ಅಧಿಕ ಮೈಲೇಜ್ ನೀಡುವ ಹೊಸ ಆಫ್-ರೋಡ್ ಸ್ಕೂಟರ್ ಅನಾವರಣಗೊಳಿಸಿದ ಯಮಹಾ
ಜಪಾನ್ ಮೂಲದ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಯಮಹಾ ತನ್ನ 2022ರ ಜುಮಾ 125 ಸ್ಕೂಟರ್ ಅನಾವರಣಗೊಳಿಸಿದೆ. ಹೊಸ ಯಮಹಾ ಜುಮಾ 125 ಒರಟಾದ ಮತ್ತು ವಿಶಿಷ್ಟವಾದ ಸ್ಟೈಲಿಂಗ್ ಅನ್ನು ಹೊಂದಿರುವ ಆಫ್-ರೋಡ್ ಸ್ಕೂಟರ್ ಆಗಿದೆ.

2022ರ ಯಮಹಾ ಜುಮಾ 125 ಸ್ಕೂಟರ್ ಸಾಕಷ್ಟು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಇದರ ಮುಂಭಾಗದಲ್ಲಿ ಟ್ವಿನ್-ಪಾಡ್ ಹೆಡ್‌ಲ್ಯಾಂಪ್‌ಗಳು, ಬೃಹತ್ ಫೇರಿಂಗ್ ಮತ್ತು ಹೊಸ ಬಾಡಿ ಪ್ಯಾನೆಲ್‌ಗಳನ್ನು ಹೊಂದಿದೆ. ಜುಮಾ 125 ಸ್ಕೂಟರ್ ನಲ್ಲಿ 12 ಇಂಚಿನ ವ್ಹೀಲ್ ಗಳು, ಆಫ್-ರೋಡ್ ಟಯರ್ ಗಳು ಮತ್ತು ಟೈಲ್ ರ್ಯಾಕ್ ಅಳವಡಿಸಲಾಗಿದ್ದು, ಇದು ಪ್ರಯೋಜನಕಾರಿ ಮತ್ತು ಸ್ಕೂಟರ್ ಆಕರ್ಷಣೆಯನ್ನು ಹೆಚ್ಚಿಸುತ್ತದೆ.

ಹೊಸ ಯಮಹಾ ಜುಮಾ 125 ಸ್ಕೂಟರ್ ಸ್ಟೀಲ್ ಟ್ಯೂಬ್ ಫ್ರೇಮ್ ಚಾಸಿಸ್ ಮೇಲೆ ಹಂತ ಹಂತದ ವಿನ್ಯಾಸದೊಂದಿಗೆ ನಿರ್ಮಿಸಲಾಗಿದೆ. ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಡ್ಯುಯಲ್ ಶಾಕರ್‌ಗಳನ್ನು ಹೊಂದಿದೆ.
MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಇದು ಕ್ರಮವಾಗಿ 3.2 ಇಂಚುಗಳು ಮತ್ತು 3.1 ಇಂಚುಗಳ ಸಸ್ಪೆಂಕ್ಷನ್ ಟ್ರ್ಯಾವೆಲ್ ಅನ್ನುನೀಡುತ್ತದೆ. ಸ್ಕೂಟರ್ ಸೀಟ್ ಎತ್ತರವು 30.9 ಇಂಚುಗಳಷ್ಟು ಹೊಂದಿದೆ, ಇದು ಹಿಂದಿನ ಮಾದರಿಗಿಂತ ಸ್ವಲ್ಪ ಹೆಚ್ಚಾಗಿದೆ,

ಇನ್ನು ಈ ಹೊಸ ಯಮಹಾ ಆಫ್-ರೋಡ್ ಸ್ಕೂಟರ್ ನಲ್ಲಿ 125 ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದು ಪರಿಷ್ಕೃತ ಬೋರ್ ಮತ್ತು ಸ್ಟ್ರೋಕ್ (52.0 ಎಂಎಂ ಎಕ್ಸ್ 58.7 ಎಂಎಂ) ಅನ್ನು ಪಡೆಯುತ್ತದೆ.
MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಇದು ಯಮಹಾದ ವಿವಿಎ (ವೇರಿಯಬಲ್ ವಾಲ್ವ್ ಆಕ್ಟಿವೇಷನ್) ತಂತ್ರಜ್ಞಾನವನ್ನು ಸಹ ಪಡೆಯುತ್ತದೆ, ಇದರಿಂದ ಎಂಜಿನ್ ಒಟ್ಟಾರೆ ಪವರ್ ಮತ್ತು ಟಾರ್ಕ್ ಸುಧಾರಿಸುತ್ತದೆ. ಸ್ಕೂಟರ್ ಸೆಂಟ್ರಲ್ ಫಗಲ್ ಕ್ಲಚ್ ಮತ್ತು ವಿ-ಬೆಲ್ಟ್ ಚಾಲಿತ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.

ಹೊಸ ಯಮಹಾ ಜುಮಾ 125 ಸ್ಕೂಟರ್ ಸುಮಾರು 43 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ, ಆಫ್-ರೋಡ್ ಸ್ಕೂಟರ್ ಆದರೂ ಉತ್ತಮ ಮೈಲೇಜ್ ಅನ್ನು ಈ ಸ್ಕೂಟರ್ ನೀಡುತ್ತದೆ ಎಂಬುವುದು ವಿಶೇಷವಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಇನ್ನು ಈ ಹೊಸ ಆಫ್-ರೋಡ್ ಸ್ಕೂಟರ್ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದ ಚಕ್ರದಲ್ಲಿ 245 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂದಿನ ಚಕ್ರದಲ್ಲಿ 230 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಿದ್ದಾರೆ.

ಇದರ ಹಿಂಭಾಗದ ಬ್ರೇಕ್ ಲಿವರ್ ಮುಂಭಾಗದ ಚಕ್ರಕ್ಕೆ ಸ್ವಲ್ಪ ಬ್ರೇಕಿಂಗ್ ಬಲವನ್ನು ಅನ್ವಯಿಸುತ್ತದೆ, ಆದರೆ ಮುಂಭಾಗದ ಬ್ರೇಕ್ ಲಿವರ್ ಮುಂಭಾಗದ ಚಕ್ರಕ್ಕೆ ಮಾತ್ರ ಬಲವನ್ನು ಅನ್ವಯಿಸುತ್ತದೆ. ಇನ್ನು ಈ ಸ್ಕೂಟರ್'ನ ಸೀಟ್ ಕೆಳಗಡೆ ಒಂದು ಹೆಲ್ಮೆಟ್ ಇಡುವ ಸ್ಪೇಸ್ ಜೊತೆಗೆ ಸ್ಮಾರ್ಟ್‌ಫೋನ್ ಚಾರ್ಜ್ ಮಾಡಲು ಇದು ಯುಎಸ್‌ಬಿ-ಎ ಸಾಕೆಟ್ ಅನ್ನು ನೀಡಿದೆ.

ಹೊಸ ಯಮಹಾ ಜುಮಾ 125 ಸ್ಕೂಟರ್ 6-ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಇದಲ್ಲದೆ ಸ್ಕೂಟರ್ ಎಲ್ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸೆಂಟರ್ ಸ್ಟ್ಯಾಂಡ್ ಮತ್ತು ಎರಡು ಹೆಲ್ಮೆಟ್ ಹ್ಯಾಂಗರ್ ಗಳನ್ನು ಸಹ ಪಡೆಯುತ್ತದೆ. ಆದರೆ ಈ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ. ಆದರೆ ಹಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.


Click it and Unblock the Notifications








