ಡ್ಯೂಕ್ ಸರಣಿ ಬೈಕ್‌ಗಳಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದ ಕೆಟಿಎಂ

ಕೆಟಿಎಂ ಇಂಡಿಯಾ ಕಂಪನಿಯು ತನ್ನ ಪ್ರೀಮಿಯಂ ಬೈಕ್ ಮಾರಾಟದಲ್ಲಿ ಹೊಸ ಬದಲಾವಣೆಗಳೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದು, ಕಂಪನಿಯು ಇದೀಗ ಡ್ಯೂಕ್ ಬೈಕ್ ಸರಣಿಗಳಿಗಾಗಿ ಹೊಸ ಬಣ್ಣದ ಆಯ್ಕೆಗಳನ್ನು ಪರಿಚಯಿಸಿದೆ.

ಡ್ಯೂಕ್ ಸರಣಿ ಬೈಕ್‌ಗಳಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದ ಕೆಟಿಎಂ

ಪ್ರೀಮಿಯಂ ಬೈಕ್ ಮಾದರಿಗಳ ಮಾರಾಟದಲ್ಲಿ ವಿವಿಧ ಸರಣಿ ಬೈಕ್‌ಗಳೊಂದಿಗೆ ಗ್ರಾಹಕರ ಸೆಳೆಯುತ್ತಿರುವ ಕೆಟಿಎಂ ಕಂಪನಿಯು ಕಳೆದ ಕೆಲ ವರ್ಷಗಳಲ್ಲಿ ಹಲವಾರು ಹೊಸ ಮಾದರಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಮಾದರಿಗಳಲ್ಲಿ ನಿರಂತರವಾಗಿ ನವೀಕೃತ ಆವೃತ್ತಿಗಳನ್ನು ಪರಿಚಯಿಸುತ್ತಿದೆ.

ಡ್ಯೂಕ್ ಸರಣಿ ಬೈಕ್‌ಗಳಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದ ಕೆಟಿಎಂ

ಡ್ಯೂಕ್ ಸರಣಿಯಲ್ಲಿರುವ 125, 200, 250 ಮತ್ತು 390 ಮಾದರಿಗಳಲ್ಲಿ ಕೆಟಿಎಂ ಕಂಪನಿಯು ಬ್ಲ್ಯಾಕ್ ಮತ್ತು ಮೆಟಲ್ ಬಣ್ಣಗಳ ಆಯ್ಕೆ ನೀಡಿದ್ದು, ಹೊಸ ಆವೃತ್ತಿಗಳು ಈಗಾಗಲೇ ಖರೀದಿಗೆ ಲಭ್ಯವಾಗಿವೆ.

ಡ್ಯೂಕ್ ಸರಣಿ ಬೈಕ್‌ಗಳಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದ ಕೆಟಿಎಂ

ಪ್ರೀಮಿಯಂ ಬೈಕ್ ಮಾದರಿಗಳ ಮಾರಾಟದಲ್ಲಿ ಸದ್ಯ ಡ್ಯೂಕ್ ಮಾದರಿಗಳು ಬಹಳಷ್ಟು ಜನಪ್ರಿಯತೆ ಸಾಧಿಸಿದ್ದು, ಈ ಕಾರಣದಿಂದಾಗಿಯೇ ಕಂಪನಿಯು ಅವುಗಳನ್ನು ನಿರಂತರವಾಗಿ ನವೀಕರಿಸುತ್ತಿದೆ.

ಡ್ಯೂಕ್ ಸರಣಿ ಬೈಕ್‌ಗಳಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದ ಕೆಟಿಎಂ

ಹೊಸ ಬಣ್ಣದ ಆಯ್ಕೆಗಳಲ್ಲಿ ಡಾರ್ಕ್ ಗಾಲ್ವನೋ ಮತ್ತು ಲಿಕ್ವಿಡ್ ಮೆಟಲ್ ಗ್ರಾಹಕರನ್ನು ಆಕರ್ಷಿಸುತ್ತಿದ್ದು, ಲಿಕ್ವಿಡ್ ಮೆಟಲ್‌ನಲ್ಲಿ ಫ್ರೇಮ್‌ನಲ್ಲಿ ಕಿತ್ತಳೆ ಬಣ್ಣದ ಜೊತೆಗೆ ಕಪ್ಪು ಮತ್ತು ನೀಲಿ ಹೈಲೈಟ್‌ಗಳನ್ನು ನೀಡಲಾಗಿದೆ.

ಡ್ಯೂಕ್ ಸರಣಿ ಬೈಕ್‌ಗಳಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದ ಕೆಟಿಎಂ

ಹಾಗೆಯೇ ಅದರ ಉಪ-ಫ್ರೇಮ್ ಮತ್ತು ಚಕ್ರಗಳನ್ನು ಕಪ್ಪು ಬಣ್ಣದಲ್ಲಿ ಇರಿಸಲಾಗಿದ್ದು, ಮತ್ತೊಂದೆಡೆ ಡಾರ್ಕ್ ಗಾಲ್ವನೊ ಬಹಳ ಆಕರ್ಷಕವಾಗಿ ಕಾಣುತ್ತದೆ. ಇದರೊಂದಿಗೆ ಡ್ಯೂಕ್ 250 ಮಾದರಿಯಲ್ಲಿ ಕಪ್ಪು ಬಣ್ಣವನ್ನು ನೀಡಲಾಗಿದ್ದ, ಅದನ್ನು ಕಂಪನಿಯು ಎಬೊನಿ ಬ್ಲ್ಯಾಕ್ ಎಂದು ಹೆಸರಿಸಿದೆ.

