ಟಿವಿಎಸ್ ಅಪಾಚೆ ಆರ್‌ಆರ್310 ರೀಬ್ಯಾಡ್ಜ್ ವರ್ಷನ್ ಬಿಎಂಡಬ್ಲ್ಯು ಜಿ 310 ಆರ್‌ಆರ್ ಬಿಡುಗಡೆ

ಭಾರತದಲ್ಲಿ ಪ್ರೀಮಿಯಂ ಸ್ಪೋರ್ಟ್ ಬೈಕ್ ಮಾರಾಟದಲ್ಲಿ ಉತ್ತಮ ಬೇಡಿಕೆ ಹೊಂದಿರುವ ಬಿಎಂಡಬ್ಲ್ಯು ಮೊಟೋರಾಡ್ ಕಂಪನಿಯು ತನ್ನ ಹೊಸ ಜಿ 310 ಆರ್‌ಆರ್ ಮಾದರಿಯನ್ನು ಬಿಡುಗಡೆ ಮಾಡಿದೆ.

ಟಿವಿಎಸ್ ಅಪಾಚೆ ಆರ್‌ಆರ್310 ರೀಬ್ಯಾಡ್ಜ್ ವರ್ಷನ್ ಬಿಎಂಡಬ್ಲ್ಯು ಜಿ 310 ಆರ್‌ಆರ್ ಬಿಡುಗಡೆ

ಹೊಸ ಬಿಎಂಡಬ್ಲ್ಯು ಜಿ 310 ಆರ್‌ಆರ್ ಮಾದರಿಯು ಭಾರತದಲ್ಲಿ ಸಹಭಾಗಿತ್ವ ಕಂಪನಿಯಾಗಿರುವ ಟಿವಿಎಸ್ ನಿರ್ಮಾಣದ ಅಪಾಚೆ ಆರ್‌ಆರ್310 ರೀಬ್ಯಾಡ್ಜ್ ಮಾದರಿಯಾಗಿದ್ದು, ಹೊಸ ಬೈಕ್ ಮಾದರಿಯು ಪ್ರಮುಖ ಎರಡು ವೆರಿಯೆಂಟ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಟಿವಿಎಸ್ ಅಪಾಚೆ ಆರ್‌ಆರ್310 ರೀಬ್ಯಾಡ್ಜ್ ವರ್ಷನ್ ಬಿಎಂಡಬ್ಲ್ಯು ಜಿ 310 ಆರ್‌ಆರ್ ಬಿಡುಗಡೆ

ಬಿಎಂಡಬ್ಲ್ಯು ಕಂಪನಿಯು ಜಿ 310 ಆರ್‌ಆರ್ ಬೈಕ್ ಮಾದರಿಯನ್ನು ಸ್ಟ್ಯಾಂಡರ್ಡ್ ಮತ್ತು ಸ್ಟೈಲ್ ಸ್ಪೋರ್ಟ್ ಎನ್ನುವ ಎರಡು ವೆರಿಯೆಂಟ್‌ಗಳಲ್ಲಿ ಪರಿಚಯಿಸಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಬೈಕ್ ಆರಂಭಿಕವಾಗಿ ರೂ. 2.85 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 2.99 ಲಕ್ಷ ಬೆಲೆ ಹೊಂದಿದೆ.

