ದೇಶಾದ್ಯಂತ ಶುರುವಾಯ್ತು ಹೊಸ Yamaha R15 V4 ಹಾಗೂ R15 M ಬೈಕುಗಳ ವಿತರಣೆ

Yamaha ಕಂಪನಿಯು ತನ್ನ R 15 V 4 ಬೈಕ್ ಅನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಗೊಳಿಸಿತ್ತು. R 15 V 4 ಬೈಕ್ ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿರುವ ಮಾರಾಟವಾಗುತ್ತಿರುವ ಜನಪ್ರಿಯ ಎಂಟ್ರಿ ಲೆವೆಲ್ ಸ್ಪೋರ್ಟ್ಸ್ ಬೈಕ್ ಆದ R 15 ಬೈಕಿನ ಹೊಸ ಆವೃತ್ತಿಯಾಗಿದೆ. ಈ ಬೈಕಿನ ಜೊತೆಗೆ Yamaha ಕಂಪನಿಯು R 15M ಬೈಕ್ ಅನ್ನು ಸಹ ಬಿಡುಗಡೆಗೊಳಿಸಿದೆ.

ದೇಶಾದ್ಯಂತ ಶುರುವಾಯ್ತು ಹೊಸ Yamaha R15 V4 ಹಾಗೂ R15 M ಬೈಕುಗಳ ವಿತರಣೆ

ಈ ಎರಡೂ ಬೈಕುಗಳು ಇಂಟಿಗ್ರೇಟೆಡ್ ನೋಟ ಅಪ್‌ಗ್ರೇಡ್‌ ಹಾಗೂ ಕ್ರಿಯಾತ್ಮಕ ಅಪ್‌ಡೇಟ್‌ಗಳನ್ನು ಪಡೆದಿವೆ. ಹೊಸ ಬೈಕಿನಲ್ಲಿ ಕೆಲವು ಕಾಸ್ಮೆಟಿಕ್ ಅಪ್‌ಡೇಟ್‌ಗಳನ್ನು ಸಹ ನೀಡಲಾಗಿದೆ. ಅದರಲ್ಲೂ ವಿಶೇಷವಾಗಿ ಹೊಸ ತಲೆಮಾರಿನ R 15 V 4 ಬೈಕಿನಲ್ಲಿ ಈ ಅಪ್ ಡೇಟ್ ನೀಡಲಾಗಿದೆ. ಈ ಅಪ್‌ಡೇಟ್‌ಗಳನ್ನು ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ YZF - R7 ಬೈಕಿನಿಂದ ಪಡೆಯಲಾಗಿದೆ.

ದೇಶಾದ್ಯಂತ ಶುರುವಾಯ್ತು ಹೊಸ Yamaha R15 V4 ಹಾಗೂ R15 M ಬೈಕುಗಳ ವಿತರಣೆ

ಹೊಸ R 15 V 4 ಬೈಕಿನ ಮುಂಭಾಗವನ್ನು ಎಲ್‌ಇಡಿ ಪ್ರೊಜೆಕ್ಟರ್ ಸೆಟಪ್ ನೊಂದಿಗೆ ಅಪ್ ಡೇಟ್ ಮಾಡಲಾಗಿದೆ. ಈ ಹಿಂದಿನ R 15 V 3 ಬೈಕಿಗೆ ಎರಡು ಕಣ್ಣುಗಳ ವಿನ್ಯಾಸದ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ನೀಡಲಾಗಿತ್ತು ಎಂಬುದು ಗಮನಾರ್ಹ. ಹೊಸ ತಲೆಮಾರಿನ R 15 V 4 ಬೈಕ್ ಅನ್ನು ಮೆಟಾಲಿಕ್ ರೆಡ್, ಡಾರ್ಕ್ ನೈಟ್ ಹಾಗೂ ರೇಸಿಂಗ್ ಬ್ಲೂ ಎಂಬ ಮೂರು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.

ದೇಶಾದ್ಯಂತ ಶುರುವಾಯ್ತು ಹೊಸ Yamaha R15 V4 ಹಾಗೂ R15 M ಬೈಕುಗಳ ವಿತರಣೆ

R 15 V 4 ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 1.68 ಲಕ್ಷಗಳಿಂದ ರೂ. 1.73 ಲಕ್ಷಗಳಾಗಿದೆ. ಇನ್ನು R 15 M ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 1.78 ಲಕ್ಷಗಳಾಗಿದೆ. ಈ ಬೈಕ್ ಗಳಲ್ಲದೇ R 15 M Monster ಆವೃತ್ತಿಯನ್ನು ಸಹ ಬಿಡುಗಡೆಗೊಳಿಸಲಾಗಿದೆ. ಈ ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 1.80 ಲಕ್ಷಗಳಾಗಿದೆ.

