ಮುಂಚೂಣಿ ಉದ್ಯೋಗಿಗಳಿಗಾಗಿ ನಗದು ರಿಯಾಯಿತಿ ಘೋಷಿಸಿದ ಯಮಹಾ

ಭಾರತದಲ್ಲಿ ಹಲವು ದ್ವಿಚಕ್ರ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳನ್ನು ಮಾರಾಟ ಮಾಡುತ್ತವೆ. ಇವುಗಳಲ್ಲಿ ಜಪಾನ್ ಮೂಲದ ಯಮಹಾ ಮೋಟಾರ್ ಕಂಪನಿಯು ಸಹ ಸೇರಿದೆ.

ಮುಂಚೂಣಿ ಉದ್ಯೋಗಿಗಳಿಗಾಗಿ ನಗದು ರಿಯಾಯಿತಿ ಘೋಷಿಸಿದ ಯಮಹಾ

ಯಮಹಾ ಮೋಟಾರ್ ಕಂಪನಿಯು 1955ರ ಜುಲೈ 1ರಂದು ಸ್ಥಾಪನೆಯಾಯಿತು. ಈ ಕಂಪನಿ ಸ್ಥಾಪನೆಯಾಗಿ ನಿನ್ನೆಗೆ 66 ವರ್ಷಗಳು ಪೂರ್ತಿಯಾಗಿವೆ. ನಿನ್ನೆ ಕಂಪನಿಯು ಈ ದಿನವನ್ನು ತನ್ನ ತಾಯ್ನಾಡಿನಲ್ಲಿ ವಿಶೇಷವಾಗಿ ಆಚರಿಸಿತು. ಯಮಹಾ ಕಂಪನಿಯು ಈ ವಿಶೇಷ ದಿನದ ಸಂದರ್ಭಕ್ಕಾಗಿ ಭಾರತದಲ್ಲಿರುವ ಗ್ರಾಹಕರಿಗೂ ನಗದು ರಿಯಾಯಿತಿ ಕೊಡುಗೆ ನೀಡುತ್ತಿದೆ.

ಮುಂಚೂಣಿ ಉದ್ಯೋಗಿಗಳಿಗಾಗಿ ನಗದು ರಿಯಾಯಿತಿ ಘೋಷಿಸಿದ ಯಮಹಾ

ಯಮಹಾ ಮೋಟಾರ್ ಕಂಪನಿಯು ಕರೋನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಹಗಲು ಇರುಳು ಕರ್ತವ್ಯ ನಿರ್ವಹಿಸುವ ಮುಂಚೂಣಿ ಉದ್ಯೋಗಿಗಳಿಗೆ ಥ್ಯಾಂಕ್ಸ್ ಗೀವಿಂಗ್ ಬೋನಸ್ ಎಂಬ ಯೋಜನೆಯನ್ನು ಘೋಷಿಸಿದೆ.

ಮುಂಚೂಣಿ ಉದ್ಯೋಗಿಗಳಿಗಾಗಿ ನಗದು ರಿಯಾಯಿತಿ ಘೋಷಿಸಿದ ಯಮಹಾ

ಮುಂಚೂಣಿ ಉದ್ಯೋಗಿಗಳಲ್ಲಿ ವೈದ್ಯಕೀಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹಾಗೂ ಪುರಸಭೆ ಸಿಬ್ಬಂದಿಗಳು ಸೇರಿದ್ದಾರೆ. ಈ ಮುಂಚೂಣಿ ಉದ್ಯೋಗಿಗಳಿಗಾಗಿ ಯಮಹಾ ಫ್ಯಾಸಿನೊ 125 ಹಾಗೂ ರೇಝಡ್ಆರ್ 125 ಸ್ಕೂಟರ್‌ಗಳ ಮೇಲೆ ರೂ.5,000 ನಗದು ರಿಯಾಯಿತಿ ನೀಡಲಾಗುತ್ತದೆ.

ಮುಂಚೂಣಿ ಉದ್ಯೋಗಿಗಳಿಗಾಗಿ ನಗದು ರಿಯಾಯಿತಿ ಘೋಷಿಸಿದ ಯಮಹಾ

ಅಂದರೆ ಈ ಯಮಹಾ ಸ್ಕೂಟರ್‌ಗಳನ್ನು ಖರೀದಿಸುವ ಮುಂಚೂಣಿ ಉದ್ಯೋಗಿಗಳಿಗೆ ಸ್ಕೂಟರ್ ಖರೀದಿಸುವಾಗ ರೂ.5,000 ಕಡಿತಗೊಳಿಸಲಾಗುತ್ತದೆ. ಈಗ ಯಮಹಾ ಫ್ಯಾಸಿನೊ 125 ಸ್ಕೂಟರ್‌ನ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.73,629ಗಳಿಂದ ರೂ.77,479ಗಳಾಗಿದೆ.

