ಅಮೆರಿಕನ್ ಇವಿ ಬೈಕ್ ಕಂಪನಿಯಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಹೀರೋ ಮೋಟೊಕಾರ್ಪ್

ದೇಶದ ಅಗ್ರಗಣ್ಯ ದ್ವಿಚಕ್ರ ವಾಹನ ಉತ್ಪಾದನಾ ಕಂಪನಿಯಾಗಿರುವ ಹೀರೋ ಮೋಟೊಕಾರ್ಪ್ ಕಂಪನಿಯು ಪ್ರಮುಖ ಎಲೆಕ್ಟ್ರಿಕ್ ಸ್ಟಾರ್ಟ್ಅಪ್ ಕಂಪನಿಗಳ ಮೇಲೆ ಭಾರೀ ಪ್ರಮಾಣದ ಹೂಡಿಕೆ ಘೋಷಣೆ ಮಾಡುತ್ತಿದ್ದು, ಸಹಭಾಗಿತ್ವ ಯೋಜನೆ ಅಡಿಯಲ್ಲಿ ಹೊಸ ಇವಿ ಬೈಕ್ ಮಾದರಿಗಳಿಗಾಗಿ ಹೀರೋ ಮೋಟೊಕಾರ್ಪ್ ಕಂಪನಿಯು ಇದೀಗ ಅಮೆರಿಕ ಮೂಲದ ಜೀರೋ ಮೋಟಾರ್‌ಸೈಕಲ್ ಕಂಪನಿಯೊಂದಿಗೆ ಕೈಜೋಡಿಸಿದೆ.

ಅಮೆರಿಕನ್ ಇವಿ ಬೈಕ್ ಕಂಪನಿಯಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಹೀರೋ ಮೋಟೊಕಾರ್ಪ್

ಎಲೆಕ್ಟ್ರಿಕ್ ವಾಹನಗಳ ಸಂಶೋಧನಾ ಸಂಸ್ಥೆಗಳು, ಎಲೆಕ್ಟ್ರಿಕ್ ಬ್ಯಾಟರಿ ಉತ್ಪಾದನಾ ಘಟಕಗಳು ಮತ್ತು ಎಲೆಕ್ಟ್ರಿಕ್ ವಾಹನ ಉತ್ಪಾದನೆಗಾಗಿ ಸಿದ್ದವಾಗಿರುವ ಪ್ರಮುಖ ವಾಹನ ಉತ್ಪಾದನಾ ಕಂಪನಿಗಳೊಂದಿಗೆ ಕೈಜೋಡಿಸುತ್ತಿರುವ ಹೀರೋ ಮೋಟೊಕಾರ್ಪ್ ಕಂಪನಿಯು ಪ್ರಮುಖ ಇವಿ ಉತ್ಪಾದನಾ ಘಟಕಗಳ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತದೆ.

ಅಮೆರಿಕನ್ ಇವಿ ಬೈಕ್ ಕಂಪನಿಯಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಹೀರೋ ಮೋಟೊಕಾರ್ಪ್

ಎಥರ್ ಎನರ್ಜಿ ಮತ್ತು ಗೊಗೊರೊ ಕಂಪನಿಗಳಲ್ಲಿ ಈಗಾಗಲೇ ಭಾರೀ ಪ್ರಮಾಣದ ಹೂಡಿಕೆ ಮಾಡಿರುವ ಹೀರೋ ಮೋಟೊಕಾರ್ಪ್ ಕಂಪನಿಯು ಇದೀಗ ಜೀರೋ ಮೋಟಾರ್‌ಸೈಕಲ್ ಕಂಪನಿಯಲ್ಲೂ ಹೂಡಿಕೆ ಮಾಡುತ್ತಿದೆ.

