ಮಾಡಿಫೈಗೊಂಡ ಅವೆಂಜರ್ ಹೈಬ್ರಿಡ್ ಬೈಕ್ ಪರ್ಫಾಮೆನ್ಸ್ ಹೇಗಿದೆ ನೋಡಿ..

ವಿಶ್ವದೆಲ್ಲೆಡೆ ಬಹುತೇಕ ಎಲೆಕ್ಟ್ರಿಕ್ ವಾಹನಗಳೇ ಸದ್ದು ಮಾಡುತ್ತಿದ್ದು, ವಾಹನ ತಯಾರಕ ಸಂಸ್ಥೆಗಳು ಕೂಡಾ ತೀವ್ರ ಪೈಪೋಟಿಯೊಂದಿಗೆ ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡುತ್ತಿವೆ. ಈ ನಡುವೆ ಕೆಲವರು ಸಾಮಾನ್ಯ ಬೈಕ್ ಗಳನ್ನು ಎಲೆಕ್ಟ್ರಿಕ್ ಬೈಕ್ ‌ಗಳಾಗಿ ಪರಿವರ್ತಿಸುತ್ತಿದ್ದಾರೆ. ಇದೇ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾದ ಬಜಾಜ್ ಅವೆಂಜರ್ ಬ್ಯಾಟರಿ ಚಾಲಿತ ಬೈಕ್ ಒಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ನೀವೆಂದೂ ನೋಡಿರದ ಅವೆಂಜರ್ ಎಲೆಕ್ಟ್ರಿಕ್ ಬೈಕ್? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್..

ಹೌದು.. ಪೆಟ್ರೋಲ್ ಚಾಲಿತ ಬಜಾಜ್ ಅವೆಂಜರ್ 220 ಕ್ರೂಸ್ ಬೈಕ್ ಈಗ ಬ್ಯಾಟರಿ ಚಾಲಿತ ಬೈಕ್ ಆಗಿ ರೂಪಾಂತರಗೊಂಡಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಪ್ರಶಂಸೆ ಕೂಡಾ ವ್ಯಕ್ತವಾಗುತ್ತಿದೆ. ಈ EV ಕನ್ವರ್ಷನ್ ಕಿಟ್ ಅನ್ನು GoGoA1 ನಿಂದ ಸಂಗ್ರಹಿಸಲಾಗಿದೆ. ಇದರ ಬೆಲೆ ರೂ. 27,760 ಇದ್ದು, ಇದು ಆನ್‌ಲೈನ್‌ನಲ್ಲೂ ಮಾರಾಟಕ್ಕೆ ಲಭ್ಯವಿದೆ.

ನೀವೆಂದೂ ನೋಡಿರದ ಅವೆಂಜರ್ ಎಲೆಕ್ಟ್ರಿಕ್ ಬೈಕ್? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್..

ಈ ಬೈಕ್ ‌ನಲ್ಲಿ ಬಳಸಲಾದ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಕನ್ವರ್ಷನ್ ಕಿಟ್ 2000W, 17 ಇಂಚಿನ ಬ್ರಷ್ ಲೆಸ್ ಹಬ್ ಮೋಟಾರ್ ಅನ್ನು ಬಳಸುತ್ತದೆ. ಇದು ರಿಜನರೇಟಿವ್ ಕಂಟ್ರೋಲರ್, ಡಿಸ್ಕ್ ವಿತ್ ಕ್ಯಾಚರ್, ಮೌಂಟಿಂಗ್ ಪ್ಲೇಟ್ ಮತ್ತು ಕಪ್ಲರ್ ನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ನೀವೆಂದೂ ನೋಡಿರದ ಅವೆಂಜರ್ ಎಲೆಕ್ಟ್ರಿಕ್ ಬೈಕ್? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್..

ಈ ಬಜಾಜ್ ಅವೆಂಜರ್‌ನಲ್ಲಿ ಕೆಲವೇ ಬದಲಾವಣೆಗಳನ್ನು ಮಾಡಲಾಗಿದ್ದು, ಕೇವಲ 17-ಇಂಚಿನ ಮುಂಭಾಗದ ಚಕ್ರವನ್ನು ಹೊರತುಪಡಿಸಿ ಬೈಕ್ ನ ಬಹುತೇಕ ಭಾಗಗಳು ಅದರ ಸ್ಟ್ಯಾಂಡರ್ಡ್ ಮಾದರಿಯಂತೆಯೇ ಇರುತ್ತವೆ.

