Just In
Don't Miss!
- News
Breaking; ತೈಲ ಕೊರತೆ, ಶ್ರೀಲಂಕಾದಲ್ಲಿ ವಾಹನ ಸಂಚಾರಕ್ಕೆ ಹೊಸ ನಿಯಮ
- Movies
ಕೌಟುಂಬಿಕ ಸಮಸ್ಯೆ ಬದಿಗೊತ್ತಿ 'ಮಾವು-ಬೇವು' ಕಥೆ ಹೇಳಲು ಹೊರಟ ಸುಚೇಂದ್ರ ಪ್ರಸಾದ್!
- Sports
ಕಿವೀಸ್ ವಿರುದ್ಧ ಮತ್ತೊಂದು ಭರ್ಜರಿ ಜಯ ಸಾಧಿಸಿದ ಇಂಗ್ಲೆಂಡ್: ನ್ಯೂಜಿಲೆಂಡ್ಗೆ ವೈಟ್ವಾಶ್ ಮುಖಭಂಗ
- Lifestyle
ನಿಮ್ಮಿಬ್ಬರ ಸಂಬಂಧ ಹೀಗಿದ್ದರೆ ಒಟ್ಟಿಗಿದ್ದು ಪಡುವ ನರಕಕ್ಕಿಂತ ಗುಡ್ಬೈ ಹೇಳುವುದೇ ಬೆಸ್ಟ್!
- Finance
ಜೂ.27ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Education
UAS Dharwad Recruitment 2022 : ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ಜು.2ಕ್ಕೆ ನೇರ ಸಂದರ್ಶನ
- Technology
‘ಫಾಸ್ಟ್ಯಾಗ್' ನಲ್ಲಿರುವ ಹಣವನ್ನು ಕದಿಯಬಹುದಾ? ವೈರಲ್ ವೀಡಿಯೊದ ಅಸಲಿಯತೆ ಏನು?
- Travel
ನಾಡ ಹಬ್ಬ ಮೈಸೂರು ದಸರಾ - ನವರಾತ್ರಿ ಉತ್ಸವ 2022
ಇ-ಬೈಕ್‌ಗಳಿಗೆ ಸಂಪೂರ್ಣ ಭಿನ್ನವಾದ ಇ-ರಾಕಿಟ್ ಲಿಮಿಟೆಡ್ ಎಡಿಷನ್ 100 ಬಿಡುಗಡೆ
ಜರ್ಮನ್ ಮೂಲದ ಉದಯೋನ್ಮುಖ ಎಲೆಕ್ಟ್ರಿಕ್ ಕಂಪನಿಯಾದ ಇ-ರಾಕಿಟ್ ತನ್ನ ಲಿಮಿಟೆಡ್ ಎಡಿಷನ್ 100 (ಸ್ಮಾರ್ಟ್ ಎನರ್ಜಿ 100) ಎಂಬ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡಿದೆ. ಮೊದಲ ಹಂತದಲ್ಲಿ, ಈ ವಾಹನವನ್ನು ಯುರೋಪಿಯನ್ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ತರಲಾಗಿದೆ.

ಪ್ರತಿದಿನ ಏರಿಕೆಯಾಗುತ್ತಿರುವ ತೈಲ ಬೆಲೆಯಿಂದ ಜನರು ಎಲೆಕ್ಟ್ರಿಕ್ ವಾಹನಗಳತ್ತ ಆಸಕ್ತಿ ತೋರುತ್ತಿದ್ದಾರೆ. ಹಾಗಾಗಿ ನಿತ್ಯ ವಿಶ್ವದ ಯಾವುದೋ ಒಂದು ಮೂಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಾಂಪ್ರದಾಯಿಕ ಪೆಟ್ರೋಲ್ ಚಾಲಿತ ವಾಹನಗಳಿಗೆ ಎಲೆಕ್ಟಿಕ್ ವಾಹನಗಳು ಪೈಪೋಟಿ ನೀಡಿದರು ಅದರಲ್ಲಿ ಆಶ್ಚರ್ಯವಿಲ್ಲ.

ಇದೀಗ ಯುರೋಪಿಯನ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಇ-ರಾಕಿಟ್ ಲಿಮಿಟೆಡ್ ಎಡಿಷನ್ 100 ಇ-ಬೈಕ್ ಹೆಚ್ಚು ಬೇಡಿಕೆಯನ್ನು ಪಡೆದುಕೊಂಡಿದೆ. ಇದರ ವಿನ್ಯಾಸ ಇತರ ಎಲೆಕ್ಟ್ರಿಕ್ ಬೈಕ್‌ಗಳಿಗೆ ಹೋಲಿಸಿಕೊಂಡರೆ ತುಂಬಾ ಭಿನ್ನವಾಗಿದೆ. ಇನ್ನು ಲಿಮಿಟೆಡ್ ಎಡಿಷನ್ 100 ಇ-ಬೈಕ್ ಬೆಲೆಯು ಇ-ವಾಹನ ಪ್ರೇಮಿಗಳನ್ನು ಆಶ್ಚರ್ಯಗೊಳಿಸಿದೆ.

