ಪ್ರತಿ ಚಾರ್ಜ್‌ಗೆ 150 ಕಿ.ಮೀ ಮೈಲೇಜ್ ನೀಡುವ ಹೊಪ್ ಆಕ್ಸೊ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆ

ಜೈಪುರ್ ಮೂಲದ ಹೊಪ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯು ತನ್ನ ಹೊಸ ಆಕ್ಸೊ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಇವಿ ಬೈಕ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಪ್ರತಿ ಚಾರ್ಜ್‌ಗೆ 150 ಕಿ.ಮೀ ಮೈಲೇಜ್ ನೀಡುವ ಹೊಪ್ ಆಕ್ಸೊ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆ

ಹೊಸ ಆಕ್ಸೊ ಇವಿ ಬೈಕ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಸ್ಟ್ಯಾಂಡರ್ಡ್ ಮತ್ತು ಆಕ್ಸೊ ಎಕ್ಸ್ ಎನ್ನುವ ಎರಡು ವೆರಿಯೆಂಟ್ ‌ಹೊಂದಿದ್ದು, ಆರಂಭಿಕ ಮಾದರಿಯು ರೂ. 1,24,999 ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 1,39,999 ಬೆಲೆ ಹೊಂದಿದೆ.

 ಪ್ರತಿ ಚಾರ್ಜ್‌ಗೆ 150 ಕಿ.ಮೀ ಮೈಲೇಜ್ ನೀಡುವ ಹೊಪ್ ಆಕ್ಸೊ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆ

ಹೊಸ ಆಕ್ಸೊ ಇವಿ ಬೈಕ್ ಬಿಡುಗಡೆಯೊಂದಿಗೆ ಕಂಪನಿಯು ದೇಶಾದ್ಯಂತ ಪ್ರಮುಖ 25 ರಾಜ್ಯಗಳಲ್ಲಿ ಅಧಿಕೃತ ಬುಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಅಕ್ಟೋಬರ್ ಆರಂಭದಲ್ಲಿ ಹೊಸ ಇವಿ ಬೈಕ್ ವಿತರಣೆ ಆರಂಭಿಸುವುದಾಗಿ ಭರವಸೆ ನೀಡಿದೆ.

ಪ್ರತಿ ಚಾರ್ಜ್‌ಗೆ 150 ಕಿ.ಮೀ ಮೈಲೇಜ್ ನೀಡುವ ಹೊಪ್ ಆಕ್ಸೊ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆ

ಬ್ಯಾಟರಿ ಮತ್ತು ಮೈಲೇಜ್

ಆಕ್ಸೊ ಇವಿ ಬೈಕ್ ಮಾದರಿಯಲ್ಲಿ ಹೊಪ್ ಕಂಪನಿಯು 3.75kWh ಬ್ಯಾಟರಿ ಪ್ಯಾಕ್ ನೀಡಿದ್ದು, 811 ಎನ್ಎಂಸಿ ಸ್ಮಾರ್ಟ್ ಬ್ಯಾಟರಿ ಮ್ಯಾನೇಜ್‌ಮೆಂಟ್ ಸಿಸ್ಟಂ ಹೊಂದಿರುವ ಹೊಸ ಬೈಕ್ ಪ್ರತಿ ಚಾರ್ಜ್‌ಗೆ ಗರಿಷ್ಠ 150 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಪ್ರತಿ ಚಾರ್ಜ್‌ಗೆ 150 ಕಿ.ಮೀ ಮೈಲೇಜ್ ನೀಡುವ ಹೊಪ್ ಆಕ್ಸೊ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆ

ಹೊಸ ಇವಿ ಬೈಕಿನಲ್ಲಿ ಹಬ್ ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ ಜೋಡಿಸಲಾಗಿದ್ದು, ಇದು 8.31 ಬಿಎಚ್‌ಪಿ ಮತ್ತು 200 ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಹೊಸ ಬೈಕಿನಲ್ಲಿರುವ ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟಾರ್ ಸೌಲಭ್ಯವು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP67 ಮತ್ತು IP65 ರೇಟಿಂಗ್ಸ್ ಹೊಂದಿದೆ.

ಪ್ರತಿ ಚಾರ್ಜ್‌ಗೆ 150 ಕಿ.ಮೀ ಮೈಲೇಜ್ ನೀಡುವ ಹೊಪ್ ಆಕ್ಸೊ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆ

ಹೊಸ ಆಕ್ಸೊ ಬೈಕ್ ಮಾದರಿಯು 2,100 ಎಂಎಂ ಉದ್ದ, 733 ಎಂಎಂ ಅಗಲ, 1,085 ಎಂಎಂ ಎತ್ತರ, 780 ಎಂಎಂ ಆಸನ ಎತ್ತರ, 180 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದ್ದು, ಒಟ್ಟು 140 ತೂಕದೊಂದಿಗೆ 250 ಕೆ.ಜಿ ಲೋಡಿಂಗ್ ಸೌಮರ್ಥ್ಯ ಪಡೆದುಕೊಂಡಿದೆ.