ಟಿವಿಎಸ್ ಅಪಾಚೆ ಆರ್‌ಆರ್310 ರೀಬ್ಯಾಡ್ಜ್ ವರ್ಷನ್ ಬಿಎಂಡಬ್ಲ್ಯು ಜಿ 310 ಆರ್‌ಆರ್ ಬಿಡುಗಡೆ

ಹೊಸ ಜಿ 310 ಆರ್‌ಆರ್ ಮಾದರಿಯು ಅಪಾಚೆ ಆರ್‌ಆರ್310 ಮಾದರಿಯಲ್ಲಿರುವಂತೆ ಎಂಜಿನ್, ಫ್ರೆಮ್ ಮತ್ತು ಸಸ್ಷೆಂಷನ್ ಸೇರಿದಂತೆ ಬಹುತೇಕ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದ್ದು, ವಿಶೇಷ ಬಣ್ಣಗಳ ಆಯ್ಕೆ ಮತ್ತು ಗ್ರಾಫಿಕ್ಸ್ ವಿನ್ಯಾಸವು ಅಪಾಚೆ ಆರ್‌ಆರ್310 ಮಾದರಿಗಿಂತಲೂ ತುಸು ಭಿನ್ನವಾಗಿ ಕಾಣಿಸುತ್ತದೆ.

ಟಿವಿಎಸ್ ಅಪಾಚೆ ಆರ್‌ಆರ್310 ರೀಬ್ಯಾಡ್ಜ್ ವರ್ಷನ್ ಬಿಎಂಡಬ್ಲ್ಯು ಜಿ 310 ಆರ್‌ಆರ್ ಬಿಡುಗಡೆ

ಎಂಜಿನ್ ಮತ್ತು ಪರ್ಫಾಮೆನ್ಸ್

ಬಿಎಂಡಬ್ಲ್ಯು ಹೊಸ ಜಿ 310 ಆರ್‌ಆರ್ ಮಾದರಿಯಲ್ಲಿ ಅಪಾಚೆ ಆರ್‌ಆರ್310 ಮಾದರಿಯಲ್ಲಿರುವಂತೆ 312.2 ಸಿಸಿ ಲಿಕ್ವಿಡ್ ಕೂಲ್ಡ್, ಫ್ಯೂಲ್ ಇಂಜೆಕ್ಷೆಡ್ ಸಿಂಗಲ್ ಸಿಲಿಂಡರ್ ಎಂಜಿನ್ ನೀಡಲಾಗಿದ್ದು, ಇದು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 33.52 ಬಿಎಚ್‌ಪಿ ಮತ್ತು 27.3 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಟಿವಿಎಸ್ ಅಪಾಚೆ ಆರ್‌ಆರ್310 ರೀಬ್ಯಾಡ್ಜ್ ವರ್ಷನ್ ಬಿಎಂಡಬ್ಲ್ಯು ಜಿ 310 ಆರ್‌ಆರ್ ಬಿಡುಗಡೆ

ಹೊಸ ಬೈಕಿನಲ್ಲಿ ಸ್ಪಿಪ್ಲರ್ ಕ್ಲಚ್ ಜೊತೆಗೆ ವಿವಿಧ ನಾಲ್ಕು ರೈಡಿಂಗ್ ಮೋಡ್‌ಗಳಿದ್ದು, ಬೈಕ್ ಚಾಲನೆಯನ್ನು ಸರಳಗೊಳಿಸಲು ಟ್ರ್ಯಾಕ್, ಸ್ಪೋರ್ಟ್, ಅರ್ಬನ್ ಮತ್ತು ರೈನ್ ರೈಡ್ ಮೋಡ್‌ಗಳು ಅತ್ಯುತ್ತಮವಾಗಿವೆ.

ಟಿವಿಎಸ್ ಅಪಾಚೆ ಆರ್‌ಆರ್310 ರೀಬ್ಯಾಡ್ಜ್ ವರ್ಷನ್ ಬಿಎಂಡಬ್ಲ್ಯು ಜಿ 310 ಆರ್‌ಆರ್ ಬಿಡುಗಡೆ

ಹಾಗೆಯೇ ಹೊಸ ಬೈಕಿನ ಮುಂಭಾಗದಲ್ಲಿ ಶೋವಾ ಯುಎಸ್‌ಡಿ ಫೋರ್ಕ್‌ಗಳೊಂದಿಗೆ ಸ್ಟೀಲ್ ಟ್ರೆಲ್ಲಿಸ್ ಫ್ರೇಮ್ ಚಾಸಿಸ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸಸ್ಷೆಂಷನ್ ಅನ್ನು ಒಳಗೊಂಡಿದ್ದು, ಮೈಕೆಲಿನ್ ಟೈರ್‌ಗಳೊಂದಿಗೆ 17-ಇಂಚಿನ ಮಿಶ್ರಲೋಹದ ಚಕ್ರಗಳು ಬೈಕ್ ಸವಾರಿ ಅನುಭವ ಅತ್ಯುತ್ತಮಗೊಳಿಸಲಿವೆ.

