ವಿಶೇಷ ವಿನ್ಯಾಸದ ಶಿಫ್ಟರ್ ಡಿ5 ಡಿಕೋರ್ ಹೆಲ್ಮೆಟ್ ಬಿಡುಗಡೆ ಮಾಡಿದ ಸ್ಟಡ್ಸ್

ಐಎಸ್ಐ ಪ್ರಮಾಣೀಕೃತ ಹೆಲ್ಮೆಟ್ ಬಳಕೆಯನ್ನು ಕಡ್ಡಾಯಗೊಳಿಸಿದ ನಂತರ ಗುಣಮಟ್ಟದ ಹೆಲ್ಮೆಟ್ ಮಾರಾಟವು ಸಾಕಷ್ಟು ಏರಿಕೆಯಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಸ್ಟಡ್ಸ್ ಕಂಪನಿಯು ಹಲವು ಹೊಸ ಹೆಲ್ಮೆಟ್‌ಗಳನ್ನು ಬಿಡುಗಡೆ ಮಾಡಿದೆ.

ವಿಶೇಷ ವಿನ್ಯಾಸದ ಐಎಸ್ಐ ಪ್ರಮಾಣೀಕೃತ ಶಿಫ್ಟರ್ ಡಿ5 ಡಿಕೋರ್ ಹೆಲ್ಮೆಟ್ ಬಿಡುಗಡೆ ಮಾಡಿದ ಸ್ಟಡ್ಸ್

ಸ್ವದೇಶಿ ಹೆಲ್ಮೆಟ್ ಉತ್ಪಾದನಾ ಕಂಪನಿಯಾಗಿರುವ ಸ್ಟಡ್ಸ್ ಥಂಡರ್ ಡಿ ಸರಣಿಯಲ್ಲಿ ಹೊಸದಾಗಿ ಶಿಫ್ಟರ್ ಡಿ5 ಡಿಕೋರ್ ಹೆಲ್ಮೆಟ್ ಬಿಡುಗಡೆ ಮಾಡಿದ್ದು, ಸ್ಪೋರ್ಟಿ ವಿನ್ಯಾಸವನ್ನು ಹೊಂದಿರುವ ಶಿಫ್ಟರ್ ಡಿ5 ಡಿಕೋರ್ ಹೆಲ್ಮೆಟ್ ಮಾದರಿಯು ಬಿಎಸ್ಐ ಸ್ಟ್ಯಾಂಡರ್ಡ್ ನಿಯಮಾನುಸಾರವಾಗಿ ಅತ್ಯುತ್ತಮ ಫೀಚರ್ಸ್‌ಗಳನ್ನು ಒಳಗೊಂಡಿದೆ.

ವಿಶೇಷ ವಿನ್ಯಾಸದ ಐಎಸ್ಐ ಪ್ರಮಾಣೀಕೃತ ಶಿಫ್ಟರ್ ಡಿ5 ಡಿಕೋರ್ ಹೆಲ್ಮೆಟ್ ಬಿಡುಗಡೆ ಮಾಡಿದ ಸ್ಟಡ್ಸ್

ಸ್ಟಡ್ಸ್ ಕಂಪನಿಯ ಥಂಡರ್ ಡಿ ಸರಣಿಯಲ್ಲಿರುವ ಪ್ರಮುಖ ಹೆಲ್ಮೆಟ್ ಮಾದರಿಗಳಲ್ಲೇ ತುಸು ವಿಭಿನ್ನ ವಿನ್ಯಾಸ ಹೊಂದಿರುವ ಶಿಫ್ಟರ್ ಡಿ5 ಡಿಕೋರ್ ಹೆಲ್ಮೆಟ್ ಮಾದರಿಯು ಬೈಕ್ ಸವಾರರಿಗೆ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸಿದ್ದು, ಹೆಲ್ಮೆಟ್ ಬಳಕೆಯು ಸುಲಭವಾಗಿಸಲು ಒಳಭಾಗದ ವಿನ್ಯಾಸದಲ್ಲಿ ಸಾಕಷ್ಟು ಹೊಸತನ ಪರಿಚಯಿಸುವ ಮೂಲಕ ಬೈಕ್ ಸವಾರರನ್ನು ಸೆಳೆಯುತ್ತಿದೆ.