ಮುಂಚೂಣಿ ಉದ್ಯೋಗಿಗಳಿಗಾಗಿ ನಗದು ರಿಯಾಯಿತಿ ಘೋಷಿಸಿದ ಯಮಹಾ

ಇನ್ನು ಯಮಹಾ ರೇಝಡ್ಆರ್ 125 ಸ್ಕೂಟರಿನ ಎಕ್ಸ್‌ಶೋರೂಂ ದರದಂತೆ ಬೆಲೆ ರೂ.75,333ಗಳಿಂದ ರೂ.78,689ಗಳಾಗಿದೆ. ಇತ್ತೀಚೆಗೆ ಈ ಎರಡೂ ಸ್ಕೂಟರ್'ಗಳಲ್ಲಿ ಹೊಸ ಹೈಬ್ರಿಡ್ 125 ಸಿಸಿ ಎಂಜಿನ್ ಅಳವಡಿಸಲಾಗಿದೆ.

ಮುಂಚೂಣಿ ಉದ್ಯೋಗಿಗಳಿಗಾಗಿ ನಗದು ರಿಯಾಯಿತಿ ಘೋಷಿಸಿದ ಯಮಹಾ

ಈ 125 ಸಿಸಿ, ಏರ್-ಕೂಲ್ಡ್, ಪ್ಯೂಯಲ್ ಇಂಜೆಕ್ಟೆಡ್ ಬಿಎಸ್ 6 ಎಂಜಿನ್ 6,500 ಆರ್‌ಪಿಎಂನಲ್ಲಿ ಗರಿಷ್ಠ 8.04 ಬಿಹೆಚ್‌ಪಿ ಪವರ್ ಹಾಗೂ 5,000 ಆರ್‌ಪಿಎಂನಲ್ಲಿ 9.7 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಮುಂಚೂಣಿ ಉದ್ಯೋಗಿಗಳಿಗಾಗಿ ನಗದು ರಿಯಾಯಿತಿ ಘೋಷಿಸಿದ ಯಮಹಾ

ಹೊಸ ಎಂಜಿನ್ ಮಾತ್ರವಲ್ಲದೆ ಎರಡು ಹೊಸ ಎಲ್ಇಡಿ ಹೆಡ್‌ಲ್ಯಾಂಪ್‌, ಬ್ಲೂಟೂತ್ ಕನೆಕ್ಟಿವಿಟಿ ಸಹ ಅಳವಡಿಸಲಾಗಿದೆ. ಈ ಕೊಡುಗೆಗಳು ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ಪುಣೆ, ಕೋಲ್ಕತಾ ಹಾಗೂ ದೆಹಲಿಯ ಮುಂಚೂಣಿ ಉದ್ಯೋಗಿಗಳಿಗೆ ಮಾತ್ರ ಲಭ್ಯವಿರಲಿದೆ ಎಂದು ಯಮಹಾ ಕಂಪನಿ ತಿಳಿಸಿದೆ.

ಮುಂಚೂಣಿ ಉದ್ಯೋಗಿಗಳಿಗಾಗಿ ನಗದು ರಿಯಾಯಿತಿ ಘೋಷಿಸಿದ ಯಮಹಾ

ಈ ಕೊಡುಗೆ ಜುಲೈ 7ರವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಈ ಕೊಡುಗೆಯ ಮೂಲಕ ಯಮಹಾ ಕಂಪನಿಯು ತನ್ನ ಮುಂಚೂಣಿ ಉದ್ಯೋಗಿಗಳಿಗೆ ಧನ್ಯವಾದ ಸಲ್ಲಿಸಲು ಮುಂದಾಗಿದೆ.

ಗಮನಿಸಿ: ಈ ಲೇಖನದಲ್ಲಿ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
Read more on ಯಮಹಾ yamaha
English summary
Yamaha introduces cashback offer for frontline workers. Read in Kannada.
Story first published: Friday, July 2, 2021, 12:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X