ಟಿವಿಎಸ್ ಅಪಾಚೆ ಆರ್‌ಆರ್310 ರೀಬ್ಯಾಡ್ಜ್ ವರ್ಷನ್ ಬಿಎಂಡಬ್ಲ್ಯು ಜಿ 310 ಆರ್‌ಆರ್ ಬಿಡುಗಡೆ

ಆದರೆ ಅಪಾಚೆ ಆರ್‌ಆರ್310 ಮಾದರಿಯಲ್ಲಿರುವ ಹೊಸ ಜಿ 310 ಆರ್‌ಆರ್ ಮಾದರಿಯಲ್ಲಿ ಕಂಪನಿಯು ಹೊಂದಾಣಿಕೆ ಮಾಡಬಹುದಾದ ಸಸ್ಷೆಂಷನ್ ನೀಡಲಾಗಿಲ್ಲ. ಆದರೆ ಹೊಸ ಬೈಕಿನಲ್ಲಿ ಕಂಪನಿಯು ವಿವಿಧ ರೈಡಿಂಗ್ ಮೋಡ್‌ಗಳಿಗೆ ಪೂರಕವಾದ ಮೈಕೆಲಿನ್ ರೋಡ್ 5 ಟೈರ್ ಜೋಡಣೆ ಹೊಂದಿದ್ದು, ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಮತ್ತು ಡ್ಯುಯಲ್ ಚಾನೆಲ್ ಎಬಿಎಸ್ ನೀಡಲಾಗಿದೆ.

ಟಿವಿಎಸ್ ಅಪಾಚೆ ಆರ್‌ಆರ್310 ರೀಬ್ಯಾಡ್ಜ್ ವರ್ಷನ್ ಬಿಎಂಡಬ್ಲ್ಯು ಜಿ 310 ಆರ್‌ಆರ್ ಬಿಡುಗಡೆ

ಮುಂಭಾಗದ ಚಕ್ರಗಳಲ್ಲಿ 300ಎಂಎಂ ಡಿಸ್ಕ್ ಬ್ರೇಕ್ ಮತ್ತು 240 ಎಂಎಂ ಹಿಂಭಾಗದ ಡಿಸ್ಕ್ ಬ್ರೇಕ್ ನೀಡಲಾಗಿದ್ದು, ಬೈಬ್ರೆ ಬ್ರೇಕ್ ಕ್ಯಾಲಿಪರ್‌ಗಳಿಂದ ಜೋಡಿಸಲಾದ ಡ್ಯುಯಲ್-ಚಾನೆಲ್ ಎಬಿಎಸ್ ಬೈಕ್ ನಿಯಂತ್ರಿಸಲಿವೆ.

ಟಿವಿಎಸ್ ಅಪಾಚೆ ಆರ್‌ಆರ್310 ರೀಬ್ಯಾಡ್ಜ್ ವರ್ಷನ್ ಬಿಎಂಡಬ್ಲ್ಯು ಜಿ 310 ಆರ್‌ಆರ್ ಬಿಡುಗಡೆ

ಇನ್ನುಳಿದಂತೆ ಹೊಸ ಬೈಕ್ ಮಾದರಿಯಲ್ಲಿ ರೀಬ್ಯಾಡ್ಜ್ ಆವೃತ್ತಿಯಲ್ಲಿರುವಂತೆ ಸ್ಪೋರ್ಟ್ಸ್ ಬೈ-ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌, ರಾಕ್ಡ್ ವಿಂಡ್‌ಸ್ಕ್ರೀನ್, ಗೋಲ್ಡನ್ ಪೇಂಟ್ ಯುಎಸ್‌ಡಿ ಫ್ರಂಟ್ ಫೋರ್ಕ್‌ಗಳು ಮತ್ತು ಎಲ್ಇಡಿ ಟೈಲ್‌ಲೈಟ್‌ ನೀಡಲಾಗಿದೆ.

