ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಪಡೆಯಲಿದೆ ಯಮಹಾ ದ್ವಿಚಕ್ರ ವಾಹನಗಳು

ಯಮಹಾ ಮೋಟಾರ್ ಇಂಡಿಯಾ ಕಂಪನಿಯು ತನ್ನ ಎಲ್ಲಾ ಮಾದರಿಗಳಿಗೆ ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಅನ್ನು ಪರಿಚಯಿಸಲು ಯೋಜಿಸುತ್ತಿದೆ. ಇದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಯಮಹಾ ದ್ವಿಚಕ್ರ ವಾಹನಗಳು ಬೇಡಿಕೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ.

ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಪಡೆಯಲಿದೆ ಯಮಹಾ ದ್ವಿಚಕ್ರ ವಾಹನಗಳು

ಹೊಸ ಎಫ್‌ಜೆಡ್-ಎಕ್ಸ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಯಮಹಾ ಮೋಟಾರ್ ಇಂಡಿಯಾದ ಸೇಲ್ಸ್ ಮತ್ತು ಮಾರ್ಕೆಂಟಿಗ್ ವಿಭಾಗದ ಉಪಾಧ್ಯಕ್ಷ ರವೀಂದರ್ ಸಿಂಗ್ ಮಾತನಾಡಿ, ಭಾರತದಲ್ಲಿ ಮಾರಾಟವಾಗಲಿರುವ ಎಲ್ಲಾ ಯಮಹಾ ದ್ವಿಚಕ್ರ ವಾಹನಗಳು ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಅನ್ನು ಅನ್ನು ಪಡೆಯಲಿದೆ ಎಂದು ಹೇಳಿದ್ದಾರೆ. ಕಂಪನಿಯು ಪ್ರಸ್ತುತ ಎಫ್‌ಜೆಡ್ಎಸ್-ಎಪ್ಐ, ಎಫ್‌ಜೆಡ್ಎಸ್-ಎಪ್ಐ ವಿಂಟೇಜ್ ಮತ್ತು ಎಫ್‌ಜೆಡ್-ಎಕ್ಸ್ ನಂತಹ ಮಾದರಿಗಳಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಅನ್ನು ಹೊಂದಿದೆ.

ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಪಡೆಯಲಿದೆ ಯಮಹಾ ದ್ವಿಚಕ್ರ ವಾಹನಗಳು

ಇನ್ನು ಯಮಹಾ ರೇ ಝಡ್ಆರ್ ಸೀರಿಸ್ ಮತ್ತು ಫ್ಯಾಸಿನೊ 125 ಎಫ್‌ಐ ಸಹ ನವೀಕರಣಗಳನ್ನು ಸ್ವೀಕರಿಸಿದೆ, ಎಫ್‌ಜೆಡ್-ಎಕ್ಸ್ ಬೈಕ್ ಬಿಡುಗಡೆಯ ಸಮಯದಲ್ಲಿ ಸ್ಕೂಟರ್‌ಗಳ ನವೀಕರಿಸಿದ ರೂಪಾಂತರಗಳು ಬಹಿರಂಗಗೊಂಡಿವೆ. ಆದರೂ ಅವುಗಳ ಲಭ್ಯತೆಯ ವಿವರಗಳು ಇನ್ನೂ ಲಭ್ಯವಿಲ್ಲ.

ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಪಡೆಯಲಿದೆ ಯಮಹಾ ದ್ವಿಚಕ್ರ ವಾಹನಗಳು

ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಯಮಹಾ ಪ್ರಸ್ತುತ ಎರಡು ಬ್ಲೂಟೂತ್ ಅಪ್ಲಿಕೇಶನ್‌ಗಳನ್ನು ನೀಡುತ್ತದೆ - ಯಮಹಾ ಮೋಟಾರ್‌ಸೈಕಲ್ ಕನೆಕ್ಟ್ ಎಕ್ಸ್ ಮತ್ತು ವೈ-ಕನೆಕ್ಟ್ ಅಪ್ಲಿಕೇಶನ್. ಎರಡನೆಯದು ಹಿಂದಿನದಕ್ಕಿಂತ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿವೆ.

ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಪಡೆಯಲಿದೆ ಯಮಹಾ ದ್ವಿಚಕ್ರ ವಾಹನಗಳು

ಯಮಹಾ ಮೋಟಾರ್‌ಸೈಕಲ್ ಕನೆಕ್ಟ್ ಎಕ್ಸ್ ಅಪ್ಲಿಕೇಶನ್‌ನಲ್ಲಿ ಲಭ್ಯವಿರುವ ವೈಶಿಷ್ಟ್ಯಗಳ ಪಟ್ಟಿಯಲ್ಲಿ ರೈಡಿಂಗ್ ಹಿಸ್ಟರಿ, ಲಾಕೆಟ್ ಯುವರ್ ಬೈಕ್, ಇ-ಲಾಕ್, ಹಝರ್ಡ್ ಲ್ಯಾಂಪ್, ಬ್ಯಾಟರಿ ವೋಲ್ಟೇಜ್ ಮತ್ತು ಪಾರ್ಕಿಂಗ್ ರೇಕಾರ್ಡ್ ಸೇರಿವೆ.

ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಪಡೆಯಲಿದೆ ಯಮಹಾ ದ್ವಿಚಕ್ರ ವಾಹನಗಳು

ವೈ-ಕನೆಕ್ಟ್ ಅಪ್ಲಿಕೇಶನ್ ನಲ್ಲಿ, ಇನ್ ಕಮಿಂಗ್ ಕಾಲ್, ಎಸ್‌ಎಂಎಸ್ ಮತ್ತು ಇಮೇಲ್ ಅಲರ್ಟ್ ಮತ್ತು ಇನ್ಸ್ ಟ್ರೂಮೆಂಟ್ ಕನ್ಸೋಲ್‌ನಲ್ಲಿ ಕನೆಕ್ಟಿವಿಟಿ ಮೊಬೈಲ್ ಫೋನ್‌ನ ಬ್ಯಾಟರಿ ಲೆವೆಲ್, ಫ್ಯೂಯಲ್ ಬಳಕೆ, ಲಾಸ್ಟ್ ಪಾರ್ಕಿಂಗ್ ಲೋಕೆಷನ್, ರೆವ್ ಡ್ಯಾಶ್‌ಬೋರ್ಡ್, ಮತ್ತು ಇತರ ವಿವರಗಳನ್ನು ನೀಡುತ್ತದೆ.

ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಪಡೆಯಲಿದೆ ಯಮಹಾ ದ್ವಿಚಕ್ರ ವಾಹನಗಳು

ಇನ್ನು ಯಮಹಾ ಮೋಟಾರ್ ಇಂಡಿಯಾ ಕಂಪನಿಯು ತನ್ನ ಹೊಸ ಎಫ್‍‌ಜೆಡ್-ಎಕ್ಸ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಯಮಹಾ ಎಫ್‍‌ಜೆಡ್-ಎಕ್ಸ್ ಬೈಕ್ ಅದೇ ಸರಣಿಯ ಎಫ್‍‌ಜೆಡ್ ವಿ3 ಹಾಗೂ ಎಫ್‌ಝಡ್‌ಎಸ್‌ ವಿ3 ಮಾದರಿಗಳಿಗಿಂತ ಮೇಲಿನ ಸ್ಥಾನದಲ್ಲಿರುತ್ತದೆ.

ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಪಡೆಯಲಿದೆ ಯಮಹಾ ದ್ವಿಚಕ್ರ ವಾಹನಗಳು

ಎಫ್‍‌ಜೆಡ್ ವಿ3 ಕಮ್ಯೂಟರ್ ಬೈಕಿನ ಅದೇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಹೊಸ ಯಮಹಾ ಎಫ್‍‍ಝಡ್-ಎಕ್ಸ್ ಎರಡು ರೂಪಾಂತರಗಳಲ್ಲಿ ಲಭ್ಯವಿದೆ.ಯಮಹಾ ಎಫ್‌ಜೆಡ್-ಎಕ್ಸ್ ಖಂಡಿತವಾಗಿಯೂ ತನ್ನ ಸ್ಟೈಲಿಂಗ್ ಅನ್ನು ಎಕ್ಸ್‌ಎಸ್‌ಆರ್ 155 ಬೈಕಿನಿಂದ ಎರವಲು ಪಡೆದುಕೊಂಡಿದೆ,

ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಪಡೆಯಲಿದೆ ಯಮಹಾ ದ್ವಿಚಕ್ರ ವಾಹನಗಳು

ಯಮಹಾ ತನ್ನ ಹೊಸ ಎಫ್‌ಜೆಡ್-ಎಕ್ಸ್ 150 ಸಿಸಿ ರೆಟ್ರೊ ಶೈಲಿಯ ಬೈಕನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಯಮಹಾ ಕಂಪನಿಯು ಇತ್ತೀಚೆಗೆ ಭಾರತದಲ್ಲಿ ಟ್ರೇಸರ್ ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದೆ.ಇನ್ನು ಯಮಹಾ ಕಂಪನಿಯು ಇನ್ನು ಕೆಲವು ಹೊಸ ಮಾದರಿಗಳನ್ನು ಕೂಡ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

Most Read Articles

Kannada
Read more on ಯಮಹಾ yamaha
English summary
Yamaha YZF-R15, MT-15 And Others To Get Bluetooth connectivity. Read In Kannada.
Story first published: Monday, June 21, 2021, 10:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X