ ಲೈನ್ ಮೂಲಕ ಖರೀದಿಸುವ ವಿಧಾನಗಳಿವು

ಆದರೆ ಈ ಎಲೆಕ್ಟ್ರಿಕ್ ಸ್ಕೂಟರ್ Ola ಉತ್ಪಾದನಾ ಘಟಕದಿಂದ ಹೊರಡುವ ಮುನ್ನ ಬುಕ್ಕಿಂಗ್ ಅನ್ನು ರದ್ದುಗೊಳಿಸಬೇಕು. ಆಗ ಮಾತ್ರ ಡೌನ್ ಪೇಮೆಂಟ್ ಹಾಗೂ ಮುಂಗಡ ಮೊತ್ತವನ್ನು ಸಂಪೂರ್ಣವಾಗಿ ಮರುಪಾವತಿಸಲಾಗುತ್ತದೆ. ಸ್ಕೂಟರ್ ಉತ್ಪಾದನಾ ಘಟಕದಿಂದ ಹೊರ ಬಂದ ನಂತರ ಯಾವುದೇ ಹಣವನ್ನು ಮರು ಪಾವತಿಸುವುದಿಲ್ಲ.

Ola Electric ಸ್ಕೂಟರ್ ಅನ್ನು ಆನ್ ಲೈನ್ ಮೂಲಕ ಖರೀದಿಸುವ ವಿಧಾನಗಳಿವು

4. Ola Electric ಸ್ಕೂಟರ್ ಅನ್ನು ಖರೀದಿಸುವ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ವಿತರಣಾ ದಿನಾಂಕದ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಅಕ್ಟೋಬರ್ ನಲ್ಲಿ Ola Electric ಸ್ಕೂಟರಿನ ವಿತರಣೆ ಆರಂಭವಾಗಲಿದೆ. ವಿತರಣೆ ಆರಂಭವಾದ ನಂತರ Ola Electric ಸ್ಕೂಟರ್ ಅನ್ನು ನೇರವಾಗಿ ಗ್ರಾಹಕರ ಮನೆಗೆ ತಲುಪಿಸಲಾಗುತ್ತದೆ.

Most Read Articles

Kannada
English summary
Steps to purchase ola electric scooter online details
Story first published: Wednesday, September 15, 2021, 17:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X