ಗ್ರಾಹಕರಿಗೆ ಆಫ್‌ ರೋಡ್‌ ತರಬೇತಿ ನೀಡಲು ಜಾವಾ ಯೆಜ್ಡಿ ನೊಮಾಡ್ಸ್ ಟ್ರಯಲ್ ಅಟ್ಯಾಕ್ ಆಯೋಜನೆ

ದೇಶದ ಆಟೋ ಉದ್ಯಮದಲ್ಲಿ 90ರ ದಶಕದಲ್ಲಿ ಭಾರೀ ಸದ್ದು ಮಾಡಿದ್ದ ಲೆಜೆಂಡರಿ ಬೈಕ್‌ ಮಾದರಿಯಾದ ಯಜ್ಡಿ, ಆಧುನಿಕ ಯುವ ಪೀಳಿಗೆಯನ್ನು ಮತ್ತೊಮ್ಮೆ ತನ್ನತ್ತ ಸೆಳೆಯಲು ಅತ್ಯಾಧುನಿಕ ತಂತ್ರಜ್ಞಾನ ಮತ್ತು ತನ್ನ ಹಳೇ ಲುಕ್‌ನೊಂದಿಗೆ ಹೊಸ ಸ್ಟೈಲಿಷ್ ಮಾರ್ಪಾಡುಗಳನ್ನು ಪಡೆದುಕೊಂಡು ಇದೀಗ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

ಗ್ರಾಹಕರಿಗೆ ಆಫ್‌ ರೋಡ್‌ ತರಬೇತಿ ನೀಡಲು ಜಾವಾ ಯೆಜ್ಡಿ ನೊಮಾಡ್ಸ್ ಟ್ರಯಲ್ ಅಟ್ಯಾಕ್ ಆಯೋಜನೆ

ಈ ಐತಿಹಾಸಿಕ ಯೆಜ್ಡಿ ಬ್ರ್ಯಾಂಡ್ ಅನ್ನು ಈ ವರ್ಷದ ಆರಂಭದಲ್ಲಿ ಮತ್ತೆ ಲಾಂಚ್‌ ಮಾಡಲಾಯಿತು. ಈ ಕ್ಲಾಸಿಕ್ ಲೆಜೆಂಡ್ ಕಂಪನಿಯು ಯೆಜ್ಡಿ ಬೈಕ್‌ಗಳನ್ನು ಹೊಸ ರೂಪದೊಂದಿಗೆ ಮಾರುಕಟ್ಟೆಗೆ ಪರಿಚಯಿಸಿದ್ದು, ಯೆಜ್ಡಿ ಬ್ರಾಂಡ್ ಅಡಿಯಲ್ಲಿ ಕ್ಲಾಸಿಕ್ ಲೆಜೆಂಡ್ ಕಂಪನಿಯು ಮೂರು ಹೊಸ ಬೈಕ್ ಮಾದರಿಗಳನ್ನು ಆಧುನಿಕ ತಾಂತ್ರಿಕ ವೈಶಿಷ್ಟ್ಯತೆಯೊಂದಿಗೆ ಅಭಿವೃದ್ದಿಗೊಳಿಸಿ ಬಿಡುಗಡೆ ಮಾಡಿದೆ.

ಗ್ರಾಹಕರಿಗೆ ಆಫ್‌ ರೋಡ್‌ ತರಬೇತಿ ನೀಡಲು ಜಾವಾ ಯೆಜ್ಡಿ ನೊಮಾಡ್ಸ್ ಟ್ರಯಲ್ ಅಟ್ಯಾಕ್ ಆಯೋಜನೆ

ಈ ಹಿಂದಿನಿಂದಲೂ ಹಳೆಯ ಯಜ್ಡಿ ಮಾದರಿಗಳನ್ನು ಒಂದೆಡೆ ಸೇರಿಸಿ ಒಟ್ಟಿಗೆ ರೈಡ್‌ ಮಾಡುವುದು ತೊಂಬತ್ತರ ದಶಕದಿಂದಲೂ ಯಜ್ಡಿ ರೈಡರ್ಸ್‌ ರೂಢಿಸಿಕೊಂಡಿದ್ದಾರೆ. ಆದರೆ ಇದೀಗ ಹೊಸ ಮಾದರಿಗಳನ್ನು ಇದೇ ರೀತಿ ಒಂದೆಡೆ ಸೇರಿಸಿ ಓಡಿಸಲು ಯಜ್ಡಿ ಬ್ರಾಂಡ್‌ ನಿರ್ಧರಿಸಿದ್ದು, ಯಜ್ಡಿ ಗ್ರಾಹಕರಿಗಾಗಿಗೆ ಆಫ್‌ ರೋಡ್‌ ರೈಡಿಂಗ್‌ ತರಬೇತಿಯನ್ನು ಆಯೋಜಿಸಿತ್ತು.

ಗ್ರಾಹಕರಿಗೆ ಆಫ್‌ ರೋಡ್‌ ತರಬೇತಿ ನೀಡಲು ಜಾವಾ ಯೆಜ್ಡಿ ನೊಮಾಡ್ಸ್ ಟ್ರಯಲ್ ಅಟ್ಯಾಕ್ ಆಯೋಜನೆ

ಅದರಂತೆ ಹೊಸ ಮಾದರಿಗಳೊಂದಿಗೆ ನೊಮಾಡ್ಸ್ ಟ್ರಯಲ್ ರೈಡ್‌ ಅನ್ನು ಪರಿಚಯಿಸಿದೆ. ಇದು ಕೇವಲ ಹೊಸ ಯೆಜ್ಡಿ ಸ್ಕ್ರ್ಯಾಂಬ್ಲರ್ ಮತ್ತು ಯೆಜ್ಡಿ ಅಡ್ವೆಂಚರ್‌ ಹೊಂದಿರುವ ಮಾಲೀಕರಿಗಾಗಿ ಆಫ್-ರೋಡ್ ರೈಡ್ ಅನುಭವ ನೀಡಲು ಸ್ಪೆಷಲ್ ಟ್ರಾಕ್ ಅನ್ನು ಸಿದ್ಧಪಡಿಸಿತ್ತು. ಆದರೂ ಯಜ್ಡಿ ಬೈಕ್‌ ಆನ್‌ ರೋಡ್‌ ಬೈಕ್‌ ಆಗಿದ್ದರೂ, ಬ್ರಾಂಡ್ ಏತಕ್ಕೆ ಆಫ್ ರೋಡ್‌ ರೈಡ್‌ ಆಯ್ಕೆ ಮಾಡಿಕೊಂಡಿದೆ ಎಂಬ ಪ್ರಶ್ನೆ ನಿಮಗಿದ್ದರೆ ಕೆಳಗಿನ ಆಸಕ್ತಿಕರ ವಿಷಯಗಳನ್ನು ಓದಿ..

