ಅನಾವರಣವಾಯ್ತು ಹೊಸ ಸುಜುಕಿ ಬರ್ಗ್‌ಮನ್ 200 ಮ್ಯಾಕ್ಸಿ-ಸ್ಕೂಟರ್

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಸುಜುಕಿ ಮೋಟಾರ್‍‍ಸೈಕಲ್ ತನ್ನ ಹೊಸ ಬರ್ಗ್‌ಮನ್ 200 ಸ್ಕೂಟರ್ ಅನ್ನು ಅಮೆರಿಕಾದ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ನವೀಕರಿಸಿದ ಈ ಸುಜುಕಿ ಬರ್ಗ್‌ಮನ್ 200 ಮ್ಯಾಕ್ಸಿ-ಸ್ಕೂಟರ್ ಹೊಸ ಬಣ್ಣಗಳನ್ನು ಪಡೆಯುತ್ತದೆ.

ಅನಾವರಣವಾಯ್ತು ಹೊಸ ಸುಜುಕಿ ಬರ್ಗ್‌ಮನ್ 200 ಮ್ಯಾಕ್ಸಿ-ಸ್ಕೂಟರ್

ಸುಜುಕಿ ಬರ್ಗ್‌ಮನ್ 200 ಮ್ಯಾಕ್ಸಿ-ಸ್ಕೂಟರ್ ತನ್ನದೇ ಆದ ರೀತಿಯಲ್ಲಿ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಈ ಮ್ಯಾಕ್ಸಿ-ಸ್ಕೂಟರ್ ನಲ್ಲಿ ಅತ್ಯಂತ ಎತ್ತರದ ವಿಂಡ್‌ಸ್ಕ್ರೀನ್, ಬರ್ಲಿ ಫ್ರಂಟ್ ಏಪ್ರನ್ ಹೌಸಿಂಗ್ ಡ್ಯುಯಲ್ ಹೆಡ್‌ಲ್ಯಾಂಪ್‌ಗಳು ಮತ್ತು ವಿಶಾಲವಾದ ಸೀಟ್ ಅನ್ನು ಹೊಂದಿದೆ. ಇದು ಲಾಗ್ ರೈಡ್'ಗೆ ಹೆಚ್ಚು ಸಹಕಾರಿಯಾಗಿರುತ್ತದೆ. ಇನ್ನು ಇದರಲ್ಲಿ ಡ್ಯುಯಲ್ ಫುಟ್‌ರೆಸ್ಟ್ ಅನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಸುಜುಕಿ ಬರ್ಗ್‌ಮನ್ 200 ಮ್ಯಾಕ್ಸಿ-ಸ್ಕೂಟರ್

ಸುಜುಕಿ ಬರ್ಗ್‌ಮನ್ 200 ಮ್ಯಾಕ್ಸಿ-ಸ್ಕೂಟರ್ ಮೆಟಾಲಿಕ್ ಮ್ಯಾಟ್ ಸ್ಟೆಲ್ಲಾರ್ ಬ್ಲೂ, ನ್ಯೂ ಟೈಟಾನ್ ಬ್ಲ್ಯಾಕ್ ಮತ್ತು ಪರ್ಲ್ ಬ್ರಿಲಿಯಂಟ್ ವೈಟ್‌ ಎಂಬ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಸುಜುಕಿ ಬರ್ಗ್‌ಮನ್ 200 ಮ್ಯಾಕ್ಸಿ-ಸ್ಕೂಟರ್ 41-ಲೀಟರ್ ನಷ್ಟು ಸಾಮರ್ಥ್ಯದ ಅಂಡರ್ ಸೀಟ್ ಸ್ಟೋರೇಜ್ ಸ್ಪೇಸ್ ಅನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಸುಜುಕಿ ಬರ್ಗ್‌ಮನ್ 200 ಮ್ಯಾಕ್ಸಿ-ಸ್ಕೂಟರ್

ಇನ್ನು ಈ ಸ್ಕೂಟರ್ ನಲ್ಲಿ 10.5 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಇನ್ನು ಹೊಸ ಮ್ಯಾಕ್ಸಿ-ಸ್ಕೂಟರ್ 163 ಕೆಜಿ ತೂಕವನ್ನು ಹೊಂದಿದೆ. ಇದು ಕೆಟಿಎಂ 390 ಡ್ಯೂಕ್ ಬೈಕಿನಷ್ಟೇ ಭಾರವನ್ನು ಹೊಂದಿದೆ. ಇನ್ನು ಸ್ಕೂಟರ್ ನಲ್ಲಿ ಎಲ್ಇಡಿ ಹೆಡ್ ಲ್ಯಾಂಪ್ ಮತ್ತು ಟರ್ನ್ ಇಂಡಿಕೇಟರ್ ಗಳನ್ನು ನೀಡಲಾಗಿಲ್ಲ.