ವಿಶೇಷ ವಿನ್ಯಾಸದ ಐಎಸ್ಐ ಪ್ರಮಾಣೀಕೃತ ಶಿಫ್ಟರ್ ಡಿ5 ಡಿಕೋರ್ ಹೆಲ್ಮೆಟ್ ಬಿಡುಗಡೆ ಮಾಡಿದ ಸ್ಟಡ್ಸ್

ಶಿಫ್ಟರ್ ಡಿ5 ಡಿಕೋರ್ ಹೆಲ್ಮೆಟ್ ಮಾದರಿಯು ಪ್ರತಿಸ್ಪರ್ಧಿ ಕಂಪನಿಗಳ ಹೆಲ್ಮೆಟ್ ಮಾದರಿಗಿಂತಲೂ ಉತ್ತಮ ತಾಂತ್ರಿಕ ಸೌಲಭ್ಯಗಳೊಂದಿಗೆ ಅಭಿವೃದ್ದಿಗೊಂಡಿದ್ದು, ಹೊಸ ಹೆಲ್ಮೆಟ್ ಬೆಲೆಯನ್ನು ಕಂಪನಿಯು ಆರಂಭಿಕವಾಗಿ ರೂ. 2,265ಕ್ಕೆ ನಿಗದಿಪಡಿಸಿದೆ.

ವಿಶೇಷ ವಿನ್ಯಾಸದ ಐಎಸ್ಐ ಪ್ರಮಾಣೀಕೃತ ಶಿಫ್ಟರ್ ಡಿ5 ಡಿಕೋರ್ ಹೆಲ್ಮೆಟ್ ಬಿಡುಗಡೆ ಮಾಡಿದ ಸ್ಟಡ್ಸ್

ಸ್ಟಡ್ಸ್ ಕಂಪನಿಯ ಶಿಫ್ಟರ್ ಡಿ5 ಡಿಕೋರ್ ಹೆಲ್ಮೆಟ್ ಮಾದರಿಯನ್ನು ಮೀಡಿಯಂ, ಲಾರ್ಜ್ ಮತ್ತು ಎಕ್ಸ್ಟಾ ಲಾರ್ಜ್ ವಿನ್ಯಾಸದಲ್ಲಿ ಬಿಡುಗಡೆ ಮಾಡಿದ್ದು, ಬೈಕ್ ಸವಾರರು ತಮ್ಮ ಬೇಡಿಕೆಗೆ ಅನುಗುಣವಾಗಿ ಮೀಡಿಯಂ(570-ಎಂಎಂ), ಲಾರ್ಜ್(580-ಎಂಎಂ) ಮತ್ತು ಎಕ್ಸ್ಟಾ ಲಾರ್ಜ್(600-ಎಂಎಂ) ಮಾದರಿಗಳನ್ನು ಖರೀದಿ ಮಾಡಬಹುದು.

ವಿಶೇಷ ವಿನ್ಯಾಸದ ಐಎಸ್ಐ ಪ್ರಮಾಣೀಕೃತ ಶಿಫ್ಟರ್ ಡಿ5 ಡಿಕೋರ್ ಹೆಲ್ಮೆಟ್ ಬಿಡುಗಡೆ ಮಾಡಿದ ಸ್ಟಡ್ಸ್

