ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಬಿಎಂಡಬ್ಲ್ಯು ಜಿ 310 ಆರ್, ಜಿ 310 ಜಿಎಸ್ ಬೈಕ್‌ಗಳು

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ತನ್ನ ಹೊಸ ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳನ್ನು ಬೆಲೆಯನ್ನು ಹೆಚ್ಚಿಸಿದೆ. ಬಿಎಂಡಬ್ಲ್ಯು ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಈ ಜಿ 310 ಟ್ವಿನ್ ಬೈಕುಗಳ ಬೆಲೆಯನ್ನು ರೂ.5,000.ಗಳಷ್ಟು ಹೆಚ್ಚಿಸಿದೆ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಬಿಎಂಡಬ್ಲ್ಯು ಜಿ 310 ಆರ್, ಜಿ 310 ಜಿಎಸ್ ಬೈಕ್‌ಗಳು

ಇದರಿಂದ ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ದುಬಾರಿಯಾಗಿದೆ. ಬೆಲೆ ಏರಿಕೆಯ ನಂತರ, ಬಿಎಂಡಬ್ಲ್ಯು ಜಿ 310 ಆರ್ ಬೈಕಿನ ಬೆಲೆಯು ರೂ.2.65 ಲಕ್ಷಗಳಾದರೆ, ಬಿಎಂಡಬ್ಲ್ಯು ಜಿ 310 ಜಿಎ ಬೈಕಿನ ಬೆಲೆಯು ರೂ.3.05 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಬಿಎಂಡಬ್ಲ್ಯು ಜಿ 310 ಆರ್, ಜಿ 310 ಜಿಎಸ್ ಬೈಕ್‌ಗಳ ಬೆಲೆ ಏರಿಕೆಯನ್ನು ಹೊರತುಪಡಿಸಿ ಯಾವುದೇ ಯಾಂತ್ರಿಕ ನವೀಕರಣಗಳಿಲ್ಲ ಮತ್ತು ಹೊಸ ಬೆಲೆಗಳು ತಕ್ಷಣವೇ ಜಾರಿಗೆ ಬರುತ್ತವೆ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಬಿಎಂಡಬ್ಲ್ಯು ಜಿ 310 ಆರ್, ಜಿ 310 ಜಿಎಸ್ ಬೈಕ್‌ಗಳು

ಮೊದಲಿಗೆ ಬಿಎಂಡಬ್ಲ್ಯು ಜಿ 310 ಆರ್ ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಕೆಲವು ನವೀಕರಣಗಳನ್ನು ಮಾಡಲಾಗಿದೆ.ಹೊಸ ಬಿಎಂಡಬ್ಲ್ಯು ಜಿ 310 ಆರ್ ಬೈಕ್ ಹೆಡ್‌ಲ್ಯಾಂಪ್, ಟರ್ನ್ ಸಿಗ್ನಲ್‌ಗಳು ಮತ್ತು ಟೈಲ್ ಲ್ಯಾಂಪ್‌ಗಾಗಿ ಎಲ್ಇಡಿ ಲೈಟಿಂಗ್ ಅನ್ನು ನವೀಕರಿಸಲಾಗಿದೆ. ಕಳೆದ ಬಾರಿ ನವೀಕರಣದ ಭಾಗವಾಗಿ, ಜಿ 310 ಆರ್ ಪ್ಯಾಲೆಟ್‌ಗೆ ಬಿಎಂಡಬ್ಲ್ಯು ಹೊಸ ಬಣ್ಣಗಳನ್ನು ಕೂಡ ಸೇರಿಸಿತು

ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಬಿಎಂಡಬ್ಲ್ಯು ಜಿ 310 ಆರ್, ಜಿ 310 ಜಿಎಸ್ ಬೈಕ್‌ಗಳು

ಈ ಬಿಎಂಡಬ್ಲ್ಯು ಜಿ 310 ಆರ್, ಜಿ 310 ಜಿಎಸ್ ಬೈಕ್‌ಗಳಲ್ಲಿ 313 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 9,700 ಆರ್‌ಪಿಎಂನಲ್ಲಿ 34 ಬಿಹೆಚ್ಪಿ ಮತ್ತು 7,700 ಆರ್‌ಪಿಎಂನಲ್ಲಿ 28 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಬಿಎಂಡಬ್ಲ್ಯು ಜಿ 310 ಆರ್, ಜಿ 310 ಜಿಎಸ್ ಬೈಕ್‌ಗಳು

