Just In
Don't Miss!
- Sports
ವಿಂಡೀಸ್ ಪ್ರವಾಸದಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ, ಸಂಜು ಸ್ಯಾಮ್ಸನ್ಗೆ ಸಿಗಲಿದೆ ಮತ್ತೊಂದು ಅವಕಾಶ?
- News
ಅಮೃತ್ ನಗರೋತ್ಥಾನ ಯೋಜನೆಯಡಿ ಬೆಂಗಳೂರು ಪೂರ್ವ ವಲಯಕ್ಕೆ 450 ಕೋಟಿ ಮಂಜೂರು
- Movies
ಹಿಂದಿಗೆ ಹೋಗುತ್ತಿದೆ ಏಳು ವರ್ಷ ಹಳೆಯ ಕನ್ನಡ ಸಿನಿಮಾ: ಅಕ್ಷಯ್-ಶಾಹಿದ್ ನಡುವೆ ಪೈಪೋಟಿ!
- Finance
ಸರ್ವೀಸ್ ಚಾರ್ಜ್ ಬಗ್ಗೆ ಗ್ರಾಹಕರು ದೂರು ನೀಡುವುದು ಹೇಗೆ?
- Lifestyle
ಯಾರೂ ಇಲ್ಲದಿದ್ದಾಗ ಪುರುಷ ಈ ರೀತಿ ವಿಲಕ್ಷಣವಾಗಿ ವರ್ತಿಸುತ್ತಾನೆ, ಗೊತ್ತಾ? ಇದನ್ನು ಓದಿದ್ರೆ ನೀವು ಶಾಕ್ ಆಗೋದು ಪಕ್ಕಾ!
- Technology
ಜಬ್ರೋನಿಕ್ಸ್ ಡ್ರಿಪ್ ಸ್ಮಾರ್ಟ್ವಾಚ್ ಬಿಡುಗಡೆ! ಲಾಂಗ್ ಬ್ಯಾಟರಿ ಬ್ಯಾಕ್ಅಪ್ ವಿಶೇಷ!
- Education
Karnataka Second PUC Results 2022 : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರತಿಗಳು ಜು.6ರಿಂದ ಲಭ್ಯ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
BMW Motorrad ನ 2 ಡೀಲರ್‌ಶಿಪ್‌ಗಳನ್ನು ಹೊಂದಿರುವ ಮೊದಲ ನಗರವಾಗಿ ಖ್ಯಾತಿ ಪಡೆದ ಬೆಂಗಳೂರು
ಜರ್ಮನಿ ಮೂಲದ ಮೋಟಾರ್‌ಸೈಕಲ್ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಮೊಟೊರಾಡ್, ಬೆಂಗಳೂರಿನಲ್ಲಿ ತನ್ನ ಎರಡನೇ ಹೊಸ ಶೋ ರೂಂ ಅನ್ನು ತೆರೆದಿದೆ. BMW ಬೆಂಗಳೂರಿನ ತನ್ನ ಎರಡನೇ ಡೀಲರ್ ಪಾಲುದಾರನಾಗಿ JSP ಮೊಟೊರಾಡ್ ಅನ್ನು ನೇಮಿಸಿದೆ. ಜರ್ಮನ್ ಮೋಟಾರ್‌ಸೈಕಲ್ ಬ್ರ್ಯಾಂಡ್‌ಗಾಗಿ ಎರಡು ವಿಭಿನ್ನ ಡೀಲರ್‌ಶಿಪ್ ಅನ್ನು ಹೊಂದಿರುವ ಭಾರತದ ಮೊದಲ ನಗರವಾಗಿ ಬೆಂಗಳೂರು ಖ್ಯಾತಿ ಪಡೆದುಕೊಂಡಿದೆ.

