ದಸರಾ ಮತ್ತು ದೀಪಾವಳಿ ವಿಶೇಷತೆಗಾಗಿ ವಿಶೇಷ ಆಫರ್ ಘೋಷಣೆ ಮಾಡಿದ ಹೊಪ್ ಎಲೆಕ್ಟ್ರಿಕ್

ದಸರಾ ಮತ್ತು ದೀಪಾವಳಿ ವಿಶೇಷತೆಗಾಗಿ ವಿವಿಧ ವಾಹನ ಉತ್ಪಾದನಾ ಕಂಪನಿಗಳು ಗರಿಷ್ಠ ಕೊಡುಗೆಗಗಳೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಿದ್ದು, ಹೊಪ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯು ಸಹ ಗರಿಷ್ಠ ಆಫರ್‌ಗಳನ್ನು ನೀಡುತ್ತಿದೆ.

ದಸರಾ ಮತ್ತು ದೀಪಾವಳಿ ವಿಶೇಷತೆಗಾಗಿ ವಿಶೇಷ ಆಫರ್ ಘೋಷಣೆ ಮಾಡಿದ ಹೊಪ್ ಎಲೆಕ್ಟ್ರಿಕ್

ಎಲೆಕ್ಟ್ರಿಕ್ ವಾಹನ ಉತ್ಪಾದನೆಯಲ್ಲಿ ವಿವಿಧ ಮಾದರಿಗಳೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಿರುವ ಹೊಪ್ ಎಲೆಕ್ಟ್ರಿಕ್ ಕಂಪನಿಯು ನಿಗದಿತ ಅವಧಿಯೊಳಗೆ ಇವಿ ಸ್ಕೂಟರ್ ಮಾದರಿಗಳಿಗೆ ಬುಕಿಂಗ್ ಸಲ್ಲಿಸುವ ಗ್ರಾಹಕರಿಗೆ ಉಚಿತ ಆಕ್ಸೆಸರಿಸ್ ಪ್ಯಾಕೇಜ್ ನೀಡುತ್ತಿದೆ.

ದಸರಾ ಮತ್ತು ದೀಪಾವಳಿ ವಿಶೇಷತೆಗಾಗಿ ವಿಶೇಷ ಆಫರ್ ಘೋಷಣೆ ಮಾಡಿದ ಹೊಪ್ ಎಲೆಕ್ಟ್ರಿಕ್

ಹೊಪ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಖರೀದಿಸುವ ಗ್ರಾಹಕರು ಅಕ್ಟೋಬರ್ 31ರ ಒಳಗಾಗಿ ಬುಕಿಂಗ್ ಸಲ್ಲಿಸಬೇಕಿದ್ದು, ನಿದದಿತ ಅವಧಿಯಲ್ಲಿ ಬುಕಿಂಗ್ ಸಲ್ಲಿಸುವ ಗ್ರಾಹಕರಿಗೆ ಹೊಸ ಆಫರ್ ಅನ್ವಯಿಸುತ್ತದೆ.

ದಸರಾ ಮತ್ತು ದೀಪಾವಳಿ ವಿಶೇಷತೆಗಾಗಿ ವಿಶೇಷ ಆಫರ್ ಘೋಷಣೆ ಮಾಡಿದ ಹೊಪ್ ಎಲೆಕ್ಟ್ರಿಕ್

ಆಕ್ಸೆಸರಿಸ್ ಪ್ಯಾಕೇಜ್, ಬಾಡಿ ಕ್ರ್ಯಾಶ್ ಗಾರ್ಡ್ ಸೇರಿದಂತೆ ಹಲವಾರು ಬಿಡಿಭಾಗಗಳಿದ್ದು, ಇವು ಸುಮಾರು ರೂ. 5 ಸಾವಿರ ಮೌಲ್ಯ ಹೊಂದಿವೆ. ಹೀಗಾಗಿ ಇವಿ ವಾಹನ ಖರೀದಿಸುವ ಗ್ರಾಹಕರಿಗೆ ಇದೊಂದು ಉತ್ತಮ ಅವಕಾಶವಾಗಿದೆ.

