ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2021ರ Triumph Street Scrambler ಬೈಕ್

ಬ್ರಿಟಿಷ್ ದ್ವಿಚಕ್ರ ತಯಾರಕ ಕಂಪನಿಯಾದ ಟ್ರಯಂಫ್ ಮೋಟರ್‌ಸೈಕಲ್ ತನ್ನ ಹೊಸ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದರ ಭಾಗವಾಗಿ ಟ್ರಯಂಫ್ ಕಂಪನಿಯು ಈ 2021ರ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬೈಕಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2021ರ Triumph Street Scrambler ಬೈಕ್

ಈ ವರ್ಷದ ಆರಂಭದಲ್ಲಿ 2021ರ ಟ್ರಯಂಫ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬೈಕ್ ಜಾಗತಿಕವಾಗಿ ಅನಾವರಣಗೊಂಡಿತ್ತು. ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಸ್ಟ್ಯಾಂಡರ್ಡ್ ಆವೃತ್ತಿಯಾಗಿರುವುದರಿಂದ ಸ್ಯಾಂಡ್‌ಸ್ಟಾರ್ಮ್ ಎಡಿಷನ್ ಗಿಂತ ಕಡಿಮೆ ಬೆಲೆಯಿರುತ್ತದೆ. ಈ ಹೊಸ 2021ರ ಟ್ರಯಂಫ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬೈಕಿಗೆ ಹಿಂದಿನ ಮಾದರಿಗಿಂತ ಸುಮಾರು ರೂ.15,000 ಹೆಚ್ಚು ಇರಬಹುದು. ಅಂದರೆ ಈ ಬೈಕಿಗೆ ಅಂದಾಜು ರೂ.8.70 ಲಕ್ಷ ಬೆಲೆಯನ್ನು ಹೊಂದಿರಬಹುದು ಎಂದು ನಿರೀಕ್ಷಿಸುತ್ತೇವೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2021ರ Triumph Street Scrambler ಬೈಕ್

2021ರ ಟ್ರಯಂಫ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬೈಕಿನಲ್ಲಿ 900 ಸಿಸಿಯ ಪ್ಯಾರಲಲ್-ಟ್ವಿನ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 3,250 ಆರ್‌ಪಿಎಂನಲ್ಲಿ 80 ಎನ್‌ಎಂ ಟಾರ್ಕ್ ಹಾಗೂ 65 ಬಿಹೆಚ್‌ಪಿ ಪವರ್ ಉತ್ಪಾದಿಸು ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಂಜಿನ್ ನೊಂದಿಗೆ ಐದು-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2021ರ Triumph Street Scrambler ಬೈಕ್

ಹೊಸ 2021 ಟ್ರಯಂಫ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬೈಕಿನ ಸ್ಟೈಲಿಂಗ್ ವಿಭಾಗವು ಬದಲಾಗದೆ ಉಳಿದಿದೆ. ಈ ಬೈಕಿನಲ್ಲಿ ಡ್ಯುಯಲ್ ಹೈ ಎಕ್ಸಾಸ್ಟ್ ಸಿಸ್ಟಂ, ಎಲ್ಇಡಿ ಹೆಡ್‌ಲೈಟ್‌ ಹಾಗೂ ಸೈಡ್ ಪ್ಲೇಟ್'ಗಳನ್ನು ನೀಡಲಾಗಿದೆ. ಇದರ ಜೊತೆಗೆ ಬ್ರಷ್ಡ್ ಅಲ್ಯೂಮಿನಿಯಂ, ಹೀಲ್ ಪ್ರೊಟೆಕ್ಟರ್‌ ಹಾಗೂ ಹೆಡ್‌ಲೈಟ್ ಬ್ರಾಕೆಟ್‌ಗಳನ್ನು ನೀಡಲಾಗಿದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2021ರ Triumph Street Scrambler ಬೈಕ್

ಇದರೊಂದಿಗೆ ಸೀಟಿನಲ್ಲಿ ಹೊಸ ಲೆದರ್ ಹಾಗೂ ಟೆಕ್ಸ್ ಟೈಲ್ ಸೀಟ್ ಅಪ್ ಹೊಲೆಸ್ಟರಿಗಳನ್ನು ಬಳಸಲಾಗಿದೆ. ಇದರ ಜೊತೆಗೆ ಬಿಯರ್‌ಟ್ರಾಪ್ ಶೈಲಿಯ ಫುಟ್‌ಪೆಗ್‌, ಲಾಕ್ ಮಾಡಬಹುದಾದ ಟ್ಯಾಂಕ್, ಫ್ರಂಟ್ ಫೆಂಡರ್'ಗಳನ್ನು ಸಹ ನೀಡಲಾಗಿದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2021ರ Triumph Street Scrambler ಬೈಕ್

