Just In
Don't Miss!
- News
ಪಲ್ಲವಿ ಡೇ ಬಳಿಕ ಮತ್ತೊಬ್ಬ ಯುವ ರೂಪದರ್ಶಿ ಆತ್ಮಹತ್ಯೆ
- Sports
ಮಹಿಳಾ ಟಿ20 ಚಾಲೆಂಜ್: ವೆಲಾಸಿಟಿ ವಿರುದ್ಧ ಗೆದ್ದ ಟ್ರೈಲ್ಬ್ಲೇಜರ್ಸ್, ಆದ್ರೂ ಫೈನಲ್ ಮಿಸ್
- Finance
ಮೇ 26ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
ಬಾಲಕೃಷ್ಣ 107ನೇ ಸಿನಿಮಾದ ಟೈಟಲ್ 'ಜೈ ಬಾಲಯ್ಯ'
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ಫೋನ್ ಬಿಡುಗಡೆ! ವಿಶೇಷತೆ ಏನು?
- Lifestyle
ಕಿಚನ್ ಟಿಪ್ಸ್: ಫ್ರಿಡ್ಜ್ನಲ್ಲಿ ಆಹಾರಗಳನ್ನು ಹೀಗೆ ಇಟ್ಟರೆ ಆರೋಗ್ಯಕ್ಕೆ ಕುತ್ತು ಎಚ್ಚರ..!
- Education
Karnataka SSLC Revaluation 2022 : ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅನಾವರಣವಾಯ್ತು ಡುಕಾಟಿಯ ಮೊದಲ ಎಲೆಕ್ಟ್ರಿಕ್ ಸೂಪರ್ ಸ್ಪೋರ್ಟ್ಸ್ ಬೈಕ್
ಸ್ಟೋರ್ಟ್ಸ್ ಬೈಕ್‌ಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಇಟಲಿ ಮೂಲದ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಡುಕಾಟಿ ತನ್ನ ಮೊದಲ ಎಲೆಕ್ಟ್ರಿಕ್ ಸೂಪರ್ ಬೈಕ್ ಅನ್ನು ಅನಾವರಣಗೊಳಿಸಿದೆ. ಕಂಪನಿಯು V21L ಎಂಬ ಸೂಪರ್ ಎಲೆಕ್ಟ್ರಿಕ್ ಬೈಕನ್ನು ಕಳೆದ ಕೆಲವು ತಿಂಗಳುಗಳಿಂದ ಅಭಿವೃದ್ಧಿಪಡಿಸುತ್ತಿದ್ದು, ಇದೀಗ ಈ ಬೈಕ್ ರಸ್ತೆಯಲ್ಲಿ ಸಂಚಿರಿಸುವ ವಿಡಿಯೋವನ್ನು ಡುಕಾಟಿ ಬಿಡುಗಡೆ ಮಾಡಿದೆ.

ಈ ಬೈಕ್ ಅನ್ನು ಮೋಟೋ ಇ ಎಂದು ಕರೆಯಲಾಗುತ್ತದೆ. ಈ ಎಲೆಕ್ಟ್ರಿಕ್ ಬೈಕ್ ಕುರಿತು ಡುಕಾಟಿ ವಿವಿಧ ಅಧ್ಯಯನಗಳನ್ನು ನಡೆಸಿ, ಅದರ ಆಧಾರದ ಮೇಲೆ ಬೈಕ್‌ನ ಪೂರ್ಣ ವೇಗದ ಸಾಮರ್ಥ್ಯ, ಚಾಲನಾ ಅನುಭವ ಮತ್ತು ತಾಂತ್ರಿಕ ವೈಶಿಷ್ಟ್ಯಗಳನ್ನು ಇತ್ತೀಚೆಗೆ ಪರೀಕ್ಷಿಸಲಾಯಿತು.

ಆ ವೇಳೆ ತೆಗೆದ ವಿಡಿಯೋ ಇದೀಗ ಬಿಡುಗಡೆಯಾಗಿದೆ. ಇದನ್ನು ಕಂಪನಿಯು ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಪೇಜ್ ಮೂಲಕ ಬಿಡುಗಡೆ ಮಾಡಿದೆ. ಮೋಟೋ-ಇ ಅನ್ನು ಮಾಜಿ ವಿಶ್ವ ಚಾಂಪಿಯನ್‌ಶಿಪ್ ರೈಡರ್ ಅಲೆಕ್ಸ್ ಡಿ ಏಂಜಲೀಸ್ ಅವರಿಂದ ಪರೀಕ್ಷಿಸಲಾಯಿತು. ಈ ವೇಳೆ ಅವರು ಬೈಕ್‌ನ ಕಾರ್ಯಕ್ಷಮತೆ, ದಕ್ಷತೆ ಕುರಿತು ಕಂಪನಿಯ ಎಂಜಿನಿಯರ್‌ಗಳಿಗೆ ಮಾಹಿತಿ ನೀಡಿದರು.

