ಭಾರತದಲ್ಲಿ ರಿಕಾಲ್ ಆಗುತ್ತಿವೆ ಸುಜುಕಿ ಜಿಕ್ಸರ್ 250, ಎಸ್‌ಎಫ್250 ಬೈಕ್‌ಗಳು

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ತನ್ನ ಕ್ವಾರ್ಟರ್-ಲೀಟರ್ ಜಿಕ್ಸರ್ 250 ಮತ್ತು ಜಿಕ್ಸರ್ ಎಸ್‌ಎಫ್250 ಬೈಕ್‌ಗಳ ಕೆಲವು ಮಾದರಿಗಳಲ್ಲಿ ಅತಿಯಾದ ಎಂಜಿನ್ ಕಂಪನ ದೋಷ ಕಂಡು ಬಂದ ಹಿನ್ನಲೆಯಲ್ಲಿ ಅವುಗಳನ್ನು ರಿಕಾಲ್ ಮಾಡಲು ಪ್ರಾರಂಭಿಸಿದೆ.

ಭಾರತದಲ್ಲಿ ರಿಕಾಲ್ ಆಗುತ್ತಿವೆ ಸುಜುಕಿ ಜಿಕ್ಸರ್ 250, ಎಸ್‌ಎಫ್250 ಬೈಕ್‌ಗಳು

ಸುಜುಕಿ ಜಿಕ್ಸರ್ 250 ಮತ್ತು ಜಿಕ್ಸರ್ ಎಸ್‌ಎಫ್250 ಮಾದರಿಗಳ 199 ಯುನಿಟ್‌ಗಳ ಎಂಜಿನ್‌ನಿಂದ ಅತಿಯಾದ ಕಂಪನದಿಂದ ಅನುಭವಿಸುತ್ತಿದೆ. ಈ ದೋಷ ಕಂಡು ಬಂದ ಬೈಕ್‌ಗಳನ್ನು ಸುಜುಕಿ ಇಂಡಿಯಾ ಕಂಪನಿಯು 2019ರ ಆಗಸ್ಟ್ 12 ಮತ್ತು 2021ರ ನಡುವಿನ ಅವಧಿಯಲ್ಲಿ ತಯಾರಿಸಲಾಗಿದೆ. ಸುಜುಕಿ ಜಿಕ್ಸರ್ 250 ಮತ್ತು ಜಿಕ್ಸರ್ ಎಸ್‌ಎಫ್250 ಬೈಕ್‌ಗಳನ್ನು ರಿಕಾಲ್ ಮಾಡಲು ಕಾರಣವೆಂದರೆ ತಯಾರಕರು ಎಂಜಿನ್‌ನ ಕೌಂಟರ್ ಬ್ಯಾಲೆನ್ಸರ್ ಮತ್ತು ಡ್ರೈವ್ ಗೇರ್ ಅನ್ನು ಜೋಡಣೆಯಿಂದ ಕಂಡುಹಿಡಿದಿದ್ದಾರೆ.

ಭಾರತದಲ್ಲಿ ರಿಕಾಲ್ ಆಗುತ್ತಿವೆ ಸುಜುಕಿ ಜಿಕ್ಸರ್ 250, ಎಸ್‌ಎಫ್250 ಬೈಕ್‌ಗಳು

ಎಂಜಿನ್ ಕಂಪನ ಸಮಸ್ಯೆಯಿಂದ ಈ ಬೈಕ್‌ಗಳ ತಾಂತ್ರಿಕ ಅಂಶಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲವೆಂದು ಕಂಪನಿ ಹೇಳಿದೆ. ಸುಜುಕಿ ತಂತ್ರಜ್ಞರು ಒಂದೆರಡು ಗಂಟೆಗಳಲ್ಲಿ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗುತ್ತದೆ ಮತ್ತು ಅದನ್ನು ಗ್ರಾಹಕರಿಗೆ ಉಚಿತವಾಗಿ ಮಾಡಲಾಗುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಭಾರತದಲ್ಲಿ ರಿಕಾಲ್ ಆಗುತ್ತಿವೆ ಸುಜುಕಿ ಜಿಕ್ಸರ್ 250, ಎಸ್‌ಎಫ್250 ಬೈಕ್‌ಗಳು

ಜಪಾನೀಸ್ ಬ್ರ್ಯಾಂಡ್ ಸುಜುಕಿ ಮೋಟಾರ್‌ಸೈಕಲ್ ಇಮೇಲ್ ಅಥಾವ ಮೆಸೇಜ್ ಮೂಲಕ ಗ್ರಾಹಕರಿಗೆ ಮಾಹಿತಿಯನ್ನು ಕಳುಹಿಸುವ ಸಾಧ್ಯತೆಯಿದೆ. ಕೋವಿಡ್ -19 ಸೋಂಕು ಹೆಚ್ಚುತ್ತಿರುವುದರಿಂದ ಗ್ರಾಹಕರಿಗೆ ಭೇಟಿ ನೀಡಲು ಅಪಾಯಿಂಟ್ಮೆಂಟ್ ಅನ್ನು ನಿಗದಿಪಡಿಸಬಹುದು.

