ಭಾರತದಲ್ಲಿ ಪ್ರೀಮಿಯಂ ಮ್ಯಾಕ್ಸಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಬಿಎಂಡಬ್ಲ್ಯು

ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಜಾಗತಿಕ ಮಾರುಕಟ್ಟೆಗಳಲ್ಲಿ ತನ್ನ ದ್ವಿಚಕ್ರಗಳ ವಾಹನ ಮಾರಾಟವನ್ನು ವಿಸ್ತರಿಸುತ್ತಿದ್ದು, ಕಂಪನಿಯು ಭಾರತದಲ್ಲೂ ಮುಂದಿನ ಕೆಲ ವರ್ಷಗಳ ಹಲವಾರು ಹೊಸ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಭಾರತದಲ್ಲಿ ಪ್ರೀಮಿಯಂ ಮ್ಯಾಕ್ಸಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಬಿಎಂಡಬ್ಲ್ಯು

ಭಾರತದಲ್ಲಿ ಇತ್ತೀಚೆಗೆ ಟಿವಿಎಸ್ ಮೋಟಾರ್ ಜೊತೆಗಿನ ಸಹಭಾಗಿತ್ವ ಯೋಜನೆಯಡಿ ಜಿ 310 ಆರ್‌ಆರ್ ಬೈಕ್ ಬಿಡುಗಡೆ ಮಾಡಿರುವ ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಹೊಸ ಪ್ಲ್ಯಾಟ್‌ಫಾರ್ಮ್ ಇನ್ನು ಹಲವು ಹೊಸ ಮಾದರಿಗಳನ್ನು ನಿರ್ಮಿಸುತ್ತಿದ್ದು, ಹೊಸ ಯೋಜನೆ ಅಡಿಯಲ್ಲಿ ಕಂಪನಿಯು ತನ್ನ ಬಹುನೀರಿಕ್ಷಿತ ಸಿಇ 04 ಮ್ಯಾಕ್ಸಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುವ ಸುಳಿವು ನೀಡಿದೆ.

ಭಾರತದಲ್ಲಿ ಪ್ರೀಮಿಯಂ ಮ್ಯಾಕ್ಸಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಬಿಎಂಡಬ್ಲ್ಯು

ಹೊಸ ಬೈಕ್ ಬಿಡುಗಡೆಯ ವೇಳೆ ಭವಿಷ್ಯ ವಾಹನಗಳ ಕುರಿತಾಗಿ ಮಾಹಿತಿ ಹಂಚಿಕೊಂಡಿರುವ ಬಿಎಂಡಬ್ಲ್ಯು ಮೋಟೊರಾಡ್ ಇಂಡಿಯಾ ಕಂಪನಿಯ ಮುಖ್ಯಸ್ಥರು ಇವಿ ಸ್ಕೂಟರ್ ಬಿಡುಗಡೆಯ ಕುರಿತಾಗಿ ಸುಳಿವು ನೀಡಿದ್ದಾರೆ.

ಭಾರತದಲ್ಲಿ ಪ್ರೀಮಿಯಂ ಮ್ಯಾಕ್ಸಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಬಿಎಂಡಬ್ಲ್ಯು

ಆದರೆ ಹೊಸ ಇವಿ ಸ್ಕೂಟರ್ ಬಿಡುಗಡೆಯ ಅವಧಿಯ ಕುರಿತಾಗಿ ಮಾಹಿತಿ ನೀಡಲು ನಿರಾಕರಿಸಿದ್ದು, ಮುಂದಿನ ಕೆಲವು ದಿನಗಳಲ್ಲಿ ನೀರಿಕ್ಷೆ ಮಾಡಬಹುದಾಗಿ ಮಾತ್ರ ಮಾಹಿತಿ ಹಂಚಿಕೊಂಡಿದ್ದಾರೆ. ಹೊಸ ಸಿಇ04 ಇವಿ ಸ್ಕೂಟರ್ ಮಾದರಿಯು ಸದ್ಯ ಯುರೋಪಿನ ಆಯ್ದ ಮಾರುಕಟ್ಟೆಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು, ಇದು ಮುಂದಿನ ಎರಡು ವರ್ಷಗಳಲ್ಲಿ ಪ್ರಮುಖ ಅಂತರ್‌ರಾಷ್ಟ್ರೀಯ ಮಾರುಕಟ್ಟೆಗಳನ್ನು ಪ್ರವೇಶಿಸಲಿದೆ.

