ಆಕರ್ಷಕ ವಿನ್ಯಾಸದಲ್ಲಿ ಹೊಸ ಹೋಂಡಾ ಕ್ಲಿಕ್ 160 ಸ್ಕೂಟರ್ ಅನಾವರಣ

ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಥಾಯ್ ಮಾರುಕಟ್ಟೆಯಲ್ಲಿ ಕ್ಲಿಕ್ 160 ಎಂದು ಕರೆಯಲ್ಪಡುವ ಹೊಚ್ಚ ಹೊಸ ಸ್ಕೂಟರ್ ಅನ್ನು ಅನಾವರಣಗೊಳಿಸಿದೆ. ಈ ಹೊಸ ಹೋಂಡಾ ಕ್ಲಿಕ್ 160 ಸ್ಕೂಟರ್ ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿವೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ ಹೋಂಡಾ ಕ್ಲಿಕ್ 160 ಸ್ಕೂಟರ್ ಅನಾವರಣ

ಜೂನ್ 2017 ಮತ್ತು 2020ರ ಜೂನ್ ತಿಂಗಳುಗಳ ನಡುವೆ ಭಾರತದಲ್ಲಿ ಮಾರಾಟವಾಗಿದ್ದ ಅಂಡರ್‌ವೆಲ್ಮಿಂಗ್ ಕ್ಲಿಕ್‌ನೊಂದಿಗೆ ಗೊಂದಲಕ್ಕೀಡಾಗಬಾರದು. ಭಾರತದಲ್ಲಿ ಮಾರಾಟವಾಗುತ್ತಿದ್ದ ಕ್ಲಿಕ್ 110 ಹೆಚ್ಚು ಸಂಪ್ರದಾಯಶೀಲವಾಗಿದ್ದರೆ, ಕ್ಲಿಕ್ 160 ಕೇವಲ ಯಮಹಾ ಏರಾಕ್ಸ್ 155 ಗೆ ನೇರವಾಗಿ ಪ್ರತಿಸ್ಪರ್ಧಿಯಾಗಿರುವ ಕಾರ್ಯಕ್ಷಮತೆ-ಆಧಾರಿತ ಸ್ಕೂಟರ್ ಆಗಿದೆ. ಹೋಂಡಾ ಕ್ಲಿಕ್ 160 ಹೆಚ್ಚುವರಿ ವೈಶಿಷ್ಟ್ಯಗಳು ಮತ್ತು ದಪ್ಪ ವಿನ್ಯಾಸದ ಶೈಲಿಯೊಂದಿಗೆ ಅದರ 150 ಸಿಸಿ ಮಾದರಿಗಳ ಬದಲಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಏಷ್ಯಾದ ಮಾರುಕಟ್ಟೆಗಾಗಿ ಪ್ರತ್ಯೇಕವಾಗಿ ಅಭಿವೃದ್ಧಿಪಡಿಸಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ ಹೋಂಡಾ ಕ್ಲಿಕ್ 160 ಸ್ಕೂಟರ್ ಅನಾವರಣ

ಈ ಹೊಸ ಹೋಂಡಾ ಕ್ಲಿಕ್ 160 ಸ್ಕೂಟರ್ ಅಗ್ರೇಸಿವ್ ಮುಂಭಾಗದ ಫಾಸಿಕವನ್ನು ಹೊಂದಿದ್ದು, ಚೂಪಾದ ಕ್ರೀಸ್‌ಗಳೊಂದಿಗೆ ಟ್ವಿನ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ ಮತ್ತು ಕಪ್ಪು ಬಣ್ಣದ ಹಿಂಬದಿಯ ಮೀರರ್ ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ ವೈ-ಆಕಾರದ ಕಪ್ಪು ಅಲಾಯ್ ವ್ಹೀಲ್ ಗಳೊಂದಿಗೆ ಕಪ್ಪು ಬಣ್ಣದ ಮುಂಭಾಗದ ಏಪ್ರನ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ ಹೋಂಡಾ ಕ್ಲಿಕ್ 160 ಸ್ಕೂಟರ್ ಅನಾವರಣ

