ಹೊಸ ಎಲೆಕ್ಟ್ರಿಕ್ ಬೈಕ್ ಉತ್ಪಾದನೆಗಾಗಿ ಒಂದಾದ ಟಿವಿಎಸ್ ಮತ್ತು ಬಿಎಂಡಬ್ಲ್ಯು ಮೋಟೊರಾಡ್

ಭಾರತದಲ್ಲಿ ಈಗಾಗಲೇ ತನ್ನ ಪ್ರಮುಖ ಮಧ್ಯಮ ಕ್ರಮಾಂಕದ ಪ್ರೀಮಿಯಂ ಬೈಕ್ ಮಾದರಿಗಳನ್ನು ಭಾರತಲ್ಲಿಯೇ ಉತ್ಪಾದನೆಗಾಗಿ ಟಿವಿಎಸ್ ಮೋಟಾರ್ ಜೊತೆ ಸಹಭಾಗಿತ್ವ ಘೋಷಣೆ ಮಾಡಿರುವ ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಇದೀಗ ಭವಿಷ್ಯದ ವಾಹನ ಮಾದರಿಗಳಾದ ಎಲೆಕ್ಟ್ರಿಕ್ ಆವೃತ್ತಿಗಳ ಉತ್ಪಾದನೆ ಹೊಸ ಸಹಭಾಗಿತ್ವ ಯೋಜನೆ ಪ್ರಕಟಿಸಿವೆ.

ಹೊಸ ಎಲೆಕ್ಟ್ರಿಕ್ ಬೈಕ್ ಉತ್ಪಾದನೆಗಾಗಿ ಒಂದಾದ ಟಿವಿಎಸ್ ಮತ್ತು ಬಿಎಂಡಬ್ಲ್ಯು ಮೋಟೊರಾಡ್

ಹೊಸ ಸಹಭಾಗಿತ್ವ ಯೋಜನೆ ಅಡಿ ಟಿವಿಎಸ್ ಮತ್ತು ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಗಳು ಇವಿ ಮಾದರಿಗಳಿಗಾಗಿ ಪ್ರತ್ಯೇಕ ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಬಳಕೆ, ತಂತ್ರಜ್ಞಾನ ವಿನಿಯಮ ಮತ್ತು ಗುಣಮಟ್ಟದ ಬಿಡಿಭಾಗಗಳ ಅಭಿವೃದ್ದಿಗೆ ಪರಸ್ಪರ ಸಹಕರಿಸಲಿವೆ. ಈ ಮೂಲಕ ಭವಿಷ್ಯದ ವಾಹನಗಳ ಉತ್ಪಾದನೆಯಲ್ಲಿ ಎರಡು ಕಂಪನಿಯು ಉತ್ತಮ ಮುನ್ನಡೆ ಕಾಯ್ದುಕೊಳ್ಳಲು ನೆರವಾಗಲಿದ್ದು, ಹೊಸ ಯೋಜನೆಯಲ್ಲಿ ಶೀಘ್ರದಲ್ಲಿ ವಿನೂತನ ಇವಿ ಮಾದರಿಗಳು ರಸ್ತೆಗಿಳಿಯಲಿವೆ.

ಹೊಸ ಎಲೆಕ್ಟ್ರಿಕ್ ಬೈಕ್ ಉತ್ಪಾದನೆಗಾಗಿ ಒಂದಾದ ಟಿವಿಎಸ್ ಮತ್ತು ಬಿಎಂಡಬ್ಲ್ಯು ಮೋಟೊರಾಡ್

2013ರಿಂದಲೇ ಭಾರತದಲ್ಲಿ ಟಿವಿಎಸ್ ಮೋಟಾರ್ ಜೊತೆಗೂಡಿ ಕಾರ್ಯನಿರ್ವಹಿಸುತ್ತಿರುವ ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಭಾರತದಲ್ಲಿ ವಿವಿಧ ಪ್ರೀಮಿಯಂ ಬೈಕ್‌ಗಳನ್ನು ಉತ್ಪಾದಿಸಿ ಪ್ರಮುಖ ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಕೈಗೊಳ್ಳುತ್ತಿದೆ.

ಹೊಸ ಎಲೆಕ್ಟ್ರಿಕ್ ಬೈಕ್ ಉತ್ಪಾದನೆಗಾಗಿ ಒಂದಾದ ಟಿವಿಎಸ್ ಮತ್ತು ಬಿಎಂಡಬ್ಲ್ಯು ಮೋಟೊರಾಡ್

ಭಾರತದಲ್ಲಿ ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಸದ್ಯ ಜಿ 310 ಆರ್ ಮತ್ತು ಜಿ 310 ಜಿಎಸ್ ಮಾದರಿಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದು, ಹೊಸ ಸಹಭಾಗಿತ್ವ ಯೋಜನೆ ಅಡಿ ನಿರ್ಮಾಣ ಮಾಡಲಾಗುವ ಹೊಸ ಇವಿ ಬೈಕ್ ಮಾದರಿಗಳು ಮುಂದಿನ ಎರಡು ವರ್ಷದೊಳಗೆ ಬಿಡುಗಡೆಯಾಗಲಿವೆ.