ಪ್ರತಿ ಚಾರ್ಜ್‌ಗೆ 150 ಕಿ.ಮೀ ಮೈಲೇಜ್ ನೀಡುವ ಹೊಪ್ ಆಕ್ಸೊ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆ

ಚಾರ್ಜಿಂಗ್ ಸೌಲಭ್ಯಕ್ಕಾಗಿ ಹೊಸ ಬೈಕಿನಲ್ಲಿ 16 Amp ಪವರ್ ಸಾಕೆಟ್ ನೀಡಲಾಗಿದ್ದು, 850 ವೊಲ್ಟ್ ಚಾರ್ಜರ್ ಮೂಲಕ ಸೊನ್ನೆಯಿಂದ ಶೇ.80 ರಷ್ಟು ಬ್ಯಾಟರಿಯನ್ನು ನಾಲ್ಕು ಗಂಟೆಗಳಲ್ಲಿ ಚಾರ್ಜ್ ಮಾಡಬಹುದಾಗಿದೆ.

ಪ್ರತಿ ಚಾರ್ಜ್‌ಗೆ 150 ಕಿ.ಮೀ ಮೈಲೇಜ್ ನೀಡುವ ಹೊಪ್ ಆಕ್ಸೊ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆ

ಹಾಗೆಯೇ ಆಕ್ಸೊ ಸಾಮಾನ್ಯ ಮಾದರಿಯಲ್ಲಿ ಮೂರು ರೈಡಿಂಗ್ ಮೋಡ್‌ಗಳನ್ನು ನೀಡಲಾಗಿದ್ದು, ಇಕೋ, ಪವರ್ ಮತ್ತು ಸ್ಪೋರ್ಟ್ ಮೋಡ್ ಹೊಂದಿದ್ದರೆ ಆಕ್ಸೊ ಎಕ್ಸ್ ಮಾದರಿಯಲ್ಲಿ ಮೊದಲ ಮೂರು ರೈಡ್ ಮೋಡ್‌ಗಳೊಂದಿಗೆ ಹೆಚ್ಚುವರಿಯಾಗಿ ಟರ್ಬೊ ಮೋಡ್ ನೀಡಿಲಾಗಿದೆ. ಟರ್ಬೊ ಮೋಡ್‌ನಲ್ಲಿ ಕೇವಲ 4 ಸೆಕೆಂಡ್‌ಗಳಲ್ಲಿ ಪ್ರತಿ ಗಂಟೆಗೆ ಸೊನ್ನೆಯಿದ-40 ಕಿ.ಮೀ ವೇಗ ಪಡೆದುಕೊಳ್ಳಬಹುದಾಗಿದ್ದು, ಪ್ರತಿ ಗಂಟೆಗೆ ಗರಿಷ್ಠ 95 ಕಿ.ಮೀ ಗರಿಷ್ಠ ವೇಗವನ್ನು ತಲುಪುತ್ತದೆ.

ಪ್ರತಿ ಚಾರ್ಜ್‌ಗೆ 150 ಕಿ.ಮೀ ಮೈಲೇಜ್ ನೀಡುವ ಹೊಪ್ ಆಕ್ಸೊ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆ

ಹೊಸ ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ಸ್ ಜೋಡಿಸಲಾಗಿದ್ದು, ಬ್ರೇಕಿಂಗ್ ಸೌಲಭ್ಯಕ್ಕಾಗಿ ಮುಂಭಾಗದಲ್ಲಿ 240ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 220ಎಂಎಂ ಡಿಸ್ಕ್ ಜೋಡಿಸಲಾಗಿದೆ.

ಪ್ರತಿ ಚಾರ್ಜ್‌ಗೆ 150 ಕಿ.ಮೀ ಮೈಲೇಜ್ ನೀಡುವ ಹೊಪ್ ಆಕ್ಸೊ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆ

ಬ್ರೇಕಿಂಗ್ ಸೌಲಭ್ಯಕ್ಕಾಗಿ ಹೊಸ ಬೈಕಿನಲ್ಲಿ ಕಾಂಬಿ-ಬ್ರೇಕಿಂಗ್ ಸಿಸ್ಟಂ ಮತ್ತು ಹೊಂದಾಣಿಕೆ ಮಾಡಬಹುದಾದ ರಿಜನರೇಟಿವ್ ಬ್ರೇಕಿಂಗ್‌ ನೀಡಲಾಗಿದ್ದು, ಹೊಸ ಬೈಕಿನಲ್ಲಿ ಪೆಟ್ರೋಲ್ ಬೈಕ್‌ಗಳಲ್ಲಿ ಎಂಜಿನ್ ಜೋಡಣೆಯ ರೀತಿಯಲ್ಲಿ ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಹೊಂದಿಸಲಾಗಿದೆ.