ಜೊತೆಗೆ ಶಿಫ್ಟರ್ ಡಿ5 ಡಿಕೋರ್ ಹೆಲ್ಮೆಟ್ ಅನ್ನು ಗ್ಲಾಸ್ ಅಥವಾ ಮ್ಯಾಟೆ ಫಿನಿಷಿಂಗ್‌ನೊಂದಿಗೆ ಒಟ್ಟು ಹತ್ತು ವಿವಿಧ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಬ್ಲ್ಯಾಕ್ ಎನ್1, ಬ್ಲ್ಯಾಕ್ ಎನ್2, ಬ್ಲ್ಯಾಕ್, ಎನ್3, ಬ್ಲ್ಯಾಕ್, ಎನ್5, ಬ್ಲ್ಯಾಕ್ ಎನ್10, ಮ್ಯಾಟ್ ಬ್ಲ್ಯಾಕ್ ಎನ್1, ಮ್ಯಾಟ್ ಬ್ಲ್ಯಾಕ್ ಎನ್2, ಮ್ಯಾಟ್ ಬ್ಲ್ಯಾಕ್, ಎನ್3, ಮ್ಯಾಟ್ ಬ್ಲ್ಯಾಕ್, ಎನ್5, ಮ್ಯಾಟ್ ಬ್ಲ್ಯಾಕ್ ಎನ್10 ಬಣ್ಣಗಳಲ್ಲಿ ಆಯ್ಕೆ ಮಾಡಬಹುದಾಗಿದೆ.

ವಿಶೇಷ ವಿನ್ಯಾಸದ ಐಎಸ್ಐ ಪ್ರಮಾಣೀಕೃತ ಶಿಫ್ಟರ್ ಡಿ5 ಡಿಕೋರ್ ಹೆಲ್ಮೆಟ್ ಬಿಡುಗಡೆ ಮಾಡಿದ ಸ್ಟಡ್ಸ್

ಹೊಸ ಶಿಫ್ಟರ್ ಡಿ5 ಹೆಲ್ಮೆಟ್ ಮಾದರಿಯು ಫುಲ್ ಫೇಸ್ ಮಾದರಿಯಾಗಿದ್ದು, ಗುಣಮಟ್ಟದ ಬಿಡಿಭಾಗಗಳಿಂದ ಅಭಿವೃದ್ದಿಗೊಳಿಸಲಾಗಿದೆ. ಸಾಮಾನ್ಯ ಮಾದರಿಯ ಕ್ರೊಮ್ ಡಿ5 ಡಿಕೋರ್ ಹೆಲ್ಮೆಟ್‌ಗಿಂತಲೂ ಉತ್ತಮವಾಗಿರುವ ಶಿಫ್ಟರ್ ಡಿ5 ಡಿಕೋರ್‌ನಲ್ಲಿ ಹಲವಾರು ಫೀಚರ್ಸ್ ಪಡೆದುಕೊಳ್ಳಬಹುದು.

ವಿಶೇಷ ವಿನ್ಯಾಸದ ಐಎಸ್ಐ ಪ್ರಮಾಣೀಕೃತ ಶಿಫ್ಟರ್ ಡಿ5 ಡಿಕೋರ್ ಹೆಲ್ಮೆಟ್ ಬಿಡುಗಡೆ ಮಾಡಿದ ಸ್ಟಡ್ಸ್

ಶಿಫ್ಟರ್ ಡಿ5 ಡಿಕೋರ್ ಹೆಲ್ಮೆಟ್ ಬೆಲೆಯು ಸಾಮಾನ್ಯ ಕ್ರೊಮ್ ಡಿ5 ಡಿಕೋರ್ ಮಾದರಿಗಿಂತಲೂ ದುಪ್ಪಟ್ಟು ಬೆಲೆ ಹೊಂದಿದ್ದರೂ ಸಹ ಶಿಫ್ಟರ್ ಡಿ5 ಡಿಕೋರ್ ಉತ್ತಮ ಬೇಡಿಕೆ ಪಡೆದುಕೊಳ್ಳುವ ಕಂಪನಿಯು ವಿಶ್ವಾಸ ವ್ಯಕ್ತಪಡಿಸಿದೆ.