ಗ್ರಾಹಕರಿಗೆ ಆಫ್‌ ರೋಡ್‌ ತರಬೇತಿ ನೀಡಲು ಜಾವಾ ಯೆಜ್ಡಿ ನೊಮಾಡ್ಸ್ ಟ್ರಯಲ್ ಅಟ್ಯಾಕ್ ಆಯೋಜನೆ

ಯೆಜ್ಡಿ ಮತ್ತು ಅದರ ಆಫ್-ರೋಡ್ ಹೆರಿಟೇಜ್

ಯೆಜ್ಡಿಯ ಮೋಟಾರ್ ಸೈಕಲ್‌ಗಳು ಒಂದು ಕಾಲದಲ್ಲಿದ್ದ ಆಣಿಮುತ್ಯಗಳೆಂದೇ ಹೇಳಬಹದು. ಬಹುತೇಕ ಖಾಲಿ ಭಾರತೀಯ ರಸ್ತೆಗಳಲ್ಲಿ ಇವು ಸಂಚರಿಸದರೆ ಒಂದು ಅದ್ಬುತ ದೃಷ್ಯವಾಗಿ ಕಾಣುತ್ತಿತ್ತು. ಅವುಗಳ ಮಿನುಗುವ ಕ್ರೋಮ್ ಎಂಜಿನ್ ಕವರ್‌ಗಳು ಮತ್ತು ಅವಳಿ ಎಕ್ಸಾಸ್ಟ್ ಪೈಪ್, ಐಕಾನಿಕ್ ಮೆಟಾಲಿಕ್ ಎಕ್ಸಾಸ್ಟ್ ನೋಟ್ ಇತ್ಯಾದಿಗಳೊಂದಿಗೆ ರಸ್ತೆಯಲ್ಲಿ ಸಂಚರಿಸಿದರೆ ಎಂತವರನ್ನು ತನ್ನತ್ತ ಸೆಳೆಯಯುತ್ತಿದ್ದವು.

ಗ್ರಾಹಕರಿಗೆ ಆಫ್‌ ರೋಡ್‌ ತರಬೇತಿ ನೀಡಲು ಜಾವಾ ಯೆಜ್ಡಿ ನೊಮಾಡ್ಸ್ ಟ್ರಯಲ್ ಅಟ್ಯಾಕ್ ಆಯೋಜನೆ

ಇನ್ನು ಈ ಮೋಟಾರ್‌ಸೈಕಲ್‌ಗಳು ಆನ್‌ ರೋಡ್‌ ಮಾತ್ರವಲ್ಲದೇ ಆಫ್-ರೋಡ್‌ನಲ್ಲಿಯೂ ಜನಪ್ರಿಯತೆ ಪಡೆದುಕೊಂಡಿದ್ದವು. ಯೆಜ್ಡಿಯ ಮೋಟಾರ್‌ಸೈಕಲ್ ಸತತವಾಗಿ ಹಲವಾರು ವರ್ಷಗಳ ಕಾಲ ಭಾರತೀಯ ರ್ಯಾಲಿಂಗ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿತ್ತು. ಈ ಮೋಟಾರ್‌ಸೈಕಲ್‌ಗಳು ಫುಲ್ ಥ್ರೊಟಲ್‌ನಲ್ಲಿ ರ್ಯಾಲಿ ಮಾಡುವಾಗ ರಂಬಲ್ ಮಾಡುವುದರ ಜೊತೆಗೆ ಬಿಳಿ ಹೊಗೆಯನ್ನು ಬಿಟ್ಟರೆ ಯುವ ಪೀಳಿಗೆಗೆ ರೋಮಾಂಚನದ ಅಣುಭವವಾಗುತ್ತಿತ್ತು. ಇದು ಕೇಳಲು ವಿಚಿತ್ರವಾಗಿದ್ದರು ಅದರ ಸೌಂಡ್‌ ಹಾಗೂ ಹೊಗೆಗೆ ಅಭಿಮಾನಿಗಳಿದ್ದರು.