ಭಾರತದಲ್ಲಿ ರಿಕಾಲ್ ಆಗುತ್ತಿವೆ ಸುಜುಕಿ ಜಿಕ್ಸರ್ 250, ಎಸ್‌ಎಫ್250 ಬೈಕ್‌ಗಳು

ಬಿಎಸ್-6 ಜಿಕ್ಸರ್ 250 ಮತ್ತು ಜಿಕ್ಸರ್ ಎಸ್‍ಎಫ್ 250 ಬೈಕುಗಳಲ್ಲಿ 249 ಸಿಸಿ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 26.1 ಬಿಹೆಚ್‌ಪಿ ಪವರ್ ಮತ್ತು 22.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಭಾರತದಲ್ಲಿ ರಿಕಾಲ್ ಆಗುತ್ತಿವೆ ಸುಜುಕಿ ಜಿಕ್ಸರ್ 250, ಎಸ್‌ಎಫ್250 ಬೈಕ್‌ಗಳು

ಈ ಸುಜುಕಿ ಜಿಕ್ಸರ್ ಬೈಕ್‌ಗಳಲ್ಲಿ ಒವಲ್ ಆಕಾರಾದ ಎಲ್ಇಡಿ ಹೆಡ್‌ಲ್ಯಾಂಪ್ ಹೆಡ್‍‍ಲ್ಯಾಂಪ್‍‍ಗಳು, ಎಲ್‍ಇಡಿ ಟೈಲ್‍‍ಲೈಟ್‍ಗಳು, ಎಲ್‍‍ಸಿಡಿ ಡಿಜಿ‍ಟಲ್ ಎನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಇತರ ಫೀಚರ್ ಗಳನ್ನು ಒಳಗೊಂಡಿವೆ.

ಭಾರತದಲ್ಲಿ ರಿಕಾಲ್ ಆಗುತ್ತಿವೆ ಸುಜುಕಿ ಜಿಕ್ಸರ್ 250, ಎಸ್‌ಎಫ್250 ಬೈಕ್‌ಗಳು

ಇದರಲ್ಲಿ ಸುಜುಕಿ ಜಿಕ್ಸರ್ 250 ಬೈಕಿನಲ್ಲಿ ಹೊಸದಾಗಿ ವಿನ್ಯಾಸಗೊಳಿಸಲಾದ ಟ್ಯಾಂಕಿನ ಮೇಲೆ ವಿಶಿಷ್ಟವಾದ ಬಾಡಿ ಗ್ರಾಫಿಕ್ಸ್ ಗಳಿದೆ. ಜಿಕ್ಸರ್ 250 ಬೈಕಿನಲ್ಲಿ ಟಯರ್ ಹಗ್ಗರ್, ಸ್ಪ್ಲಿಟ್ ಸೀಟ್, ಕಪ್ಪು ಬಣ್ಣದ ಅಲಾಯ್ ವ್ಹೀಲ್ ಹಾಗೂ ಕ್ರೋಮ್ ಅಂಶಗಳನ್ನು ಹೊಂದಿರುವ ಡ್ಯುಯಲ್ ಮಫ್ಲರ್ ಗಳನ್ನು ಕೂಡ ಒಳಗೊಂಡಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಭಾರತದಲ್ಲಿ ರಿಕಾಲ್ ಆಗುತ್ತಿವೆ ಸುಜುಕಿ ಜಿಕ್ಸರ್ 250, ಎಸ್‌ಎಫ್250 ಬೈಕ್‌ಗಳು

ಇನ್ನು ಸುಜುಕಿ ಜಿಕ್ಸರ್ 250 ಮತ್ತು ಜಿಕ್ಸರ್ ಎಸ್‍ಎಫ್ 250 ಬೈಕುಗಳ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‍‍ಗಳು ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಸಸ್ಪೆಂಷನ್ ಸೆಟಪ್ ಅನ್ನು ಹೊಂದಿದೆ.

ಭಾರತದಲ್ಲಿ ರಿಕಾಲ್ ಆಗುತ್ತಿವೆ ಸುಜುಕಿ ಜಿಕ್ಸರ್ 250, ಎಸ್‌ಎಫ್250 ಬೈಕ್‌ಗಳು

ಇನ್ನು ಇವುಗಳ ಬ್ರೈಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ ಇದು ಉತ್ತಮವಾಗಿದ್ದು, ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಿದ್ದಾರೆ. ಇದರೊಂದಿಗೆ ಸ್ಟ್ಯಾಂಡರ್ಡ್ ಡ್ಯುಯಲ್ ಚಾನೆಲ್ ಎ‍ಬಿಎಸ್ ಸಿಸ್ಟಂ ಅನ್ನು ನೀಡಿದ್ದಾರೆ. ಸುಜುಕಿ ಜಿಕ್ಸರ್ 250 ದೇಶಿಯ ಮಾರುಕಟ್ಟೆಯಲ್ಲಿ ಕೆಟಿಎಂ ಡ್ಯೂಕ್ 250, ಬಜಾಜ್ ಪಲ್ಸರ್ ಆರ್‍ಎಸ್ 200 ಮತ್ತು ಟಿ‍ವಿಎಸ್ ಅಪಾಚೆ ಆರ್‍ಆರ್ 310 ಬೈ‍‍ಕ್‍‍ಗಳಿಗೆ ಪೈಪೋಟಿ‍ಯನ್ನು ನೀಡುತ್ತದೆ.

Most Read Articles

Kannada
English summary
Suzuki Gixxer 250, SF250 Recalled Over Excessive Vibration Issues. Read In Kannada.
Story first published: Friday, April 30, 2021, 12:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X