ಟಿವಿಎಸ್ ಅಪಾಚೆ ಆರ್‌ಆರ್310 ರೀಬ್ಯಾಡ್ಜ್ ವರ್ಷನ್ ಬಿಎಂಡಬ್ಲ್ಯು ಜಿ 310 ಆರ್‌ಆರ್ ಬಿಡುಗಡೆ

ಅಪಾಚೆ ಆರ್‌ಆರ್ 310 ಮತ್ತು ಹೊಸ ಜಿ 310 ಆರ್‌ಆರ್ ನಡುವಿನ ಪ್ರಮುಖ ವ್ಯತ್ಯಾಸವೆಂದರೆ 'ಜರ್ಮನ್' ಬೈಕ್‌ನಲ್ಲಿ ನೀಡಲಾದ ಬಿಎಂಡಬ್ಲ್ಯು ಬ್ಯಾಡ್ಜಿಂಗ್ ಮತ್ತು ಲೈವರಿ ಇದು ದೊಡ್ಡ ಬೀಮರ್ ಸೂಪರ್‌ಸ್ಪೋರ್ಟ್ ಬೈಕ್‌ಗಳಲ್ಲಿ ಕಂಡುಬರುವದನ್ನು ನಿಮಗೆ ನೆನಪಿಸಲಿದ್ದು, ಹೊಸ ಬೈಕಿನಲ್ಲಿ 5 ಇಂಚಿನ ಟಿಎಫ್‌ಟಿ ಡಿಜಿಟಲ್ ಸ್ಕ್ರೀನ್ ನೀಡಲಾಗಿದ್ದರೂ ಸಹ ಬೈಕಿನಲ್ಲಿ ಯಾವುದೇ ಬ್ಲ್ಯೂಟೂತ್ ಕನೆಕ್ಟಿವಿಟಿ ನೀಡಲಾಗಿಲ್ಲ.

ಟಿವಿಎಸ್ ಅಪಾಚೆ ಆರ್‌ಆರ್310 ರೀಬ್ಯಾಡ್ಜ್ ವರ್ಷನ್ ಬಿಎಂಡಬ್ಲ್ಯು ಜಿ 310 ಆರ್‌ಆರ್ ಬಿಡುಗಡೆ

ಹೊಸ ಜಿ 310 ಆರ್‌ಆರ್ ಬೈಕಿನಲ್ಲಿ ರೀಬ್ಯಾಡ್ಜ್ ಮಾದರಿಯಾದ ಅಪಾಚೆ ಆರ್‌ಆರ್ ನಲ್ಲಿರುವ ಪ್ರಮುಖ ಫೀಚರ್ಸ್ ಇಲ್ಲವಾದರೂ ಸಾಮಾನ್ಯ ಮಾದರಿಗಿಂತಲೂ ರೂ. 30 ಸಾವಿರ ಸಾವಿರದಷ್ಟು ದುಬಾರಿಯಾಗಲಿದ್ದು, ಬ್ರಾಂಡ್ ಬ್ಯಾಡ್ಜ್ ಹೊಸ ಬೈಕ್ ಆಯ್ಕೆಯ ಮೌಲ್ಯವನ್ನು ಹೆಚ್ಚಿಸುತ್ತದೆ.

Most Read Articles

Kannada
English summary
Bmw g 310 rr launched in india at 2 85 lakhs
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X