ಡುಕಾಟಿ ಅಭಿಮಾನಿಗಳು ಇ-ಸ್ಪೋರ್ಟ್ಸ್ ಬೈಕ್ ವಿಡಿಯೋ ನೋಡಿ ಫಿದಾ ಆಗಿದ್ದಾರೆ. ಸಾಂಪ್ರದಾಯಿಕ ಪೆಟ್ರೋಲ್ ಚಾಲಿತ ಸ್ಪೋರ್ಟ್ಸ್ ಬೈಕ್‌ನಂತೆ ಕಾಣುತ್ತಿದ್ದು, ಮಾರುಕಟ್ಟೆಯಲ್ಲಿ ಯಾವಾಗ ಲಭ್ಯವಾಗಲಿದೆ ಎಂದು ಕಮೆಂಟ್ ಮೂಲಕ ಪ್ರಶ್ನಿಸುತ್ತಿದ್ದಾರೆ. ಮುಂದಿನ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲು ಡುಕಾಟಿ ಈ ಬೈಕ್‌ಗಾಗಿ ತಯಾರಿ ನಡೆಸುತ್ತಿದೆ. ವರದಿಗಳ ಪ್ರಕಾರ 2023ರ ಅಂತ್ಯದ ವೇಳೆಗೆ ಡುಕಾಟಿ ಬೈಕ್ ಉತ್ಪಾದನೆಯನ್ನು ಪ್ರಾರಂಭಿಸಲಿದೆ.

ಈ ಬೈಕ್‌ನ ಒಂದು ಸುತ್ತಿನ ಪರೀಕ್ಷೆಯ ಬಳಿಕ ಬೈಕಿನ ಗುಣಮಟ್ಟವನ್ನು ಇನ್ನಷ್ಟು ಸುಧಾರಿಸಲು ಪ್ರಯೋಗಗಳನ್ನು ಸಹ ನಡೆಸಲಾಗುತ್ತಿದೆ. ಏಕೆಂದರೆ ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಡುಕಾಟಿ, ಸ್ಪೋರ್ಟ್ಸ್ ಬೈಕ್ ವಲಯದಲ್ಲಿ ತನ್ನದೇ ಹೆಸರು ಮಾಡಿರುವ ಕಾರಣ ಬೈಕ್‌ನ ಪರ್ಫಾಮೆನ್ಸ್‌ನಲ್ಲಿ ಹಿಂದೆ ಸರಿಯುವುದಿಲ್ಲ. ಹಾಗಾಗಿ ಈ ಬೈಕ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಜಗತ್ತಿನಲ್ಲಿ ದೊಡ್ಡ ಕ್ರಾಂತಿಯನ್ನು ತರಲಿದೆ ಎಂದು ನಿರೀಕ್ಷಿಸಲಾಗಿದೆ.

ಭಾರತಕ್ಕೆ ಈ ಎಲೆಕ್ಟ್ರಿಕ್ ಬೈಕ್ ಆಗಮನದ ವಿವರಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಹೊಸ ಮಾದರಿಗಳನ್ನು ಭಾರತಕ್ಕೆ ಕರೆತರಲು ಡುಕಾಟಿ ಯಾವುದೇ ಹಿಂಜರಿಕೆ ತೋರುವುದಿಲ್ಲ. ಏಕೆಂದ್ರೆ ಡುಕಾಟಿ ಮಾದರಿಗಳಿಗೆ ಭಾರತದಲ್ಲಿ ಉತ್ತಮ ಬೆಡಿಕೆ ಇದೆ. ಡುಕಾಟಿ ಇತ್ತೀಚೆಗೆ ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ 21 ಲಕ್ಷ ರೂಪಾಯಿ ಮೌಲ್ಯದ ಹೊಸ Panigale V2 ಬೈಕ್ ಅನ್ನು ಬಿಡುಗಡೆ ಮಾಡಿದೆ.