ಗ್ರಾಹಕರಿಗೆ ಆಫ್‌ ರೋಡ್‌ ತರಬೇತಿ ನೀಡಲು ಜಾವಾ ಯೆಜ್ಡಿ ನೊಮಾಡ್ಸ್ ಟ್ರಯಲ್ ಅಟ್ಯಾಕ್ ಆಯೋಜನೆ

ಮೊದಲು ಯೆಜ್ಡಿ ರೋಡ್‌ಕಿಂಗ್‌ನಂತಹ ರಸ್ತೆ ಮೋಟಾರ್‌ಸೈಕಲ್‌ಗಳನ್ನು ಪರಿಚಯಿಸಲಾಗಿತ್ತಜು, ನಂತರ ಆಫ್-ರೋಡ್ ಬಳಕೆಗಾಗಿ ಮಾರ್ಪಡಿಸಲಾಯಿತು. ಈ ಮಾರ್ಪಾಡಿನಂತರ ಮೋಟಾರ್‌ಸ್ಪೋರ್ಟ್ ಉತ್ಸಾಹಿಗಳಂತೂ ಆಗಿನ ಕಾಲದಲ್ಲಿ ಹುಚ್ಚು ಅಭಿಮಾನಿಗಳಾಗಿಬಿಟ್ಟರು. ಇಂದಿಗೂ ಇದರ ಕ್ರೇಜ್ ಹಾಗೆಯೇ ಇದ್ದು, ಬ್ರಾಂಡ್‌ ಅನ್ನು ಮರುಸ್ಥಾಪಿಸಲು ಯೆಜ್ಡಿ ಈ ವರ್ಷದ ಆರಂಭದಲ್ಲಿ ಮಾರುಕಟ್ಟೆಗೆ ಮರಳಿದಾಗ ಎರಡು ಆಫ್-ರೋಡ್-ಸಿದ್ಧ ಮೋಟಾರ್‌ಸೈಕಲ್‌ಗಳನ್ನು ಬಿಡುಗಡೆ ಮಾಡಿತು.

ಗ್ರಾಹಕರಿಗೆ ಆಫ್‌ ರೋಡ್‌ ತರಬೇತಿ ನೀಡಲು ಜಾವಾ ಯೆಜ್ಡಿ ನೊಮಾಡ್ಸ್ ಟ್ರಯಲ್ ಅಟ್ಯಾಕ್ ಆಯೋಜನೆ

ಆಫ್-ರೋಡ್-ರೆಡಿ ಯೆಜ್ಡಿ ಮೋಟಾರ್‌ಸೈಕಲ್‌ಗಳು

ಆಫ್‌ ರೋಡ್‌ ಪ್ರಿಯರಿಗಾಗಿ ಯೆಜ್ಡಿ ಸ್ಕ್ರ್ಯಾಂಬ್ಲರ್ ಮತ್ತು ಯೆಜ್ಡಿ ಅಡ್ವೆಂಚರ್‌ ಎಂಬ ಎರಡು ಮೋಟಾರ್‌ಸೈಕಲ್‌ಗಳನ್ನು ಲಾಂಚ್‌ ಮಾಡಲಾಯಿತು. ಈ ಎರಡು ಮಾದರಿಗಳು ಒಂದೇ ಎಂಜಿನ್‌ನಿಂದ ಚಾಲಿತವಾಗುವಂತೆ ಕಂಡರೂ, ಎರಡೂ ಸಂಪೂರ್ಣವಾಗಿ ವಿಭಿನ್ನವಾಗಿವೆ. ಈ ಎರಡೂ ಬೈಕ್‌ಗಳ ಸಾಮರ್ಥ್ಯ ಮಾತ್ರ ಒಂದೇ ಆಗಿದೆ.

ಗ್ರಾಹಕರಿಗೆ ಆಫ್‌ ರೋಡ್‌ ತರಬೇತಿ ನೀಡಲು ಜಾವಾ ಯೆಜ್ಡಿ ನೊಮಾಡ್ಸ್ ಟ್ರಯಲ್ ಅಟ್ಯಾಕ್ ಆಯೋಜನೆ

ಸ್ಕ್ರ್ಯಾಂಬ್ಲರ್ ಮುಂಭಾಗದಲ್ಲಿ ಡರ್ಟ್ ಬೈಕ್-ಶೈಲಿಯ ಮಡ್‌ಗಾರ್ಡ್‌ನೊಂದಿಗೆ ಕನಿಷ್ಠ ಬಾಡಿವರ್ಕ್ ಅನ್ನು ಹೊಂದಿದೆ, ಎಮ್‌ಆರ್‌ಎಫ್ ಕರ್ವ್ ಡ್ಯುಯಲ್-ಪರ್ಪಸ್ ಟೈರ್‌ಗಳನ್ನು ಹೊಂದಿರುವ ಸ್ಪೋಕ್ ವೀಲ್‌ಗಳು ಮತ್ತಷ್ಟು ಆಫ್-ರೋಡ್-ಸಿದ್ಧವಾಗಿ ಕಾಣುವಂತೆ ಮಾಡುತ್ತದೆ. ಸ್ಕ್ರ್ಯಾಂಬ್ಲರ್ 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಗ್ರಾಹಕರಿಗೆ ಆಫ್‌ ರೋಡ್‌ ತರಬೇತಿ ನೀಡಲು ಜಾವಾ ಯೆಜ್ಡಿ ನೊಮಾಡ್ಸ್ ಟ್ರಯಲ್ ಅಟ್ಯಾಕ್ ಆಯೋಜನೆ

ಇನ್ನು ಯೆಜ್ಡಿ ಅಡ್ವೆಂಚರ್ ಮೋಟಾರ್‌ಸೈಕಲ್ ಉತ್ತಮ ADV ಆಗಿದ್ದು, ಯೆಜ್ಡಿ ಅಡ್ವೆಂಚರ್ ಆಫ್ ರೋಡ್ ಸಿಯೆಟ್ ಗ್ರಿಪ್ ಟೈರ್‌ಗಳೊಂದಿಗೆ ಸ್ಪೋಕ್ಡ್ ವೀಲ್‌ಗಳನ್ನು ಹೊಂದಿದೆ. ಇದಲ್ಲದೆ, ಎರಡೂ ಮೋಟಾರ್‌ ಸೈಕಲ್‌ಗಳು ಬದಲಾಯಿಸಬಹುದಾದ ABS ಮೋಡ್‌ಗಳನ್ನು ಹೊಂದಿವೆ. ಮಳೆ ಸಂದರ್ಭದಲ್ಲಿ ಆಫ್-ರೋಡ್ ಮೋಡ್‌ನಲ್ಲಿ ABS ಮುಂಭಾಗದ ಚಕ್ರದಲ್ಲಿ ಮಾತ್ರ ಸಕ್ರಿಯವಾಗಿರುತ್ತದೆ, ಆದರೆ ಹಿಂದಿನ ಚಕ್ರವು ಸ್ಲೈಡ್ ಮಾಡಲು ಮುಕ್ತವಾಗಿರುತ್ತದೆ, ಇದು ಆಫ್-ರೋಡ್ ಮೋಡ್‌ನಲ್ಲಿ ಅಗತ್ಯವಾದ ವೈಶಿಷ್ಟವಾಗಿದೆ.