ನೀವೆಂದೂ ನೋಡಿರದ ಅವೆಂಜರ್ ಎಲೆಕ್ಟ್ರಿಕ್ ಬೈಕ್? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್..

ಈ ಮೋಟಾರ್‌ಸೈಕಲ್‌ನ 17-ಇಂಚಿನ ಚಕ್ರಗಳಲ್ಲಿ ಬ್ರಷ್ ‌ಲೆಸ್ ಹಬ್ ಎಲೆಕ್ಟ್ರಿಕ್ ಮೋಟರ್ ಅನ್ನು ಬಳಸಲಾಗಿದೆ. ಅಲ್ಲದೇ ಬ್ಯಾಟರಿ ಪ್ಯಾಕ್ ಅನ್ನು ಸಾಗಿಸಲು ರಿಯರ್ ಫೆಂಡರ್ ‌ನಲ್ಲಿ ಹೊಸ ಮೌಂಟಿಂಗ್ ಗಳನ್ನು ಇನ್ಸ್ಟಾಲ್ ಮಾಡಲಾಗಿದೆ.

ನೀವೆಂದೂ ನೋಡಿರದ ಅವೆಂಜರ್ ಎಲೆಕ್ಟ್ರಿಕ್ ಬೈಕ್? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್..

ಇದರ ಜೊತೆಗೆ ಹ್ಯಾಂಡಲ್‌ಬಾರ್‌ನ ಬಲಕ್ಕೆ ಸಣ್ಣ ಸ್ವಿಚ್ ಇದೆ. ಇದು ಸವಾರನಿಗೆ ಪವರ್ ಆನ್ ಮಾಡಲು ಅನುವು ಮಾಡಿಕೊಡುತ್ತದೆ. ಇವುಗಳಲ್ಲಿ ಕೆಲವನ್ನು ಮಾಡಿಫೈ ಮಾಡಿ ಹಬ್ ಮೋಟಾರ್‌ ಜೊತೆಗೆ ಫ್ರಂಟ್ ವೀಲ್ ಗೆ ಸಹಕರಿಸಲು ಮುಂಭಾಗದ ಫೋರ್ಕ್‌ಗಳನ್ನು ಅಭಿವೃದ್ದಿಪಡಿಸಲಾಗಿದೆ. ಇದಲ್ಲದೆ ಬ್ರೆಕ್ ಗಳು ಹೊಸ ವೀಲ್ ಗೆ ಸಹಕರಿಸುವಂತೆ ಸುಧಾರಿಸಲಾಗಿದೆ.

ನೀವೆಂದೂ ನೋಡಿರದ ಅವೆಂಜರ್ ಎಲೆಕ್ಟ್ರಿಕ್ ಬೈಕ್? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್..

ಇದರಲ್ಲಿನ ಬ್ಯಾಟರಿ ಪ್ಯಾಕ್ ಅನ್ನು ಸಣ್ಣ ಲೋಹದ ಪೆಟ್ಟಿಗೆಯಲ್ಲಿ ಸೀಲ್ ಮಾಡಿ ಕಟ್ಟಿಂಗ್ ಮತ್ತು ವೆಲ್ಡಿಂಗ್ ಮೂಲಕ ಬೈಕ್ ‌ನಲ್ಲಿ ಸ್ಥಿರವಾಗಿರಿಸಿ ರಿಯರ್ ಫೆಂಡರ್ ನ ಮೌಂಟ್‌ನಲ್ಲಿ ಬ್ಯಾಟರಿಯನ್ನು ಅಳವಡಿಸಲಾಗಿದೆ.