ಇದಕ್ಕೆ ಕಾರಣ, ಬೈಕ್‌ನ ವಿನ್ಯಾಸ, ಸಾಮರ್ಥ್ಯ, ಬೆಲೆ ಹಾಗೂ ಸಾಂಪ್ರದಾಯಿಕ ಎಲೆಕ್ಟ್ರಿಕ್ ವಾಹನಗಳಿಗೆ ಸಂಪೂರ್ಣ ಭಿನ್ನವಾಗಿರುವುದು. ಲಿಮಿಟೆಡ್ ಎಡಿಷನ್ 100 ಇ-ಬೈಕ್ ಪೆಡಲ್ ಸೌಲಭ್ಯವನ್ನು ಹೊಂದಿರುವ ಎಲೆಕ್ಟ್ರಿಕ್ ಬೈಕ್ ಆಗಿದೆ. ಇದರ ಬೆಲೆ 11,850 ಯೂರೋಗಳು. ಭಾರತೀಯ ಮೌಲ್ಯದಲ್ಲಿ ರೂ. 10 ಲಕ್ಷಕ್ಕೂ ಅಧಿಕ.

ಈ ಎಲೆಕ್ಟ್ರಿಕ್ ಬೈಕ್ ಇಷ್ಟು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿರುವುದು ಹಲವರ ಗಮನ ಸೆಳೆದಿದೆ. ಬೆಲೆ ಮಾತ್ರವಲ್ಲ, ಇ-ಬೈಕ್‌ನ ಕಾರ್ಯಕ್ಷಮತೆಯೂ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದೆ. ಪೆಡಲ್ ಸಕ್ರಿಯಗೊಳಿಸಿದಾಗ ವಾಹನವು ಗರಿಷ್ಠ 89 ಕಿ.ಮೀ ವೇಗವನ್ನು ತಲುಪುತ್ತದೆ. ಯಾವುದೇ ಪೆಡಲ್ ಬೈಕ್ ಇಷ್ಟು ವೇಗದಲ್ಲಿ ಚಲಿಸುವುದು ನಾವು ನೋಡಿರಲು ಸಾಧ್ಯವಿಲ್ಲ.

ಇದಲ್ಲದೆ, ಇತರ ಇ-ಬೈಕ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಸೈಕಲ್‌ನಂತೆ ಥ್ರೋಟಲ್ ಅನ್ನು ಹೊಂದಿಲ್ಲ. ಪೆಡಲ್ ಸಹಾಯ ಮಾತ್ರ ಲಭ್ಯವಿದೆ. ಈ ನಿಟ್ಟಿನಲ್ಲಿ, ವಾಹನವು ಗಂಟೆಗೆ 89 ಕಿ.ಮೀ ವೇಗವನ್ನು ತಲುಪುವುದು ಆಶ್ಚರ್ಯಕರ ಕೌಶಲ್ಯವೆಂದು ಪರಿಗಣಿಸಲಾಗಿದೆ. ಈ ಗರಿಷ್ಠ ವೇಗವನ್ನು ನಿಯಂತ್ರಿಸಲು, ಲಿಮಿಟೆಡ್ ಎಡಿಸನ್ 100 ಇ-ಬೈಕ್ 300 ಎಂಎಂ ಡಿಸ್ಕ್ ಹೊಂದಿದೆ.

ಮುಂಭಾಗದಲ್ಲಿ ನಾಲ್ಕು ಪಿಸ್ಟನ್ ಕ್ಯಾಲಿಬರ್‌ಗಳು ಮತ್ತು ಹಿಂಭಾಗದ ಕ್ಯಾಲಿಬರ್‌ಗಳ ಜೊತೆಗೆ 220 ಎಂಎಂ ಡಿಸ್ಕ್ ಡಬಲ್ ಪಿಸ್ಟನ್ ಅನ್ನು ಹೊಂದಿದೆ. ಅಲ್ಲದೆ, ಇದಕ್ಕೆ ಹೊಂದಿಸಬಹುದಾದ 37 ಮಿಮೀ ಯುಎಸ್‌ಡಿ ಫೋರ್ಕ್ ಅನ್ನು ಉತ್ತಮ ಆಪರೇಟಿಂಗ್ ಅನುಭವ ಒದಗಿಸಲು ಪ್ರಿಲೋಡ್ ಅಡ್ಜಸ್ಟಬಲ್ ಮೊನೊಶಾಕ್‌ನೊಂದಿಗೆ ಬಳಸಲಾಗಿದೆ.

