ಬಿಡುಗಡೆಗೆ ಸಿದ್ದವಾಗಿರುವ ಟಾಪ್ 5 ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳಿವು..

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿಗೊಳಿಸುವಲ್ಲಿ ಸ್ಟಾರ್ಟ್ಅಪ್ ಕಂಪನಿಗಳು ಯಶಸ್ವಿಯಾಗುತ್ತಿವೆ.

ಬಿಡುಗಡೆಗೆ ಸಿದ್ದವಾಗಿರುವ ಟಾಪ್ 5 ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳಿವು..

ದುಬಾರಿ ಇಂಧನ ದರ ಮತ್ತು ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ಪರಿಣಾಮಕಾರಿಯಾಗಿ ತಗ್ಗಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಹಲವಾರು ಪ್ರೋತ್ಸಾಹಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಹೊಸ ಯೋಜನೆಗಳಿಂದಾಗಿ ಕಳೆದ ಒಂದು ವರ್ಷದಿಂದ ಇವಿ ವಾಹನಗಳ ಮಾರಾಟದಲ್ಲಿ ಸಾಕಷ್ಟು ಏರಿಕೆಯಾಗಿದೆ.

ಹೀಗಾಗಿ ಮಾರುಕಟ್ಟೆಯಲ್ಲಿ ವಿವಿಧ ಇವಿ ಸ್ಕೂಟರ್ ಹಾಗೂ ಬೈಕ್ ಮಾದರಿಗಳು ಬಿಡುಗಡೆಯಾಗುತ್ತಿದ್ದು, ಶೀಘ್ರದಲ್ಲೇ ಮತ್ತಷ್ಟು ಹೊಸ ಇವಿ ಮೋಟಾರ್‌ಸೈಕಲ್‌ಗಳು ಮಾರುಕಟ್ಟೆ ಪ್ರವೇಶಿಸಲಿವೆ. ಹಾಗಾದ್ರೆ ಬಿಡುಗಡೆಯಾಗಲಿರುವ ಟಾಪ್ 5 ಇವಿ ಮೋಟಾರ್‌ಸೈಕಲ್‌ಗಳು ಯಾವವು? ಹೊಸ ಇವಿ ಮೋಟಾರ್‌ಸೈಕಲ್‌ಗಳ ತಾಂತ್ರಿಕ ಮಾಹಿತಿಯನ್ನು ಇಲ್ಲಿ ಚರ್ಚಿಸಲಾಗಿದೆ.

ಬಿಡುಗಡೆಗೆ ಸಿದ್ದವಾಗಿರುವ ಟಾಪ್ 5 ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳಿವು..

ಆಲ್ಟ್ರಾವಯೊಲೆಟ್ ಎಫ್77

ಹೊಸ ಆಲ್ಟ್ರಾವಯೊಲೆಟ್ ಹೊಸ ಎಫ್77 ಸ್ಪೋರ್ಟಿ ಸೂಪರ್ ಎಲೆಕ್ಟ್ರಿಕ್ ಬೈಕ್ ಮಾದರಿಯು ಈಗಾಗಲೇ ಭಾರತದಲ್ಲಿ ಬಿಡುಗಡೆಯಾಗಿದ್ದು, ಹೊಸ ಇವಿ ಬೈಕ್ 2022ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ವಿತರಣೆಗೊಳ್ಳುವ ಸಾಧ್ಯತೆಗಳಿವೆ. ಹೊಸ ಎಫ್77 ಹೈ ಪರ್ಫಾಮೆನ್ಸ್ ಬೈಕ್ ಬಿಡುಗಡೆಯ ನಂತರ ಆಲ್ಟ್ರಾವಯೊಲೆಟ್ ಕಂಪನಿಯು ಇದುವರೆಗೆ ಸುಮಾರು 40 ಸಾವಿರ ಯುನಿಟ್‌ಗಳಿಗೆ ಬುಕ್ಕಿಂಗ್ ಪಡೆದುಕೊಂಡಿದ್ದು, ಕಂಪನಿಯು ಶೇ.90ರಷ್ಟು ಸ್ವದೇಶಿ ಕಂಪನಿಗಳ ಬಿಡಿಭಾಗಗಳೊಂದಿಗೆ ಹೊಸ ಬೈಕ್ ಅಭಿವೃದ್ದಿಪಡಿಸುವ ಗುರಿ ತಲುಪಿದೆ.