ವಿಶೇಷ ವಿನ್ಯಾಸದ ಐಎಸ್ಐ ಪ್ರಮಾಣೀಕೃತ ಶಿಫ್ಟರ್ ಡಿ5 ಡಿಕೋರ್ ಹೆಲ್ಮೆಟ್ ಬಿಡುಗಡೆ ಮಾಡಿದ ಸ್ಟಡ್ಸ್

ಬೈಕ್ ಸವಾರರಿಗೆ ಬಳಕೆಗೆ ಪೂರಕವಾದ ಅಂಶಗಳನ್ನು ಹೊಂದಿರುವ ಹೊಸ ಹೆಲ್ಮೆಟ್ ಮಾದರಿಯು ಏರೋ ಡೈನಾಮಿಕ್ ವಿನ್ಯಾಸದೊಂದಿಗೆ ಸಿಲಿಕಾನ್ ಕೊಟೆಡ್ ಕ್ವಿಕ್ ರೀಲಿಸ್ ವೀಸರ್, ಹೊಂದಾಣಿಕೆ ಮಾಡಬಹುದಾದ ಲೈನರ್, ಕ್ವಿಕ್ ರೀಲಿಸ್ ಮಾಡಬಹುದಾದ ಅತ್ಯುತ್ತಮ ಚಿನ್ ಸ್ಟ್ಯಾಪ್‌ನೊಂದಿಗೆ ಗಲ್ಲದ ಭಾಗಕ್ಕೆ ಪೂರ್ಣ ಪ್ರಮಾಣದ ಸುರಕ್ಷತೆ ನೀಡುತ್ತದೆ.

ವಿಶೇಷ ವಿನ್ಯಾಸದ ಐಎಸ್ಐ ಪ್ರಮಾಣೀಕೃತ ಶಿಫ್ಟರ್ ಡಿ5 ಡಿಕೋರ್ ಹೆಲ್ಮೆಟ್ ಬಿಡುಗಡೆ ಮಾಡಿದ ಸ್ಟಡ್ಸ್

ಹಾಗೆಯೇ ಯುವಿ ರೆಸಿಸ್ಟೆಂಟ್ ಪೇಂಟ್, ವಿಸ್ತೃತ ಪಾಲಿಸ್ಟೈರೀನ್, ಅತ್ಯುತ್ತಮ ವೆಂಟಿಲೆೇಷನ್ ಸಿಸ್ಟಂನೊಂದಿಗೆ ಗರಿಷ್ಠ ಸುರಕ್ಷತೆಗಾಗಿ ಹೊಸ ಹೆಲ್ಮೆಟ್‌ನಲ್ಲಿ ಹೈ ಗ್ರೆಡ್ ಥರ್ಮಾ ಪ್ಯಾಸ್ಟಿಕ್ ಬಳಕೆ ಮಾಡಿರುವುದು ತಲೆಗೆ ಗರಿಷ್ಠ ಸುರಕ್ಷತೆ ನೀಡಲಿದೆ.

ವಿಶೇಷ ವಿನ್ಯಾಸದ ಐಎಸ್ಐ ಪ್ರಮಾಣೀಕೃತ ಶಿಫ್ಟರ್ ಡಿ5 ಡಿಕೋರ್ ಹೆಲ್ಮೆಟ್ ಬಿಡುಗಡೆ ಮಾಡಿದ ಸ್ಟಡ್ಸ್

ಇದರೊಂದಿಗೆ ಹೆಲ್ಮೆಟ್ ಒಳಭಾಗದಲ್ಲಿ ಪ್ರೀಮಿಯಂ ಫ್ರ್ಯಾಬಿಕ್ ಬಟ್ಟೆಯನ್ನು ಬಳಕೆ ಮಾಡಲಾಗಿದ್ದು, ಬೇಸಿಗೆ ಮತ್ತು ಮಳೆಗಾಲದ ಸಂದರ್ಭದಲ್ಲೂ ಯಾವುದೇ ಕಿರಿಕಿರಿಯಿಲ್ಲದೆ ಈ ಹೆಲ್ಮೆಟ್ ಅನ್ನು ಬಳಕೆ ಮಾಡಬಹುದಾಗಿದೆ.

