ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಶಿಯೋಮಿ

ಹೆಚ್ಚುತ್ತಿರುವ ಇಂಧನ ಬೆಲೆಗಳ ಪರಿಣಾಮ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಲವಾರು ಹೊಸ ಆಟೋ ಕಂಪನಿಗಳು ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನ ಮಾದರಿಗಳನ್ನು ಪರಿಚಯಿಸುತ್ತಿರುವುದು ಮಾರುಕಟ್ಟೆಯಲ್ಲಿ ಭಾರೀ ಬದಲಾವಣೆಗೆ ಕಾರಣವಾಗುತ್ತಿದೆ.

ಇವಿ ವಾಹನ ಉತ್ಪಾದನೆ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಶಿಯೋಮಿ

ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಸಾಂಪ್ರಾದಾಯಿಕ ವಾಹನ ಮಾರಾಟ ಮಾಡುತ್ತಿರುವ ಕಂಪನಿಗಳಿಂತಲೂ ಸ್ಟಾರ್ಟ್-ಅಪ್ ಕಂಪನಿಗಳ ಹೊಸ ಎಲೆಕ್ಟ್ರಿಕ್ ವಾಹನ ಉತ್ಪನ್ನಗಳೇ ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದು, ಆಟೋ ಕಂಪನಿಗಳು ಮಾತ್ರವಲ್ಲದೇ ಎಲೆಕ್ಟ್ರಾನಿಕ್ ಉತ್ಪನ್ನಗಳ ಮುಂಚೂಣಿ ಕಂಪನಿಗಳು ಸಹ ಇವಿ ವೆಹಿಕಲ್ ಉತ್ಪಾದನೆ ಮೇಲೆ ಆಸಕ್ತಿ ವಹಿಸುತ್ತಿವೆ.

ಇವಿ ವಾಹನ ಉತ್ಪಾದನೆ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಶಿಯೋಮಿ

ಯುರೋಪಿನ ಹಲವು ದೇಶಗಳಲ್ಲಿ 2030ರ ವೇಳೆಗೆ ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದ್ದು, ಭಾರತದಲ್ಲಿಯೂ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ.

ಇವಿ ವಾಹನ ಉತ್ಪಾದನೆ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಶಿಯೋಮಿ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಫೇಮ್ 2ನಂತಹ ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು, ಕೆಲವು ರಾಜ್ಯಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಹೆಚ್ಚಿನ ಮಟ್ಟದ ಸಬ್ಸಿಡಿ ನೀಡಲಾಗುತ್ತಿದೆ.

ಇವಿ ವಾಹನ ಉತ್ಪಾದನೆ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಶಿಯೋಮಿ

ಹೀಗಾಗಿ ಗ್ರಾಹಕರ ಬೇಡಿಕೆಯೆಂತೆ ವಾಹನ ತಯಾರಕ ಕಂಪನಿಗಳು ಮಾತ್ರವಲ್ಲದೇ ವಿವಿಧ ಸೆಲ್‌ಫೋನ್ ತಯಾರಕ ಕಂಪನಿಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವ ಯೋಜನೆಗೆ ಚಾಲನೆ ನೀಡಿದ್ದು, ಚೀನಾದ ಖಾಸಗಿ ಸ್ವಾಮ್ಯದ ಸ್ಮಾರ್ಟ್ ಪೋನ್ ತಯಾರಿಕೆ ಕಂಪನಿಯಾಗಿರುವ ಶಿಯೋಮಿ ಕೂಡಾ ಇವಿ ವಾಹನಗಳ ಉತ್ಪಾದನೆ ಮೇಲೆ ಭಾರೀ ಪ್ರಮಾಣದ ಹೂಡಿಕೆಗೆ ಒಪ್ಪಿಗೆ ಸೂಚಿಸಿದೆ.

ಇವಿ ವಾಹನ ಉತ್ಪಾದನೆ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಶಿಯೋಮಿ

ಈ ಹಿಂದೆ ಸಣ್ಣ ಗಾತ್ರದ ಎಲೆಕ್ಟ್ರಿಕ್ ವಾಹನಗಳನ್ನು ಸೀಮಿತ ಮಾರುಕಟ್ಟೆಗೆ ಪರಿಚಯಿಸುತ್ತಿರುವ ಕಂಪನಿಯು ಈಗ ಪೂರ್ಣ ಪ್ರಮಾಣದಲ್ಲಿ ವಿವಿಧ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಿದೆ.

ಇವಿ ವಾಹನ ಉತ್ಪಾದನೆ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಶಿಯೋಮಿ

ಎಲೆಕ್ಟ್ರಿಕ್ ವಾಹನ ಉತ್ಪಾದನೆಗಾಗಿ ಶಿಯೋಮಿ ಕಂಪನಿಯು ಗ್ರೇಟ್ ವಾಲ್ ಮೋಟಾರ್ ಕಂಪನಿ ಜೊತೆಗೂಡಿದ್ದು, ತನ್ನದೇ ಆದ ಬ್ರಾಂಡ್ ಹೆಸರಿನಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಈ ಘಟಕದಲ್ಲಿ ಉತ್ಪಾದಿಸಲು ನಿರ್ಧರಿಸಿದೆ.

ಇವಿ ವಾಹನ ಉತ್ಪಾದನೆ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಶಿಯೋಮಿ

ಹೊಸ ಎಲೆಕ್ಟ್ರಿಕ್ ವಾಹನದಲ್ಲಿ ವಿವಿಧ ವಿಶೇಷ ತಂತ್ರಜ್ಞಾನ ಸೌಲಭ್ಯಗಳನ್ನು ನೀಡುವುದಾಗಿ ಹೇಳಿಕೊಂಡಿರುವ ಶಿಯೋಮಿ ಕಂಪನಿಯು ಬೃಹತ್ ಪ್ರಮಾಣದಲ್ಲಿ ವಾಹನ ಉತ್ಪಾದನೆಯನ್ನು ಆರಂಭಿಸುತ್ತಿದ್ದು, ಇದಕ್ಕಾಗಿ ಮುಂದಿನ ಐದು ವರ್ಷಗಳ ಅವಧಿಗಾಗಿ ಸುಮಾರು 10 ಬಿಲಿಯನ್ ಡಾಲರ್ ಹೂಡಿಕೆಗೆ ಒಪ್ಪಿಗೆ ಸೂಚಿಸಿದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಇವಿ ವಾಹನ ಉತ್ಪಾದನೆ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಶಿಯೋಮಿ

ಆರಂಭಿಕ ಹಂತವಾಗಿ 1.52 ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆಯೊಂದಿಗೆ ಹೊಸ ಯೋಜನೆಗೆ ಚಾಲನೆ ನೀಡಲಾಗಿದ್ದು, ಮುಂಬರುವ ದಿನಗಳಲ್ಲಿ ಶಿಯೋಮಿ ಹೆಸರಿನಲ್ಲಿಯೇ ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನಗಳು ರಸ್ತೆಗಿಳಿಯಲಿವೆ.

ಇವಿ ವಾಹನ ಉತ್ಪಾದನೆ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಶಿಯೋಮಿ

ಶಿಯೋಮಿ ಕಂಪನಿಯು ಸೆಲ್ ಫೋನ್ ಮಾತ್ರವಲ್ಲದೆ ಸ್ಮಾರ್ಟ್ ವಾಚ್, ಏರ್ ಪ್ಯೂರಿಫೈಯರ್, ಎಲ್ಇಡಿ ಟಿವಿ, ಪ್ರೊಜೆಕ್ಟರ್, ವ್ಯಾಕ್ಯೂಮ್ ಕ್ಲೀನರ್, ಬ್ಲೂಟೂತ್ ಸ್ಪೀಕರ್, ಇಂಟರ್‌ನೆಟ್ ರೌಟರ್, ಇಯರ್ ಫೋನ್, ಇಯರ್ ಬಡ್, ಎಲ್ಇಡಿ ಲೈಟ್ ಬಲ್ಬ್ ಸೇರಿದಂತೆ ಹಲವಾರು ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ಇದೀಗ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಯೊಂದಿಗೆ ಆಟೋ ಉದ್ಯಮಕ್ಕೂ ಕಾಲಿಟ್ಟಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಇವಿ ವಾಹನ ಉತ್ಪಾದನೆ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಶಿಯೋಮಿ

ಸದ್ಯಕ್ಕೆ ಶಿಯೋಮಿ ಕಂಪನಿಯು ವಿವಿಧ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಆವೃತ್ತಿಗಳನ್ನು ಮಾತ್ರ ಬಿಡುಗಡೆ ಮಾಡಲಿದ್ದು, ತದನಂತರ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೂ ಯೋಜನೆ ರೂಪಿಸಿದೆ ಎನ್ನಲಾಗಿದೆ. ಆದರೆ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಕುರಿತಂತೆ ಯಾವುದೇ ಅಧಿಕೃತ ಮಾಹಿತಿಗಳು ಇಲ್ಲವಾದರೂ ಇವಿ ಸ್ಕೂಟರ್‌ಗಳು ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿವೆ.

Most Read Articles

Kannada
English summary
Chinese smartphone maker Xiaomi has announced to enter electric vehicle business. Read in Kannada.
Story first published: Wednesday, March 31, 2021, 14:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X