Just In
- 8 hrs ago
ಕ್ರ್ಯಾಶ್ ಟೆಸ್ಟ್ನಲ್ಲಿ ಗರಿಷ್ಠ ರೇಟಿಂಗ್ ಪಡೆದುಕೊಂಡ ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು
- 9 hrs ago
ಕೇವಲ 40 ಸಾವಿರ ರೂ. ಬೆಲೆಗೆ ಬಿಡುಗಡೆಯಾಗಿದೆ 100 ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್
- 10 hrs ago
ಎರ್ಟಿಗಾದಲ್ಲಿ ಹೊಸ ಸಿಎನ್ಜಿ ರೂಪಾಂತರಗಳನ್ನು ಪರಿಚಯಿಸಲು ಸಜ್ಜಾದ ಮಾರುತಿ ಸುಜುಕಿ
- 10 hrs ago
ಏಪ್ರಿಲ್ ತಿಂಗಳ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಯಮಹಾ ಎಂಟಿ-15 ಬೈಕ್
Don't Miss!
- Lifestyle
Today Rashi Bhavishya: ಗುರುವಾರದ ದಿನ ಭವಿಷ್ಯ: ಕರ್ಕ, ಕನ್ಯಾ, ಕುಂಭ, ಮೀನ ರಾಶಿಯವರಿಗೆ ಉತ್ತಮ ದಿನ
- Sports
IPL 2022: ಕೆಎಲ್ ರಾಹುಲ್ ಹೋರಾಟ ವ್ಯರ್ಥ, ಲಕ್ನೋಗೆ ಮಣ್ಣು ಮುಕ್ಕಿಸಿದ ಆರ್ಸಿಬಿ ಟ್ರೋಫಿ ಕನಸು ಜೀವಂತ
- News
ವಿಮಾನ ಇಂಧನ ತೆರಿಗೆ ಕಡಿತ ಮಾಡುತ್ತಾ ಕೇಂದ್ರ ಸರ್ಕಾರ?
- Movies
ಹಿಜಾಬ್ ಧರಿಸಿ ಮುಸ್ಲಿಂ ಮಹಿಳೆಯರ ಪಾತ್ರ ಮಾಡುತ್ತಿರುವ ಸ್ಟಾರ್ ನಟಿಯರಿವರು
- Finance
ಮೇ 25ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Technology
ಅಪ್ಲಿಕೇಶನ್ ಡೆವಲಪರ್ಗಳಿಗೆ ಮತ್ತೊಮ್ಮೆ ಸಂದೇಶ ಕಳುಹಿಸಿದ ಆಪಲ್ ಕಂಪೆನಿ!
- Education
ESIC MTS 2022 : ಫೇಸ್ I ಫಲಿತಾಂಶ ಮತ್ತು ಫೇಸ್ II ಪ್ರವೇಶ ಪತ್ರ ಪ್ರಕಟ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
450 ಪ್ಲಸ್ ಮತ್ತು 450ಎಕ್ಸ್ ಸ್ಕೂಟರ್ ಮಾದರಿಗಳಲ್ಲಿ ಹೊಸ ರೈಡಿಂಗ್ ಮೋಡ್ ಪರಿಚಯಿಸಿದ ಎಥರ್
ಎಥರ್ ಎನರ್ಜಿ ಕಂಪನಿಯು ತನ್ನ ಇವಿ ಸ್ಕೂಟರ್ ಬಳಕೆದಾರರಿಗೆ ಕಾಲಕಾಲಕ್ಕೆ ಹಲವಾರು ಅಪ್‌ಡೇಟ್‌ಗಳನ್ನು ನೀಡುತ್ತಿದ್ದು, ಕಂಪನಿಯು ಈ ಬಾರಿ ಪರ್ಫಾಮೆನ್ಸ್ ಜೊತೆ ಬ್ಯಾಟರಿ ದಕ್ಷತೆಯನ್ನು ಕಾಯ್ದುಕೊಳ್ಳಬಹುದಾದ 'ಸ್ಮಾರ್ಟ್ಇಕೋ' ರೈಡಿಂಗ್ ಮೋಡ್ ಪರಿಚಯಿಸಿದೆ.