ದಸರಾ ಮತ್ತು ದೀಪಾವಳಿ ವಿಶೇಷತೆಗಾಗಿ ವಿಶೇಷ ಆಫರ್ ಘೋಷಣೆ ಮಾಡಿದ ಹೊಪ್ ಎಲೆಕ್ಟ್ರಿಕ್

ಇನ್ನು ದುಬಾರಿ ಇಂಧನಗಳ ಪರಿಣಾಮ ದೇಶಾದ್ಯಂತ ಇವಿ ವಾಹನಗಳ ಮಾರಾಟವು ಸಾಕಷ್ಟು ಬೇಡಿಕೆ ಪಡೆದುಕೊಳ್ಳುತ್ತಿದ್ದು, ಗ್ರಾಹಕರನ್ನು ಸೆಳೆಯಲು ಇವಿ ವಾಹನ ಉತ್ಪಾದನಾ ಕಂಪನಿಗಳ ನಡುವೆ ಭರ್ಜರಿ ಪೈಪೋಟಿ ಶುರುವಾಗಿದೆ.

ದಸರಾ ಮತ್ತು ದೀಪಾವಳಿ ವಿಶೇಷತೆಗಾಗಿ ವಿಶೇಷ ಆಫರ್ ಘೋಷಣೆ ಮಾಡಿದ ಹೊಪ್ ಎಲೆಕ್ಟ್ರಿಕ್

ಹೊಪ್ ಎಲೆಕ್ಟ್ರಿಕ್ ಕಂಪನಿಯು ಕೂಡಾ ತನ್ನ ಸಂಭಾವ್ಯ ಗ್ರಾಹಕರಿಗೆ ಕೆಲವು ವಿಶೇಷ ಆಫರ್ ಘೋಷಣೆ ಮಾಡುವ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ದೇಶದ ಪ್ರಮುಖ ನಗರಗಳಿಗೆ ಮಾರಾಟ ಸೌಲಭ್ಯವನ್ನು ವಿಸ್ತರಿಸುತ್ತಿದೆ.

ದಸರಾ ಮತ್ತು ದೀಪಾವಳಿ ವಿಶೇಷತೆಗಾಗಿ ವಿಶೇಷ ಆಫರ್ ಘೋಷಣೆ ಮಾಡಿದ ಹೊಪ್ ಎಲೆಕ್ಟ್ರಿಕ್

ಕಳೆದ ಕೆಲ ತಿಂಗಳಷ್ಟೇ ಕಂಪನಿಯು ದಕ್ಷಿಣ ಭಾರತದಲ್ಲಿ ಪ್ರಮುಖ ನಗರಗಳಲ್ಲಿ ಮಾರಾಟ ಸೌಲಭ್ಯಕ್ಕೆ ಚಾಲನೆ ನೀಡಿದ್ದ ಹೊಪ್ ಎಲೆಕ್ಟ್ರಿಕ್ ಕಂಪನಿಯು ಇದೀಗ ಹೊಸ ಆಕ್ಸೊ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಮಾದರಿಯನ್ನು ಬಿಡುಗಡೆ ಮಾಡಿ ದೇಶಾದ್ಯಂತ ಹೊಸ ಸಂಚಲನಕ್ಕೆ ಕಾರಣವಾಗಿದೆ. ಹೊಸ ಇವಿ ಬೈಕ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ದಸರಾ ಮತ್ತು ದೀಪಾವಳಿ ವಿಶೇಷತೆಗಾಗಿ ವಿಶೇಷ ಆಫರ್ ಘೋಷಣೆ ಮಾಡಿದ ಹೊಪ್ ಎಲೆಕ್ಟ್ರಿಕ್

ಹೊಸ ಆಕ್ಸೊ ಇವಿ ಬೈಕ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಸ್ಟ್ಯಾಂಡರ್ಡ್ ಮತ್ತು ಆಕ್ಸೊ ಎಕ್ಸ್ ಎನ್ನುವ ಎರಡು ವೆರಿಯೆಂಟ್ ‌ಹೊಂದಿದ್ದು, ಆರಂಭಿಕ ಮಾದರಿಯು ರೂ. 1,24,999 ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 1,39,999 ಬೆಲೆ ಹೊಂದಿದೆ.