ದೇಶಾದ್ಯಂತ ಶುರುವಾಯ್ತು ಹೊಸ Yamaha R15 V4 ಹಾಗೂ R15 M ಬೈಕುಗಳ ವಿತರಣೆ

ಈಗ ಈ ಎರಡೂ ಬೈಕುಗಳ ವಿತರಣೆಯನ್ನು ದೇಶದಾದ್ಯಂತ ಆರಂಭಿಸಲಾಗಿದೆ. ಹೊಸ R 15 V 4 ಬೈಕ್ ಪಡೆದ ಮೊದಲ ಗ್ರಾಹಕರಲ್ಲಿ ಫರ್ಹಾನ್ ಅಹ್ಮದ್ ಸಹ ಒಬ್ಬರು. ಇದಕ್ಕೂ ಮುನ್ನ ಅವರು R 15 V 3 ಬೈಕ್ ಅನ್ನು ಹೊಂದಿದ್ದರು. R 15 V 4 ಬೈಕ್ ಅನ್ನು ವಿಶ್ವದಲ್ಲೇ ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ ಎಂಬುದು ಗಮನಾರ್ಹ.

ದೇಶಾದ್ಯಂತ ಶುರುವಾಯ್ತು ಹೊಸ Yamaha R15 V4 ಹಾಗೂ R15 M ಬೈಕುಗಳ ವಿತರಣೆ

ಈ ಮೂಲಕ ಫರ್ಹಾನ್ ಅಹ್ಮದ್ ಈ ಬೈಕಿನ ವಿತರಣೆ ಪಡೆದ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಬೈಕಿನ ನವೀಕರಣಗಳ ಬಗ್ಗೆ ಹೇಳುವುದಾದರೆ Yamaha ಕಂಪನಿಯು ಈ ಸ್ಪೋರ್ಟ್ ಬೈಕ್ ಅನ್ನು ಮರು ವಿನ್ಯಾಸಗೊಳಿಸಿದ್ದು, ಹೊಸ ವಿನ್ಯಾಸದ ವೈಸರ್, ಕಾರ್ವ್ಡ್ ಫ್ಯೂಯಲ್ ಟ್ಯಾಂಕ್ ಗಳನ್ನು ನೀಡಿದೆ. ಜೊತೆಗೆ ಈ ಬೈಕಿನ ಎಕ್ಸಾಸ್ಟ್ ಸೌಂಡ್ ಅನ್ನು ಸಹ ನವೀಕರಿಸಲಾಗಿದೆ.

ದೇಶಾದ್ಯಂತ ಶುರುವಾಯ್ತು ಹೊಸ Yamaha R15 V4 ಹಾಗೂ R15 M ಬೈಕುಗಳ ವಿತರಣೆ

ಹೊಸ R 15 V 4 ಹಾಗೂ R 15 M ಬೈಕುಗಳ ಹೊಸ ಶಬ್ದವನ್ನು MRD Vlogs ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಪೋಸ್ಟ್ ಮಾಡಿರುವ ವೀಡಿಯೋದಲ್ಲಿ ಕಾಣಬಹುದು. ಹೊಸ Yamaha R 14 V 4 ಬೈಕಿನಲ್ಲಿ 155 ಸಿಸಿ, ಲಿಕ್ವಿಡ್-ಕೂಲ್ಡ್, ಎಸ್‌ಒಎಚ್‌ಸಿ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಅನ್ನು 6 ಸ್ಪೀಡ್ ಕಾನ್ಸ್ಟಂಟ್ ಮೆಶ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ.

ದೇಶಾದ್ಯಂತ ಶುರುವಾಯ್ತು ಹೊಸ Yamaha R15 V4 ಹಾಗೂ R15 M ಬೈಕುಗಳ ವಿತರಣೆ

ಈ ಎಂಜಿನ್ 10,000 ಆರ್‌ಪಿಎಂನಲ್ಲಿ 18.3 ಬಿ‌ಹೆಚ್‌ಪಿ ಪವರ್ ಹಾಗೂ 8,500 ಆರ್‌ಪಿಎಂನಲ್ಲಿ 14.1 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಮಾತ್ರವಲ್ಲದೇ ವೇರಿಯೆಬಲ್ ವಾಲ್ವ್ ಆಕ್ಚುಯೇಷನ್ (ವಿವಿಎ), ಆಕ್ಸಿಲರಿ ಹಾಗೂ ಸ್ಲಿಪ್ಪರ್ ಕ್ಲಚ್‌ನಂತಹ ಹೆಚ್ಕು ಕಾರ್ಯಕ್ಷಮತೆ ನೀಡುವಂತಹ ತಂತ್ರಜ್ಞಾನಗಳನ್ನು ಮುಂದುವರಿಸಲಾಗಿದೆ.

