ಯಮಹಾ ಆರ್15 ಬೈಕ್ ಆಧಾರಿತ ವೈ16ಝಡ್ಆರ್ ಮೊಪೆಡ್ ಬಿಡುಗಡೆ

ಯಮಹಾ ಕಂಪನಿಯ ಸರಣಿಯಲ್ಲಿರುವ ವೈಝಡ್ಎಫ್ ಆರ್15 ವಿ3 ಬೈಕ್ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ. ಇದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹುಬೇಡಿಕೆಯಲ್ಲಿ ಬೈಕುಗಳಲ್ಲಿ ಒಂದಾಗಿದೆ. ಯಮಹಾ ಕಂಪನಿಯ ಈ ಜನಪ್ರಿಯ ಬೈಕನ್ನು ಆಧಾರಿಸಿ ಹೊಸ ಮೊಪೆಡ್ ಅನ್ನು ಮಲೇಷ್ಯಾದಲ್ಲಿ ಬಿಡುಗಡೆಗೊಳಿಸಿದೆ.

ಯಮಹಾ ಆರ್15 ಬೈಕ್ ಆಧಾರಿತ ವೈ16ಝಡ್ಆರ್ ಮೊಪೆಡ್ ಬಿಡುಗಡೆ

ಕಳೆದ ವರ್ಷ ಯಮಹಾ ಕಂಪನಿಯು ಇದೇ ಮೊಪೆಡ್ ವನ್ನು ವಿಯೆಟ್ನಾಂನಲ್ಲಿ ಪರಿಚಯಿಸಿದ್ದರು. ಅಲ್ಲಿ ಈ ಮೊಪೆಡ್ ವನ್ನು ಎಕ್ಸೈಟರ್ ಎಂಬ ಹೆಸರಿನಲ್ಲಿ ಪರಿಚಯಿಸಲಾಗಿತ್ತು. ಈ ಹೊಸ ಯಮಹಾ ವೈ16ಝಡ್ಆರ್ ಮೊಪೆಡ್ ವಿಭಿನ್ನ ವಿನ್ಯಾಸದೊಂದಿಗೆ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಇನ್ನು ಈ ಹೊಸ ಮೊಪೆಡ್ ಹಲವು ಅತ್ಯಾಧುನಿಕ ಫೀಚರ್ ಗಳನ್ನು ಒಳಗೊಂಡಿದೆ.

ಯಮಹಾ ಆರ್15 ಬೈಕ್ ಆಧಾರಿತ ವೈ16ಝಡ್ಆರ್ ಮೊಪೆಡ್ ಬಿಡುಗಡೆ

ಹೊಸ ಯಮಹಾ ವೈ16ಝಡ್ಆರ್ ಮೊಪೆಡ್ ಎಲ್ಸಿಡಿ ಕನ್ಸೋಲ್ ಜೊತೆಗೆ ಪೂರ್ಣ-ಎಲ್ಇಡಿ ಲೈಟಿಂಗ್ ಅನ್ನು ಹೊಂದಿದೆ. ಕನ್ಸೋಲ್ ನಲ್ಲಿ ಸ್ಪೀಡ್, ಆರ್ಪಿಎಂ, ಗೇರ್ ಪೋಷಿಶನ್ ಮತ್ತು ಹೆಚ್ಚಿನ ಮಾಹಿತಿಗಳನ್ನು ಪ್ರದರ್ಶಿಸುತ್ತದೆ.

MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಯಮಹಾ ಆರ್15 ಬೈಕ್ ಆಧಾರಿತ ವೈ16ಝಡ್ಆರ್ ಮೊಪೆಡ್ ಬಿಡುಗಡೆ

ಇದಲ್ಲದೆ ಈ ಹೊಸ ಮೊಪೆಡ್ ಚಾರ್ಜಿಂಗ್ ಸಾಕೆಟ್ ಮತ್ತು ಕಾಲ್ ಬ್ಯಾಕ್ ಫಂಕ್ಷನ್ ಮತ್ತು ಇಮೊಬೈಲೈಸರ್ ಅನ್ನು ಒಳಗೊಂಡಿದೆ. ವೈ16ಝಡ್ಆರ್ ಮೋಪೆಡ್ 5.4-ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ.