ಗ್ರಾಹಕರಿಗೆ ಆಫ್‌ ರೋಡ್‌ ತರಬೇತಿ ನೀಡಲು ಜಾವಾ ಯೆಜ್ಡಿ ನೊಮಾಡ್ಸ್ ಟ್ರಯಲ್ ಅಟ್ಯಾಕ್ ಆಯೋಜನೆ

ಸ್ಕ್ರ್ಯಾಂಬ್ಲರ್ ಮತ್ತು ಅಡ್ವೆಂಚರ್ ಎರಡೂ ಒಂದೇ 334cc, ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್‌ನಿಂದ ಚಾಲಿತವಾಗಿವೆ. Yezdi Adventure ಇಲ್ಲಿ ಅತ್ಯಂತ ಶಕ್ತಿಶಾಲಿ ಮೋಟಾರ್‌ಸೈಕಲ್ ಆಗಿದ್ದು, 8,000rpm ನಲ್ಲಿ 29.7bhp ಮತ್ತು 6,500rpm ನಲ್ಲಿ 29.9Nm ಗರಿಷ್ಠ ಟಾರ್ಕ್ ಔಟ್‌ಪುಟ್ ಅನ್ನು ಹೊಂದಿದೆ.

ಗ್ರಾಹಕರಿಗೆ ಆಫ್‌ ರೋಡ್‌ ತರಬೇತಿ ನೀಡಲು ಜಾವಾ ಯೆಜ್ಡಿ ನೊಮಾಡ್ಸ್ ಟ್ರಯಲ್ ಅಟ್ಯಾಕ್ ಆಯೋಜನೆ

ಸ್ಕ್ರ್ಯಾಂಬ್ಲರ್ ಸ್ವಲ್ಪ ಕಡಿಮೆ ಔಟ್‌ಪುಟ್‌ನೊಂದಿಗೆ ಬಂದರೂ, ಅದೇ ಎಂಜಿನ್ 8,000rpm ನಲ್ಲಿ 28.7bhp ಮತ್ತು 6,750rpm ನಲ್ಲಿ 28.2Nm ಅನ್ನು ಹೊರಹಾಕುತ್ತದೆ. ಸ್ಲಿಪ್ಪರ್ ಕ್ಲಚ್‌ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಎರಡೂ ಮೋಟಾರ್‌ಸೈಕಲ್‌ಗಳಲ್ಲಿ ಹಿಂದಿನ ಚಕ್ರವನ್ನು ಚಾಲನೆ ಮಾಡುತ್ತದೆ. ನಿಸ್ಸಂಶಯವಾಗಿ ಇವುಗಳು ಆಫ್-ರೋಡ್‌ಗಾಗಿಯೆ ಉದ್ದೇಶಿಸಲಾದ ಮೋಟಾರ್‌ಸೈಕಲ್‌ಗಳಾಗಿವೆ.

ಗ್ರಾಹಕರಿಗೆ ಆಫ್‌ ರೋಡ್‌ ತರಬೇತಿ ನೀಡಲು ಜಾವಾ ಯೆಜ್ಡಿ ನೊಮಾಡ್ಸ್ ಟ್ರಯಲ್ ಅಟ್ಯಾಕ್ ಆಯೋಜನೆ

ಮೊಟ್ಟಮೊದಲ ಜಾವಾ-ಯೆಜ್ಡಿ ನೊಮಾಡ್ಸ್ ಟ್ರಯಲ್ ಅಟ್ಯಾಕ್ ಆಫ್-ರೋಡ್ ರೈಡ್

ನೊಮಾಡ್ಸ್ ಟ್ರಯಲ್ ಅಟ್ಯಾಕ್ ಒಂದು ರೀತಿಯ ರೈಡರ್ ತರಬೇತಿ ಕಾರ್ಯಕ್ರಮವಾಗಿದ್ದು, ಗ್ರಾಹಕರು ತಮ್ಮ ಮೋಟಾರ್‌ಸೈಕಲ್‌ಗಳನ್ನು ಆಫ್-ರೋಡ್‌ನಲ್ಲಿ ರೈಡ್‌ ಮಾಡುವ ಮೂಲಕ ರೈಡಿಂಗ್ ಟೆಕ್ನಿಕ್ಸ್ ಕಲಿತು ಅವುಗಳನ್ನು ಚೆನ್ನಾಗಿ ತಿಳಿದುಕೊಳ್ಳಲು ಅನುವು ಮಾಡಿಕೊಡುವುದು ಈ ನೊಮಾಡ್ಸ್ ಟ್ರಯಲ್ ಅಟ್ಯಾಕ್ ಆಫ್-ರೋಡ್ ರೈಡ್ ಉದ್ದೇಶವಾಗಿದೆ. ಇದು ಸುಲಭವಾದ ತರಬೇತಿ ಕಾರ್ಯಕ್ರಮವಾಗಿದ್ದು, ಬಳಕೆದಾರರು ತಮ್ಮ ಬೈಕ್‌ಗಳನ್ನು ಜಲ್ಲಿ ರಸ್ತೆಗಳು ಮತ್ತು ಟ್ರೇಲ್‌ಗಳಲ್ಲಿ ಸುರಕ್ಷಿತವಾಗಿ ಓಡಿಸಲು ಸ್ಪೆಷಲ್ ರೈಡಿಂಗ್ ಸಪೋರ್ಟರ್ಸ್‌ ಅನ್ನು ನೇಮಿಸಲಾಗಿತ್ತು.