ದಸರಾ ಮತ್ತು ದೀಪಾವಳಿ ವಿಶೇಷತೆಗಾಗಿ ವಿಶೇಷ ಆಫರ್ ಘೋಷಣೆ ಮಾಡಿದ ಹೊಪ್ ಎಲೆಕ್ಟ್ರಿಕ್

ಹೊಸ ಆಕ್ಸೊ ಇವಿ ಬೈಕ್ ಬಿಡುಗಡೆಯೊಂದಿಗೆ ಕಂಪನಿಯು ದೇಶಾದ್ಯಂತ ಪ್ರಮುಖ 25 ರಾಜ್ಯಗಳಲ್ಲಿ ಅಧಿಕೃತ ಬುಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಅಕ್ಟೋಬರ್ ಆರಂಭದಲ್ಲಿ ಹೊಸ ಇವಿ ಬೈಕ್ ವಿತರಣೆ ಆರಂಭಿಸುವುದಾಗಿ ಭರವಸೆ ನೀಡಿದೆ.

ದಸರಾ ಮತ್ತು ದೀಪಾವಳಿ ವಿಶೇಷತೆಗಾಗಿ ವಿಶೇಷ ಆಫರ್ ಘೋಷಣೆ ಮಾಡಿದ ಹೊಪ್ ಎಲೆಕ್ಟ್ರಿಕ್

ಬ್ಯಾಟರಿ ಮತ್ತು ಮೈಲೇಜ್

ಆಕ್ಸೊ ಇವಿ ಬೈಕ್ ಮಾದರಿಯಲ್ಲಿ ಹೊಪ್ ಕಂಪನಿಯು 3.75kWh ಬ್ಯಾಟರಿ ಪ್ಯಾಕ್ ನೀಡಿದ್ದು, 811 ಎನ್ಎಂಸಿ ಸ್ಮಾರ್ಟ್ ಬ್ಯಾಟರಿ ಮ್ಯಾನೇಜ್‌ಮೆಂಟ್ ಸಿಸ್ಟಂ ಹೊಂದಿರುವ ಹೊಸ ಬೈಕ್ ಪ್ರತಿ ಚಾರ್ಜ್‌ಗೆ ಗರಿಷ್ಠ 150 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ದಸರಾ ಮತ್ತು ದೀಪಾವಳಿ ವಿಶೇಷತೆಗಾಗಿ ವಿಶೇಷ ಆಫರ್ ಘೋಷಣೆ ಮಾಡಿದ ಹೊಪ್ ಎಲೆಕ್ಟ್ರಿಕ್

ಹೊಸ ಇವಿ ಬೈಕಿನಲ್ಲಿ ಹಬ್ ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ ಜೋಡಿಸಲಾಗಿದ್ದು, ಇದು 8.31 ಬಿಎಚ್‌ಪಿ ಮತ್ತು 200 ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಹೊಸ ಬೈಕಿನಲ್ಲಿರುವ ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟಾರ್ ಸೌಲಭ್ಯವು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP67 ಮತ್ತು IP65 ರೇಟಿಂಗ್ಸ್ ಹೊಂದಿದೆ.

ದಸರಾ ಮತ್ತು ದೀಪಾವಳಿ ವಿಶೇಷತೆಗಾಗಿ ವಿಶೇಷ ಆಫರ್ ಘೋಷಣೆ ಮಾಡಿದ ಹೊಪ್ ಎಲೆಕ್ಟ್ರಿಕ್

ಹೊಸ ಆಕ್ಸೊ ಬೈಕ್ ಮಾದರಿಯು 2,100 ಎಂಎಂ ಉದ್ದ, 733 ಎಂಎಂ ಅಗಲ, 1,085 ಎಂಎಂ ಎತ್ತರ, 780 ಎಂಎಂ ಆಸನ ಎತ್ತರ, 180 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದ್ದು, ಒಟ್ಟು 140 ತೂಕದೊಂದಿಗೆ 250 ಕೆ.ಜಿ ಲೋಡಿಂಗ್ ಸೌಮರ್ಥ್ಯ ಪಡೆದುಕೊಂಡಿದೆ.

ದಸರಾ ಮತ್ತು ದೀಪಾವಳಿ ವಿಶೇಷತೆಗಾಗಿ ವಿಶೇಷ ಆಫರ್ ಘೋಷಣೆ ಮಾಡಿದ ಹೊಪ್ ಎಲೆಕ್ಟ್ರಿಕ್

ಚಾರ್ಜಿಂಗ್ ಸೌಲಭ್ಯಕ್ಕಾಗಿ ಹೊಸ ಬೈಕಿನಲ್ಲಿ 16Amp ಪವರ್ ಸಾಕೆಟ್ ನೀಡಲಾಗಿದ್ದು, 850 ವೊಲ್ಟ್ ಚಾರ್ಜರ್ ಮೂಲಕ ಸೊನ್ನೆಯಿಂದ ಶೇ.80 ರಷ್ಟು ಬ್ಯಾಟರಿಯನ್ನು ನಾಲ್ಕು ಗಂಟೆಗಳಲ್ಲಿ ಚಾರ್ಜ್ ಮಾಡಬಹುದಾಗಿದೆ.