ಕಂಪನಿಯು ಹೊಸ ಟ್ರಯಂಫ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬೈಕ್ ಅನ್ನು ಜೆಟ್ ಬ್ಲಾಕ್, ಅರ್ಬನ್ ಗ್ರೇ ಹಾಗೂ ಮ್ಯಾಟ್ ಐರನ್‌ಸ್ಟೋನ್ ಹೊಂದಿರುವ ಮ್ಯಾಟ್ ಖಟ್ಟೆ ಬಣ್ಣಗಳಲ್ಲಿ ಮಾರಾಟ ಮಾಡಲಿದೆ. ಇದರ ಜೊತೆಗೆ ಎಬಿಎಸ್, ಬದಲಿಸಬಹುದಾದ ಟ್ರಾಕ್ಷನ್ ಕಂಟ್ರೋಲ್, ಇಮೊಬೈಲೈಸರ್ ಹಾಗೂ ಯುಎಸ್‌ಬಿ ಪವರ್ ಸಾಕೆಟ್'ಗಳನ್ನು ನೀಡಲಾಗಿದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2021ರ Triumph Street Scrambler ಬೈಕ್

ಈ ಬೈಕಿನಲ್ಲಿ ಕ್ಲಾಸಿಕ್ ಹಾಗೂ ಬಲಶಾಲಿಯಾದ ಎಕ್ಸಾಸ್ಟ್ ನೋಟ್ ಅಳವಡಿಸಲಾಗಿದೆ. ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬೈಕಿನಲ್ಲಿ ಬ್ರೇಕಿಂಗ್'ಗಾಗಿ ಸಿಂಗಲ್ ಫ್ರಂಟ್ ಡಿಸ್ಕ್ ಹಾಗೂ ಬ್ರೆಂಬೊ ಕ್ಯಾಲಿಪರ್‌ಗಳನ್ನು ನೀಡಲಾಗಿದೆ. ಈ ಹೊಸ ಟ್ರಯಂಫ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬೈಕಿನಲ್ಲಿ ಉತ್ತಮ ಬ್ರೇಕಿಂಗ್ ಸಿಸ್ಟಂ ಅನ್ನು ಒಳಗೊಂಡಿರುತ್ತದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2021ರ Triumph Street Scrambler ಬೈಕ್

ಈ ಬೈಕಿನಲ್ಲಿ 19 ಇಂಚಿನ ಸ್ಪೋಕ್ ವ್ಹೀಲ್‌ಗಳಿದ್ದು, ಮೆಟ್‌ಜೆಲ್ಲರ್ ಟೊರೆನ್ಸ್ ಟಯರ್‌ಗಳನ್ನು ಹೊಂದಿವೆ. ಕಂಪನಿಯು ಈ ಬೈಕಿನಲ್ಲಿ ರೋಡ್, ರೈನ್ ಹಾಗೂ ಆಫ್-ರೋಡ್ ಎಂಬ ಮೂರು ರೈಡಿಂಗ್ ಮೋಡ್'ಗಳನ್ನು ಒಳಗೊಂಡಿರಬಹುದು ಎಂದು ನಿರೀಕ್ಷಿಸುತ್ತೇವೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2021ರ Triumph Street Scrambler ಬೈಕ್

ಇನ್ನು ಭಾರತದಲ್ಲಿ ಮಾರಾಟವಾಗುತ್ತಿರುವ ಹೊಸ ಟ್ರಯಂಫ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಸ್ಯಾಂಡ್‌ಸ್ಟಾರ್ಮ್ ಬೈಕ್ ಬಗ್ಗೆ ಹೇಳುವುದಾದರೆ, ಇದು 1960ರ ಟ್ರಯಂಫ್ ಸ್ಕ್ರ್ಯಾಂಬ್ಲರ್ ಡಸರ್ಟ್ ರೇಸರ್ ನಿಂದ ಸ್ಫೂರ್ತಿ ಪಡೆದಿದೆ. ಸ್ಟ್ಯಾಂಡರ್ಡ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಅನ್ನು ಆಧರಿಸಿದ ಹೊಸ ಟ್ರಯಂಫ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಸ್ಯಾಂಡ್‌ಸ್ಟಾರ್ಮ್ ಎಡಿಷನ್ ಬ್ರಷ್ಡ್ ಅಲಾಯ್ ಸಂಪ್ ಗಾರ್ಡ್, ಹೈ ಫ್ರಂಟ್ ಮಡ್‌ಗಾರ್ಡ್ ಮತ್ತು ಬ್ಲ್ಯಾಕ್ ಗ್ರಿಲ್‌ನೊಂದಿಗೆ ಹೊಸ ಹೆಡ್‌ಲೈಟ್ ಗಳಂತಹ ಸ್ಟೈಲಿಂಗ್ ನವೀಕರಣಗಳನ್ನು ಹೊಂದಿವೆ. ಇದರೊಂದಿಗೆ ಎಲ್ಸಿಡಿ ಮಲ್ಟಿಫಂಕ್ಷನಲ್ ಡಿಸ್ ಪ್ಲೇಯನ್ನು ನೀಡಲಾಗಿದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2021ರ Triumph Street Scrambler ಬೈಕ್

ಈ ಹೊಸ ಟ್ರಯಂಫ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಸ್ಯಾಂಡ್‌ಸ್ಟಾರ್ಮ್ ಎಡಿಷನ್ ಮ್ಯಾಟ್ ಸ್ಟಾರ್ಮ್ ಗ್ರೇ ಎಂಬ ಒಂದೇ ಬಣ್ಣದ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಈ ಹೊಸ ಬೈಕಿನಲ್ಲಿ ಟಾಲ್-ಸೆಟ್ ಎಕ್ಸಾಸ್ಟ್ ಸೆಟಪ್ ಮತ್ತು ಸ್ಪ್ಲಿಟ್-ಶೈಲಿಯ ಸೀಟನ್ನು ಒಳಗೊಂಡಿದೆ. ಹೊಸ ಟ್ರಯಂಫ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಸ್ಯಾಂಡ್‌ಸ್ಟಾರ್ಮ್ ಎಡಿಷನ್ ಬೈಕಿನ ಎಂಜಿನ್ ಸ್ಟ್ಯಾಂಡರ್ಡ್ ಮಾದರಿಗೆ ಹೋಲುತ್ತದೆ. ಇದರಲ್ಲಿ ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದ ಅದೇ 900 ಸಿಸಿ, ಪ್ಯಾರೆಲಲ್-ಟ್ವಿನ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2021ರ Triumph Street Scrambler ಬೈಕ್

ಇನ್ನು ಟ್ರಯಂಫ್ ಅಂತರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ತನ್ನ ಹೊಸ ಟೈಗರ್ ಸ್ಪೋರ್ಟ್ 660 ಬೈಕ್ ಅನ್ನು ಅನಾವರಣಗೊಳಿಸಿದೆ. ಈ ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬೈಕ್ ಆಫ್-ರೋಡ್ ಅಧಾರಿತ ಅಡ್ವೆಂಚರ್ ಸ್ಪೋರ್ಟ್ಸ್ ಟೂರಿಂಗ್ ಬೈಕ್ ಆಗಿದೆ, ಈ ಹೊಸ ಬೈಕ್ ಟ್ರೈಡೆಂಟ್ 660 ಮಾದರಿಯನ್ನು ಆಧರಿಸಿದ್ದರೂ, ಇದು ಟೂರಿಂಗ್ ಬೈಕ್ ಆಗಿದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2021ರ Triumph Street Scrambler ಬೈಕ್

ಇದರಲ್ಲಿ ಕೆಲವು ವ್ಯತ್ಯಾಸಗಳನ್ನು ಪಡೆಯುತ್ತದೆ, ಸ್ಪೋರ್ಟಿಯಾಗಿ ಕಾಣುವ ಅರ್ಧ-ಫೇರಿಂಗ್, ನೇರವಾದ ರೈಡಿಂಗ್ ಪೋಷಿಸನ್, ಹೆಚ್ಚು ಸಸ್ಪೆಂಕ್ಷನ್ ಟ್ರ್ಯಾವೆಲ್, ಎತ್ತರದ ಸೀಟ್ ಮತ್ತು ಉತ್ತಮ ಟ್ರ್ಯಾವೆಲ್ ಸಾಮರ್ಥ್ಯಕ್ಕಾಗಿ ಲಗೇಜ್ ಫ್ರೇಮ ಅನ್ನು ಒಳಗೊಂಡಿದೆ. ಆದರೆ ಈ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷದಲ್ಲಿ ಬಿಡುಗಡೆಯಾಗಲಿದೆ. ಆದರೆ 2021ರ ಟ್ರಯಂಫ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬೈಕ್ ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

Most Read Articles

Kannada
English summary
Triumph motorcycles teased 2021 street scrambler india launch soon details
Story first published: Thursday, October 7, 2021, 14:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X