ಗ್ರಾಹಕರಿಗೆ ಆಫ್‌ ರೋಡ್‌ ತರಬೇತಿ ನೀಡಲು ಜಾವಾ ಯೆಜ್ಡಿ ನೊಮಾಡ್ಸ್ ಟ್ರಯಲ್ ಅಟ್ಯಾಕ್ ಆಯೋಜನೆ

ಈ ಆಫ್‌ ರೋಡ್ ಟ್ರಾಕ್ ಮೋಟೋಫಾರ್ಮ್ - ಡರ್ಟ್ ಪ್ಲೇಗ್ರೌಂಡ್‌ಗಾಗಿ ಹೇಳಿ ಮಾಡಿಸಿದ ಸ್ಥಳವಾಗಿತ್ತು. ಬೃಹತ್ ಮಣ್ಣಿನ ಟ್ರ್ಯಾಕ್, ದೂರದ ಸ್ಥಳ ಮತ್ತು ಬೆಟ್ಟಗಳ ಮೇಲಿನ ಅನೇಕ ನೈಸರ್ಗಿಕ ಡರ್ಟ್‌ ರೋಡ್‌ಗಳನ್ನು ಈ ಟ್ರಾಕ್ ಸುತ್ತುವರೆದಿರುವುದರಿಂದ ಸವಾರರಿಗೆ ವಿವಿಧ ರೀತಿಯ ಆಫ್-ರೋಡ್ ಭೂಪ್ರದೇಶದ ಪರಿಪೂರ್ಣ ಮಿಶ್ರಣವನ್ನು ನೀಡುತ್ತದೆ.

ಗ್ರಾಹಕರಿಗೆ ಆಫ್‌ ರೋಡ್‌ ತರಬೇತಿ ನೀಡಲು ಜಾವಾ ಯೆಜ್ಡಿ ನೊಮಾಡ್ಸ್ ಟ್ರಯಲ್ ಅಟ್ಯಾಕ್ ಆಯೋಜನೆ

ಸ್ಲಾಲೋಮ್ ವಿಭಾಗ

ಯಾವುದೇ ಮೋಟಾರ್‌ಸೈಕಲ್ ತರಬೇತಿ ಅವಧಿಯು ಸ್ಲಾಲೋಮ್ ವಿಭಾಗದ ಬಳಕೆಯನ್ನು ಒಳಗೊಂಡಿರುತ್ತದೆ. ಮೋಟೋಫಾರ್ಮ್‌ನ ಒಂದು ವಿಭಾಗದಲ್ಲಿ ಕೋನ್‌ಗಳನ್ನು (ಸರಿದಾರಿಯಲ್ಲಿ ಸವಾರಿ ಮಾಡಲು ಇಡಲಾದ ಗುರುತುಗಳು) ಜೋಡಿಸಲಾಗಿರುತ್ತದೆ. ಕೋನ್‌ಗಳನ್ನು ಮುಟ್ಟದೆ ಸವಾರರು ಅವುಗಳ ಮಧ್ಯದಲ್ಲಿ ಸವಾರಿ ಮಾಡಬೇಕಿರುತ್ತದೆ.

ಗ್ರಾಹಕರಿಗೆ ಆಫ್‌ ರೋಡ್‌ ತರಬೇತಿ ನೀಡಲು ಜಾವಾ ಯೆಜ್ಡಿ ನೊಮಾಡ್ಸ್ ಟ್ರಯಲ್ ಅಟ್ಯಾಕ್ ಆಯೋಜನೆ

ಇದು ಕೇವಲ ಕೋನ್‌ಗಳನ್ನು ತಪ್ಪಿಸುವುದಕ್ಕಿಂತ ಹೆಚ್ಚಾಗಿ ಸವಾರರಿಗೆ ಕ್ಲಚ್ ಮಾಡ್ಯುಲೇಶನ್, ಬ್ರೇಕ್ ಲೋಡಿಂಗ್ ಮತ್ತು ಥ್ರೊಟಲ್ ಮಾಡ್ಯುಲೇಶನ್‌ನಲ್ಲಿ ತರಬೇತಿ ನೀಡುವುದರ ಭಾಗವಾಗಿದೆ. ಕ್ಲಚ್ ಮತ್ತು ಥ್ರೊಟಲ್ ಮಾಡ್ಯುಲೇಟ್ ಮಾಡುವಾಗ ಬ್ರೇಕ್‌ಗಳನ್ನು ಕುಶಲತೆಯಿಂದ ಉದ್ದಕ್ಕೂ ಲೋಡ್ ಮಾಡಬೇಕಾಗುತ್ತದೆ.

ಗ್ರಾಹಕರಿಗೆ ಆಫ್‌ ರೋಡ್‌ ತರಬೇತಿ ನೀಡಲು ಜಾವಾ ಯೆಜ್ಡಿ ನೊಮಾಡ್ಸ್ ಟ್ರಯಲ್ ಅಟ್ಯಾಕ್ ಆಯೋಜನೆ

ಆಫ್-ರೋಡ್ ತುರ್ತು ಬ್ರೇಕಿಂಗ್

ಆಫ್-ರೋಡ್ ರೈಡ್ ಮಾಡುವಾಗ ಸಂಭವನೀಯ ಡಿಕ್ಕಿಯನ್ನು ತಪ್ಪಿಸಲು ಯಾವ ರೀತಿ ಬ್ರೇಕಿಂಗ್ ಮಾಡಬೇಕು ಎಂಬುದು ಕೂಡ ಈ ರೈಡಿಂಗ್‌ನಲ್ಲಿ ತರಬೇತಿ ನೀಡಲಾಯಿತು. ತರಬೇತಿಯ ಈ ವಿಭಾಗವು ಸವಾರರು ತಮ್ಮ ಮೋಟಾರ್‌ಸೈಕಲ್‌ಗಳ ಆಫ್-ರೋಡ್ ಬ್ರೇಕಿಂಗ್ ಟೆಕ್ನಿಕ್ ಕಂಡುಕೊಳ್ಳಲು ಸಹಕಾರಿಯಾಗಿತ್ತು.