ಇದರ ಎಕ್ಸ್ ಶೋ ರೂಂ ಬೆಲೆ ರೂ. 21.30 ಲಕ್ಷ ಇದ್ದು, ಇದರ ಸಾಮಾನ್ಯ ಮಾದರಿಯ ಬೆಲೆ ರೂ. 17.49 ಲಕ್ಷದ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಇನ್ನು ಇದರ ಅಪ್ಡೇಟೆಡ್ ಮಾದರಿಯಾದ ವಿ2 ಬೇಲಿಸ್ ಇದಕ್ಕಿಂತ ಹೆಚ್ಚಿನ ವಿಶೇಷತೆಗಳೊಂದಿಗೆ ಬಿಡುಗಡೆಯಾಗಿದೆ. ದೇಶದಲ್ಲಿ ಡುಕಾಟಿ ಅಭಿಮಾನಿಗಳಿಂದ ಈ ಮಾದರಿಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ.

ಈ ಮಾದರಿಯಲ್ಲಿರುವ 21 ನೇ ಸಂಖ್ಯೆ (ಟ್ರಾಯ್ ಬೇಲಿಸ್ನ ರೇಸ್ ಸಂಖ್ಯೆ), ಶೆಲ್ ಲೋಗೊ ಮತ್ತು ಫ್ಯೂಯಲ್ ಟ್ಯಾಂಕ್‌ನಲ್ಲಿ ಟ್ರಾಯ್‌ನ ಆಟೋಗ್ರಾಫ್ ಅನ್ನು ಸಹ ಒಳಗೊಂಡಿದೆ. ಪ್ರತಿ ಸೀಮಿತ ಆವೃತ್ತಿಯ ಬೈಕ್ ಅದರ ಉತ್ಪಾದನಾ ಸರಣಿ ಸಂಖ್ಯೆಯನ್ನು ಸಹ ಹೊಂದಿದೆ. ಅಲ್ಲದೇ ಹಸಿರು ಮತ್ತು ಬಿಳಿ ಗ್ರಾಫಿಕ್ಸ್ ನ ವಿಶೇಷ ರೂಪಗಳಲ್ಲಿ ಕಾಣಿಸಿಕೊಂಡಿದೆ.

ಈ ಬೈಕ್ ಪ್ರೊಜೆಕ್ಟರ್ ಮಾದರಿಯ LED ಹೆಡ್‌ಲೈಟ್‌ಗಳು, LED ಟೈಲ್‌ಲೈಟ್‌ಗಳು, 4.3-ಇಂಚಿನ ಬಣ್ಣದ TFT ಪರದೆ, ಕಾರ್ಬನ್ ಫೈಬರ್ ಮತ್ತು ಟೈಟಾನಿಯಂ ಎಕ್ಸಾಸ್ಟ್ ಕವರ್ ಮತ್ತು ಕ್ವಿಕ್ ಶಿಫ್ಟರ್ ಅನ್ನು ಸಹ ಒಳಗೊಂಡಿದೆ. ಇನ್ನು ಲುಕ್‌ನಲ್ಲಿ ಅತ್ಯಾಧುಕಿನ ಡಿಸೈನ್ ಹಾಗೂ ಆಕರ್ಷಕವಾಗಿ ಕಾಣುತ್ತದೆ.

ಈ ಬೈಕ್‌ನಲ್ಲಿ ರೇಸ್, ಸ್ಪೋರ್ಟ್ ಮತ್ತು ಸ್ಟ್ರೀಟ್ ಎಂಬ ಮೂರು ವಿಧದ ರೈಡಿಂಗ್ ಮೋಡ್‌ಗಳನ್ನು ನೀಡಲಾಗಿದೆ. ಡುಕಾಟಿ 955 ಸಿಸಿ ಲಿಕ್ವಿಡ್ ಕೂಲ್ಡ್, ಟ್ವಿನ್ ಸಿಲಿಂಡರ್ ಅನ್ನು ಬಳಸಲಾಗಿದೆ. ಈ ಮೋಟಾರ್ ಗರಿಷ್ಠ 152.9 bhp ಪವರ್ ಮತ್ತು 104 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. 6 ಸ್ಪೀಡ್ ಗೇರ್ ಬಾಕ್ಸ್ ಅನ್ನು ಬೈಕ್‌ನಲ್ಲಿ ಬಳಸಲಾಗಿದೆ.