ಯಮಹಾ ಆರ್15 ಬೈಕ್ ಆಧಾರಿತ ವೈ16ಝಡ್ಆರ್ ಮೊಪೆಡ್ ಬಿಡುಗಡೆ

ಇನ್ನು ಈ ಮೋಪೆಡ್ ಸ್ಮಾರ್ಟ್ ಲಾಕ್ ಸಿಸ್ಟಂ ಅನ್ನು ಹೊಂದಿದೆ. ಇದರಲ್ಲಿ 17-ಇಂಚಿನ ವ್ಹೀಲ್ ಗಳನ್ನು ಅಳವಡಿಸಿದ್ದಾರೆ. ಇನ್ನು ಈ ಮೋಪೆಡ್ ವಿನ ಎರಡು ಕಡೆಗಳಲ್ಲಿ ಡಿಸ್ಕ್ ಬ್ರೇಕ್ ಗಳನ್ನು ಅಳವಡಿಸಲಾಗಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಯಮಹಾ ಆರ್15 ಬೈಕ್ ಆಧಾರಿತ ವೈ16ಝಡ್ಆರ್ ಮೊಪೆಡ್ ಬಿಡುಗಡೆ

ಇನ್ನು ಹೊಸ ಯಮಹಾ ವೈ16ಝಡ್ಆರ್ ಮೊಪೆಡ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಅನ್ನು ಒಳಗೊಂಡಿದೆ.

ಯಮಹಾ ಆರ್15 ಬೈಕ್ ಆಧಾರಿತ ವೈ16ಝಡ್ಆರ್ ಮೊಪೆಡ್ ಬಿಡುಗಡೆ

ಭಾರತದಲ್ಲಿ ಮಾರಟವಾಗುತ್ತಿರುವ ಯಮಹಾ ವೈಝಡ್ಎಫ್ ಆರ್15 ವಿ3 ಬೈಕಿನಲ್ಲಿ 155 ಸಿಸಿ ಎಂಜಿನ್ ಅನ್ನು ಹೊಂದಿದೆ. ಇದೇ ಎಂಜಿನ್ ಅನ್ನು ಹೊಸ ವೈ16ಝಡ್ಆರ್ ಮೊಪೆಡ್ ವಿನಲ್ಲಿ ಅಳವಡಿಸಲಾಗಿದೆ. ಆದರೆ ಈ ಎಂಜಿನ್ ಅನ್ನು ಟ್ಯೂನ್ ಮಾಡಲಾಗಿದೆ.

MOST READ: ಹೊಸ ಹೋಂಡಾ ಗ್ರಾಜಿಯಾ 125 ಸ್ಕೂಟರ್ ಮೇಲೆ ಆಕರ್ಷಕ ಕ್ಯಾಶ್‌ಬ್ಯಾಕ್ ಆಫರ್

ಯಮಹಾ ಆರ್15 ಬೈಕ್ ಆಧಾರಿತ ವೈ16ಝಡ್ಆರ್ ಮೊಪೆಡ್ ಬಿಡುಗಡೆ

ಇದರ ಎಂಜಿನ್ 17.5 ಬಿಹೆಚ್‍ಪಿ ಪವರ್ ಮತ್ತು 14.4 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆದರೆ ಯಮಹಾ ವೈಝಡ್ಎಫ್ ಆರ್15 ವಿ3 ಬೈಕಿನ ಎಂಜಿನ್ 18.3 ಬಿಹೆಚ್‍ಪಿ ಪವರ್ ಮತ್ತು 14.1 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಸ್ಲಿಪ್ಪರ್ ಅಸಿಸ್ಟೆಡ್ ಕ್ಲಚ್ನೊಂದಿಗೆ ಸ್ಟ್ಯಾಂಡರ್ಡ್ ಸಿಕ್ಸ್-ಸ್ಪೀಡ್ ಗೇರ್ ಬಾಕ್ಸ್ ಜೋಡಿಸಲಾಗಿದೆ.