ಹೊಸ JSP Motorrad ಡೀಲರ್‌ಶಿಪ್ ಬೆಂಗಳೂರಿನ ಕೋರಮಂಗಲದಲ್ಲಿದ್ದು, ಡೀಲರ್‌ಶಿಪ್ ಅನ್ನು ಜೆಎಸ್‌ಪಿ ಮೊಟೊರಾಡ್‌ನ ಡೀಲರ್ ಪ್ರಿನ್ಸಿಪಾಲ್ ಸುದರ್ಶನ್ ಪೊನ್‌ರಾಜ್ ನೇತೃತ್ವ ವಹಿಸಿದ್ದಾರೆ. ಬೆಂಗಳೂರಿನ ಮೊದಲ BMW ಮೊಟೊರಾಡ್ ಡೀಲರ್‌ಶಿಪ್ ಆಗಿರುವ ಟಸ್ಕರ್ ಮೊಟೊರಾಡ್ ನಗರದ ಸೆಂಟ್ರಲ್ ಬಳಿಯ ಲ್ಯಾವೆಲ್ಲೆ ರಸ್ತೆಯಲ್ಲಿದೆ.

ಹೊಸ JSP Motorrad ಡೀಲರ್‌ಶಿಪ್ ಶೋರೂಂ, ಒಟ್ಟು 8,300 ಚದರ ಅಡಿ ವಿಸ್ತೀರ್ಣವನ್ನು ಹೊಂದಿದ್ದು, ನಂ. 162, ಕಥಲಿಪಾಳ್ಯ, 80 ಅಡಿ ಮುಖ್ಯ ರಸ್ತೆಯ ಕೋರಮಂಗಲ 4ನೇ ಬ್ಲಾಕ್‌ನಲ್ಲಿ ತೆರೆಯಲಾಗಿದೆ. ಹೊಸ ಶೋರೂಂ ಭಾರತದಲ್ಲಿ BMW ಮೊಟೊರಾಡ್‌ನ ಶ್ರೇಣಿಯಿಂದ 11 ಮೋಟಾರ್‌ಸೈಕಲ್‌ಗಳನ್ನು ಪ್ರದರ್ಶಿಸುತ್ತದೆ.

ಗ್ರಾಹಕರ ರೂಂ, ಕೆಫೆ ಮತ್ತು BMW ಮೊಟೊರಾಡ್ ಪರಿಕರಗಳು ಮತ್ತು ಜೀವನಶೈಲಿಯ ಸರಕುಗಳ ವ್ಯಾಪಕ ಶ್ರೇಣಿಯನ್ನು ಸಹ ಒಳಗೊಂಡಿದೆ. ಹೊಸ JSP ಮೊಟೊರಾಡ್ ಡೀಲರ್‌ಶಿಪ್ 2,000 ಚದರ ಅಡಿಗಳ ಕಾರ್ಯಾಗಾರವನ್ನು 6 ವಿಭಿನ್ನ ಮೆಕ್ಯಾನಿಕಲ್ ಬೇಗಳೊಂದಿಗೆ ಗ್ರಾಹಕರು ಮಾರಾಟದ ನಂತರ ಸಂಪೂರ್ಣ ಸೇವಾ ಅನುಭವವನ್ನು ಪಡೆಯಲು ಡಿಸೈನ್ ಮಾಡಲಾಗಿದೆ.

ಹೊಸ JSP Motorrad ಡೀಲರ್‌ಶಿಪ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ BMW ಗ್ರೂಪ್ ಇಂಡಿಯಾದ ಅಧ್ಯಕ್ಷ ವಿಕ್ರಮ್ ಪವಾಹ್, "BMW Motorrad ಅತ್ಯುತ್ತಮ ಉತ್ಪನ್ನಗಳ ಭರವಸೆಯನ್ನು ನೀಡುತ್ತದೆ, ಜೊತೆಗೆ ಲೈಫ್‌ಟೈಮ್ ಅತ್ಯುತ್ತಮ ಕ್ಷಣಗಳನ್ನು ಸಹ ನೀಡುತ್ತದೆ. ನಮ್ಮ ಅಂತಿಮ ಸವಾರಿ ಮೋಟಾರ್‌ಗಳನ್ನು ಎಲ್ಲರಿಗಾಗಿ ವಿನ್ಯಾಸಗೊಳಿಸಲಾಗಿದೆ.

ಪ್ರೀಮಿಯಂ ವಿಭಾಗದಲ್ಲಿ ದೃಢವಾದ ಡೀಲರ್ ನೆಟ್‌ವರ್ಕ್ ಅನ್ನು ಹೊಂದಿಸಿ, ನಾವು ನಮ್ಮ ಉಪಸ್ಥಿತಿಯನ್ನು ಮತ್ತಷ್ಟು ಕ್ರೋಢೀಕರಿಸುತ್ತಿದ್ದೇವೆ. ನಮ್ಮ ವಿಶ್ವಾಸಾರ್ಹ ಪಾಲುದಾರರಾದ JSP ಮೊಟೊರಾಡ್‌ನೊಂದಿಗೆ ಬೆಂಗಳೂರಿನಲ್ಲಿ ಎರಡನೇ BMW ಮೊಟೊರಾಡ್ ಡೀಲರ್‌ಶಿಪ್ ಅನ್ನು ನೇಮಿಸಲು ನಾವು ರೋಮಾಂಚನಗೊಂಡಿದ್ದೇವೆ. ಹೊಸ ಸೌಲಭ್ಯವು ವೈಯಕ್ತಿಕಗೊಳಿಸಿದ ಭಾವನಾತ್ಮಕ ಮತ್ತು ಪ್ರೀಮಿಯಂ ಅನುಭವವನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

" JSP ಮೊಟೊರಾಡ್‌ನ ಡೀಲರ್ ಪ್ರಿನ್ಸಿಪಾಲ್ ಸುದರ್ಶನ್ ಪೊನ್‌ರಾಜ್ ಅವರು ಮಾತನಾಡಿ, ಹೊಸ BMW ಮೊಟೊರಾಡ್ ಡೀಲರ್‌ಶಿಪ್ ತೆರೆಯುವ ಕುರಿತು ತಮ್ಮ ಐಡಿಯಾಗಳನ್ನು ಹಂಚಿಕೊಂಡರು, "BMW ಮೊಟೊರಾಡ್‌ನೊಂದಿಗಿನ ನಮ್ಮ ದೀರ್ಘಾವಧಿಯ ಸಂಬಂಧದಲ್ಲಿ ನಾವು ಬಹಳ ಹೆಮ್ಮೆಪಡುತ್ತೇವೆ. ನಮ್ಮ ಕಾರ್ಯಾಚರಣೆಯನ್ನು ಬೆಂಗಳೂರಿಗೆ ವಿಸ್ತರಿಸಲು ಥ್ರಿಲ್ ಆಗಿದ್ದೇವೆ.

ಕರ್ನಾಟಕ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಸಾಮರ್ಥ್ಯ, ಭಾರತದ ಮೊದಲ 'ಪಾಯಿಂಟ್ ಆಫ್ ಎಕ್ಸ್‌ಪೀರಿಯನ್ಸ್' ಡೀಲರ್‌ಶಿಪ್ ಅನ್ನು ಬೆಂಗಳೂರಿನಲ್ಲಿ ಪ್ರಾರಂಭಿಸುವುದರಿಂದ ಸವಾರಿ ಉತ್ಸಾಹಿಗಳಿಗೆ ಅಪ್ರತಿಮ ಮಾರಾಟ, ಮಾರಾಟದ ನಂತರದ ಅನುಭವವನ್ನು ನೀಡುತ್ತದೆ. ಇದಲ್ಲದೆ, ನಮ್ಮ ಗಮನವು ಬಲವಾದ ರೈಡಿಂಗ್ ಸಮುದಾಯವನ್ನು ನಿರ್ಮಿಸುವುದು, ಸವಾರಿ ಮಾಡುವ ಪ್ರೀತಿಯನ್ನು ಹೆಚ್ಚಿಸುವುದು, ಅನ್ವೇಷಿಸದ ಸ್ಥಳಗಳನ್ನು ಎಕ್ಸ್‌ಪ್ಲೋರ್ ಮಾಡುವುದು ಎಂದರು."

BMW Motorrad ಪ್ರಸ್ತುತ ಭಾರತದಲ್ಲಿ 22 ಮೋಟಾರ್‌ಸೈಕಲ್‌ಗಳು ಮತ್ತು 1 ಸ್ಕೂಟರ್ ಅನ್ನು ಮಾರಾಟ ಮಾಡುತ್ತಿದೆ. ಅದರಲ್ಲಿ ಕೇವಲ 2 - G 310 R ಮತ್ತು G 310 GS - ಭಾರತದಲ್ಲಿ ತಯಾರಾಗುತ್ತದೆ. ಇತರ 20 ಮೋಟಾರ್‌ಸೈಕಲ್‌ಗಳು ಮತ್ತು C 400 GT ಸ್ಕೂಟರ್ ಅನ್ನು ಭಾರತಕ್ಕೆ ಸಂಪೂರ್ಣವಾಗಿ ನಿರ್ಮಿಸಿದ ಘಟಕಗಳಾಗಿ (CBUs) ಆಮದು ಮಾಡಿಕೊಳ್ಳಲಾಗತ್ತದೆ.

G 310 R ಮತ್ತು G 310 GS ಎರಡನ್ನೂ ಸ್ಥಳೀಯವಾಗಿ BMW Motorrad ನ ಪಾಲುದಾರ TVS ಮೋಟಾರ್ ಕಂಪನಿಯ ಉತ್ಪಾದನಾ ಸೌಲಭ್ಯದಲ್ಲಿ ಉತ್ಪಾದಿಸಲಾಗುತ್ತದೆ. ಟಿವಿಎಸ್ ತನ್ನ ಅಪಾಚೆ RR310 ಫ್ಲ್ಯಾಗ್‌ಶಿಪ್ ಮೋಟಾರ್‌ಸೈಕಲ್‌ಗಾಗಿ ಎರಡು G 310 ಸರಣಿಯ ಬೈಕುಗಳ ಯಾಂತ್ರಿಕ ಭಾಗಗಳನ್ನು ಬಳಸುತ್ತಿದೆ.

ಎಲ್ಲಾ ಮೂರು ಬೈಕ್‌ಗಳು 34bhp ಮತ್ತು 28Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ 313cc ಎಂಜಿನ್ ಅನ್ನು ಬಳಸುತ್ತವೆ. ಕೋರಮಂಗಲದಲ್ಲಿರುವ ಹೊಸ BMW Motorrad ಡೀಲರ್‌ಶಿಪ್ ದಕ್ಷಿಣ ಬೆಂಗಳೂರಿನಲ್ಲಿ ಜರ್ಮನ್ ಮಾರ್ಕ್‌ನ ಮೋಟಾರ್‌ಸೈಕಲ್‌ಗಳು ಮತ್ತು ಸ್ಕೂಟರ್‌ಗಳ ಅಭಿಮಾನಿಗಳು ಮತ್ತು ಸಂಭಾವ್ಯ ಖರೀದಿದಾರರಿಗೆ ಸೇವೆಯನ್ನು ನೀಡುತ್ತದೆ.

ಬೆಂಗಳೂರಿನಲ್ಲಿ ಎರಡನೇ BMW Motorrad ಡೀಲರ್‌ಶಿಪ್‌ನ ತೆರೆದಿರುವುದು BMW ಮತ್ತು ಇತರ ಕಾರ್ಯಕ್ಷಮತೆಯ ಬ್ರ್ಯಾಂಡ್‌ಗಳಿಗೆ ಭಾರತದ ಟೆಕ್ ರಾಜಧಾನಿ ಮತ್ತು ಕರ್ನಾಟಕ ರಾಜ್ಯದಲ್ಲಿ ಹೆಚ್ಚುತ್ತಿರುವ ಉತ್ಸಾಹವನ್ನು ನಿದರ್ಶನವಾಗಿದೆ. ಬೆಂಗಳೂರಿನಲ್ಲಿ BMW ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ. ಮುಂದಿನ ದಿನಗಳಲ್ಲಿ ಕರ್ನಾಟಕದ ಇತರ ನಗರಗಳಲ್ಲೂ BMW ಶೋ ರೂಂಗಳು ತೆರೆಯುವ ಸಾಧ್ಯತೆಗಳಿವೆ.