ಗ್ರಾಹಕರಿಗೆ ಆಫ್‌ ರೋಡ್‌ ತರಬೇತಿ ನೀಡಲು ಜಾವಾ ಯೆಜ್ಡಿ ನೊಮಾಡ್ಸ್ ಟ್ರಯಲ್ ಅಟ್ಯಾಕ್ ಆಯೋಜನೆ

ಒಂದು ಜೋಡಿ ಕೋನ್‌ಗಳು ಸವಾರರು ಎಲ್ಲಿ ಬ್ರೇಕ್ ಮಾಡಬೇಕು ಎಂಬುದನ್ನು ಸೂಚಿಸಿದರೆ ಮತ್ತೊಂದು ಜೋಡಿ ಕೋನ್‌ಗಳು ಸವಾರನು ಬ್ರೇಕ್ ಹೊಡೆಯಬಾರದು ಎಂಬ ಅಡಚಣೆಯನ್ನು ಸೂಚಿಸುತ್ತವೆ. ಬ್ರೇಕಿಂಗ್ ವಲಯವನ್ನು ತಲುಪುವ ಮೊದಲು ಪ್ರತಿ ಸವಾರನಿಗೆ ಆರಾಮದಾಯಕ ವೇಗವನ್ನು ತಲುಪಲು ಅನುಮತಿಸಲಾಗಿತ್ತು.

ಗ್ರಾಹಕರಿಗೆ ಆಫ್‌ ರೋಡ್‌ ತರಬೇತಿ ನೀಡಲು ಜಾವಾ ಯೆಜ್ಡಿ ನೊಮಾಡ್ಸ್ ಟ್ರಯಲ್ ಅಟ್ಯಾಕ್ ಆಯೋಜನೆ

ಈ ಪರೀಕ್ಷೆಯು ಯೆಜ್ಡಿ ಸ್ಕ್ರ್ಯಾಂಬ್ಲರ್ ಮತ್ತು ಯೆಜ್ಡಿ ಅಡ್ವೆಂಚರ್‌ನಲ್ಲಿ ಕಂಡುಬರುವ ಮೂರು ಎಬಿಎಸ್ ಮೋಡ್‌ಗಳ ಪರಿಣಾಮಕಾರಿತ್ವವನ್ನು ಪ್ರದರ್ಶಿಸುತ್ತವೆ. ರೋಡ್ ಮೋಡ್‌ನಲ್ಲಿ ಚಕ್ರಗಳು ಲಾಕ್ ಆಗಲಿಲ್ಲ, ಆದರೆ ಎಬಿಎಸ್ ಮಾಡ್ಯೂಲ್‌ನಿಂದ ಸ್ವಲ್ಪ ಕಷ್ಟಪಡಬೇಕಾಯಿತು. ಇದನ್ನು ಪಲ್ಸೇಟಿಂಗ್ ಬ್ರೇಕ್ ಲಿವರ್‌ಗಳ ಮೂಲಕ ಎಕ್ಸ್‌ಪೀರಿಯನ್ಸ್‌ ಮಾಡಲಾಯಿತು.

ಗ್ರಾಹಕರಿಗೆ ಆಫ್‌ ರೋಡ್‌ ತರಬೇತಿ ನೀಡಲು ಜಾವಾ ಯೆಜ್ಡಿ ನೊಮಾಡ್ಸ್ ಟ್ರಯಲ್ ಅಟ್ಯಾಕ್ ಆಯೋಜನೆ

ಎಬಿಎಸ್ ಸೆನ್ಸಿಟಿವಿಟಿಯೂ ಹೆಚ್ಚಾದಂತೆ ಮಳೆಯ ಮೋಡ್‌ಗೆ ಬದಲಾಯಿಸಿದಾಗ ನಾಡಿಮಿಡಿತ ಹೆಚ್ಚಾಯಿತು. ನೀವು ಈಗಾಗಲೇ ಊಹಿಸಿದಂತೆ ಅತ್ಯಂತ ಪರಿಣಾಮಕಾರಿ ಎಬಿಎಸ್ ಮೋಡ್ ಆಫ್-ರೋಡ್ ಮೋಡ್ ಆಗಿದ್ದು, ಹಿಂದಿನ ಚಕ್ರವು ಬಹಳ ಸುಲಭವಾಗಿ ಲಾಕ್ ಆಗುತ್ತದೆ. ಆದರೆ ಮುಂಭಾಗವು ಲಾಕ್ ಆಗಲಿಲ್ಲ. ವಿಶೇಷವಾಗಿ ಬ್ರೇಕಿಂಗ್ ಮಾಡುವಾಗ ದಿಕ್ಕಿನ ಬದಲಾವಣೆಯನ್ನು ಮಾಡಲು ನಾವು ಬಯಸಿದಾಗ ಹೆಚ್ಚಿನ ನಿಯಂತ್ರಣ ಸಾಧಿಸಬಹುದು.

ಗ್ರಾಹಕರಿಗೆ ಆಫ್‌ ರೋಡ್‌ ತರಬೇತಿ ನೀಡಲು ಜಾವಾ ಯೆಜ್ಡಿ ನೊಮಾಡ್ಸ್ ಟ್ರಯಲ್ ಅಟ್ಯಾಕ್ ಆಯೋಜನೆ

ಮೋಟೋಫಾರ್ಮ್ ಡರ್ಟ್ ಟ್ರ್ಯಾಕ್

ಜಂಪಿಂಗ್, ಕರ್ವ್‌ಗಳು, ಸಡಿಲವಾದ ಮಣ್ಣು, ಬಿಗಿಯಾದ ಮಣ್ಣು, ಏರಿಳಿತಗಳು ಮತ್ತು ಒಂದೆರಡು ವೇಗದ ವಿಭಾಗಗಳನ್ನು ಒಳಗೊಂಡಿರುವ ಮೋಟೋಫಾರ್ಮ್‌ನಲ್ಲಿನ ಡರ್ಟ್ ಟ್ರ್ಯಾಕ್ ಸವಾರಿ ಮಾಡಲು ಸಂಪೂರ್ಣ ಗಲಭೆಯಾಗಿತ್ತು. ಬಳಿಕ ಪರಿಸ್ಥಿತಿಯನ್ನು ಹತೋಟಿಗೆ ತಂದ ನಂತರ ಮೋಟಾರ್ ಸೈಕಲ್‌ಗಳಲ್ಲಿರುವ ಎಲ್ಲಾ ಸವಾರರನ್ನು ಒಂದೇ ಫೈಲ್‌ನಲ್ಲಿ ಮುನ್ನಡೆಸಿದರು. ಪ್ರತಿಯೊಬ್ಬ ಸವಾರರು ಅವರಿಗೆ ಅನುಕೂಲಕರವಾದ ವೇಗದಲ್ಲಿ ಪ್ರತಿ ಅಡಚಣೆಯನ್ನು ನಿಭಾಯಿಸಿ