ಅನಾವರಣವಾಯ್ತು ಹೊಸ ಸುಜುಕಿ ಬರ್ಗ್‌ಮನ್ 200 ಮ್ಯಾಕ್ಸಿ-ಸ್ಕೂಟರ್

ಸುಜುಕಿ ಬರ್ಗ್‌ಮನ್ 200 ಮ್ಯಾಕ್ಸಿ-ಸ್ಕೂಟರ್ ನಲ್ಲಿ 200 ಸಿಸಿ, ಸಿಂಗಲ್-ಸಿಲಿಂಡರ್, ಎಸ್‌ಒಹೆಚ್‌ಸಿ (ಸಿಂಗಲ್ ಓವರ್‌ಹೆಡ್ ಕ್ಯಾಮ್‌ಶಾಫ್ಟ್) ಎಂಜಿನ್ ಅನ್ನು ನೀಡಲಾಗಿದೆ. ಈ ಎಂಜಿನ್ ನೊಂದಿಗೆ ಸಿವಿಟಿಯನ್ನು ಜೋಡಿಸಲಾಗಿದೆ.

ಅನಾವರಣವಾಯ್ತು ಹೊಸ ಸುಜುಕಿ ಬರ್ಗ್‌ಮನ್ 200 ಮ್ಯಾಕ್ಸಿ-ಸ್ಕೂಟರ್

ಆದರೆ ಈ ಎಂಜಿನ್ ಪವರ್ ಮತ್ತು ಟಾರ್ಕ್ ಅಂಕಿ ಅಂಶಗಳು ಇನ್ನು ಬಹಿರಂಗಗೊಂಡಿಲ್ಲ. ಈ ಸ್ಕೂಟರ್ ನಲ್ಲಿ 13-12-ಇಂಚಿನ ಅಲಾಯ್ ವ್ಹೀಲ್ ಗಳನ್ನು ನೀಡಲಾಗಿದೆ. ಇದು ಕ್ರಮವಾಗಿ ಮುಂಭಾಗ ಮತ್ತು ಹಿಂಭಾಗದಲ್ಲಿ 110/90 ಮತ್ತು 130/70 ವಿಭಾಗದ ಟೈರ್‌ಗಳನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಸುಜುಕಿ ಬರ್ಗ್‌ಮನ್ 200 ಮ್ಯಾಕ್ಸಿ-ಸ್ಕೂಟರ್

ಹೊಸ ಸುಜುಕಿ ಬರ್ಗ್‌ಮನ್ 200 ಮ್ಯಾಕ್ಸಿ-ಸ್ಕೂಟರ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಮೊನೊಶಾಕ್ ಸೆಟಪ್ ಅನ್ನು ನೀಡಲಾಗಿದೆ.

ಅನಾವರಣವಾಯ್ತು ಹೊಸ ಸುಜುಕಿ ಬರ್ಗ್‌ಮನ್ 200 ಮ್ಯಾಕ್ಸಿ-ಸ್ಕೂಟರ್

ಇನ್ನು ಸುರಕ್ಷತಾ ವಿಭಾಗದಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಕೂಡ ನೀಡಲಾಗಿದೆ.

ಅನಾವರಣವಾಯ್ತು ಹೊಸ ಸುಜುಕಿ ಬರ್ಗ್‌ಮನ್ 200 ಮ್ಯಾಕ್ಸಿ-ಸ್ಕೂಟರ್

ಹೊಸ ಸುಜುಕಿ ಬರ್ಗ್‌ಮನ್ 200 ಮ್ಯಾಕ್ಸಿ-ಸ್ಕೂಟರ್ ಶೀಘ್ರದಲ್ಲೇ ಅಮೆರಿಕಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಆದರೆ ಈ ಮ್ಯಾಕ್ಸಿ-ಸ್ಕೂಟರ್ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ. ಈಗಾಗಲೇ ಭಾರತದಲ್ಲಿ ಬರ್ಗ್‌ಮನ್ ಸ್ಟ್ರೀಟ್ 125 ಮ್ಯಾಕ್ಸಿ-ಸ್ಕೂಟರ್ ಮಾರಾಟವಾಗುತ್ತಿದೆ.

Most Read Articles

Kannada
English summary
2022 Suzuki Burgman 200 Unveiled. Read In Kannada.
Story first published: Monday, June 14, 2021, 20:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X