ಸ್ಕೂಟರ್ ಅನ್ನು ಬಿಳಿ, ಕೆಂಪು ಮತ್ತು ಕಪ್ಪು ಮುಂತಾದ ಬಹು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇದು ಶಾರ್ಪ್ ಸೈಡ್ ಬಾಡಿ ಪ್ಯಾನೆಲ್‌ಗಳು, ದೊಡ್ಡ ಮುಂಭಾಗದ ಫೆಂಡರ್, ಬದಿಗಳಲ್ಲಿ ಕ್ಲಿಕ್ ಬ್ಯಾಡ್ಜಿಂಗ್, ಎಲ್‌ಇಡಿ ಟೈಲ್ ಲ್ಯಾಂಪ್ ಕ್ಲಸ್ಟರ್‌ನೊಂದಿಗೆ ಕಾಂಪ್ಯಾಕ್ಟ್ ರಿಯರ್ ಪ್ರೊಫೈಲ್ ಮತ್ತು ನಯವಾದ-ಕಾಣುವ ಟರ್ನ್ ಸಿಗ್ನಲ್‌ಗಳು, ಸಿಂಗಲ್-ಪೀಸ್ ಸೀಟ್, ಯುಎಸ್‌ಬಿ ಚಾರ್ಜಿಂಗ್ ಆಯ್ಕೆಯನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ ಹೋಂಡಾ ಕ್ಲಿಕ್ 160 ಸ್ಕೂಟರ್ ಅನಾವರಣ

ಇದರೊಂದದಿಗೆ ಫ್ಯೂಯಲ್ ಗೇಜ್, ಓಡೋಮೀಟರ್, ಸ್ಫೀಡ್ ಮತ್ತು ಇತರ ಅಗತ್ಯ ವಿವರಗಳನ್ನು ಪ್ರದರ್ಶಿಸುವ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ, ಇನ್ನು ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ಹೋಂಡಾ ಕ್ಲಿಕ್ 160 ನವೀಕರಿಸಿದ 157 ಸಿಸಿ ಸಿಂಗಲ್-ಸಿಲಿಂಡರ್ ಫ್ಯೂಯಲ್-ಇಂಜೆಕ್ಟೆಡ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ ಹೋಂಡಾ ಕ್ಲಿಕ್ 160 ಸ್ಕೂಟರ್ ಅನಾವರಣ

ಈ ಎಂಜಿನ್ 15 ಬಿಹೆಚ್‍ಪಿ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇದು ನಗರದೊಳಗೆ ಉತ್ಸಾಹಭರಿತ ಸವಾರಿಗಾಗಿ ಮತ್ತು ಹೆದ್ದಾರಿಗಳಲ್ಲಿ ಸಾಂದರ್ಭಿಕ ರೋಮಾಂಚನಕ್ಕೆ ಎಲ್ಲಾ ಅಗತ್ಯಗಳನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ ಹೋಂಡಾ ಕ್ಲಿಕ್ 160 ಸ್ಕೂಟರ್ ಅನಾವರಣ

ಪವರ್‌ಟ್ರೇನ್ ಎಥೆನಾಲ್‌ನಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಹೋಂಡಾ ಕ್ಲಿಕ್ 160 ಭಾರತದಂತಹ ಮಾರುಕಟ್ಟೆಗಳಿಗೆ ಭರವಸೆಯ ದೃಷ್ಟಿಕೋನವನ್ನು ಹೊಂದಿದೆ ಆದರೆ ಇದು ದೇಶೀಯ ಮಾರುಕಟ್ಟೆಗೆ ತಲುಪುವ ಸಾಧ್ಯತೆಗಳು ತುಂಬಾ ಕಡಿಮೆ. ಜಪಾನಿನ ತಯಾರಕರು ಸದ್ಯದಲ್ಲಿಯೇ ಬಿಡುಗಡೆ ಮಾಡಲು ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವ್ಯಾಪಕವಾಗಿ ವರದಿಯಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ ಹೋಂಡಾ ಕ್ಲಿಕ್ 160 ಸ್ಕೂಟರ್ ಅನಾವರಣ

