ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಸ್ಕೂಟರ್‌ಗಳಿವು

ಪ್ರಪಂಚದಾದ್ಯಂತ ಬಹುತೇಕ ಎಲ್ಲಾ ವಾಹನ ತಯಾರಕ ಕಂಪನಿಗಳು ಸೆಮಿಕಂಡಕ್ಟರ್ ಗಳ ಕೊರತೆ ಎದುರಿಸುತ್ತಿವೆ. ಸೆಮಿಕಂಡಕ್ಟರ್ ಗಳ ಕೊರತೆಯಿಂದಾಗಿ ವಾಹನ ಉತ್ಪಾದನೆ ಕುಸಿದಿದೆ. ಇದರಿಂದ ವಾಹನಗಳನ್ನು ಬುಕ್ಕಿಂಗ್ ಮಾಡಿರುವ ಗ್ರಾಹಕರು ಅವುಗಳ ವಿತರಣೆ ಪಡೆಯಲು ಹಲವು ತಿಂಗಳು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಸಹಜವಾಗಿಯೇ ವಾಹನ ತಯಾರಕ ಕಂಪನಿಗಳ ಮಾರಾಟದ ಮೇಲೂ ಪರಿಣಾಮ ಬೀರಿದೆ.

ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಸ್ಕೂಟರ್‌ಗಳಿವು

ಸಾಮಾನ್ಯವಾಗಿ ಹಬ್ಬದ ಸಂದರ್ಭದಲ್ಲಿ ವಾಹನ ತಯಾರಕ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳನ್ನು ಮಾರಾಟ ಮಾಡುತ್ತವೆ. ಆದರೆ ಈ ಬಾರಿ ಹಬ್ಬದ ಸಂದರ್ಭದಲ್ಲಿ ವಾಹನಗಳ ಮಾರಾಟ ಕುಸಿದಿದೆ. ಕಾರು ತಯಾರಕ ಕಂಪನಿಗಳು ಮಾತ್ರವಲ್ಲದೇ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಸಹ ಈ ಸಮಸ್ಯೆಯನ್ನು ಎದುರಿಸುತ್ತಿವೆ. ಬೈಕ್ ಮಾತ್ರವಲ್ಲದೇ ಸ್ಕೂಟರ್‌ಗಳ ಮಾರಾಟ ಪ್ರಮಾಣವು ಕುಸಿದಿದೆ.

ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಸ್ಕೂಟರ್‌ಗಳಿವು

2021ರ ಅಕ್ಟೋಬರ್ ತಿಂಗಳ ಸ್ಕೂಟರ್ ಮಾರಾಟದ ಅಂಕಿ ಅಂಶಗಳನ್ನು ಬಿಡುಗದೆತೊಳಿಸಲಾಗಿದೆ. ಈ ಅಂಕಿ ಅಂಶಗಳ ಪ್ರಕಾರ ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ ಒಟ್ಟು 4,36,667 ಯುನಿಟ್‌ ಸ್ಕೂಟರ್‌ಗಳು ಮಾರಾಟವಾಗಿವೆ. ಈ ಪ್ರಮಾಣವು 2020ರ ಅಕ್ಟೋಬರ್ ತಿಂಗಳಿನಲ್ಲಿ 5,32,435 ಯುನಿಟ್‌ಗಳಾಗಿತ್ತು. ಸ್ಕೂಟರ್‌ಗಳ ಮಾರಾಟ ಪ್ರಮಾಣವು ಕಳೆದ ವರ್ಷದ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ 18% ನಷ್ಟು ಕುಸಿದಿದೆ.

ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಸ್ಕೂಟರ್‌ಗಳಿವು

ಎಂದಿನಂತೆ ಹೆಚ್ಚು ಮಾರಾಟವಾದ ಟಾಪ್ 10 ಸ್ಕೂಟರ್‌ಗಳ ಪಟ್ಟಿಯಲ್ಲಿ ಹೋಂಡಾ ಆಕ್ಟಿವಾ (Honda Activa) ಅಗ್ರಸ್ಥಾನದಲ್ಲಿದೆ. ಕಳೆದ ತಿಂಗಳು ಆಕ್ಟಿವಾ ಸ್ಕೂಟರಿನ ಒಟ್ಟು 1,96,699 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ 2,39,570 ಯುನಿಟ್ ಆಕ್ಟಿವಾ ಸ್ಕೂಟರ್‌ಗಳು ಮಾರಾಟವಾಗಿದ್ದವು. ಈ ಬಾರಿ ಆಕ್ಟಿವಾ ಸ್ಕೂಟರ್‌ ಮಾರಾಟ ಪ್ರಮಾಣವು 18% ನಷ್ಟು ಕಡಿಮೆಯಾಗಿದೆ.

ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಸ್ಕೂಟರ್‌ಗಳಿವು

ಟಿವಿಎಸ್ ಜೂಪಿಟರ್ (TVS Jupiter) ಸ್ಕೂಟರ್ 72,161 ಯುನಿಟ್‌ಗಳ ಮಾರಾಟದೊಂದಿಗೆ ಎರಡನೇ ಸ್ಥಾನದಲ್ಲಿದೆ. ಟಿವಿಎಸ್ ಜುಪಿಟರ್ ಸ್ಕೂಟರ್ ಮಾರಾಟದಲ್ಲಿ ಗಣನೀಯ ಇಳಿಕೆಯಾಗಿಲ್ಲ. ಕೇವಲ 2.69% ನಷ್ಟು ಮಾತ್ರ ಇಳಿಕೆಯಾಗಿದೆ. 2020ರ ಅಕ್ಟೋಬರ್'ನಲ್ಲಿ, 74,159 ಯುನಿಟ್ ಜುಪಿಟರ್ ಸ್ಕೂಟರ್‌ಗಳು ಮಾರಾಟವಾಗಿದ್ದವು.

ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಸ್ಕೂಟರ್‌ಗಳಿವು

ಹೋಂಡಾ ಆಕ್ಟಿವಾದಂತೆ, ಟಿವಿಎಸ್ ಜೂಪಿಟರ್ ಸ್ಕೂಟರ್ ಅನ್ನು ಸಹ 110 ಸಿಸಿ ಹಾಗೂ 125 ಸಿಸಿ ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಸುಜುಕಿ ಆಕ್ಸೆಸ್ (Suzuki Access) 46,450 ಯುನಿಟ್‌ಗಳ ಮಾರಾಟದೊಂದಿಗೆ ಮೂರನೇ ಸ್ಥಾನವನ್ನು ಉಳಿಸಿಕೊಂಡಿದೆ. 2020ರ ಅಕ್ಟೋಬರ್ ನಲ್ಲಿ ಈ ಸ್ಕೂಟರಿನ ಒಟ್ಟು 52,441 ಯುನಿಟ್ ಗಳನ್ನು ಮಾರಾಟ ಮಾಡಲಾಗಿತ್ತು.

ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಸ್ಕೂಟರ್‌ಗಳಿವು

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಆಕ್ಸೆಸ್ ಸ್ಕೂಟರ್‌ಗಳ ಮಾರಾಟವು 11.42% ನಷ್ಟು ಕುಸಿದಿದೆ. ಈ ಪಟ್ಟಿಯ 4 ಮತ್ತು 5 ನೇ ಸ್ಥಾನದಲ್ಲಿ TVS NTorq ಹಾಗೂ Honda Dio ಸ್ಕೂಟರ್'ಗಳಿವೆ. ಕಳೆದ ತಿಂಗಳು ಈ ಸ್ಕೂಟರ್ ಗಳ ಮಾರಾಟ ಪ್ರಮಾಣವು ಕ್ರಮವಾಗಿ 25,693 ಹಾಗೂ 25,641 ಯುನಿಟ್'ಗಳಾಗಿದ್ದವು. ಇವುಗಳ ಮಾರಾಟ ಪ್ರಮಾಣವು 2020ರ ಅಕ್ಟೋಬರ್'ಗೆ ಹೋಲಿಸಿದರೆ ಕ್ರಮವಾಗಿ 18.50% ಹಾಗೂ 41.79% ನಷ್ಟು ಕಡಿಮೆಯಾಗಿದೆ.

ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಸ್ಕೂಟರ್‌ಗಳಿವು

ಕಳೆದ ವರ್ಷದ ಅಕ್ಟೋಬರ್‌ನಲ್ಲಿ 31,524 ಯುನಿಟ್ NTorq ಹಾಗೂ 44,046 ಯುನಿಟ್ Dio ಸ್ಕೂಟರ್‌ಗಳು ಮಾರಾಟವಾಗಿದ್ದವು. ಸೆಮಿಕಂಡಕ್ಟರ್‌ಗಳ ಕೊರತೆಯಿಂದಾಗಿ ಆಕ್ಟಿವಾ ಸ್ಕೂಟರಿನ ಮಾರಾಟವು ತೀವ್ರವಾಗಿ ಕುಸಿದಿರುವಂತೆಯೆ ಡಿಯೊ ಸ್ಕೂಟರ್‌ಗಳ ಮಾರಾಟ ಪ್ರಮಾಣವು ಸಹ ಸುಮಾರು 18,405 ಯುನಿಟ್‌ಗಳಷ್ಟು ಕುಸಿದಿದೆ.

ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಸ್ಕೂಟರ್‌ಗಳಿವು

ಈ ಪಟ್ಟಿಯಲ್ಲಿ ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೋಕಾರ್ಪ್‌ನ Pleasure ಸ್ಕೂಟರ್ ಆರನೇ ಸ್ಥಾನದಲ್ಲಿದೆ. ಕಳೆದ ತಿಂಗಳು Pleasure ಸ್ಕೂಟರಿನ ಒಟ್ಟು 21,716 ಯುನಿಟ್‌ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗಿದೆ. Pleasure ಸ್ಕೂಟರಿನ ಮಾರಾಟ ಪ್ರಮಾಣವು 2020ರ ಅಕ್ಟೋಬರ್'ಗೆ ಹೋಲಿಸಿದರೆ 7.16% ನಷ್ಟು ಕಡಿಮೆಯಾಗಿದೆ.

ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಸ್ಕೂಟರ್‌ಗಳಿವು

ಈ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿರುವ ಇತರ ಸ್ಕೂಟರ್‌ಗಳು 20,000 ಯುನಿಟ್ ಗಳಿಗಿಂತ ಕಡಿಮೆ ಮಾರಾಟವಾಗಿದೆ. Yamaha ಕಂಪನಿಯ Ray ZR ಹಾಗೂ Fasino ಸ್ಕೂಟರ್‌ಗಳು ಹೀರೋ ಪ್ಲೆಷರ್‌ನ ನಂತರ ಕ್ರಮವಾಗಿ 13,601 ಹಾಗೂ 13,487 ಯುನಿಟ್‌ಗಳ ಮಾರಾಟದೊಂದಿಗೆ ಏಳು ಹಾಗೂ ಎಂಟನೇ ಸ್ಥಾನದಲ್ಲಿವೆ.

ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಸ್ಕೂಟರ್‌ಗಳಿವು

Ray ZR ಸ್ಕೂಟರಿನ ಮಾರಾಟವು ಕಳೆದ ವರ್ಷ ಅಕ್ಟೋಬರ್‌ಗೆ ಹೋಲಿಸಿದರೆ ಈ ವರ್ಷದ ಅಕ್ಟೋಬರ್ ನಲ್ಲಿ 13.63% ನಷ್ಟು ಕಡಿಮೆಯಾಗಿದೆ. ಆದರೆ Fasino ಸ್ಕೂಟರ್‌ಗಳ ಮಾರಾಟವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 0.95% ನಷ್ಟು ಹೆಚ್ಚಾಗಿದೆ. 2021ರ ಅಕ್ಟೋಬರ್'ನಲ್ಲಿ ಮಾರಾಟವಾದ ಟಾಪ್ 10 ಸ್ಕೂಟರ್‌ಗಳಲ್ಲಿ, ಯಮಹಾ ಫ್ಯಾಸಿನೊ ಮಾತ್ರ ಅಲ್ಪ ಪ್ರಮಾಣದ ಏರಿಕೆಯನ್ನು ದಾಖಲಿಸಿದೆ.

ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಸ್ಕೂಟರ್‌ಗಳಿವು

2020 ಅಕ್ಟೋಬರ್‌ಗಿಂತ ಈ ವರ್ಷ ಅಕ್ಟೋಬರ್ ನಲ್ಲಿ 127 ಹೆಚ್ಚು ಫ್ಯಾಸಿನೊ ಸ್ಕೂಟರ್‌ಗಳನ್ನು ಮಾರಾಟ ಮಾಡಲಾಗಿದೆ. 12,898 ಯುನಿಟ್‌ಗಳ ಮಾರಾಟದೊಂದಿಗೆ ಹೀರೋ ಡೆಸ್ಟಿನಿ ಹಾಗೂ 8,321 ಯುನಿಟ್‌ಗಳ ಮಾರಾಟದೊಂದಿಗೆ ಗ್ರೇಸಿಯಾ ಈ ಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನದಲ್ಲಿವೆ. ಹೀರೋ ಡೆಸ್ಟಿನಿ ಸ್ಕೂಟರ್‌ಗಳ ಮಾರಾಟವು ಕಳೆದ ಅಕ್ಟೋಬರ್‌ ತಿಂಗಳ ಮಾರಾಟಕ್ಕಿಂತ 51.72% ರಷ್ಟು ಕುಸಿದಿದ್ದರೆ, ಗ್ರೇಸಿಯಾ ಮಾರಾಟವು 27.52% ನಷ್ಟು ಕುಸಿದಿದೆ.

Most Read Articles

Kannada
English summary
Top 10 scooters sold in domestic market during october 2021 details
Story first published: Saturday, November 20, 2021, 15:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X