ವಿಶೇಷ ವಿನ್ಯಾಸದ ಐಎಸ್ಐ ಪ್ರಮಾಣೀಕೃತ ಶಿಫ್ಟರ್ ಡಿ5 ಡಿಕೋರ್ ಹೆಲ್ಮೆಟ್ ಬಿಡುಗಡೆ ಮಾಡಿದ ಸ್ಟಡ್ಸ್

ಈ ಮೂಲಕ ಗುಣಮಟ್ಟ, ವಿಶ್ವಾಸಾರ್ಹತೆಯೊಂದಿಗೆ ಮತ್ತೊಮ್ಮೆ ಗ್ರಾಹಕರ ಆಯ್ಕೆ ಮುಂಚೂಣಿ ಸಾಧಿಸಲು ಸಿದ್ದವಾಗಿರುವ ಸ್ಟಡ್ಸ್ ಕಂಪನಿಯು ಈಗಾಗಲೇ ಹಲವಾರು ಮಾದರಿಯ ಹೆಲ್ಮೆಟ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಇತ್ತೀಚೆಗೆ ಬಿಎಸ್ಐ(ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ಸೂಚಿಸಿರುವ ಹೊಸ ಸುರಕ್ಷಾ ಮಾರ್ಗಸೂಚಿಯೊಂದಿಗೆ ಶಿಫ್ಟರ್ ಡಿ5 ಡಿಕೋರ್ ಹೆಲ್ಮೆಟ್ ಸಿದ್ದಪಡಿಸಲಾಗಿದೆ.

ವಿಶೇಷ ವಿನ್ಯಾಸದ ಐಎಸ್ಐ ಪ್ರಮಾಣೀಕೃತ ಶಿಫ್ಟರ್ ಡಿ5 ಡಿಕೋರ್ ಹೆಲ್ಮೆಟ್ ಬಿಡುಗಡೆ ಮಾಡಿದ ಸ್ಟಡ್ಸ್

ಇನ್ನು ದೇಶಾದ್ಯಂತ ಬಹುತೇಕ ರಾಜ್ಯಗಳಲ್ಲಿ ಬೈಕ್ ಸವಾರರ ಜೊತೆಗೆ ಹಿಂಬದಿಯ ಸವಾರರಿಗೂ ಹೆಲ್ಮೆಟ್ ಬಳಕೆಯನ್ನು ಕಡ್ಡಾಯಗೊಳಿಸಿದ್ದರೂ ದಂಡದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಕಳಪೆ ಹೆಲ್ಮೆಟ್‌ಗಳ ಬಳಕೆಯು ಹೆಚ್ಚಳವಾಗಿದ್ದು, ಇವು ಬೈಕ್ ಸವಾರರಿಗೆ ರಕ್ಷಣೆ ನೀಡುವ ಬದಲಾಗಿ ಪ್ರಾಣಕ್ಕೆ ಕುತ್ತು ತರುತ್ತಿವೆ ಎಂದರೆ ತಪ್ಪಾಗುವುದಿಲ್ಲ.

ವಿಶೇಷ ವಿನ್ಯಾಸದ ಐಎಸ್ಐ ಪ್ರಮಾಣೀಕೃತ ಶಿಫ್ಟರ್ ಡಿ5 ಡಿಕೋರ್ ಹೆಲ್ಮೆಟ್ ಬಿಡುಗಡೆ ಮಾಡಿದ ಸ್ಟಡ್ಸ್

ಇದೇ ವಿಚಾರವಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿರುವ ಕೇಂದ್ರ ಸಾರಿಗೆ ಇಲಾಖೆಯು ಸುಪ್ರೀಂಕೋರ್ಟ್ ನಿರ್ದೇಶನದಂತೆ ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದು, 2021ರ ಜೂನ್‌ 1 ರಿಂದ ಐಎಸ್ಐ ಪ್ರಮಾಣೀಕೃತ ಹೆಲ್ಮೆಟ್‌ಗಳನ್ನು ಮಾತ್ರ ಬಳಕೆ ಮಾಡಬೇಕು ಎಂಬ ಆದೇಶ ಹೊರಡಿಸಿದೆ.

Most Read Articles

Kannada
English summary
Studds launches new shifter d5 decor helmet in india.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X