ಬಿಡುಗಡೆಗೆ ಸಿದ್ದವಾಗಿರುವ ಟಾಪ್ 5 ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳಿವು..

ಆಲ್ಟ್ರಾವಯೊಲೆಟ್ ಕಂಪನಿಯ ಸದ್ಯ ಅನಾವರಣಗೊಳಿಸಿರುವ ಹೊಸ ಎಫ್77 ಸೂಪರ್ ಎಲೆಕ್ಟ್ರಿಕ್ ಬೈಕ್ ಬೆಲೆಯು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಆನ್ ರೋಡ್ ಪ್ರಕಾರ ಆರಂಭಿಕ ಆವೃತ್ತಿಗೆ ರೂ.3 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ.3.25 ಲಕ್ಷ ಬೆಲೆ ನಿಗದಿಪಡಿಸಲಾಗಿದ್ದು, ಎಫ್77 ಬೈಕ್ ಪ್ರತಿ ಚಾರ್ಜ್‌ಗೆ ರೈಡಿಂಗ್ ಮೋಡ್ ಆಧಾರದ ಮೇಲೆ ಕನಿಷ್ಠ 140ಕಿ.ಮಿನಿಂದ ಗರಿಷ್ಠ 150 ಕಿ.ಮೀ ಮೈಲೇಜ್ ಹಿಂದಿರುಗಿಸಬಲ್ಲದು.

ಬಿಡುಗಡೆಗೆ ಸಿದ್ದವಾಗಿರುವ ಟಾಪ್ 5 ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳಿವು..

ಹೀರೋ ಎಇ47 ಇವಿ

ಬಿಡುಗಡೆಯಾಗಲಿರುವ ಪ್ರಮುಖ ಇವಿ ಬೈಕ್ ಮಾದರಿಗಳಲ್ಲಿ ಹೀರೋ ಎಇ 47 ಎಲೆಕ್ಟ್ರಿಕ್ ಬೈಕ್ ಕೂಡಾ ಒಂದಾಗಿದ್ದು, ಹೊಸ ಬೈಕ್ ಮುಂಬರುವ ಮಾರ್ಚ್ ವೇಳೆಗೆ ಮಾರುಕಟ್ಟೆ ಪ್ರವೇಶಿಸಲಿದೆ. ಈ ಬೈಕಿನಲ್ಲಿ 3.5 ಕಿ.ವ್ಯಾ ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಈ ಬ್ಯಾಟರಿಯು ಪೂರ್ತಿಯಾಗಿ ಚಾರ್ಜ್ ಆದ ನಂತರ ಪವರ್ ಮೋಡ್‌ನಲ್ಲಿ 85 ಕಿ.ಮೀ ಹಾಗೂ ಇಕೋ ಮೋಡ್‌ನಲ್ಲಿ 160 ಕಿ.ಮೀಗಳವರೆಗೆ ಚಲಿಸುತ್ತದೆ.

ಬಿಡುಗಡೆಗೆ ಸಿದ್ದವಾಗಿರುವ ಟಾಪ್ 5 ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳಿವು..

ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಕ್ರೂಸ್ ಕಂಟ್ರೋಲ್ ಸಿಸ್ಟಂ, ಡಿಜಿಟಲ್ ಇನ್ಸ್'ಟ್ರೂಮೆಂಟ್ ಕ್ಲಸ್ಟರ್, ಮೊಬೈಲ್ ಚಾರ್ಜಿಂಗ್ ಪೋರ್ಟ್, ರಿವರ್ಸ್ ಗೇರ್ ಪಡೆದುಕೊಂಡಿದ್ದು, ಈ ಬೈಕಿನ ಬೆಲೆಯನ್ನು ಕಂಪನಿಯು ಎಕ್ಸ್‌ಶೋರೂಂ ಪ್ರಕಾರ ರೂ. 1.25 ಲಕ್ಷಗಳಿಗೆ ನಿಗದಿಪಡಿಸುವ ಸಾಧ್ಯತೆಗಳಿವೆ.

ಬಿಡುಗಡೆಗೆ ಸಿದ್ದವಾಗಿರುವ ಟಾಪ್ 5 ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳಿವು..

ಎಂಫ್ಲಕ್ಸ್ ಎಲೆಕ್ಟ್ರಿಕ್ ಬೈಕ್

ದೇಶಿಯ ಮಾರುಕಟ್ಟೆಯಲ್ಲಿನ ಪ್ರಮುಖ ಇವಿ ಬೈಕ್‌ ಉತ್ಪಾದನಾ ಕಂಪನಿಗಳಲ್ಲಿ ಎಂಫ್ಲಕ್ಸ್ ಕೂಡಾ ಒಂದಾಗಿದ್ದು, ಕಂಪನಿಯು ಶೀಘ್ರದಲ್ಲೇ ವಿವಿಧ ಪ್ರೀಮಿಯಂ ಇವಿ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಬಿಡುಗಡೆಗೆ ಸಿದ್ದವಾಗಿರುವ ಟಾಪ್ 5 ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳಿವು..

ಎಂಫ್ಲಕ್ಸ್ ಕಂಪನಿಯು ತನ್ನ ಬಹುನೀರಿಕ್ಷಿತ ಟೂ ಹಾಗೂ ಟೂ ಪ್ಲಸ್ ಎಲೆಕ್ಟ್ರಿಕ್ ಬೈಕ್‌ಗಳ ಟೀಸರ್ ಅನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಪ್ರತಿ ಗಂಟೆಗೆ 180 ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ ಎಂಫ್ಲಕ್ಸ್ ಇವಿ ಬೈಕ್ ಮಾದರಿಗಳು ಪ್ರತಿ ಚಾರ್ಜ್‌ಗೆ 160 ರಿಂದ 200 ಕಿ.ಮೀ ತನಕ ಮೈಲೇಜ್ ಹಿಂದಿರುಗಿಸಲಿವೆ.

ಬಿಡುಗಡೆಗೆ ಸಿದ್ದವಾಗಿರುವ ಟಾಪ್ 5 ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳಿವು..

ರಿವೋಲ್ಟ್ ಆರ್‌ವಿ 1 ಇವಿ ಬೈಕ್

ಎಲೆಕ್ಟ್ರಿಕ್ ಬೈಕ್ ಮಾರಾಟದಲ್ಲಿ ಸದ್ಯ ಹೊಸ ಸಂಚಲನಕ್ಕೆ ಕಾರಣವಾಗಿರುವ ರಿವೋಲ್ಟ್ ಕಂಪನಿಯು ಅತಿ ಕಡಿಮೆ ಅವಧಿಯಲ್ಲಿ ದಾಖಲೆ ಪ್ರಮಾಣದ ಇವಿ ಬೈಕ್ ಮಾರಾಟ ಮಾಡಿದ್ದು, ಕಂಪನಿಯು ಶೀಘ್ರದಲ್ಲೇ ಹೊಸ ಎಲೆಕ್ಟ್ರಿಕ್ ಬೈಕ್ ಮಾದರಿಯೊಂದನ್ನು ಬಿಡುಗಡೆ ಮಾಡಲು ಸಿದ್ದವಾಗಿದೆ.

ಬಿಡುಗಡೆಗೆ ಸಿದ್ದವಾಗಿರುವ ಟಾಪ್ 5 ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳಿವು..