ಭಾರತದಲ್ಲಿ ಪ್ರೀಮಿಯಂ ಮ್ಯಾಕ್ಸಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಬಿಎಂಡಬ್ಲ್ಯು

ವಿಭಿನ್ನವಾದ ವಿನ್ಯಾಸ, ಅತಿ ಉದ್ದದ ವ್ಹೀಲ್‌ಬೆಸ್, ಕಡಿಮೆ ಗ್ರೌಂಡ್ ಕ್ಲಿಯೆರೆನ್ಸ್ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿರುವ ಸಿಇ 04 ಇವಿ ಸ್ಕೂಟರ್ ಮಾದರಿಯು ಮ್ಯಾಕ್ಸಿ ಸ್ಕೂಟರ್ ವಿಭಾಗದಲ್ಲಿ ಮಾರಾಟಗೊಳ್ಳುತ್ತಿದ್ದು, ಹೊಸ ಸ್ಕೂಟರ್ ಭಾರತದಲ್ಲೂ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಭಾರತದಲ್ಲಿ ಪ್ರೀಮಿಯಂ ಮ್ಯಾಕ್ಸಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಬಿಎಂಡಬ್ಲ್ಯು

ಭಾರತದಲ್ಲಿ ಈಗಾಗಲೇ ರೂ. 12 ಲಕ್ಷ ಬೆಲೆ ಅಂತರದಲ್ಲಿ ಸಿ400 ಜಿಟಿ ಸ್ಕೂಟರ್ ಮಾರಾಟ ಮಾಡುತ್ತಿರುವ ಬಿಎಂಡಬ್ಲ್ಯು ಕಂಪನಿಯು ಹೊಸ ಇವಿ ಸ್ಕೂಟರ್ ಮಾದರಿಯಿಂದಲೂ ಉತ್ತಮ ಬೇಡಿಕೆಯ ನೀರಿಕ್ಷೆಯಲ್ಲಿದ್ದು, ಹೊಸ ಇವಿ ಸ್ಕೂಟರ್ ಮಾದರಿಯು ಸಾಮಾನ್ಯ ಇವಿ ಸ್ಕೂಟರ್ ಮಾದರಿಗಳಿಂತಲೂ ಸಾಕಷ್ಟು ಬೆಲೆ ವ್ಯತ್ಯಾಸ ಹೊಂದಿರಲಿದೆ.

ಭಾರತದಲ್ಲಿ ಪ್ರೀಮಿಯಂ ಮ್ಯಾಕ್ಸಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಬಿಎಂಡಬ್ಲ್ಯು

ಬಿಎಂಡಬ್ಲ್ಯು ಕಂಪನಿಯು ಸದ್ಯ ಹೊಸ ಸಿಇ 04 ಮ್ಯಾಕ್ಸಿ ಇವಿ ಸ್ಕೂಟರ್ ಮಾದರಿಯನ್ನು ಸಿಬಿಯು ಆಮದು ನೀತಿ ಅಡಿ ಮಾರಾಟ ಮಾಡುವ ಯೋಜನೆ ಹೊಂದಿದ್ದು, ಗ್ರಾಹಕರ ಬೇಡಿಕೆ ಆಧರಿಸಿ ಭಾರತದಲ್ಲಿಯೇ ನಿರ್ಮಾಣ ಮಾಡಬಹುದಾಗಿದೆ.