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ. ತನ್ನ ಪ್ರತಿಸ್ಪರ್ಧಿಗ ಬೈಕ್‌ಗಳಿಗಿಂತ ಹೆಚ್ಚಿನ ಪವರ್ ಮತ್ತು ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎರಡು ಬೈಕ್‌ಗಳು ಹೆಚ್ಚು ಅಗ್ರೇಸಿವ್ ಲುಕ್ ಅನ್ನು ಹೊಂದಿರುವುದರಿಂದ ಹೆಚ್ಚಿನ ಯುವಗ್ರಾಹಕರನ್ನು ಸೆಳೆಯುತ್ತಿದೆ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಬಿಎಂಡಬ್ಲ್ಯು ಜಿ 310 ಆರ್, ಜಿ 310 ಜಿಎಸ್ ಬೈಕ್‌ಗಳು

ಈ ಹೊಸ ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳು 143 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ ಎರಡು ಹೊಸ ಬೈಕುಗಳು ಕೇವಲ 7.17 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಬಿಎಂಡಬ್ಲ್ಯು ಜಿ 310 ಆರ್, ಜಿ 310 ಜಿಎಸ್ ಬೈಕ್‌ಗಳು

ಇನ್ನು ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕಿನಲ್ಲಿ ಹೊಸ ಹೆಡ್‌ಲೈಟ್ ಪಡೆಯುತ್ತದೆ, ಇನ್ನು ಎಲ್‌ಇಡಿ ಡೇಟೈಮ್ ರನ್ನಿಂಗ್ ಜೊತೆ ಲೈಟ್ ಸ್ಟ್ರಿಪ್ ಅನ್ನು ಸಹ ಹೊಂದಿದೆ. ಈ ಬೈಕಿನಲ್ಲಿ ಜಿಎಸ್' ಅಕ್ಷರಗಳು ಈಗ ದೊಡ್ಡದಾಗಿದೆ ಮತ್ತು ಎಡಿವಿ ಶೈಲಿಯ ಬೀಕ್ ಅಪ್ ಫ್ರಂಟ್ 'ರ್ಯಾಲಿ' ಸ್ಟಿಕ್ಕರ್ ಅನ್ನು ಒಳಗೊಂಡಿದೆ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಬಿಎಂಡಬ್ಲ್ಯು ಜಿ 310 ಆರ್, ಜಿ 310 ಜಿಎಸ್ ಬೈಕ್‌ಗಳು

ದೊಡ್ಡ ಬಿಎಂಡಬ್ಲ್ಯು ಆರ್ 1250 ಜಿಎಸ್ ಬೈಕ್ ನಿಂದ ಹಲವಾರು ಫೀಚರ್ ಗಳನ್ನು ಎರವಲು ಪಡೆಯಲಾಗಿದೆ. ಇದರಲ್ಲಿ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಎಂಡಬ್ಲ್ಯು ಆರ್ 1250 ಜಿಎಸ್ ಮಾದರಿಯ ವಿಂಡ್‌ಸ್ಕ್ರೀನ್ ಅನ್ನು ಒಳಗೊಂಡಿದೆ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಬಿಎಂಡಬ್ಲ್ಯು ಜಿ 310 ಆರ್, ಜಿ 310 ಜಿಎಸ್ ಬೈಕ್‌ಗಳು

ಐಷಾರಾಮಿ ದ್ವಿಚಕ್ರ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ತನ್ನ 2022ರ ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳ ಬಣ್ಣಗಳನ್ನು ಅಂತರರಾಷ್ಟ್ರೀಯ ಮಾರುಕಟ್ತೆಯಲ್ಲಿ ನವೀಕರಿಸಿದೆ. 2022ರ ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕುಗಳು ಹೊಸ ಬಣ್ಣಗಳ ಆಯ್ಜೆಯನ್ನು ಪಡೆದುಕೊಂಡಿವೆ. ಬಿಎಂಡಬ್ಲ್ಯು ಜಿ 310 ಆರ್ ಬೈಕ್ ರೆಡ್ ರಿಮ್ಸ್ ಮತ್ತು ಕಾಸ್ಮಿಕ್ ಬ್ಲ್ಯಾಕ್ ಟು ಹೊಂದಿರುವ ಕಯನೈಟ್ ಬ್ಲೂ ಮೆಟಾಲಿಕ್ ಎಂಬ ಹೊಸ ಬಣ್ಣಗಳನ್ನು ಪಡೆದುಕೊಂಡಿದೆ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಬಿಎಂಡಬ್ಲ್ಯು ಜಿ 310 ಆರ್, ಜಿ 310 ಜಿಎಸ್ ಬೈಕ್‌ಗಳು