ರಿವೋಲ್ಟ್ ಕಂಪನಿಯು ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ 2019ರಲ್ಲಿ ಆರ್‌ವಿ400 ಮತ್ತು ಆರ್‌ವಿ300 ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿತ್ತು. ಹೊಸ ಬೈಕ್‌ಗಳಲ್ಲಿ ಆರ್‌ವಿ400 ಮಾದರಿಯು ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿದ್ದು, ಕಡಿಮೆ ಬೇಡಿಕೆ ಹೊಂದಿರುವ ಆರ್‌ವಿ300 ಬೈಕ್ ಮಾದರಿಯನ್ನು ಸ್ಥಗಿತಗೊಳಿಸಿ ಅದೇ ಬೈಕ್ ಮಾದರಿಯನ್ನೇ ಬಿಟುಬಿ ವಾಣಿಜ್ಯ ಬೈಕ್ ಮಾದರಿಯನ್ನಾಗಿ ಮರು ಬಿಡುಗಡೆ ಮಾಡಲು ನಿರ್ಧರಿಸಿದೆ.

ಬಿಡುಗಡೆಗೆ ಸಿದ್ದವಾಗಿರುವ ಟಾಪ್ 5 ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳಿವು..

ಒಕಿ100 ಎಲೆಕ್ಟ್ರಿಕ್ ಬೈಕ್

ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳ ಮಾರಾಟದಲ್ಲಿ ಮುನ್ನಡೆ ಸಾಧಿಸುತ್ತಿರುವ ಒಕಿನಾವ ಕಂಪನಿಯು 2022ರಲ್ಲಿ ಮತ್ತಷ್ಟು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಇವಿ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಇವಿ ದ್ವಿಚಕ್ರ ವಾಹನಗಳಲ್ಲಿ ಒಕಿ100 ಇವಿ ಬೈಕ್ ಸೇರಿದಂತೆ ಒಟ್ಟು ನಾಲ್ಕು ಹೊಸ ಇವಿ ವಾಹನಗಳನ್ನು ರಸ್ತೆಗಿಳಿಯಲಿವೆ.

ಬಿಡುಗಡೆಗೆ ಸಿದ್ದವಾಗಿರುವ ಟಾಪ್ 5 ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳಿವು..

125 ಸಿಸಿ ಸಾಮರ್ಥ್ಯದ ಸಾಮಾನ್ಯ ಬೈಕ್‌ಗಳಿಗೆ ಸಮನಾಗಿರುವ ಹೊಸ ಎಲೆಕ್ಟ್ರಿಕ್ ಬೈಕ್ ಮಾದರಿಯು ರಿವೋಲ್ಟ್ ಎಲೆಕ್ಟ್ರಿಕ್ ಬೈಕ್‌ ಮಾದರಿಗೆ ಪೈಪೋಟಿ ನೀಡಲಿದ್ದು, ಪ್ರತಿ ಚಾರ್ಜ್‌ಗೆ ವೇಗದ ಆಧಾರದ ಮೇಲೆ 120ಕಿ.ಮೀ ನಿಂದ 150 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ ಎನ್ನಲಾಗಿದೆ. ಹೊಸ ಇವಿ ಬೈಕ್ ಮಾದರಿಯು ಸ್ಥಳೀಯವಾಗಿ ಅಭಿವೃದ್ದಿ ಹೊಂದಿರುವ ಗರಿಷ್ಠ ಬಿಡಿಭಾಗಗಳನ್ನು ಪಡೆದುಕೊಂಡಿದ್ದು, ಹೊಸ ಬೈಕ್ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ. 1 ಲಕ್ಷದಿಂದ ರೂ. 1.20 ಲಕ್ಷ ಬೆಲೆ ಅಂತರದೊಂದಿಗೆ ಮುಂದಿನ ಫೆಬ್ರವರಿ ಹೊತ್ತಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

Most Read Articles

Kannada
English summary
Top 5 upcoming e motorcycles list ultraviolette f77 hero electric ae 47 and more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X