ಇಂತಹ ವಿಶೇಷ ಸೌಲಭ್ಯಗಳನ್ನು ಹೊಂದಿರುವ ಇ-ರಾಕಿಟ್ ಲಿಮಿಟೆಡ್ ಎಡಿಸನ್ 100 ಪೆಡಲ್ ಇ-ಬೈಕ್ ಪ್ರಸ್ತುತ ಯುರೋಪಿಯನ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಕಂಪನಿಯು ಕಳೆದ ವರ್ಷ ಬಿಡುಗಡೆ ಮಾಡುವ ಕುರಿತು ಮಾಡಿದ್ದ ಕಾರ್ಯಕ್ರಮವೊಂದರಲ್ಲಿ ಈ ವಾಹನವನ್ನು ಭಾರತದಲ್ಲಿಯೂ ಮಾರಾಟಕ್ಕೆ ನೀಡುವುದಾಗಿ ಘೋಷಿಸಿತ್ತು. ಆದರೆ, ಈ ಸಂಬಂಧ ಇದುವರೆಗೂ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ. ಶೀಘ್ರದಲ್ಲೇ ಮಾಹಿತಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ವಾಹನವು ಹೆಚ್ಚಿನ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದ್ದು, ದುಬಾರಿ ಬೆಲೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊರತುಪಡಿಸಿ, ಇ-ಬೈಕ್ 16-ಎಸ್‌ಎಚ್ ಪಿಎಂಸಿಎಂ ಎಲೆಕ್ಟ್ರಿಕ್ ಮೋಟರ್ ಮತ್ತು 52ಎಕ್ಸ್ 6.6-ಎಚ್‌ಬಿ ಲಿಥಿಯಂ ಅಯಾನ್ ಬ್ಯಾಟರಿಯನ್ನು ಒಳಗೊಂಡಿದೆ. ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 120 ಕಿ.ಮೀ.ವರೆಗೆ ಪ್ರಯಾಣಿಸಬಹುದು. ಸಂಪೂರ್ಣವಾಗಿ ಚಾರ್ಜ್ ಮಾಡಲು 5 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಅದೇ ರೀತಿ, ಇ-ಬೈಕ್‌ನಲ್ಲಿರುವ ಎಲೆಕ್ಟ್ರಿಕ್ ಮೋಟರ್ 5ಎಚ್ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇ-ರಾಕಿಟ್ ಲಿಮಿಟೆಡ್ ಎಡಿಸನ್ 100 ಇ-ಬೈಕ್‌ನಲ್ಲಿ ಹೆಡ್‌ಲೈಟ್‌ಗಳು, ಕನ್ನಡಿಗಳು, ಡಿಸ್‌ಪ್ಲೇ, ಸೆಲ್ ಫೋನ್ ಹೋಲ್ಡರ್‌ಗಳು ಇತ್ಯಾದಿಗಳಿವೆ. ಈ ವಾಹನವು ವಿಶೇಷ ಸೌಲಭ್ಯಗಳೊಂದಿಗೆ ಮೋಡಿ ಮಾಡುತ್ತದೆಯಾದರೂ, ಈ ವಾಹನದಲ್ಲಿ ಒಬ್ಬ ವ್ಯಕ್ತಿ ಮಾತ್ರ ಪ್ರಯಾಣಿಸಲು ವಿನ್ಯಾಸಗೊಳಿಸಿರುವುದು ಇ-ಬೈಕ್ ಪ್ರೇಮಿಗಳನ್ನು ನಿರಾಸಡಗೊಳಿಸಿದೆ.

ಈಗಾಗಲೇ ಭಾರತೀಯ ಮಾರುಕ್ಕಟೆಯಲ್ಲಿ ಹಲವು ಇ-ಬೈಕ್‌ಗಳು ಗ್ರಾಹಕರನ್ನು ಆಕರ್ಷಿಸಿವೆ. ಅಲ್ಲದೆ ಒಂದೊಂದು ಇ-ಬೈಕ್ ಕೂಡ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಸಾಂಪ್ರದಾಯಿಕ ಪೆಟ್ರೋಲ್ ಚಾಲಿತ ವಾಹನಗಳಿಗೆ ಹಿಂದಿಕ್ಕುವ ಪ್ರಯತ್ನದಲ್ಲಿವೆ. ಈ ನಡುವೆ ದುಬಾರಿ ಬೆಲೆಯ ಇ-ರಾಕಿಟ್ ಲಿಮಿಟೆಡ್ ಎಡಿಸನ್ 100 ಇ-ಬೈಕ್ ಭಾರತದಲ್ಲಿ ಬಿಡುಗಡೆಯಾದರೆ ಯಾವ ರೀತಿಯಲ್ಲಿ ಆಧರಣೆ ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕು.