Just In
Don't Miss!
- Sports
ವಿಂಡೀಸ್ ಪ್ರವಾಸದಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ, ಸಂಜು ಸ್ಯಾಮ್ಸನ್ಗೆ ಸಿಗಲಿದೆ ಮತ್ತೊಂದು ಅವಕಾಶ?
- News
ಅಮೃತ್ ನಗರೋತ್ಥಾನ ಯೋಜನೆಯಡಿ ಬೆಂಗಳೂರು ಪೂರ್ವ ವಲಯಕ್ಕೆ 450 ಕೋಟಿ ಮಂಜೂರು
- Movies
ಹಿಂದಿಗೆ ಹೋಗುತ್ತಿದೆ ಏಳು ವರ್ಷ ಹಳೆಯ ಕನ್ನಡ ಸಿನಿಮಾ: ಅಕ್ಷಯ್-ಶಾಹಿದ್ ನಡುವೆ ಪೈಪೋಟಿ!
- Finance
ಸರ್ವೀಸ್ ಚಾರ್ಜ್ ಬಗ್ಗೆ ಗ್ರಾಹಕರು ದೂರು ನೀಡುವುದು ಹೇಗೆ?
- Lifestyle
ಯಾರೂ ಇಲ್ಲದಿದ್ದಾಗ ಪುರುಷ ಈ ರೀತಿ ವಿಲಕ್ಷಣವಾಗಿ ವರ್ತಿಸುತ್ತಾನೆ, ಗೊತ್ತಾ? ಇದನ್ನು ಓದಿದ್ರೆ ನೀವು ಶಾಕ್ ಆಗೋದು ಪಕ್ಕಾ!
- Technology
ಜಬ್ರೋನಿಕ್ಸ್ ಡ್ರಿಪ್ ಸ್ಮಾರ್ಟ್ವಾಚ್ ಬಿಡುಗಡೆ! ಲಾಂಗ್ ಬ್ಯಾಟರಿ ಬ್ಯಾಕ್ಅಪ್ ವಿಶೇಷ!
- Education
Karnataka Second PUC Results 2022 : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರತಿಗಳು ಜು.6ರಿಂದ ಲಭ್ಯ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ಹೊಸ ಡೆಸ್ಟಿನಿ 125 XTEC ರೂಪಾಂತರವನ್ನು ಪರಿಚಯಿಸಿದ ಹೀರೋ ಮೋಟೊಕಾರ್ಪ್
ದೇಶದ ಅತಿದೊಡ್ಡ ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆಯಾಗಿರುವ ಹೀರೋ ಮೋಟೊಕಾರ್ಪ್ ತನ್ನ ಹೊಸ ಡೆಸ್ಟಿನಿ 125 XTEC ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಬ್ರ್ಯಾಂಡ್‌ನ ವಿಸ್ತರಣೆಯ ಭಾಗವಾಗಿರುವ XTEC ಶ್ರೇಣಿಯನ್ನು ಡೆಸ್ಟಿನಿ ಸ್ಕೂಟರ್‌ನಲ್ಲೂ ಪರಿಚಯಿಸಲಾಗಿದೆ.

ಬ್ರಾಂಡ್‌ನ ಗ್ಲಾಮರ್ 125, ಪ್ಲೆಷರ್ ಪ್ಲಸ್ 110 ಈಗಾಗಲೇ ಲಭ್ಯವಿರುವ ಹೀರೋ XTEC ವೇರಿಯೆಂಟ್‌ಗಳಾಗಿವೆ. ಈ ಮಾದರಿಗಳಲ್ಲಿ ಹೊಸ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಸುಧಾರಿತ ರೆಟ್ರೋ ವಿನ್ಯಾಸ, ಕ್ರೋಮ್ ಅಂಶಗಳ ಜೊತೆಗೆ ಸ್ಕೂಟರ್ ಪರ್ಫಾಮೆನ್ಸ್ ಅನ್ನು ಸಹ ಕಂಪನಿಯು ವಿಶೇಷವಾಗಿ ಅಭಿವೃದ್ದಿ ಪಡಿಸಿದೆ.

ಡೆಸ್ಟಿನಿ 125 ಶ್ರೇಣಿಗಳಿಗೆ ಹೊಸ ನೆಕ್ಸಸ್ ಬ್ಲೂ ಕಲರ್ ಆಯ್ಕೆಯನ್ನು ಕೂಡ ಹೀರೊ ಮೋಟೋಕಾರ್ಪ್ ಪ್ರಸ್ತುತಪಡಿಸಿದೆ. ವಿವರವಾಗಿ ಹೇಳುವುದಾದರೆ ಈ ಮಾದರಿಯು ಸುಜುಕಿ ಆಕ್ಸಸ್ ಕ್ರೋಮ್ ಮಿರರ್ ಶೈಲಿಯನ್ನು ನೆನಪಿಸುತ್ತದೆ.