ಯಮಹಾ ಆರ್15 ಬೈಕ್ ಆಧಾರಿತ ವೈ16ಝಡ್ಆರ್ ಮೊಪೆಡ್ ಬಿಡುಗಡೆ

ಭಾರತೀಯ ಮಾರುಕಟ್ಟೆಯಲ್ಲಿ ಯಮಹಾ ತನ್ನ ವೈಝಡ್ಎಫ್ ಆರ್15 ವಿ3 ಬೈಕಿನ ಬೆಲೆಯನ್ನು ಇತ್ತೀಚೆಗೆ ಹೆಚ್ಚಿಸಿದೆ. ಇದರಿಂದಾಗಿ ಯಮಹಾ ವೈಝಡ್ಎಫ್ ಆರ್15 ವಿ3 ಬೈಕ್ ತುಸು ದುಬಾರಿಯಾಗಿದೆ. ಯಮಹಾ ಕಂಪನಿಯು ತನ್ನ ಎಂಟ್ರಿ ಲೆವೆಲ್ ಸ್ಪೋರ್ಟ್ಸ್ ಬೈಕ್ ವೈಝಡ್ಎಫ್ ಆರ್15 ವಿ3 ಮಾದರಿಯ ಬೆಲೆಯನ್ನು ರೂ.1,200 ಗಳವರೆಗೆ ಹೆಚ್ಚಿಸಲಾಗಿದೆ.

ಯಮಹಾ ಆರ್15 ಬೈಕ್ ಆಧಾರಿತ ವೈ16ಝಡ್ಆರ್ ಮೊಪೆಡ್ ಬಿಡುಗಡೆ

ಯಮಹಾ ವೈಝಡ್ಎಫ್ ಆರ್15 ವಿ3 ಬೈಕಿನ ಬಣ್ಣಗಳ ಆಧಾರ ಮೇಲೆ ಹೊಸ ಬೆಲೆಗಳನ್ನು ಹೇಳುವುದಾದರೆ, ಥಂಡರ್ ಗ್ರೇ ಬಣ್ಣದ ಮಾದರಿಗೆ ರೂ.1,49,100 ಗಳಾದರೆ ರೇಸಿಂಗ್ ಬ್ಲೂ ಬಣ್ಣದ ಮಾದರಿಗೆ ರೂ.1,50,200 ಗಳಾಗಿದೆ. ಇನ್ನು ಡಾರ್ಕ್ ನೈಟ್ ಬಣ್ಣದ ಮಾದರಿಗೆ ರೂ.151,200 ಗಳಾಗಿದೆ.

ಯಮಹಾ ಆರ್15 ಬೈಕ್ ಆಧಾರಿತ ವೈ16ಝಡ್ಆರ್ ಮೊಪೆಡ್ ಬಿಡುಗಡೆ

ಇನ್ನು ಈ ಹೊಸ ಯಮಹಾ ವೈ16ಝಡ್ಆರ್ ಮೊಪೆಡ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ, ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಯಮಹಾ ಕಂಪನಿಯು ಎನ್-ಎನ್‍‍ಮ್ಯಾಕ್ಸ್ 155 ಮ್ಯಾಕ್ಸಿ ಸ್ಕೂಟರ್ ಸ್ಕೂಟರ್ ಬಿಡುಗಡೆಯಾಗುವ ಸಾಧ್ಯತೆಗಳಿದೆ.

Most Read Articles

Kannada
Read more on ಯಮಹಾ yamaha
English summary
Yamaha R15-Based Y16ZR Mped Launched. Read In Kannada.
Story first published: Sunday, March 21, 2021, 13:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X