ಗ್ರಾಹಕರಿಗೆ ಆಫ್‌ ರೋಡ್‌ ತರಬೇತಿ ನೀಡಲು ಜಾವಾ ಯೆಜ್ಡಿ ನೊಮಾಡ್ಸ್ ಟ್ರಯಲ್ ಅಟ್ಯಾಕ್ ಆಯೋಜನೆ

ಒಂದೆರಡು ಅಪಘಾತಗಳು ಸಂಭವಿಸಿದವು, ಆದರೆ ಯಾರಿಗೂ ಗಂಭೀರ ಗಾಯಗಳಾಗಲಿಲ್ಲ. ಇನ್ನೂ ಕೆಲವರು ತುಸು ವೇಗದಲ್ಲಿ ಹೋದರಾದರೂ ಆರಾಮದಾಯಕವಾಗಿದ್ದರು. ಈ ನಡುವೆ ಕೆಲವು ಓವರ್‌ಟೇಕ್‌ಗಳು ಕೂಡ ನಡೆದವು. ಸುಡುವ ಬಿಸಿಲಿನಲ್ಲಿ ದಣಿದ ನಾಲ್ಕು ಸುತ್ತುಗಳ ನಂತರ, ಸವಾರರು ಸ್ವಲ್ಪ ನೆರಳಿಗಾಗಿ ಓಡಿದರು. ಇದು ಕೇವಲ ನೀರಿನ ವಿರಾಮದ ಕಾರಣ ರೈಡರ್‌ಗಳಿಗೆ ಸ್ವಲ್ಪ ರೆಸ್ಟ್‌ ಅಷ್ಟೆ ನೀಡಲಾಯಿತು. ಇನ್ನೂ ಮುಂದೆ ಟ್ರಯಲ್ ರೈಡ್ ಕೂಡ ಇತ್ತು.

ಗ್ರಾಹಕರಿಗೆ ಆಫ್‌ ರೋಡ್‌ ತರಬೇತಿ ನೀಡಲು ಜಾವಾ ಯೆಜ್ಡಿ ನೊಮಾಡ್ಸ್ ಟ್ರಯಲ್ ಅಟ್ಯಾಕ್ ಆಯೋಜನೆ

ಯೆಜ್ಡಿ ಮೋಟಾರ್ಸೈಕಲ್ಸ್ ಆನ್ ದಿ ಟ್ರಯಲ್

ಮೋಟೋಫಾರ್ಮ್‌ನಲ್ಲಿನ ಪ್ರಮುಖ ವ್ಯಕ್ತಿ ಹಾಗೂ ಮುಖ್ಯಸ್ಥ ದಿಶಾಂಕ್ ಗೌಡ ಎಂಬುವವರು ಭಾಗವಹಿಸಿದ ಎಲ್ಲರನ್ನು ಮೋಟೋಫಾರ್ಮ್ ಸುತ್ತಲಿನ ಬೆಟ್ಟಗಳಿಗೆ ಕರೆದೊಯ್ದರು. ಸುಮಾರು 5 ಕಿಲೋಮೀಟರ್‌ಗಳಷ್ಟು ಟಾರ್‌ಮ್ಯಾಕ್‌ನಲ್ಲಿ ಸವಾರಿ ಮಾಡಿಸಿದರು. ಇದು ವೇಗದ ರೈಡ್ ಆಗಿತ್ತು. ಕೆಲವರು ಪ್ರಮುಖ ರೈಡರ್‌ನೊಂದಿಗೆ ಮುಂದುವರಿಯುತ್ತಿದ್ದರೆ ಕೆಲವರು ನಿಧನವಾಗಿ ಸಾಗಿದರು. ಈ ಟ್ರ್ಯಾಕ್ ರೈಡರ್‌ಗಳಿಗೆ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದಷ್ಟೇ ಖುಷಿ ಹಾಗೂ ಉತ್ಸಾಹವನ್ನು ಹೆಚ್ಚಿಸಿತ್ತು.

ಗ್ರಾಹಕರಿಗೆ ಆಫ್‌ ರೋಡ್‌ ತರಬೇತಿ ನೀಡಲು ಜಾವಾ ಯೆಜ್ಡಿ ನೊಮಾಡ್ಸ್ ಟ್ರಯಲ್ ಅಟ್ಯಾಕ್ ಆಯೋಜನೆ

ಆದರೆ ರೈಡರ್‌ಗಳಿಗೆ ಮುಂದೆ ಸಾಗುತ್ತಾ ಹೋದಂತೆ ಟ್ರಾಕ್ ಕಿರಿದಾಗುತ್ತಾ ಹೋಗಿತ್ತು. ಇದರಿಂದ ಎಲ್ಲರಿಗೂ ಸವಾರಿ ಮಾಡಲು ಧೈರ್ಯವಿರಲಿಲ್ಲ. ಆದರೂ ರೈಡರ್‌ಗಳಿಗೆ ಉತ್ಸಾಹ ತುಂಬಿ ರೈಡ್‌ ಅನ್ನು ಅನುಭವಿಸಲು ಪ್ರೋತ್ಸಾಹ ನೀಡಿದ ಬಳಿಕ ಟ್ರಯಲ್ ಮೂಲಕ ವಿಶೇಷ ಸವಾರಿಗೆ ಮತ್ತೇ ಮುಂದಾದರು.