ಹೊಸ ಎಲೆಕ್ಟ್ರಿಕ್ ಬೈಕ್ ಉತ್ಪಾದನೆಗಾಗಿ ಒಂದಾದ ಟಿವಿಎಸ್ ಮತ್ತು ಬಿಎಂಡಬ್ಲ್ಯು ಮೋಟೊರಾಡ್

ವಿಸ್ತರಿಸಿದ ಪಾಲುದಾರಿಕೆಯೊಂದಿಗೆ ಪ್ರಪಂಚದಾದ್ಯಂತದ ವಿವಿಧ ಮಾರುಕಟ್ಟೆಗಳಲ್ಲಿನ ಗ್ರಾಹಕರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಭವಿಷ್ಯದ ವಾಹನಗಳ ಉತ್ಪಾದನೆಗೆ ಆದ್ಯತೆ ನೀಡಲು ನಿರ್ಧರಿಸಿದ್ದು, ಮಾರುಕಟ್ಟೆಯಲ್ಲಿ ಇವಿ ವಾಹನಗಳ ಬೇಡಿಕೆಯು ತೀವ್ರವಾಗಿ ಹೆಚ್ಚಳವಾಗುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ.

ಹೊಸ ಎಲೆಕ್ಟ್ರಿಕ್ ಬೈಕ್ ಉತ್ಪಾದನೆಗಾಗಿ ಒಂದಾದ ಟಿವಿಎಸ್ ಮತ್ತು ಬಿಎಂಡಬ್ಲ್ಯು ಮೋಟೊರಾಡ್

ಜಗತ್ತಿನಾದ್ಯಂತ ಬಹುತೇಕ ವಾಹನ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಬಿಡುಗಡೆಯ ಯೋಜನೆಯಲ್ಲಿದ್ದು, ಪ್ರೀಮಿಮಂ ದ್ವಿಚಕ್ರ ವಾಹನಗಳನ್ನು ಉತ್ಪಾದನೆ ಮಾಡುವ ಬಿಎಂಡಬ್ಲ್ಯು ಅಂಗಸಂಸ್ಥೆ ಬಿಎಂಡಬ್ಲ್ಯು ಮೋಟೊರಾಡ್ ಸಹ ವಿನೂತನ ಪರಿಕಲ್ಪನೆಯ ಎಲೆಕ್ಟ್ರಿಕ್ ಸ್ಕೂಟರ್‌ ಬಿಡುಗಡೆಗೆ ಮುಂದಾಗಿದೆ.

ಹೊಸ ಎಲೆಕ್ಟ್ರಿಕ್ ಬೈಕ್ ಉತ್ಪಾದನೆಗಾಗಿ ಒಂದಾದ ಟಿವಿಎಸ್ ಮತ್ತು ಬಿಎಂಡಬ್ಲ್ಯು ಮೋಟೊರಾಡ್

ಎಲೆಕ್ಟ್ರಿಕ್ ವಾಹನಗಳು ವಿವಿಧ ಬ್ರಾಂಡ್‌ಗಳಿಗೆ ಅನುಗುಣವಾಗಿ ಹಲವಾರು ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಬಿಡುಗಡೆಯಾಗುತ್ತಿದ್ದು, ಬಿಎಂಡಬ್ಲ್ಯು ಮೋಟೊರಾಡ್ ನಿರ್ಮಾಣದ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಇವಿ ವಾಹನ ಉತ್ಪಾದನಾ ವಿಧಾನವನ್ನೇ ಬದಲಿಸುವ ಸುಳಿವು ನೀಡಿದೆ.

ಹೊಸ ಎಲೆಕ್ಟ್ರಿಕ್ ಬೈಕ್ ಉತ್ಪಾದನೆಗಾಗಿ ಒಂದಾದ ಟಿವಿಎಸ್ ಮತ್ತು ಬಿಎಂಡಬ್ಲ್ಯು ಮೋಟೊರಾಡ್

ಸ್ಕೂಟರ್ ವಿನ್ಯಾಸದ ಪರಿಕಲ್ಪನೆಗಳು ಸಾಕಷ್ಟು ಬದಲಾಗುತ್ತಿದ್ದು, ಪ್ರತಿ ದಿನವೂ ಹೊಸ ಹೊಸ ವಿನ್ಯಾಸದ ಸ್ಕೂಟರ್ ಗಳು ಬಿಡುಗಡೆಯಾಗುತ್ತಲೇ ಇವೆ. ಇದೀಗ ಬಿಎಂಡಬ್ಲ್ಯು ಮೋಟೊಕರಾಡ್ ಕಂಪನಿಯ ಸಹ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿದ್ದು, ಹಲವಾರು ಹೊಸ ಮಾದರಿಯ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ.

ಹೊಸ ಎಲೆಕ್ಟ್ರಿಕ್ ಬೈಕ್ ಉತ್ಪಾದನೆಗಾಗಿ ಒಂದಾದ ಟಿವಿಎಸ್ ಮತ್ತು ಬಿಎಂಡಬ್ಲ್ಯು ಮೋಟೊರಾಡ್

ಬಿಎಂಡಬ್ಲ್ಯ ಹೊಸ ಕಾನ್ಸೆಪ್ಟ್ ಎಲೆಕ್ಟ್ರಿಕ್ ಸ್ಕೂಟರ್ ವಿನ್ಯಾಸವು ವಿಶಿಷ್ಟವಾಗಿದ್ದು, ಭವಿಷ್ಯದಲ್ಲಿ ಸ್ಕೂಟರ್ ಗಳು ಹೀಗೆಯೇ ಇರಬಹುದೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿರುವುದು ಸುಳ್ಳಲ್ಲ. ವಿಶ್ವಾದ್ಯಂತ ದಿನೇ ದಿನೇ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯ ಬಗ್ಗೆ ತಿಳಿದಿರುವ ಬಿಎಂಡಬ್ಲ್ಯು ಕಂಪನಿಯು ಎಲೆಕ್ಟ್ರಿಕ್ ವಾಹನಗಳನ್ನು ಸಹ ಉತ್ಪಾದಿಸುತ್ತಿದೆ. ಈಗ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಬಿಡುಗಡೆಗೊಳಿಸುತ್ತಿದೆ.

ಹೊಸ ಎಲೆಕ್ಟ್ರಿಕ್ ಬೈಕ್ ಉತ್ಪಾದನೆಗಾಗಿ ಒಂದಾದ ಟಿವಿಎಸ್ ಮತ್ತು ಬಿಎಂಡಬ್ಲ್ಯು ಮೋಟೊರಾಡ್

ಡೆಫಿನಿಷನ್ ಸಿಇ 04 ಎಂಬ ಹೆಸರಿನ ಈ ಎಲೆಕ್ಟ್ರಿಕ್ ಸ್ಕೂಟರ್ ಎಲ್ಲಾ ಎಲೆಕ್ಟ್ರಿಕ್ ಬೈಕುಗಳಲ್ಲಿರುವಂತಹ ಫೀಚರ್, ಶೇಪ್ ಹಾಗೂ ಬಲಿಷ್ಠ ಸಾಮರ್ಥ್ಯವನ್ನು ಹೊಂದಿದೆ. ಅದರ ನೋಟವು ಹಿಂದೆಂದೂ ನೋಡಿರದ ವಿನ್ಯಾಸ ಹೊಂದಿದ್ದು, ಬಿಎಂಡಬ್ಲ್ಯು ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ ಉದ್ದವಾದ ಬಾಕ್ಸ್ ರೀತಿಯ ವಿನ್ಯಾಸ ನೀಡಿದೆ.

ಹೊಸ ಎಲೆಕ್ಟ್ರಿಕ್ ಬೈಕ್ ಉತ್ಪಾದನೆಗಾಗಿ ಒಂದಾದ ಟಿವಿಎಸ್ ಮತ್ತು ಬಿಎಂಡಬ್ಲ್ಯು ಮೋಟೊರಾಡ್

ಈ ಸ್ಕೂಟರ್ ಹಾಲಿವುಡ್ ಚಿತ್ರಗಳಲ್ಲಿ ಕಂಡು ಬರುವ ಡಮ್ಮಿ ಸ್ಕೂಟರಿನಂತಿದೆ. ಆದರೆ ಡೆಫಿನಿಷನ್ ಸಿಇ 04 ಆಧುನಿಕ ರೀತಿಯ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು ಅದನ್ನು ಬಳಸಬಹುದು. ಈ ಸ್ಕೂಟರಿನಲ್ಲಿರುವ ವಿನ್ಯಾಸ ಸ್ಕೂಟರ್ ಬಗೆಗಿನ ಜನರ ದೃಷ್ಟಿಕೋನವನ್ನು ಬದಲಿಸುತ್ತದೆ. ಈ ಸ್ಕೂಟರ್‌ನಲ್ಲಿ ಬೈಕುಗಳಲ್ಲಿರುವಂತಹ ಹಿಂಬದಿಯ ಸೀಟ್ ಅನ್ನು ನೀಡಲಾಗಿದೆ. ಬಿಎಂಡಬ್ಲ್ಯು ಮೋಟೊರಾಡ್ ಈ ವ್ಯವಸ್ಥೆಯನ್ನು ತನ್ನ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ವಿಭಿನ್ನವಾಗಿ ಸ್ಥಾಪಿಸಿದೆ. ಈ ಸ್ಕೂಟರಿನಲ್ಲಿರುವ ಫುಟ್, ಎಂಜಿನ್ ಹಾಗೂ ಸ್ಕೂಟರಿನ ಮುಂಭಾಗವು ಭವಿಷ್ಯದ ವಿನ್ಯಾಸವನ್ನು ಹೊಂದಿವೆ.