ಉತ್ತಮ ಇಂಧನ ಸಾಮರ್ಥ್ಯಕ್ಕಾಗಿ i3S ತಂತ್ರಜ್ಞಾನ, ಐಡಲ್ ಸ್ಟಾಪ್-ಸ್ಟಾರ್ಟ್ ಸಿಸ್ಟಮ್, ಫ್ರಂಟ್ ಯುಎಸ್‌ಬಿ ಚಾರ್ಜರ್, ಕಾಲಮ್ ಎಸ್‌ಎಂಎಸ್ ವಾರ್ನಿಂಗ್ ಇರುವ ಬ್ಲೂಟೂತ್ ಸಂಪರ್ಕಿತ ಪುತ್ತನ್ ಡಿಜಿ ಅನಲಾಗ್ ಸ್ಪೀಡೋಮೀಟರ್, ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್ ಆಫ್, ಸೀಟ್ ಬ್ಯಾಕ್ ರೆಸ್ಟ್ ವೈಶಿಷ್ಟ್ಯಗಳನ್ನು ಈ ಹೊಸ ಹೀರೋ ಡೆಸ್ಟಿನಿ 125 XTEC ಪಡೆದುಕೊಂಡಿದೆ.

ಸೀಟ್ ಬ್ಯಾಕ್ ರೆಸ್ಟ್ ವೈಶಿಷ್ಟ್ಯವು ಹಿಂದಿರುವ ಪ್ರಯಾಣಿಕನ ಸೌಕರ್ಯ ವೃದ್ಧಿಸಲು ಸಾಕಷ್ಟು ಸಹಾಯ ಮಾಡುತ್ತದೆ. ಈ ಕಂಫರ್ಟ್ ವೈಶಿಷ್ಟ್ಯಗಳ ಮೂಲಕ ಹೋರೋ ಡೆಸ್ಟಿನಿ ಮಾದರಿಗಳಲ್ಲಿಯೇ ಹೆಚ್ಚು ಅನುಕೂಲಕರವಾದ ಸ್ಕೂಟರ್ ನವೀಕರಣವಾಗಿದೆ. ಅನಲಾಗ್ ಸ್ಪೀಡೋದಲ್ಲಿ ಒಂದು ಸೈಡ್ ಸ್ಟ್ಯಾಂಡ್ ವಿಶುವಲ್ ಇಂಡಿಕೇಟರ್ ಅನ್ನು ಸಹ ನೀಡಲಾಗಿದೆ.

ಹೀರೋ ಡೆಸ್ಟಿನಿಯ ಸ್ಟ್ಯಾಂಡರ್ಡ್ ವೇರಿಯೆಂಟ್ 69,900 ರೂ. ಇದ್ದು, ಡೆಸ್ಟಿನಿ 125 XTEC ಆವೃತ್ತಿಯು 79,990 ರೂ. ಬೆಲೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ. ಸ್ಕೂಟರ್‌ನ ಹೊಸ ಎಲ್ಇಡಿ ಹೆಡ್‌ಲ್ಯಾಂಪ್ ' ಹೆಚ್ಚು ಪ್ರಕಾಶವನ್ನು ನೀಡುತ್ತದೆ' ಎಂದು ಕಂಪನಿ ತಿಳಿಸಿದೆ. ಈ ಹೈ ಲೈಟಿಂಗ್ ತೀವ್ರತೆಯು ಅಗಲವಾದ ರಸ್ತೆಗಳಲ್ಲು ಉತ್ತಮ ರೈಡಿಂಗ್ ಮಾಡಲು ಸಹಕಾರಿಯಾಗಿದೆ. ಅಲ್ಲದೇ ಆ್ಯಂಟಿ ಫಾಗ್ ವೈಶಿಷ್ಟ್ಯವನ್ನು ಸಹ ನೀಡಲಾಗಿದ್ದು, ಇದು ವಿಭಿನ್ನ ರೈಡಿಂಗ್ ಮೋಡ್‌ಗಳಲ್ಲಿ ಆನ್-ರೋಡ್‌ನಲ್ಲಿ ಇದರ ಫರ್ಫಾಮೆನ್ಸ್ ಅನ್ನು ಕಾಣಬಹುದು.

ಪ್ರೀಮಿಯಂ ಕ್ರೋಮ್ ಅಂಶಗಳ ಮೂಲಕ ಸ್ಕೂಟರ್ ರೆಟ್ರೋ ಲುಕ್ ಅನ್ನು ಹೀರೋ ಕಂಪನಿ ಸುಧಾರಿಸಿದೆ. ಮಿರರ್ಸ್, ಮಫ್ಲರ್ ಪ್ರೊಟೆಕ್ಟರ್, ಹ್ಯಾಂಡಲ್‌ಬಾರ್‌ನಲ್ಲಿ ಈ ಸುಧಾರಣೆಯನ್ನು ಕಾಣಬಹುದು. 'XTEC' ಬ್ಯಾಡ್‌ಜಿಂಗ್, ಡ್ಯುವಲ್ ಟನ್ ಸೀಟ್ ಒಳಗೊಂಡಿರುವ ಸೈಡ್ ಪ್ಲೇಟ್‌ಗಳು ಮತ್ತು ಸ್ಕೂಟರ್ ಡಿಸೈನ್ ಸುಧಾರಿಸಿರುವ ಇತರ ವಿನ್ಯಾಸ ಘಟಕಗಳು ರೆಟ್ರೋ ಲುಕ್ ಅನ್ನು ನೀಡಿವೆ.