ದಸರಾ ಮತ್ತು ದೀಪಾವಳಿ ವಿಶೇಷತೆಗಾಗಿ ವಿಶೇಷ ಆಫರ್ ಘೋಷಣೆ ಮಾಡಿದ ಹೊಪ್ ಎಲೆಕ್ಟ್ರಿಕ್

ಹಾಗೆಯೇ ಆಕ್ಸೊ ಸಾಮಾನ್ಯ ಮಾದರಿಯಲ್ಲಿ ಮೂರು ರೈಡಿಂಗ್ ಮೋಡ್‌ಗಳನ್ನು ನೀಡಲಾಗಿದ್ದು, ಇಕೋ, ಪವರ್ ಮತ್ತು ಸ್ಪೋರ್ಟ್ ಮೋಡ್ ಹೊಂದಿದ್ದರೆ ಆಕ್ಸೊ ಎಕ್ಸ್ ಮಾದರಿಯಲ್ಲಿ ಮೊದಲ ಮೂರು ರೈಡ್ ಮೋಡ್‌ಗಳೊಂದಿಗೆ ಹೆಚ್ಚುವರಿಯಾಗಿ ಟರ್ಬೊ ಮೋಡ್ ನೀಡಿಲಾಗಿದೆ. ಟರ್ಬೊ ಮೋಡ್‌ನಲ್ಲಿ ಕೇವಲ 4 ಸೆಕೆಂಡ್‌ಗಳಲ್ಲಿ ಪ್ರತಿ ಗಂಟೆಗೆ ಸೊನ್ನೆಯಿದ-40 ಕಿ.ಮೀ ವೇಗ ಪಡೆದುಕೊಳ್ಳಬಹುದಾಗಿದ್ದು, ಪ್ರತಿ ಗಂಟೆಗೆ ಗರಿಷ್ಠ 95 ಕಿ.ಮೀ ಗರಿಷ್ಠ ವೇಗವನ್ನು ತಲುಪುತ್ತದೆ.

ದಸರಾ ಮತ್ತು ದೀಪಾವಳಿ ವಿಶೇಷತೆಗಾಗಿ ವಿಶೇಷ ಆಫರ್ ಘೋಷಣೆ ಮಾಡಿದ ಹೊಪ್ ಎಲೆಕ್ಟ್ರಿಕ್

ಹೊಸ ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ಸ್ ಜೋಡಿಸಲಾಗಿದ್ದು, ಬ್ರೇಕಿಂಗ್ ಸೌಲಭ್ಯಕ್ಕಾಗಿ ಮುಂಭಾಗದಲ್ಲಿ 240ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 220ಎಂಎಂ ಡಿಸ್ಕ್ ಜೋಡಿಸಲಾಗಿದೆ.

ದಸರಾ ಮತ್ತು ದೀಪಾವಳಿ ವಿಶೇಷತೆಗಾಗಿ ವಿಶೇಷ ಆಫರ್ ಘೋಷಣೆ ಮಾಡಿದ ಹೊಪ್ ಎಲೆಕ್ಟ್ರಿಕ್

ಬ್ರೇಕಿಂಗ್ ಸೌಲಭ್ಯಕ್ಕಾಗಿ ಹೊಸ ಬೈಕಿನಲ್ಲಿ ಕಾಂಬಿ-ಬ್ರೇಕಿಂಗ್ ಸಿಸ್ಟಂ ಮತ್ತು ಹೊಂದಾಣಿಕೆ ಮಾಡಬಹುದಾದ ರಿಜನರೇಟಿವ್ ಬ್ರೇಕಿಂಗ್‌ ನೀಡಲಾಗಿದ್ದು, ಹೊಸ ಬೈಕಿನಲ್ಲಿ ಪೆಟ್ರೋಲ್ ಬೈಕ್‌ಗಳಲ್ಲಿ ಎಂಜಿನ್ ಜೋಡಣೆಯ ರೀತಿಯಲ್ಲಿ ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಹೊಂದಿಸಲಾಗಿದೆ.

Most Read Articles

Kannada
English summary
Hop electric mobility announced festive offers details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X