ಹೊಸ ಎಲೆಕ್ಟ್ರಿಕ್ ಬೈಕ್ ಉತ್ಪಾದನೆಗಾಗಿ ಒಂದಾದ ಟಿವಿಎಸ್ ಮತ್ತು ಬಿಎಂಡಬ್ಲ್ಯು ಮೋಟೊರಾಡ್

ಈ ಸ್ಕೂಟರಿನಲ್ಲಿ ಸ್ಮಾರ್ಟ್ ಫೋನ್ ಗಾಗಿ ದೊಡ್ಡ ಸ್ಕ್ರೀನ್ ನೀಡಲಾಗಿದೆ. ಈ ಸ್ಕ್ರೀನ್ ಸ್ಕೂಟರಿನ ಶ್ರೇಣಿ, ಚಾರ್ಜ್ ಲೆವೆಲ್, ಕನೆಕ್ಟಿವಿಟಿ, ವೇಗದಂತಹ ವಿವಿಧ ಮಾಹಿತಿಯನ್ನು ಒದಗಿಸುತ್ತದೆ. ಕಂಪನಿಯು ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ವ್ಯಾಪ್ತಿಯ ಬಗೆಗಿನ ಮಾಹಿತಿಯನ್ನು ಬಿಡುಗಡೆಗೊಳಿಸಿಲ್ಲ. ಇದರ ಜೊತೆಗೆ ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ ಯಾವ ರೀತಿಯ ಫೀಚರ್ ಗಳನ್ನು ಅಳವಡಿಸಬೇಕು ಎಂಬ ಮಾಹಿತಿಯನ್ನು ರಹಸ್ಯವಾಗಿಟ್ಟಿದೆ. ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಡೆಫಿನಿಷನ್ ಸಿಇ 04 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಾನ್ಸೆಪ್ಟ್ ಮಾದರಿಯಾಗಿ ಪರಿಚಯಿಸಿದೆ.

ಹೊಸ ಎಲೆಕ್ಟ್ರಿಕ್ ಬೈಕ್ ಉತ್ಪಾದನೆಗಾಗಿ ಒಂದಾದ ಟಿವಿಎಸ್ ಮತ್ತು ಬಿಎಂಡಬ್ಲ್ಯು ಮೋಟೊರಾಡ್

ಸದ್ಯ ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ತನ್ನ ಹೊಸ ಇವಿ ಮಾದರಿಯನ್ನು ಆಯ್ದ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾತ್ರ ಬಿಡುಗಡೆ ಮಾಡುತ್ತಿದ್ದು, ಹೊಸ ಇವಿ ಸ್ಕೂಟರ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡುವ ಕುರಿತು ಯಾವುದೇ ಮಾಹಿತಿಗಳಿಲ್ಲ.

ಹೊಸ ಎಲೆಕ್ಟ್ರಿಕ್ ಬೈಕ್ ಉತ್ಪಾದನೆಗಾಗಿ ಒಂದಾದ ಟಿವಿಎಸ್ ಮತ್ತು ಬಿಎಂಡಬ್ಲ್ಯು ಮೋಟೊರಾಡ್

ಇದೀಗ ಟಿವಿಎಸ್ ಮತ್ತು ಬಿಎಂಡಬ್ಲ್ಯು ಮೋಟೊರಾಡ್ ಭಾರತದಲ್ಲಿ ಒಂದಾಗಿರುವುದು ಹೊಸ ಇವಿ ವಾಹನ ಮಾದರಿಗಳ ಬಿಡುಗಡೆಗೆ ವೇದಿಕೆ ಸಜ್ಜುಗೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ಹೊಸ ಮಾದರಿಯ ಇವಿ ವಾಹನಗಳನ್ನು ನಾವು ನೀರಿಕ್ಷೆ ಮಾಡಬಹುದಾಗಿದೆ.

Most Read Articles

Kannada
English summary
Tvs motor and bmw motorrad to jointly develop new electric vehicles soon
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X