ಗ್ರಾಹಕರಿಗೆ ಆಫ್‌ ರೋಡ್‌ ತರಬೇತಿ ನೀಡಲು ಜಾವಾ ಯೆಜ್ಡಿ ನೊಮಾಡ್ಸ್ ಟ್ರಯಲ್ ಅಟ್ಯಾಕ್ ಆಯೋಜನೆ

ಯೆಜ್ಡಿ ಸ್ಕ್ರ್ಯಾಂಬ್ಲರ್ ಮತ್ತು ಯೆಜ್ಡಿ ಅಡ್ವೆಂಚರ್ ಆಫ್-ರೋಡ್ ಪ್ರದರ್ಶನ

ಯೆಜ್ಡಿ ಸ್ಕ್ರ್ಯಾಂಬ್ಲರ್ ಮತ್ತು ಯೆಜ್ಡಿ ಅಡ್ವೆಂಚರ್‌ನ ಮೊದಲ ರೈಡ್ ವಿಮರ್ಶೆಯ ಸಮಯದಲ್ಲಿ, ಈ ಮೋಟಾರ್‌ಸೈಕಲ್‌ಗಳು ಆಫ್-ರೋಡ್‌ನಲ್ಲೂ ಉತ್ತಮ ಪರ್ಫಾಮೆನ್ಸ್‌ ನೀಡುತ್ತವೆ ಎಂದು ತಿಳಿದಿರಲಿಲ್ಲ. ನೊಮಾಡ್ಸ್ ಟ್ರಯಲ್ ಅಟ್ಯಾಕ್‌ನಲ್ಲಿ ಯೆಜ್ಡಿ ಮೋಟಾರ್‌ಸೈಕಲ್‌ಗಳ ಅಬ್ಬರವು ರೈಡರ್‌ಗಳಿಗೆ ಸಖತ್‌ ಮಜಾ ನೀಡಿದೆ ಎಂದು ಈ ಯೆಜ್ಡಿ ನೊಮಾಡ್ಸ್ ಟ್ರಯಲ್ ಅಟ್ಯಾಕ್‌ನಲ್ಲಿ ಭಾಗವಹಿಸಿದ್ದ ಡ್ರೈವ್ ಸ್ಪಾರ್ಕ್‌ ತಂಡ ಅನುಭವವನ್ನು ತಿಳಿಸಿದೆ.

ಗ್ರಾಹಕರಿಗೆ ಆಫ್‌ ರೋಡ್‌ ತರಬೇತಿ ನೀಡಲು ಜಾವಾ ಯೆಜ್ಡಿ ನೊಮಾಡ್ಸ್ ಟ್ರಯಲ್ ಅಟ್ಯಾಕ್ ಆಯೋಜನೆ

ಎರಡೂ ಮೋಟಾರ್‌ಸೈಕಲ್‌ಗಳು ಅತ್ಯಂತ ಸಮರ್ಥ ಆಫ್-ರೋಡರ್‌ಗಳಾಗಿವೆ ಮತ್ತು ಸವಾರನ ಕೌಶಲ್ಯವನ್ನು ಅವಲಂಬಿಸಿ, ಹೆಚ್ಚಿನ ಆಫ್-ರೋಡ್ ಅಡೆತಡೆಗಳು ಮತ್ತು ಟ್ರೇಲ್‌ಗಳನ್ನು ನಿಭಾಯಿಸಬಹುದು. ಆದಾಗ್ಯೂ, ಯೆಜ್ಡಿ ಅಡ್ವೆಂಚರ್ ಅದರ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್, ಲಾಂಗ್ ರೈಡ್ ಮತ್ತು ಸರಿಯಾದ ಆಫ್-ರೋಡ್ ಟೈರ್‌ಗಳಿಂದಾಗಿ ಮಡ್‌ ರೋಡ್‌ಗಳಲ್ಲಿ ತನ್ನ ಸಾಮರ್ಥ್ಯವನ್ನು ಸಾಭೀತುಪಡಿಸಿಕೊಂಡಿವೆ.

ಗ್ರಾಹಕರಿಗೆ ಆಫ್‌ ರೋಡ್‌ ತರಬೇತಿ ನೀಡಲು ಜಾವಾ ಯೆಜ್ಡಿ ನೊಮಾಡ್ಸ್ ಟ್ರಯಲ್ ಅಟ್ಯಾಕ್ ಆಯೋಜನೆ

ಇದು ತುಂಬಾ ಆರಾಮದಾಯಕವಾದ ಸ್ಟ್ಯಾಂಡ್-ಅಪ್ ರೈಡಿಂಗ್ ಆಗಿದ್ದು, ಒಬ್ಬರು ಸುಲಭವಾಗಿ ನಿಂತುಕೊಂಡು ರೈಡ್ ಮಾಡಬಹುದು. ಅದರ ಲಿಕ್ವಿಡ್-ಕೂಲ್ಡ್ ಎಂಜಿನ್‌ನೊಂದಿಗೆ, ಹೈವೇ ಸ್ಪೀಡ್‌ನಲ್ಲಿಯೂ ರೈಡರ್‌ಗೆ ಅತ್ಯುತ್ತಮ ರೈಡಿಂಗ್ ಅನುಭವ ನೀಡುವ ಮೂಲಕ ಅದ್ಭುತ ಲಾಂಗ್‌ ಡ್ರೈವ್ ಮೋಟಾರ್‌ಸೈಕಲ್ ಕೂಡ ಆಗಿದೆ.

Most Read Articles

Kannada
Read more on ಯೆಜ್ಡಿ yezdi
English summary
Jawa yezdi nomads trail attack off road training riding experience for yezdi scrambler adventure
Story first published: Tuesday, April 19, 2022, 19:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X