ಹೊಸ ರೈಡಿಂಗ್ ಮೋಡ್ ಉನ್ನತೀಕರಿಸಲು 450 ಪ್ಲಸ್ ಮತ್ತು 450ಎಕ್ಸ್ ಸ್ಕೂಟರ್ ಮಾಲೀಕರು ಸರ್ವಿಸ್ ಸೆಂಟರ್‌ಗಳಿಗೆ ಭೇಟಿ ನೀಡದೆ ಓವರ್ ಟು ಏರ್(OTA) ಮೂಕವೇ ಉನ್ನತೀಕರಿಸಿದ 'ಸ್ಮಾರ್ಟ್ಇಕೋ' ರೈಡಿಂಗ್ ಮೋಡ್ ಅಳವಡಿಸಿಕೊಳ್ಳಬಹುದಾಗಿದ್ದು, ಹೊಸ ಸ್ಕೂಟರ್‌ಗಳ ಬಿಡುಗಡೆಯ ನಂತರ ಕಂಪನಿಯು ಹಲವಾರು ಬಾರಿಗೆ ಓಟಾ ಅಪ್‌ಡೇಟ್ ಮಾಡಿದೆ.

ಕೆಲ ದಿನಗಳಷ್ಟೇ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಟ್ರಿಪ್ ಪ್ಲಾನರ್ ಮತ್ತು ಸೇವಿಂಗ್ಸ್ ಟ್ರ್ಯಾಕರ್‌ನಂತಹ ವೈಶಿಷ್ಟ್ಯಗಳನ್ನು ಸಕ್ರಿಯಗೊಳಿಸಿದ್ದ ಕಂಪನಿಯು ಇದೀಗ ಕಾರ್ಯಕ್ಷಮತೆಯ ಮೇಲೆ ಪ್ರಭಾವ ಬೀರದೆ ಬ್ಯಾಟರಿ ದೀರ್ಘ ಕಾಲ ಬಾಳಿಕೆ ಬರಲಿದೆ.

ಹೊಸ ಸ್ಮಾರ್ಟ್ಇಕೋ ರೈಡಿಂಗ್ ಮೋಡ್ ಸಕ್ರಿಯೆಗೊಳಿಸಲು 450 ಪ್ಲಸ್ ಮತ್ತು 450ಎಕ್ಸ್ ಸ್ಕೂಟರ್ ಮಾಲೀಕರು ಕಡ್ಡಾಯವಾಗಿ ಎಥರ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕು ಮತ್ತು ಎಥರ್ ಲ್ಯಾಬ್ಸ್ ಸೆಟಿಂಗ್ಸ್ ಆಯ್ಕೆ ಮಾಡುವ ಮೂಲಕ ಸ್ಮಾರ್ಟ್ಇಕೋ ಬಟನ್ ಕ್ಲಿಕ್ ಮಾಡಿ ಹೊಸ ರೈಡಿಂಗ್ ಮೋಡ್ ಪಡೆಯಬಹುದಾಗಿದೆ.

ಕಂಪನಿಯ ಪ್ರಕಾರ ಹೊಸ ಸ್ಮಾರ್ಟ್ಇಕೋ ಮೋಡ್ ಆಯ್ಕೆಯು ಸಾಮಾನ್ಯ ಇಕೋ ಮತ್ತು ಸ್ಪೋರ್ಟ್ ಮೋಡ್ ನಡುವೆ ಯೋಗ್ಯ ಸಮತೋಲನವನ್ನು ಸಾಧಿಸುವ ಗುರಿಯನ್ನು ಹೊಂದಿದ್ದು, ಅಪೇಕ್ಷಿತ ಫಲಿತಾಂಶವನ್ನು ಖಚಿತಪಡಿಸಿಕೊಳ್ಳಲು ಹೊಸ ರೈಡಿಂಗ್ ಮೋಡ್ ಮೂಕಲ ಸವಾರಿಯ ಶೈಲಿಯನ್ನು ಆಧರಿಸಿ ಮೈಲೇಜ್ ಪ್ರಮಾಣವನ್ನು ನಿಗದಿ ಮಾಡಿಕೊಳ್ಳು ಸಹಾರಿಯಾಗಲಿದೆ.

ಇದಲ್ಲದೆ ಕಂಪನಿಯು ಸ್ಕೂಟರಿನ 7-ಇಂಚಿನ ಟಚ್‌ಸ್ಕ್ರೀನ್ ಘಟಕದಲ್ಲಿ ಸ್ಮಾರ್ಟ್ಇಕೋ ಬಟನ್ ಪ್ರದರ್ಶಿಸಲಿದ್ದು, ಪವರ್ ಬಾರ್ ನಿಖರವಾದ ಮಾಹಿತಿ ನೀಡುತ್ತದೆ. ಪೂರಕವಾದ ವಿದ್ಯುತ್ ಲಭ್ಯವಿದ್ದಾಗ ಟಚ್‌ಸ್ಕ್ರೀನ್ ನೀಲಿ ಬಣ್ಣವನ್ನು ಸೂಚಿಸುತ್ತದೆ ಮತ್ತೆ ಪವರ್ ಬಾರ್ ಕೆಂಪು ಬಣ್ಣಕ್ಕೆ ತಿರುಗಿದಾಗ ಅದರಲ್ಲಿ ಕಡಿಮೆ ಪ್ರಮಾಣದ ವಿದ್ಯುತ್ ಲಭ್ಯವಿದೆ ಎಂದರ್ಥ.

ಹೀಗೆ ಕೆಲವು ತಿಂಗಳಿನಿಂದ 450 ಪ್ಲಸ್ ಮತ್ತು 450ಎಕ್ಸ್ ಸ್ಕೂಟರ್‌ನಲ್ಲಿ ಹಲವಾರು ಬದಲಾವಣೆ ತಂದಿರುವ ಓಲಾ ಕಂಪನಿಯು ದುಬಾರಿ ಬೆಲೆ ನಡುವೆಯೂ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

ಪ್ರೀಮಿಯಂ ಇವಿ ಸ್ಕೂಟರ್ ಮಾರಾಟದಲ್ಲಿ ಸದ್ಯ ಮುಂಚೂಣಿಯಲ್ಲಿರುವ ಎಥರ್ ಎನರ್ಜಿ ಕಂಪನಿಯು ಮಾರುಕಟ್ಟೆಯಲ್ಲಿನ ಬೇಡಿಕೆ ಪೂರೈಕೆಗಾಗಿ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದು, ಕಂಪನಿಯು ಭವಿಷ್ಯ ಯೋಜನೆಗಳಿಗಾಗಿ ಭಾರೀ ಪ್ರಮಾಣದ ಹೂಡಿಕೆಗೆ ಮಾಡುತ್ತಿದೆ.

ಹೊಸ ಉತ್ಪನ್ನಗಳ ಹೊಸ ಯೋಜನೆಯ ಪೂರಕವಾಗಿ ಕಂಪನಿಯು ಉತ್ಪಾದನಾ ಸಾಮರ್ಥ್ಯವನ್ನು ಸಹ ಹೆಚ್ಚಿಸಲು ನಿರ್ಧರಿಸಿದ್ದು, ಇದಕ್ಕಾಗಿ ಕಂಪನಿಯು ಎರಡನೇ ಉತ್ಪಾದನಾ ಘಟಕ ತೆರೆಯುತ್ತಿದೆ.

ಎರಡನೇ ಘಟಕ ನಿರ್ಮಾಣ ಕಾರ್ಯ ಈಗಾಗಲೇ ಆರಂಭಗೊಂಡಿದ್ದು, ಈ ವರ್ಷದ ಕೊನೆಯಲ್ಲಿ ಕಾರ್ಯಾರಂಭ ನಡೆಸಲಿರುವ ಹೊಸ ಘಟಕವು ವಾರ್ಷಿಕವಾಗಿ 2.80 ಲಕ್ಷ ಯುನಿಟ್ ಉತ್ಪಾದನಾ ಸಾಮರ್ಥ್ಯ ಹೊಂದಿರಲಿದೆ ಎನ್ನಲಾಗಿದೆ.

ಎಥರ್ ಕಂಪನಿಯು ಸದ್ಯ ತಮಿಳುನಾಡಿನ ಹೊಸೂರಿನಲ್ಲಿ ವಾರ್ಷಿಕವಾಗಿ 1.20 ಲಕ್ಷ ಸ್ಕೂಟರ್‌ಗಳ ಉತ್ಪಾದನೆ ಮಾಡಬಹುದಾದ ಸಾಮರ್ಥ್ಯದ ಇವಿ ಘಟಕವನ್ನು ಹೊಂದಿದ್ದು, ಇದೀಗ ಕಂಪನಿಯು ಎರಡನೇ ಘಟಕವನ್ನು ಸಹ ಹೊಸೂರಿನಲ್ಲಿಯೇ ತೆರೆಯಲು ನಿರ್ಧರಿಸಿದೆ.

ಮುಂದಿನ ಎರಡು ವರ್ಷಗಳಲ್ಲಿ ಎರಡು ಘಟಕಗಳ ಮೂಲಕ ವಾರ್ಷಿಕವಾಗಿ 4 ಲಕ್ಷ ಯುನಿಟ್ ಇವಿ ಸ್ಕೂಟರ್ ಉತ್ಪಾದನಾ ಸಾಮಾರ್ಥ್ಯ ಹೊಂದಿರಲಿದ್ದು, 2025ರ ವೇಳೆಗೆ ಮತ್ತಷ್ಟು ಹೂಡಿಕೆಯೊಂದಿಗೆ ವಾರ್ಷಿಕವಾಗಿ ಒಟ್ಟು 10 ಲಕ್ಷ ಯುನಿಟ್ ಉತ್ಪಾದನೆ ಮಾಡಬಹುದಾದ ಸಾಧ್ಯತೆಗಳ ಕುರಿತು ಯೋಜನೆ ರೂಪಿಸುತ್ತಿದೆ.

ವಾರ್ಷಿಕವಾಗಿ 10 ಲಕ್ಷ ಯುನಿಟ್ ಉತ್ಪಾದನೆಗಾಗಿ ಹೂಡಿಕೆ ಕೂಡಾ ಪ್ರಮುಖವಾಗಿದ್ದು, ಈಗಾಗಲೇ ಪ್ರಮುಖ ಕಂಪನಿಗಳಿಂದ ಭಾರೀ ಪ್ರಮಾಣದ ಹೂಡಿಕೆ ಪಡೆದುಕೊಂಡಿರುವ ಎಥರ್ ಕಂಪನಿಯು ಭವಿಷ್ಯದಲ್ಲಿ ಇನ್ನಷ್ಟು ಹೆಚ್ಚಳ ಮಾಡಲು ನಿರ್ಧರಿಸಿದೆ.

2025ರ ವೇಳೆಗೆ ಇವಿ ವಾಹನ ಬೇಡಿಕೆ ಶೇ.20ಕ್ಕೆ ಏರಿಕೆಯಾಗುವ ಎಲ್ಲಾ ಸಾಧ್ಯತೆ ಕುರಿತು ಮಾರುಕಟ್ಟೆ ಅಧ್ಯಯನ ನಡೆಸಿರುವ ಎಥರ್ ಕಂಪನಿಯು ಇವಿ ವಾಹನ ಹೆಚ್ಚಳಕ್ಕೆ ತಕ್ಕಂತೆ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆಯನ್ನು ಸಹ ಹೆಚ್ಚಿಸುತ್ತಿದೆ.

ಎಥರ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಶೀಘ್ರದಲ್ಲೇ ಮತ್ತಷ್ಟು ಹೊಸ ಉತ್ಪನ್ನಗಳ ಬಿಡುಗಡೆಗೆ ಸಿದ್ದವಾಗುತ್ತಿದೆ.