ಅಮೆರಿಕನ್ ಇವಿ ಬೈಕ್ ಕಂಪನಿಯಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಹೀರೋ ಮೋಟೊಕಾರ್ಪ್

ಜೀರೋ ಮೋಟಾರ್‌ಸೈಕಲ್ ಕಂಪನಿಯು ಈಗಾಗಲೇ ಪ್ರಮುಖ ಇವಿ ಬೈಕ್ ಮಾದರಿಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದ್ದು, ಇದೀಗ ಹೊಸ ಇವಿ ದ್ವಿಚಕ್ರ ವಾಹನ ಉತ್ಪಾದನೆಗಾಗಿ ಹೀರೋ ಮೋಟೊಕಾರ್ಪ್ ಕಂಪನಿಯು 60 ಮಿಲಿಯನ್ ಯುಎಸ್ ಡಾಲರ್(ರೂ. 420 ಕೋಟಿ) ಹೂಡಿಕೆಗೆ ಒಪ್ಪಿಗೆ ಸೂಚಿಸಿದೆ.

ಅಮೆರಿಕನ್ ಇವಿ ಬೈಕ್ ಕಂಪನಿಯಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಹೀರೋ ಮೋಟೊಕಾರ್ಪ್

ಎಥರ್ ಎನರ್ಜಿ ಮತ್ತು ಗೊಗೊರೊ ಮಾತ್ರವಲ್ಲದೆ ವಿದಾ ಸಬ್ ಬ್ರಾಂಡ್ ಎಲೆಕ್ಟ್ರಿಕ್ ಕಂಪನಿಯನ್ನು ಆರಂಭಿಸುತ್ತಿರುವ ಹೀರೋ ಮೋಟೊಕಾರ್ಪ್ ಕಂಪನಿಗೆ ಜೀರೋ ಮೋಟಾರ್‌ಸೈಕಲ್ ಕಂಪನಿಯೊಂದಿಗೆ ಸಹಭಾಗಿತ್ವವು ಜಾಗತಿಕ ಮಟ್ಟದಲ್ಲಿ ಮನ್ನಣೆ ತಂದುಕೊಡಲಿದೆ.

ಅಮೆರಿಕನ್ ಇವಿ ಬೈಕ್ ಕಂಪನಿಯಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಹೀರೋ ಮೋಟೊಕಾರ್ಪ್

ಬಜೆಟ್ ಬೈಕ್ ಮಾದರಿಗಳೊಂದಿಗೆ ಈಗಾಗಲೇ ಜಾಗತಿಕವಾಗಿ ಗುರುತಿಸಿಕೊಂಡಿರುವ ಹೀರೋ ಮೋಟೊಕಾರ್ಪ್ ಕಂಪನಿಗೆ ಭವಿಷ್ಯದ ಇವಿ ವಾಹನಗಳ ಉತ್ಪಾದನೆ ಮೇಲಿನ ಹೂಡಿಕೆಯು ಮತ್ತಷ್ಟು ಬಲತುಂಬುತ್ತಿದ್ದು, ಕಂಪನಿಯು ಇನ್ನು ಹಲವು ಇವಿ ವಾಹನ ಉತ್ಪಾದನಾ ಕಂಪನಿಗಳ ಮೇಲೆ ಹೂಡಿಕೆಗೆ ಎದುರು ನೋಡುತ್ತಿದೆ.

ಅಮೆರಿಕನ್ ಇವಿ ಬೈಕ್ ಕಂಪನಿಯಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಹೀರೋ ಮೋಟೊಕಾರ್ಪ್

ಭವಿಷ್ಯದಲ್ಲಿ ಇವಿ ವಾಹನಗಳಿಗೆ ಸಲ್ಲಿಕೆಯಾಗಲಿರುವ ಬೇಡಿಕೆಯನ್ನು ಆಧರಿಸಿ ಹೀರೋ ಮೋಟೊಕಾರ್ಪ್ ಕಂಪನಿಯು ಪೆಟ್ರೋಲ್ ಮಾದರಿಗಳಂತೆ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲೂ ಮುಂಚೂಣಿ ಸಾಧಿಸುವ ನೀರಿಕ್ಷೆಯಲ್ಲಿದೆ.

ಅಮೆರಿಕನ್ ಇವಿ ಬೈಕ್ ಕಂಪನಿಯಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್ ಕಂಪನಿಯು ತನ್ನದೇ ಆದ ಹೀರೋ ಎಲೆಕ್ಟ್ರಿಕ್ ವಿಭಾಗವನ್ನು ಹೊಂದಿದ್ದರೂ ಕೂಡಾ ಎಲೆಕ್ಟ್ರಿಕ್ ವಿಭಾಗವನ್ನು ಹೊರತುಪಡಿಸಿ ಸ್ವತಂತ್ರವಾಗಿರುವ ಹಲವು ಸ್ಟಾರ್ಟ್ ಅಪ್ ಕಂಪನಿಗಳ ಆಕರ್ಷಕ ಇವಿ ಮಾದರಿಗಳ ಉತ್ಪಾದನೆ ಮೇಲೆ ಹೂಡಿಕೆಯೊಂದಿಗೆ ಹೆಚ್ಚಿನ ಉತ್ಪಾದನೆಗೆ ಸಹಕರಿಸುವ ಯೋಜನೆ ರೂಪಿಸುತ್ತಿದೆ.

ಅಮೆರಿಕನ್ ಇವಿ ಬೈಕ್ ಕಂಪನಿಯಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಹೀರೋ ಮೋಟೊಕಾರ್ಪ್

ಅಮೆರಿಕದಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿರುವ ಜೀರೋ ಮೋಟಾರ್‌ಸೈಕಲ್ ಕಂಪನಿಯು ವಿವಿಧ ಇವಿ ವಾಹನ ಮಾದರಿಗಳೊಂದಿಗೆ ಗಮನಸೆಳೆಯುತ್ತಿದ್ದು, ಇದೀಗ ಜೀರೋ ಮೋಟಾರ್‌ಸೈಕಲ್ ಕಂಪನಿಯು ಉದ್ಯಮ ವಿಸ್ತರಣೆ ಮತ್ತು ಕೆಲವು ಹೊಸ ಮಾದರಿಗಳ ಉತ್ಪಾದನೆಗಾಗಿ ಸಹಕರಿಸುತ್ತಿದೆ.

ಅಮೆರಿಕನ್ ಇವಿ ಬೈಕ್ ಕಂಪನಿಯಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಹೀರೋ ಮೋಟೊಕಾರ್ಪ್

ನಾಸಾದ ಮಾಜಿ ಎಂಜನಿಯರ್ ಉದ್ಯೋಗಿಯೊಬ್ಬರು ಜೀರೋ ಮೋಟಾರ್‌ಸೈಕಲ್ ಕಂಪನಿಯನ್ನು ಹುಟ್ಟುಹಾಕಿದ್ದು, ಹಲವಾರು ತಂತ್ರಜ್ಞಾನ ಪ್ರೇರಣೆ ಹೊಂದಿರುವ ಹೊಸ ಇವಿ ಮಾದರಿಗಳು ಸಾಕಷ್ಟು ಗಮನಸೆಳೆಯುತ್ತಿವೆ.

ಅಮೆರಿಕನ್ ಇವಿ ಬೈಕ್ ಕಂಪನಿಯಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಹೀರೋ ಮೋಟೊಕಾರ್ಪ್