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ತನ್ನ 2022ರ ಮಾರ್ಚ್ ತಿಂಗಳ ಮಾರಾಟ ವರದಿಯನ್ನು ಇತ್ತೀಚೆಗೆ ಬಹಿರಂಗಪಡಿಸಿದೆ. ವರದಿ ಪ್ರಕಾರ ಜಪಾನ್ ಮೂಲದ ದ್ವಿಚಕ್ರ ವಾಹನ ಕಂಪನಿ ಹೋಂಡಾ ಕಳೆದ ತಿಂಗಳು ಒಟ್ಟು 3,21,343 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಮಾರ್ಚ್ ತಿಂಗಳ ಒಟ್ಟು ಮಾರಾಟಕ್ಕೆ ಹೋಲಿಸಿದರೆ ಶೇಕಡಾ 2.8 ರಷ್ಟು ಹೆಚ್ಚಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ ಹೋಂಡಾ ಕ್ಲಿಕ್ 160 ಸ್ಕೂಟರ್ ಅನಾವರಣ

ಇನ್ನು ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ 3,09,549 ಯುನಿಟ್‌ಗಳನ್ನು ಮಾರಾಟ ಮಾಡಿದ್ದಾರೆ. ದೇಶೀಯ ಮಾರಾಟವು ಕಳೆದ ತಿಂಗಳಿಗಿಂತ ಶೇಕಡಾ 8.3 ರಷ್ಟು ಏರಿಕೆ ಕಂಡಿದೆ. ಇನ್ನು ಹೋಂಡಾ ಕಂಪನಿಯು ಕಳೆದ ತಿಂಗಳಿನಲ್ಲಿ 11,794 ಯುನಿಟ್‌ಗಳನ್ನು ರಫ್ತು ಮಾಡಿದ್ದಾರೆ.ಜಪಾನಿನ ಬೈಕ್ ತಯಾರಕರ ರಫ್ತು ಫೆಬ್ರವರಿಗಿಂತ 56.2 ರಷ್ಟು ಕಡಿಮೆಯಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ ಹೋಂಡಾ ಕ್ಲಿಕ್ 160 ಸ್ಕೂಟರ್ ಅನಾವರಣ

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ದ್ವಿಚಕ್ರ ವಾಹನಗಳ ರಫ್ತಿನಲ್ಲಿ 30 ಲಕ್ಷದ ಗಡಿ ದಾಟಿ ಹೊಸ ಮೈಲಿಗಲ್ಲನ್ನು ಇತ್ತೀಚೆಗೆ ಸಾಧಿಸಿತು. ಈ ಹೋಂಡಾ ಕಂಪನಿಯು 21 ವರ್ಷಗಳ ಕಾರ್ಯಾಚರಣೆಯಲ್ಲಿ 30 ಲಕ್ಷ ಯುನಿಟ್ ಗಳನ್ನು ರಫ್ತು ಮಾಡಿ ಹೊಸ ಮೈಲಿಗಲ್ಲನ್ನು ಸಾಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಜಪಾನಿನ ತಯಾರಕರು 2001 ರಲ್ಲಿ ಐಕಾನಿಕ್ ಹೋಂಡಾ ಆಕ್ಟಿವಾದೊಂದಿಗೆ ರಫ್ತು ಕಾರ್ಯಾಚರಣೆಯನ್ನು ಪ್ರಾರಂಭಿಸಿದರು ಮತ್ತು 2016 ರಲ್ಲಿ 15 ಲಕ್ಷ ಮೈಲಿಗಲ್ಲನ್ನು ದಾಟಿದರು. ಉಳಿದಂತೆ ಹೋಂಡಾ ಕಂಪನಿಯು ತನ್ನ ಮುಂದಿನ 15 ಲಕ್ಷ ರಫ್ತುಗಳು ಕಳೆದ ಐದು ವರ್ಷಗಳಲ್ಲಿ ಸಾಧಿಸಿದೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ ಹೋಂಡಾ ಕ್ಲಿಕ್ 160 ಸ್ಕೂಟರ್ ಅನಾವರಣ

ಇದು ಹಿಂದಿನದಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ. ಭಾರತೀಯ ನಿರ್ಮಿತ ಮಾಡೆಲ್ ಶ್ರೇಣಿಯು ಅಂತರರಾಷ್ಟ್ರೀಯ ಮಾರುಕಟ್ಟೆಗಲ್ಲಿ ಜನಪ್ರಿಯತೆಯನ್ನು ಕಂಡುಕೊಳ್ಳುತ್ತಿರುವ ಸಮಯದಲ್ಲಿ ರಫ್ತುಗಳಲ್ಲಿನ ಏರಿಕೆಯು ಸಹ ಕಂಡು ಬರುತ್ತಿದೆ. ಗಮನಾರ್ಹವಾಗಿ, ಹೋಂಡಾ 2ವೀಲರ್ಸ್ ಇಂಡಿಯಾ ತನ್ನ ಜಾಗತಿಕ ರಫ್ತು ಹೆಜ್ಜೆಗುರುತನ್ನು ಇತರ ಮಾರುಕಟ್ಟೆಗಳ ನಡುವೆ ಅಭಿವೃದ್ಧಿ ಹೊಂದಿದ ಮಾರುಕಟ್ಟೆಗಳಾದ ಯುಎಸ್, ಜಪಾನ್, ಯುರೋಪ್‌ಗಳಿಗೆ ವಿಸ್ತರಿಸಲು ಹೊಸ 'ಸಾಗರೋತ್ತರ ವ್ಯಾಪಾರ ವಿಸ್ತರಣೆ'ಯನ್ನು ಸ್ಥಾಪಿಸಿದೆ. ಹೊಸ ವರ್ಟಿಕಲ್ ಹೋಂಡಾವು ಭಾರತದಲ್ಲಿ ಜಾಗತಿಕ ಎಂಜಿನ್‌ಗಳ ತಯಾರಿಕೆಯನ್ನು ಗುಜರಾತ್‌ನ ವಿಠಲಾಪುರ ಘಟಕದಲ್ಲಿ ಪ್ರಾರಂಭಿಸಿತು,

ಆಕರ್ಷಕ ವಿನ್ಯಾಸದಲ್ಲಿ ಹೊಸ ಹೋಂಡಾ ಕ್ಲಿಕ್ 160 ಸ್ಕೂಟರ್ ಅನಾವರಣ

ಇದು 250ಸಿಸಿ ಮತ್ತು ಅದಕ್ಕಿಂತ ಹೆಚ್ಚಿನ ಮೋಟಾರ್‌ಸೈಕಲ್ ಎಂಜಿನ್‌ಗಳನ್ನು ತಯಾರಿಸುತ್ತದೆ. ಹೋಂಡಾ ಜಾಗತಿಕವಾಗಿ 29 ಮಾರುಕಟ್ಟೆಗಳಿಗೆ ರಫ್ತು ಮಾಡುತ್ತದೆ ಮತ್ತು ಇದು 18 ದ್ವಿಚಕ್ರ ವಾಹನಗಳನ್ನು ಒಳಗೊಂಡಿದೆ. ಕಳೆದ ವರ್ಷ, ಭಾರತದಲ್ಲಿ ತಯಾರಿಸಿದ ಹೋಂಡಾ ನವಿ ಯುಎಸ್‌ನಲ್ಲಿ ಚಿಲ್ಲರೆ ಮಾರಾಟವನ್ನು ಪ್ರಾರಂಭಿಸಿತು,

Most Read Articles

Kannada
English summary
Honda unveiled new click 160 performance scooter details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X