ಇದರಲ್ಲಿ ಅಳವಡಿಸಲಾಗಿರುವ ಬ್ಯಾಟರಿ ಬಗ್ಗೆ ತಿಳಿಯುವುದಾದರೆ, 72 ವ್ಯಾಟ್ 35 ಆಂಪಿಯರ್ ಲಿಥಿಯಂ-ಐಯಾನ್ ಪ್ಯಾಕ್ ಅನ್ನು ಬಳಸಲಾಗಿದೆ. ಇನ್ನು ಎಲೆಕ್ಟ್ರಿಕ್ ಸಿಸ್ಟಮ್ ನಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿ ಕಂಟ್ರೋಲರ್‌ ಅನ್ನು ಅಳವಡಿಸಿದ್ದಾರೆ. ಮೋಟಾರ್‌ ಆನ್ ಮತ್ತು ಆಫ್ ಮಾಡಲು ಮೂಲ ಸ್ವಿಚ್ ಗೇರ್ ಬಳಿ ಮತ್ತೊಂದು ಸ್ವಿಚ್ ಅನ್ನು ಅಳವಡಿಸಲಾಗಿದೆ.

ನೀವೆಂದೂ ನೋಡಿರದ ಅವೆಂಜರ್ ಎಲೆಕ್ಟ್ರಿಕ್ ಬೈಕ್? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್..

ಇದರ ಜೊತೆಗೆ ಈ ಬೈಕ್ ನಲ್ಲಿ ಎಲೆಕ್ಟ್ರಿಕ್ ಹಬ್ ಅನ್ನು ಮೋಟಾರ್ ಮುಂಭಾಗದ ಚಕ್ರದಲ್ಲಿ ಅಳವಡಿಸಲಾಗಿದೆ. ಎಲೆಕ್ಟ್ರಿಕ್ ಮೋಡ್‌ನಲ್ಲಿ ಬಜಾಜ್ ಅವೆಂಜರ್ ಗಂಟೆಗೆ ಗರಿಷ್ಠ 60 ಕಿ.ಮೀ ವೇಗವನ್ನು ತಲುಪುತ್ತದೆ. ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದರೆ ಗರಿಷ್ಠ 40 ರಿಂದ 50 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ.

ನೀವೆಂದೂ ನೋಡಿರದ ಅವೆಂಜರ್ ಎಲೆಕ್ಟ್ರಿಕ್ ಬೈಕ್? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್..

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರುತ್ತಿದ್ದು, ಗ್ರಾಹಕರು ಎಲೆಕ್ಟ್ರಿಕ್ ವಾಹನಗಳನ್ನು ಬಳಸಲು ಆಸಕ್ತಿ ತೋರುತ್ತಿದ್ದಾರೆ. ಹಾಗಾಗಿ ಕಂಪನಿಗಳು ಒಂದೆಡೆ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡುತ್ತಿದ್ದರೆ, ಮತ್ತೊಂದೆಡೆ ಕೆಲವು ಸಾಮಾನ್ಯ ಬೈಕ್ ‌ಗಳು ಎಲೆಕ್ಟ್ರಿಕ್ ಬೈಕ್ ‌ಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಇದೇ ಮಾದರಿಯಲ್ಲಿ ಹುಟ್ಟಿಕೊಂಡ ಬೈಕ್ ಬಜಾಜ್ ಅವೆಂಜರ್ 220 ಎನ್ನಬಹುದು.

ನೀವೆಂದೂ ನೋಡಿರದ ಅವೆಂಜರ್ ಎಲೆಕ್ಟ್ರಿಕ್ ಬೈಕ್? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್..

ಒಂದು ಬಾರಿ ಚಾರ್ಜ್ ಮಾಡಿದರೆ 40 ರಿಂದ 50 ಕಿ.ಮೀ ಸಂಚರಿಸುವ ಸಾಮರ್ಥ್ಯ ಇದಕ್ಕೆ ಇದ್ದರೂ, ಮಾರುಕಟ್ಟೆಯಲ್ಲಿ ಲಭ್ಯವಿರುವ ಬೈಕ್ ಗಳಿಗೆ ಹೋಲಿಸಿಕೊಂಡರೆ ಕಡಿಮೆ ಮೈಲೇಜ್ ನೀಡುತ್ತದೆ. ಆದರೂ ಇದರ ನಿರ್ವಹಣಾ ವೆಚ್ಚ ಇತರ ಬೈಕ್ ಗಳಿಗೆ ಹೋಲಿಸಿಕೊಂಡರೆ ಕಡಿಮೆ ಎಂದು ಹೇಳಬಹುದು.

Most Read Articles

Kannada
English summary
Bajaj avenger electric hybrid motorcycle with modifying kit price rs 28k
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X