ಬ್ಲೂಟೂತ್ ಸಂಪರ್ಕವುಳ್ಳ ಡಿಜಿಟಲ್ ಅನಲಾಗ್ ಸ್ಪೀಡೋಮೀಟರ್ ಇನ್‌ಕಮಿಂಗ್ ಮಿಸ್ಡ್ ಕಾಲ್ ಎಚ್ಚರಿಕೆ, ಮೆಸೇಜ್ ವಾರ್ನಿಂಗ್‌ಗಳನ್ನು ತೋರಿಸುತ್ತದೆ. ಅಲ್ಲದೇ ಪ್ರಮುಖವಾಗಿ RTMI ಸಹಿತ ಲೋ ಫ್ಯೂಯಲ್ ಇಂಡಿಕೇಟ್ ಕುರಿತು ಮಾಹಿತಿಯನ್ನು ನೀಡುತ್ತದೆ.

ಹೀರೋ ಡೆಸ್ಟಿನಿ 125 XTEC ಆವೃತ್ತಿಯ ಯಾಂತ್ರಿಕ ವೈಶಿಷ್ಟ್ಯಗಳನ್ನು ನೋಡುವುದಾದರೆ, 125 CC ಬಿಎಸ್-VI ಗುಣಮಟ್ಟದಲ್ಲಿ ಹೊಸ ಎಂಜಿನ್ ಮಾದರಿಯನ್ನು ಪರಿಚಯಿಸಲಾಗಿದೆ. ಇದು 7000 rpm-l ನಲ್ಲಿ ಗರಿಷ್ಠ 9 bhp ಶಕ್ತಿ 5500 rpm-l ನಲ್ಲಿ 10.4 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅತ್ಯಂತ ಹೊಸ ತಂತ್ರಜ್ಞಾನದ ಸೆಗ್ಮೆಂಟ್ ಫಸ್ಟ್ ಫೀಚರ್ ಮತ್ತು ಕೈಯೊಪ್ ಎಂಬ ಹಂತದಲ್ಲಿ XTEC ತಂತ್ರಜ್ಞಾನವನ್ನು ಈ ಪ್ಯಾಕೇಜ್‌ನಲ್ಲಿ ನೀಡಲಾಗಿದೆ ಎಂದು ಹೀರೋ ಮೋಟೋಕಾರ್ಪ್‌ನ ಸ್ಟ್ರಾಟಜಿ ಮತ್ತು ಗ್ಲೋಬಲ್ ಪ್ರೊಡಕ್ಟ್ ಪ್ಲಾನಿಂಗ್ ಮುಖ್ಯಸ್ಥ ಮಾಲೋ ಮಾಸ್‌ಸನ್ ಅವರು ತಿಳಿಸಿದ್ದಾರೆ.

ಈಗಾಗಲೇ ಗ್ಲಾಮರ್ 125, ಪ್ಲೆಷರ್ ಪ್ಲಸ್ 110ನಲ್ಲಿ XTEC ಆವೃತ್ತಿಗಳನ್ನು ಪ್ರಸ್ತುತಪಡಿಸಿದ್ದು, ಇವು ಜನಪ್ರಿಯವಾದ ಹಿನ್ನೆಲೆ ಡೆಸ್ಟಿನಿ 125 ಮಾದರಿಗಳಿಗೂ ಈ ವಿಶೇಷ ಆವೃತ್ತಿಯನ್ನು ಪರಿಚಯಿಸಲು ನಿರ್ಧರಿಸಲಾಯಿತು ಎಂದು ಮಾಸ್‌ಸನ್ ತಿಳಿಸಿದರು.

ಈ ಮೂಲಕ ಹೊಸ ಡೆಸ್ಟಿನಿ ಕೂಡ 125 XTEC ತಂತ್ರಜ್ಞಾನದ ಮೂಲಕ ಪ್ರಗತಿಯನ್ನು ಸಾಧಿಸಲಿದೆ. ಇದು ಮಾಸ್ಟರ್ ಎಡ್ಜ್ 125, ಪ್ಲಶರ್ ಪ್ಲಸ್ ಎಕ್ಸ್‌ಟಿಇಸಿ ಸೇರಿದಂತೆ ಇತರ ಪ್ರಮುಖ ಸ್ಕೂಟರ್ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಲು ಸಹಕರಿಸುತ್ತದೆ ಎಂದು ಹೀರೋ ಮೋಟೋಕಾರ್ಪ್‌ನ ಮುಖ್ಯ ಗ್ರೋತ್ ಆಫೀಸರ್ ರಂಜಿವ್ಜಿತ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಸೌಕರ್ಯ, ಸ್ಟೈಲಿಂಗ್‌ನಲ್ಲಿಯೂ ಹೆಚ್ಚು ಗಮನಹರಿಸಿರುವುದರಿಂದ ಹೊಸ ಹೀರೋ ಡೆಸ್ಟಿನಿ 125 XTEC ಖಂಡಿತವಾಗಿ ದೇಶದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳಲಿದೆ.