ಅತ್ಯುತ್ತಮ ಮೈಲೇಜ್ ನೀಡುವ ಯಮಹಾ ಫ್ಯಾಸಿನೋ 125 ಹೈಬ್ರಿಡ್ ಸ್ಕೂಟರ್ ಬಿಡುಗಡೆ

ಯಮಹಾ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಸ್ಕೂಟರ್ ಮಾದರಿಯಾದ ಫ್ಯಾಸಿನೋ 125 ಆವೃತ್ತಿಯ ಹೈಬ್ರಿಡ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಮಾದರಿಯು ಹೈಬ್ರಿಡ್ ಎಂಜಿನ್‌ನೊಂದಿಗೆ ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಅತ್ಯುತ್ತಮ ಮೈಲೇಜ್ ನೀಡುವ ಯಮಹಾ ಫ್ಯಾಸಿನೋ 125 ಹೈಬ್ರಿಡ್ ಸ್ಕೂಟರ್ ಬಿಡುಗಡೆ

2020ರಲ್ಲಿ ಫ್ಯಾಸಿನೋ ಮಾದರಿಯನ್ನು 125ಸಿಸಿ ಫ್ಯೂಲ್ ಇಂಜೆಕ್ಷೆಡ್ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಿದ್ದ ಯಮಹಾ ಕಂಪನಿಯು ಇದೀಗ 2021ರ ಮಾದರಿಯಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಮಾದರಿಯು ಡ್ರಮ್ ಮತ್ತು ಡಿಸ್ಕ್ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಅತ್ಯುತ್ತಮ ಮೈಲೇಜ್ ನೀಡುವ ಯಮಹಾ ಫ್ಯಾಸಿನೋ 125 ಹೈಬ್ರಿಡ್ ಸ್ಕೂಟರ್ ಬಿಡುಗಡೆ

ಫ್ಯಾಸಿನೋ 125 ಹೈಬ್ರಿಡ್ ಸ್ಕೂಟರಿನ ಡ್ರಮ್ ವೆರಿಯೆಂಟ್ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 70 ಸಾವಿರಕ್ಕೆ ಮತ್ತು ಡಿಸ್ಕ್ ವೆರಿಯೆಂಟ್ ಬೆಲೆಯನ್ನು ರೂ. 76,530 ಗಳಿಗೆ ನಿಗದಿಪಡಿಸಲಾಗಿದೆ.

ಅತ್ಯುತ್ತಮ ಮೈಲೇಜ್ ನೀಡುವ ಯಮಹಾ ಫ್ಯಾಸಿನೋ 125 ಹೈಬ್ರಿಡ್ ಸ್ಕೂಟರ್ ಬಿಡುಗಡೆ

ಹೊಸ ಫ್ಯಾಸಿನೋ 125 ಹೈಬ್ರಿಡ್ ಮಾದರಿಯಲ್ಲಿ ಜೋಡಣೆ ಮಾಡಲಾಗಿರುವ 125 ಸಿಸಿ ಫ್ಯೂಲ್ ಇಂಜೆಕ್ಷೆಡ್ ಎಂಜಿನ್‌ ಹೊಸದಾಗಿ ಜೋಡಣೆ ಮಾಡಲಾಗಿರುವ ಸ್ಟಾರ್ಟರ್ ಮೋಟಾರ್ ಜನರೇಟರ್ (ಎಸ್‌ಎಂಜಿ) ತಂತ್ರಜ್ಞಾನದ ಮೂಲಕ 8.2 ಬಿಎಚ್‌ಪಿ ಮತ್ತು 10.3-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಅತ್ಯುತ್ತಮ ಮೈಲೇಜ್ ನೀಡುವ ಯಮಹಾ ಫ್ಯಾಸಿನೋ 125 ಹೈಬ್ರಿಡ್ ಸ್ಕೂಟರ್ ಬಿಡುಗಡೆ

ಇದರಲ್ಲಿ ಹೊಸದಾಗಿ ಜೋಡಣೆ ಮಾಡಲಾಗಿರುವ ಸ್ಟಾರ್ಟರ್ ಮೋಟಾರ್ ಜನರೇಟರ್ (ಎಸ್‌ಎಂಜಿ) ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವು ಇಂಧನ ದಕ್ಷತೆಗೆ ಸಾಕಷ್ಟು ಸಹಕಾರಿಯಾಗಿದ್ದು, ಹೈಬ್ರಿಡ್ ತಂತ್ರಜ್ಞಾನವು ಸ್ಕೂಟರ್ ಚಾಲನೆಯ ಸಂದರ್ಭದಲ್ಲಿ ಪವರ್ ಅಸಿಸ್ಟ್ ಆಗಿ ಕಾರ್ಯನಿರ್ವಹಿಸಲಿದೆ.

ಅತ್ಯುತ್ತಮ ಮೈಲೇಜ್ ನೀಡುವ ಯಮಹಾ ಫ್ಯಾಸಿನೋ 125 ಹೈಬ್ರಿಡ್ ಸ್ಕೂಟರ್ ಬಿಡುಗಡೆ

ಸ್ಕೂಟರ್ ನಿಲುಗಡೆಯಾಗಿ ಸ್ಟಾರ್ಟ್ ಆದ ನಂತರ ಮೂರು ಸೇಕೆಂಡ್‌ಗಳ ಕಾಲ ಎಂಜಿನ್ ಚಾಲನೆಗೆ ಪವರ್ ಅಸಿಸ್ಟ್ ಆಗಿ ಸಹಕರಿಸುವ ಹೈಬ್ರಿಡ್ ತಂತ್ರಜ್ಞಾನವು ಎಂಜಿನ್ ಆರಂಭದಲ್ಲಿನ ಇಂಧನ ದಹಿಸುವಿಕೆಯನ್ನು ಕಡಿಮೆಗೊಳಿಸಿ ಮೈಲೇಜ್ ಹೆಚ್ಚಳಕ್ಕೆ ಸಹಕಾರಿಯಾಗುತ್ತದೆ.

ಅತ್ಯುತ್ತಮ ಮೈಲೇಜ್ ನೀಡುವ ಯಮಹಾ ಫ್ಯಾಸಿನೋ 125 ಹೈಬ್ರಿಡ್ ಸ್ಕೂಟರ್ ಬಿಡುಗಡೆ

ಎಂಜಿನ್ ಸ್ಟಾರ್ಟ್ ಮಾಡಿದ ನಂತರ ಕೆಲವು ಸೆಕೆಂಡುಗಳ ಕಾಲ ಕಾರ್ಯನಿರ್ವಹಿಸಿ ಸ್ವಯಂಚಾಲಿತವಾಗಿ ಸಂಪರ್ಕ ಕಡೆದುಕೊಳ್ಳುವ ಹೈಬ್ರಿಡ್ ತಂತ್ರಜ್ಞಾನವು ಟ್ರಾಫಿಕ್ ದಟ್ಟಣೆಯ ಸಂದರ್ಭದಲ್ಲಿ ಪದೇ ಪದೇ ಎಂಜಿನ್ ಆನ್ ಆಫ್ ಮಾಡಿದಾಗ ಆಗುವ ಇಂಧನ ವ್ಯರ್ಥವನ್ನು ತಡೆದು ಇಂಧನ ದಕ್ಷತೆಯನ್ನು(ಪ್ರತಿ ಲೀಟರ್‌ಗೆ 55-60) ಕಿ.ಮೀ ಗೆ ಹೆಚ್ಚಿಸುತ್ತದೆ.

ಅತ್ಯುತ್ತಮ ಮೈಲೇಜ್ ನೀಡುವ ಯಮಹಾ ಫ್ಯಾಸಿನೋ 125 ಹೈಬ್ರಿಡ್ ಸ್ಕೂಟರ್ ಬಿಡುಗಡೆ

ಸ್ಕೂಟರ್ ಆನ್ ಮಾಡಿದಾಗ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಡಿಜಿಟಲ್ ಇನ್‌ಸ್ಟ್ರುಮೆಂಟ್‌ನಲ್ಲಿ ಇಂಡಿಕೇಟರ್ ಮೂಲಕ ನಿಮಗೆ ಸೂಚಿಸಲಿದ್ದು, ಕೆಲವು ಸೆಕೆಂಡುಗಳ ನಂತರ ಹೈಬ್ರಿಡ್ ಎಂಜಿನ್ ಇಂಡಿಕೇಟರ್ ಲೈಟ್ ಆಫ್ ಆಗುತ್ತದೆ.

ಅತ್ಯುತ್ತಮ ಮೈಲೇಜ್ ನೀಡುವ ಯಮಹಾ ಫ್ಯಾಸಿನೋ 125 ಹೈಬ್ರಿಡ್ ಸ್ಕೂಟರ್ ಬಿಡುಗಡೆ

ಇನ್ನು 125 ಸಿಸಿ ವಿಭಾಗದಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಮೊದಲ ಸ್ಕೂಟರ್ ಎಂಬ ಹೆಗ್ಗಳಿಕೆ ಫ್ಯಾಸಿನೋ 125 ಮಾದರಿಗೆ ಸಲ್ಲಲಿದ್ದು, ಜೊತೆಗೆ ಹೊಸ ಸ್ಕೂಟರ್‌ನಲ್ಲಿ ನೀಡಲಾಗಿರುವ ಎಂಜಿನ್ ಕಟ್ ಆಫ್ ಸ್ವಿಚ್ ತಂತ್ರಜ್ಞಾನವು ಸೈಡ್ ಸ್ಟ್ಯಾಂಡ್ ತೆಗೆಯದ ಹೊರತು ಸ್ಕೂಟರ್ ಚಾಲನೆ ಮಾಡಲು ಸಾಧ್ಯವಿಲ್ಲರುವುದು ಪ್ರಮುಖ ಫೀಚರ್ ಎನ್ನಬಹುದು.

ಅತ್ಯುತ್ತಮ ಮೈಲೇಜ್ ನೀಡುವ ಯಮಹಾ ಫ್ಯಾಸಿನೋ 125 ಹೈಬ್ರಿಡ್ ಸ್ಕೂಟರ್ ಬಿಡುಗಡೆ

ಹಾಗೆಯೇ 2021ರ ಫ್ಯಾಸಿನೋ 125 ಮಾದರಿಯಲ್ಲಿ ಯಮಹಾ ಕಂಪನಿಯು ಅಡ್ವಾನ್ಸ್ ಎಲ್ಇಡಿ ಹೆಡ್‌ಲೈಟ್ಸ್, ಡೇ ಟೈಮ್ ರನ್ನಿಂಗ್ ಲೈಟ್ ಮತ್ತು ಎಲ್ಇಡಿ ಟೈಲ್‌ಲೈಟ್ ಜೋಡಣೆ ಮಾಡಿದ್ದು, 190 ಎಂಎಂ ಯುಬಿಎಸ್ ಫ್ರಂಟ್ ಡಿಸ್ಕ್ ಬ್ರೇಕ್ ಸಿಸ್ಟಂ, 110 ಎಂಎಂ ಟೈರ್ ಜೋಡಣೆ ಮಾಡಲಾಗಿದೆ.

ಅತ್ಯುತ್ತಮ ಮೈಲೇಜ್ ನೀಡುವ ಯಮಹಾ ಫ್ಯಾಸಿನೋ 125 ಹೈಬ್ರಿಡ್ ಸ್ಕೂಟರ್ ಬಿಡುಗಡೆ

ಡಿಸ್ಕ್ ಬ್ರೇಕ್ ಆವೃತ್ತಿಯಲ್ಲಿ ಹೆಚ್ಚುವರಿಯಾಗಿ ಯಮಹಾ ಮೋಟಾರ್‌ಸೈಕಲ್ ಕಂಪನಿಯು ಕನೆಕ್ಟ್ ಎಕ್ಸ್ ಕನೆಕ್ಟ್ ಫೀಚರ್ಸ್ ನೀಡಿದ್ದು, ಹೊಸ ಕನೆಕ್ಟ್ ಫೀಚರ್ಸ್‌ನಲ್ಲಿ ಬೈಕ್ ಸವಾರರು ಕಂಪನಿಯೊಂದಿಗೆ ತುರ್ತು ಸೇವೆಗಳಿಗಾಗಿ ಸಂಪರ್ಕಿಸಿ ವೆಹಿಕಲ್ ಲೋಕೆಟ್, ರೈಡಿಂಗ್ ಹಿಸ್ಟರಿ, ಪಾರ್ಕಿಂಗ್ ರೆಕಾರ್ಡ್ ಸೇರಿದಂತೆ ಹಲವಾರು ಸ್ಮಾರ್ಟ್ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

ಅತ್ಯುತ್ತಮ ಮೈಲೇಜ್ ನೀಡುವ ಯಮಹಾ ಫ್ಯಾಸಿನೋ 125 ಹೈಬ್ರಿಡ್ ಸ್ಕೂಟರ್ ಬಿಡುಗಡೆ

ಇನ್ನುಳಿದಂತೆ ಹೊಸ ಸ್ಕೂಟರ್‌ನಲ್ಲಿ ಮಲ್ಟಿ ಫಂಕ್ಷನ್ ಕೀ, 21 ಲೀಟರ್ ಸಾಮರ್ಥ್ಯ ಅಂಡರ್ ಸೀಟ್ ಸ್ಟೋರೇಜ್, ಫೋರ್ಡ್ ಮಾಡಬಹುದಾದ ಹುಕ್, ಸೈಡ್ ಪ್ಯಾನೆಲ್‌ಗಳಲ್ಲಿ 3ಡಿ ಯಮಹಾ ಬ್ಯಾಡ್ಜ್ ಮತ್ತು ಯುಎಸ್‌ಬಿ ಚಾರ್ಜರ್ ಸೇರಿದಂತೆ ಹೊಸ ಸ್ಕೂಟರ್ ರೆಡ್, ಯಮಹಾ ಬ್ಲ್ಯೂ, ಬ್ಲ್ಯಾಕ್, ಡಾರ್ಕ್ ಮ್ಯಾಟೆ, ಯೆಲ್ಲೊ ಕಾಕ್‌ಟೈಲ್ ಸೇರಿದಂತೆ ಒಟ್ಟು 9 ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

Most Read Articles

Kannada
Read more on ಯಮಹಾ yamaha
English summary
Yamaha Fascino 125 Hybrid Launched In India At Rs 70,000. Read in Kannada.
Story first published: Thursday, July 22, 2021, 20:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X