ಈ ಬೈಕಿನ ಪೋಲಾರ್ ವೈಟ್ ಬಣ್ಣವನ್ನು ಸ್ಥಗಿತಗೊಳಿಸಲಾಗಿದೆ. ಇನ್ನು ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕ್ ಟ್ರಿಪಲ್ ಬ್ಲ್ಯಾಕ್ ಎಂಬ ಹೊಸ ಬಣ್ಣವನ್ನು ಪಡೆಯುತ್ತದೆ. ಈ ಬೈಕಿನ 40 ವರ್ಷಗಳ ಜಿಎಸ್ ಬಣ್ಣವನ್ನು ಸ್ಥಗಿತಗೊಳಿಸಲಾಗಿದೆ. ಹೊಸ ಬಣ್ಣಗಳ ಆಯ್ಕೆಯನ್ನು ಹೊರತುಪಡಿಸಿ 021ರ ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕುಗಳಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ.

ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಬಿಎಂಡಬ್ಲ್ಯು ಜಿ 310 ಆರ್, ಜಿ 310 ಜಿಎಸ್ ಬೈಕ್‌ಗಳು

ಇನ್ನು ಟಿವಿಎಸ್ ಮೋಟಾರ್ ಜೊತೆ ಸಹಭಾಗಿತ್ವ ಘೋಷಣೆ ಮಾಡಿರುವ ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಇದೀಗ ಭವಿಷ್ಯದ ವಾಹನ ಮಾದರಿಗಳಾದ ಎಲೆಕ್ಟ್ರಿಕ್ ಆವೃತ್ತಿಗಳ ಉತ್ಪಾದನೆ ಹೊಸ ಸಹಭಾಗಿತ್ವ ಯೋಜನೆಯನ್ನು ಕಳೆದ ವರ್ಷ ಪ್ರಕಟಿಸಿತು. ಹೊಸ ಸಹಭಾಗಿತ್ವ ಯೋಜನೆ ಅಡಿ ಟಿವಿಎಸ್ ಮತ್ತು ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಗಳು ಇವಿ ಮಾದರಿಗಳಿಗಾಗಿ ಪ್ರತ್ಯೇಕ ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಬಳಕೆ, ತಂತ್ರಜ್ಞಾನ ವಿನಿಯಮ ಮತ್ತು ಗುಣಮಟ್ಟದ ಬಿಡಿಭಾಗಗಳ ಅಭಿವೃದ್ದಿಗೆ ಪರಸ್ಪರ ಸಹಕರಿಸಲಿವೆ. ಈ ಮೂಲಕ ಭವಿಷ್ಯದ ವಾಹನಗಳ ಉತ್ಪಾದನೆಯಲ್ಲಿ ಎರಡು ಕಂಪನಿಯು ಉತ್ತಮ ಮುನ್ನಡೆ ಕಾಯ್ದುಕೊಳ್ಳಲು ನೆರವಾಗಲಿದೆ. ಹೊಸ ಯೋಜನೆಯಲ್ಲಿ ಶೀಘ್ರದಲ್ಲಿ ವಿನೂತನ ಇವಿ ಮಾದರಿಗಳು ರಸ್ತೆಗಿಳಿಯಲಿವೆ

ಮತ್ತೆ ಬೆಲೆ ಏರಿಕೆ ಪಡೆದುಕೊಂಡ ಬಿಎಂಡಬ್ಲ್ಯು ಜಿ 310 ಆರ್, ಜಿ 310 ಜಿಎಸ್ ಬೈಕ್‌ಗಳು

ಬಿಎಂಡಬ್ಲ್ಯು ಜಿ 310 ಆರ್ ಭಾರತೀಯ ಮಾರುಕಟ್ಟೆಯಲ್ಲಿ ಕೆಟಿಎಂ ಡ್ಯೂಕ್ 390, ಬಜಾಜ್ ಡೊಮಿನಾರ್ 400 ಮತ್ತು ಟಿವಿಎಸ್ ಅಪಾಚೆ ಆರ್‌ಆರ್‌310 ಬೈಕುಗಳಿಗೆ ಪೈಪೋಟಿ ನೀಡುತ್ತದೆ. ಇನ್ನು ಬಿಎಂಡಬ್ಕ್ಯು ಜಿ 310 ಜಿಎಸ್ ಮಾದರಿಯು ಕೆಟಿಎಂ 390 ಅಡ್ವೆಂಚರ್ ಮತ್ತು ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್‌ಗಳಿಗೆ ಪೈಪೋಟಿ ನೀಡುತ್ತದ

Most Read Articles

Kannada
English summary
Bmw g 310 r and g 310 gs price hiked by rs 5000 in india details
Story first published: Thursday, March 31, 2022, 17:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X