ಪ್ರತಿ ಚಾರ್ಜ್‌ಗೆ 150 ಕಿ.ಮೀ ಮೈಲೇಜ್ ನೀಡುವ ಹೊಪ್ ಆಕ್ಸೊ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆ

ಹೊಸ ಬೈಕಿನಲ್ಲಿರುವ ಎರಡೂ ಚಕ್ರಗಳ ಅಲ್ಯೂಮಿನಿಯಂ ಮಿಶ್ರ ಲೋಹದಿಂದ ತಯಾರಿಸಲಾಗಿದ್ದು, 90/90 ಆರ್18 ಟೈರ್‌ನೊಂದಿಗೆ 18-ಇಂಚಿನ ಮುಂಭಾಗದ ಚಕ್ರವನ್ನು ಮತ್ತು ಹಿಂಬದಿಯಲ್ಲಿ 130/17 ಆರ್17 ಟೈರ್‌ನೊಂದಿಗೆ ಚಿಕ್ಕದಾದ 17-ಇಂಚಿನ ಚಕ್ರವನ್ನು ನೀಡಲಾಗಿದೆ.

ಪ್ರತಿ ಚಾರ್ಜ್‌ಗೆ 150 ಕಿ.ಮೀ ಮೈಲೇಜ್ ನೀಡುವ ಹೊಪ್ ಆಕ್ಸೊ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆ

ಹಾಗೆಯೇ ಹೊಸ ಬೈಕಿನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್, ಎಲ್ಇಡಿ ಟರ್ನ್ ಇಂಡಿಕೇಟರ್, 5-ಇಂಚಿನ್ ಇನ್ಪಾರ್ಮೆಷನ್ ಡಿಸ್‌ಪ್ಲೇ, ಬ್ಲೂಟೂತ್ ಕನೆಕ್ಟಿವಿಟಿ, ಯುಎಸ್‌ಬಿ ಚಾರ್ಜರ್, ಸೈಡ್ ಸ್ಟ್ಯಾಂಡ್ ಸೆನ್ಸಾರ್ ಸೌಲಭ್ಯಗಳಿವೆ.

ಪ್ರತಿ ಚಾರ್ಜ್‌ಗೆ 150 ಕಿ.ಮೀ ಮೈಲೇಜ್ ನೀಡುವ ಹೊಪ್ ಆಕ್ಸೊ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆ

ಇದರೊಂದಿಗೆ ಹೊಸ ಬೈಕಿನಲ್ಲಿ ಸುರಕ್ಷತೆಗಾಗಿ ಸ್ಪೀಡ್ ಕಂಟ್ರೋಲ್, ಜಿಯೋ ಫೆನ್ಸಿಂಗ್, ಆಂಟಿ ಥೇಫ್ಟ್, ರೈಡ್ ಸ್ಟಾರ್ಟ್, ಪಾರ್ಕ್ ಅಸಿಸ್ಟ್, ರಿವರ್ಸ್ ಅಸಿಸ್ಟ್ ಸೌಲಭ್ಯಗಳಿದ್ದು, 4ಜಿ ಕನೆಕ್ಟಿವಿಟಿ ಸೌಲಭ್ಯಗಳೊಂದಿಗೆ ಬೈಕಿನ ತಾಂತ್ರಿಕ ಸೌಲಭ್ಯಗಳನ್ನು ಆ್ಯಪ್ ಮೂಲಕ ನಿಯಂತ್ರಿಸಬಹುದಾಗಿದೆ.

ಪ್ರತಿ ಚಾರ್ಜ್‌ಗೆ 150 ಕಿ.ಮೀ ಮೈಲೇಜ್ ನೀಡುವ ಹೊಪ್ ಆಕ್ಸೊ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆ

ಇನ್ನು ಹೊಸ ಬೈಕಿನಲ್ಲಿ ಕಂಪನಿಯು ರೆಡ್, ಗ್ರೀನ್, ಗ್ರೇ ಮತ್ತು ಬ್ಲ್ಯೂ ಬಣ್ಣಗಳ ಆಯ್ಕೆ ನೀಡಿದ್ದು, ಬ್ಯಾಟರಿ ಪ್ಯಾಕ್ ಮೇಲೆ ಗರಿಷ್ಠ 4 ವರ್ಷ/50 ಸಾವಿರ ಕಿ.ಮೀ ತನಕ ವಾರಂಟಿ ಮತ್ತು ಹೊಸ ಬೈಕ್ ತಾಂತ್ರಿಕ ಸೌಲಭ್ಯಗಳ ಮೇಲೆ ಮೂರು ವರ್ಷಗಳ ಪ್ರಮಾಣೀಕೃತ ವಾರಂಟಿ ಸಿಗಲಿದೆ.

Most Read Articles

Kannada
English summary
Hop oxo electric motorcycle launched in india at rs 1 25 lakh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X