ದೇಶಾದ್ಯಂತ ಶುರುವಾಯ್ತು ಹೊಸ Yamaha R15 V4 ಹಾಗೂ R15 M ಬೈಕುಗಳ ವಿತರಣೆ

Yamaha R 15 ಬೈಕುಗಳ ಮತ್ತೊಂದು ವಿಶೇಷತೆಯೆಂದರೆ, ಈ ಬೈಕುಗಳ ಕ್ಲಚ್ ಅನ್ನು ನಿಧಾನವಾಗಿ ಒತ್ತಬಹುದು. ಇದರಿಂದ ಸವಾರರಿಗೆ ಹೆಚ್ಚು ಆಯಾಸವಾಗುವುದು ತಪ್ಪುತ್ತದೆ. ಸವಾರರು ಹೊಸ ಬೈಕಿನಲ್ಲಿ ಸುಧಾರಿತ ಡೈನಾಮಿಕ್ಸ್ ಹಾಗೂ ನಿರ್ವಹಣೆಯನ್ನು ನಿರೀಕ್ಷಿಸಬಹುದು. ಅದೂ ಸಹ ಹೆಚ್ಚಿನ ವೇಗದಲ್ಲಿ ಎಂಬುದು ವಿಶೇಷ.

ದೇಶಾದ್ಯಂತ ಶುರುವಾಯ್ತು ಹೊಸ Yamaha R15 V4 ಹಾಗೂ R15 M ಬೈಕುಗಳ ವಿತರಣೆ

ಫರ್ಹಾನ್ ಅಹ್ಮದ್ ರವರು ವಿತರಣೆ ಪಡೆದ ಆರ್ 15 M ಬೈಕಿನ ಮುಂಭಾಗದಲ್ಲಿರುವ ಸಸ್ಪೆಂಷನ್ ಟ್ರಾವೆಲ್ ಗೋಲ್ಡ್ ಬಣ್ಣದಲ್ಲಿದೆ. ಈ ಬೈಕಿನ ಹಿಂಭಾಗದಲ್ಲಿ ಸಸ್ಪೆಂಷನ್ ಗಾಗಿ ಮೊನೊ ಕ್ರಾಸ್ ನೀಡಲಾಗಿದೆ. ಇನ್ನು ಬ್ರೇಕಿಂಗ್ ಕಾರ್ಯಗಳಿಗಾಗಿ ಈ ಬೈಕಿನ ಮುಂಭಾಗದ ವ್ಹೀಲ್ ನಲ್ಲಿ 282 ಎಂಎಂ ಡಿಸ್ಕ್ ಹಾಗೂ ಹಿಂಭಾಗದ ವ್ಹೀಲ್ ನಲ್ಲಿ 220 ಎಂಎಂ ಡಿಸ್ಕ್ ನೀಡಲಾಗಿದೆ.

ಇವುಗಳ ಜೊತೆಗೆ ಹೊಸ ತಲೆಮಾರಿನ R 15 V 4 ಬೈಕ್ ಡ್ಯುಯಲ್ ಚಾನೆಲ್ ಎಬಿಎಸ್, ಟ್ರಾಕ್ಷನ್ ಕಂಟ್ರೋಲ್ ಹಾಗೂ ವಿಶಿಷ್ಟವಾದ ಆಕ್ಸಿಲರೇಟರ್ ನಂತಹ ಹಲವಾರು ಫೀಚರ್ ಗಳನ್ನು ಹೊಂದಿದೆ. ಹೊಸ R 15 ಬೈಕ್ ತನ್ನ ವಿಭಿನ್ನ ಲುಕ್ ನಿಂದಾಗಿಯೇ ಗ್ರಾಹಕರನ್ನು ತನ್ನತ್ತ ಸೆಳೆಯುತ್ತದೆ.

ದೇಶಾದ್ಯಂತ ಶುರುವಾಯ್ತು ಹೊಸ Yamaha R15 V4 ಹಾಗೂ R15 M ಬೈಕುಗಳ ವಿತರಣೆ

ಪೆಟ್ರೋಲ್, ಡೀಸೆಲ್ ಬೆಲೆಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಹಲವು ವಾಹನ ತಯಾರಕ ಕಂಪನಿಗಳು ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ. Yamaha ಕಂಪನಿಯು ಸಹ ತನ್ನ ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲು ಸಿದ್ದವಾಗುತ್ತಿದೆ. Yamaha ಕಂಪನಿಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಹೊಸ ಫೀಚರ್ ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ.

ಚಿತ್ರ ಕೃಪೆ: ಎಂಆರ್‌ಡಿ ವಿಲಾಗ್ಸ್

Most Read Articles

Kannada
Read more on ಯಮಹಾ yamaha
English summary
Yamaha starts delivery of new r15 v4 and r15m bikes delivery video details
Story first published: Friday, September 24, 2021, 14:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X