ಜೀರೋ ಮೋಟಾರ್‌ಸೈಕಲ್ ಕಂಪನಿಯು ಸದ್ಯ ಎಸ್, ಎಸ್ಆರ್, ಎಫ್ಎಕ್ಸ್ಎಸ್, ಡಿಎಸ್, ಡಿಎಸ್ಆರ್, ಎಫ್ಎಕ್ಸ್ ಮತ್ತು ಎಸ್‌ಆರ್ ಇವಿ ದ್ವಿಚಕ್ರ ವಾಹನಗಳನ್ನು ನಿರ್ಮಾಣ ಮಾಡುತ್ತಿದ್ದು, ಸಹಭಾಗಿತ್ವ ಯೋಜನೆ ಅಡಿಯಲ್ಲಿ ಹೀರೋ ಮೋಟೊಕಾರ್ಪ್ ಕಂಪನಿಯು ಸಹ ಜೀರೋ ಮೋಟಾರ್‌ಸೈಕಲ್ ಮಾದರಿಗಳನ್ನು ಭಾರತದಲ್ಲೂ ಬಿಡುಗಡೆ ಮಾಡಲಿದೆ.

ಅಮೆರಿಕನ್ ಇವಿ ಬೈಕ್ ಕಂಪನಿಯಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಹೀರೋ ಮೋಟೊಕಾರ್ಪ್

ಭಾರತದಲ್ಲಿ ಹೊಸ ಮಾದರಿಯ ಇವಿ ಬೈಕ್ ಮಾದರಿಗಳ ಬಿಡುಗಡೆಗಾಗಿ ಜೀರೋ ಮೋಟಾರ್‌ಸೈಕಲ್ ತನ್ನ ಹೊಸ ತಂತ್ರಜ್ಞಾನ ಸೌಲಭ್ಯಗಳನ್ನು ಹೀರೋ ಇವಿ ಬೈಕ್‌ಗಳಲ್ಲಿ ಜೋಡಣೆ ಮಾಡಲಿದ್ದು, ಹೊಸ ಹೂಡಿಕೆಯು ಎರಡು ಕಂಪನಿಗಳಿಗೆ ಹೆಚ್ಚಿನ ಅನುಕೂಲಕರವಾಗಲಿದೆ.

ಅಮೆರಿಕನ್ ಇವಿ ಬೈಕ್ ಕಂಪನಿಯಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಹೀರೋ ಮೋಟೊಕಾರ್ಪ್

ಹೊಸ ಹೂಡಿಕೆಯಿಂದ ಜೀರೋ ಮೋಟಾರ್‌ಸೈಕಲ್ ಕಂಪನಿಗೆ ಉದ್ಯಮ ವಿಸ್ತರಿಸಲು ನೆರವಾಗಲಿದ್ದರೆ ಹೀರೋ ಮೋಟೊಕಾರ್ಪ್ ಕಂಪನಿಗೆ ಸುಧಾರಿತ ತಂತ್ರಜ್ಞಾನದ ನೆರವು ದೊರಲಿದ್ದು, ಈ ಮೂಲಕ ಇವಿ ಮಾದರಿಗಳಲ್ಲೂ ಮುಂಚೂಣಿ ಸಾಧಿಸುವ ತವಕದಲ್ಲಿದೆ.

ಅಮೆರಿಕನ್ ಇವಿ ಬೈಕ್ ಕಂಪನಿಯಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಹೀರೋ ಮೋಟೊಕಾರ್ಪ್

ಜೀರೋ ಮೋಟಾರ್‌ಸೈಕಲ್ ಕಂಪನಿಯು ಗ್ರಾಹಕರ ಬೇಡಿಕೆ ಸ್ಟ್ರೀಟ್ ಇವಿ ಬೈಕ್, ಅಡ್ವೆಂಚರ್ ಇವಿ ಮತ್ತು ಸ್ಪೋರ್ಟ್ ಟೂರಿಂಗ್ ಇವಿ ಮಾದರಿಗಳನ್ನು ಅಭಿವೃದ್ದಿಗೊಳಿಸುತ್ತಿದ್ದು, ಮುಂದಿನ ಕೆಲ ವರ್ಷಗಳಲ್ಲಿ ಹೀರೋ ಹೆಸರಿನಲ್ಲಿ ರಸ್ತೆಗಿಳಿಯಲಿವೆ.

Most Read Articles

Kannada
English summary
Hero motocorp finalised deal with zero motorcycles to co develop electric motorcycles
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X