ಭಾರತದಲ್ಲಿ ಪ್ರೀಮಿಯಂ ಮ್ಯಾಕ್ಸಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಬಿಎಂಡಬ್ಲ್ಯು

ಹೊಸ ಬೈಕ್ ಮಾದರಿಗಳಿಗಾಗಿ ಸದ್ಯ ಟಿವಿಎಸ್ ಬೈಕ್ ಉತ್ಪಾದನಾ ಘಟಕದಲ್ಲಿಯೇ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ತೆರೆದಿರುವ ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಮುಂಬರುವ ವರ್ಷಗಳಲ್ಲಿ ಭಾರತದಲ್ಲಿಯೇ ನಿರ್ಮಾಣ ಮಾಡುವ ಯೋಜನೆಯಲ್ಲಿದ್ದು, ಹೊಸ ಇವಿ ಸ್ಕೂಟರ್ ಮಾದರಿಯು ದೇಶಿಯ ಮಾರುಕಟ್ಟೆಯಲ್ಲಿ ಗ್ರಾಹಕರ ಆಕರ್ಷಿಸಲಿದೆ.

ಭಾರತದಲ್ಲಿ ಪ್ರೀಮಿಯಂ ಮ್ಯಾಕ್ಸಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಬಿಎಂಡಬ್ಲ್ಯು

ಸಿಇ 04 ಮ್ಯಾಕ್ಸಿ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಟ್ಯೂಬಲರ್ ಸ್ಟೀಲ್ ಫ್ರೇಮ್ ಅನ್ನು ಆಧರಿಸಿದ್ದು, ಇಕೋ, ರೋಡ್ ಮತ್ತು ರೈನ್ ಎಂಬ ಸ್ಟ್ಯಾಂಡರ್ಡ್ ರೈಡಿಂಗ್ ಮೋಡ್‌ಗಳೊಂದಿಗೆ ಡೈನಾಮಿಕ್ ಮತ್ತು ಡೈನಾಮಿಕ್ ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಹೊಂದಿದೆ.

ಭಾರತದಲ್ಲಿ ಪ್ರೀಮಿಯಂ ಮ್ಯಾಕ್ಸಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಬಿಎಂಡಬ್ಲ್ಯು

ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಪರ್ಮೆನೆಂಟ್ ಮ್ಯಾಗ್ನೆಟ್ ಮೋಟಾರ್ ಜೊತೆ 8.9 kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಇದನ್ನು ಬ್ಯಾಟರಿ ಮತ್ತು ಹಿಂದಿನ ಚಕ್ರದ ನಡುವೆ ಸ್ಟೀಲ್ ಫ್ರೇಮ್ ನಲ್ಲಿ ಜೋಡಿಸಲಾಗಿದೆ. ಇದು 42 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸಲಿದ್ದು, 2.3 ಕಿ.ವ್ಯಾಟ್ ಚಾರ್ಜರ್ ಮೂಲಕ 4 ಗಂಟೆ 20 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು.

ಭಾರತದಲ್ಲಿ ಪ್ರೀಮಿಯಂ ಮ್ಯಾಕ್ಸಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಬಿಎಂಡಬ್ಲ್ಯು

ಹೊಸ ಬ್ಯಾಟರಿ ಪ್ಯಾಕ್ ಬಿಎಂಡಬ್ಲ್ಯು ಮಾದರಿ ಐಎಕ್ಸ್ ಎಲೆಕ್ಟ್ರಿಕ್ ಎಸ್‌ಯುವಿಯಲ್ಲಿ ಕಂಡುಬರುವ 11 ಮಾಡ್ಯೂಲ್‌ಗಳಲ್ಲಿ ಒಂದಾಗಿದ್ದು, ಹೊಸ EV ಘಟಕಗಳನ್ನು ವಿನ್ಯಾಸಗೊಳಿಸುವ ಬದಲು ಬಿಎಂಡಬ್ಲ್ಯು ಕಂಪನಿಯ ಬಳಕೆಯಾದ ಬ್ಯಾಟರಿ ಪ್ಯಾಕ್‌ಗಳನ್ನು ಮರುಬಳಕೆ ಮಾಡುವ ಸೌಲಭ್ಯವನ್ನು ಹೊಂದಿದೆ.

ಭಾರತದಲ್ಲಿ ಪ್ರೀಮಿಯಂ ಮ್ಯಾಕ್ಸಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಬಿಎಂಡಬ್ಲ್ಯು

ಬೆಲ್ಟ್-ಡ್ರೈವ್ ಸಿಸ್ಟಂ ಜೊತೆಗೆ ಸಿಂಗಲ್ ಡಿಸ್ಕ್ ಸೆಟಪ್ ಹೊಂದಿದ್ದು, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳು ಮತ್ತು ಪಿನ್-ಆಫ್-ಸೆಟ್ ಮೊನೊ-ಶಾಕ್ ಅನ್ನು ಸಿಂಗಲ್-ಸೈಡೆಡ್ ಸ್ವಿಂಗಾರ್ಮ್‌ನಲ್ಲಿ ಅಳವಡಿಸಲಾಗಿದೆ. ಇದರಲ್ಲಿ ಡ್ಯುಯಲ್-ಡಿಸ್ಕ್ ಸೆಟಪ್, ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡ್ಯುಯಲ್-ಚಾನೆಲ್ ಎಬಿಎಸ್ ಅಳವಡಿಸಲಾಗಿದೆ.

ಭಾರತದಲ್ಲಿ ಪ್ರೀಮಿಯಂ ಮ್ಯಾಕ್ಸಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಬಿಎಂಡಬ್ಲ್ಯು

ಬಿಎಂಡಬ್ಲ್ಯು ಕಾರುಗಳಲ್ಲಿ ನೋಡುವಂತೆ ಹೊಸ ಸ್ಕೂಟರ್‌ನಲ್ಲಿ 10.25 ಇಂಚಿನ ಸಮತಲವಾದ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಪರದೆ ನೀಡಲಾಗಿದ್ದು,ಇದರ ಹೊರತಾಗಿ ಹೊಸ ಸ್ಕೂಟರ್‌ನಲ್ಲಿ ಮೋಜಿನ ಸಂಗತಿಗಳನ್ನು ನೋಡಬಹುದಾಗಿದೆ.

ಭಾರತದಲ್ಲಿ ಪ್ರೀಮಿಯಂ ಮ್ಯಾಕ್ಸಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಬಿಎಂಡಬ್ಲ್ಯು

ಮಾಹಿತಿಗಳ ಪ್ರಕಾರ ಇದು ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 130ಕಿ.ಮೀ ಮೈಲೇಜ್ ನೀಡಬಹುದಾಗಿದ್ದು, ಇದು ಭಾರತದಲ್ಲಿ ಆಮದು ನೀತಿಯಡಿ ಮಾರಾಟಗೊಂಡರೆ ಎಕ್ಸ್‌ಶೋರೂಂ ಪ್ರಕಾರ ರೂ. 14 ಲಕ್ಷದಿಂದ ರೂ. 18 ಲಕ್ಷ ಬೆಲೆ ಪಡೆದುಕೊಳ್ಳಬಹುದು.

ಭಾರತದಲ್ಲಿ ಪ್ರೀಮಿಯಂ ಮ್ಯಾಕ್ಸಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಿದ್ದವಾದ ಬಿಎಂಡಬ್ಲ್ಯು

ನೀವು ಹೊಸ ಸ್ಕೂಟರ್ ಸ್ಕೂಟರಿನ ದುಬಾರಿ ಬೆಲೆ ನೋಡಿ ಇದನ್ನು ಖರೀದಿಸುವ ಬದಲು ಟಾಟಾ ಮೋಟಾರ್ಸ್ ನಿರ್ಮಾಣದ ಹೊಸ ನೆಕ್ಸಾನ್ ಇವಿ ಮ್ಯಾಕ್ಸ್ ಮಾದರಿಯನ್ನೇ ಖರೀದಿ ಮಾಡಬಹುದು ಎಂದು ಯೋಚಿಸಿದರೂ ಬಿಎಂಡಬ್ಲ್ಯು ಉತ್ಪನ್ನಗಳು ಐಷಾರಾಮಿ ಜೀವನದ ಭಾಗವಾಗಿರುವುದರಿಂದ ಅವುಗಳು ಭಾರತದಲ್ಲಿ ದುಬಾರಿ ಬೆಲೆ ನಡುವೆಯೂ ಒಂದು ನಿಗದಿತ ಮಟ್ಟದ ಬೇಡಿಕೆಯ ಗುರಿತಲುವ ನೀರಿಕ್ಷೆಯಿದೆ.

Most Read Articles

Kannada
English summary
Bmw motorrad to launch electric scooter in india details
Story first published: Monday, July 18, 2022, 20:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X