ಡ್ಯೂಕ್ ಸರಣಿ ಬೈಕ್‌ಗಳಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದ ಕೆಟಿಎಂ

ಡ್ಯೂಕ್ 125 ಮತ್ತು 200 ಮಾದರಿಗಳಲ್ಲಿನ ಹೊಸ ಬಣ್ಣದ ಆಯ್ಕೆಯಲ್ಲಿ ಡಾರ್ಕ್ ಸಿಲ್ವರ್ ಮೆಟಾಲಿಕ್ ಆಯ್ಕೆ ನೀಡಲಾಗಿದ್ದು, ಇದು ಬ್ಲ್ಯಾಕ್ ಫ್ರೆಮ್, ಬ್ಲ್ಯಾಕ್ ಸಬ್‌ಫ್ರೇಮ್ ಮತ್ತು ಆರೇಂಜ್ ಬಣ್ಣದ ಚಕ್ರಗಳನ್ನು ಹೊಂದಿದೆ.

ಡ್ಯೂಕ್ ಸರಣಿ ಬೈಕ್‌ಗಳಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದ ಕೆಟಿಎಂ

ಮುಂಬರುವ ದಿನಗಳಲ್ಲಿ ದಸರಾ ಮತ್ತು ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ವಾಹನ ಮಾರಾಟ ಹೆಚ್ಚುವ ನೀರಿಕ್ಷೆಯಿರುವುದರಿಂದ ಕಂಪನಿಯು ಗ್ರಾಹಕರನ್ನು ಆಕರ್ಷಿಸಲು ಹೊಸ ಬಣ್ಣದ ಆಯ್ಕೆಗಳನ್ನು ನೀಡಿದ್ದು, ಹೊಸ ಬಣ್ಣಗಳ ಆಯ್ಕೆ ನಂತರವು ಕೆಟಿಎಂ ಕಂಪನಿಯು ಹೊಸ ಬೈಕ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಡ್ಯೂಕ್ ಸರಣಿ ಬೈಕ್‌ಗಳಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದ ಕೆಟಿಎಂ

ಇನ್ನು ಕೆಟಿಎಂ ತನ್ನ ಬೈಕ್‌ಗಳ ಬೆಲೆಗಳನ್ನು ಕಳೆದ ತಿಂಗಳ ಹಿಂದಷ್ಟೇ ಹೆಚ್ಚಿಸಿದ್ದು, ಬೆಲೆ ಏರಿಕೆಯು ಪ್ರಮುಖ ಮಾದರಿಗಳಾದ 390 ಅಡ್ವೆಂಚರ್ ಮತ್ತು 250 ಅಡ್ವೆಂಚರ್ ಮಾದರಿಗಳ ಮೇಲೆ ಮಾತ್ರ ಅನ್ವಯಿಸುತ್ತದೆ.

ಡ್ಯೂಕ್ ಸರಣಿ ಬೈಕ್‌ಗಳಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದ ಕೆಟಿಎಂ

ಬೆಲೆ ಏರಿಕೆಯಾದ ಬಳಿಕ ಕೆಟಿಎಂ 250 ಅಡ್ವೆಂಚರ್ ಬೈಕಿನ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ. 2.44 ಲಕ್ಷವಾದರೆ 390 ಅಡ್ವೆಂಚರ್ ಬೈಕಿನ ಬೆಲೆಯು ರೂ. 3.37 ಲಕ್ಷವಾಗಿದೆ. ಈ ಬೆಲೆ ಏರಿಕೆಯನ್ನು ಹೊರತುಪಡಿಸಿ ಉಳಿದಂತೆ ಈ ಎರಡೂ ಅಡ್ವೆಂಚರ್ ಬೈಕ್‌ಗಳಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿರುವುದಿಲ್ಲ.

ಡ್ಯೂಕ್ ಸರಣಿ ಬೈಕ್‌ಗಳಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದ ಕೆಟಿಎಂ

ಎರಡೂ ಮೋಟಾರ್‌ಸೈಕಲ್‌ಗಳು ತಮ್ಮ ಹಳೆಯ ಬಣ್ಣ ಆಯ್ಕೆಗಳನ್ನು ಉಳಿಸಿಕೊಂಡಿದ್ದು, 250 ಅಡ್ವೆಂಚರ್ ಕೆಟಿಎಂ ಫ್ಯಾಕ್ಟರಿ ರೇಸಿಂಗ್ ಬ್ಲೂ ಮತ್ತು ಎಲೆಕ್ಟ್ರಾನಿಕ್ ಆರೆಂಜ್ ಪೇಂಟ್ ಥೀಮ್‌ಗಳಲ್ಲಿ ಲಭ್ಯವಿದೆ. ಮತ್ತೊಂದೆಡೆ 390 ಅಡ್ವೆಂಚರ್ ಅನ್ನು ಡಾರ್ಕ್ ಗಾಲ್ವನೊ ಬ್ಲಾಕ್ ಮತ್ತು ರೇಸಿಂಗ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿವೆ.

ಡ್ಯೂಕ್ ಸರಣಿ ಬೈಕ್‌ಗಳಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದ ಕೆಟಿಎಂ

ಹೊಸ ಬೈಕ್ ಕುರಿತು ಮಾತನಾಡುವುದಾದರೆ 390 ಅಡ್ವೆಂಚರ್‌ನಲ್ಲಿ ಕಂಪನಿಯು 373.2 ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್‌ ಅನ್ನು ಜೋಡಣೆ ಮಾಡಿದ್ದು, ಈ ಎಂಜಿನ್ 43.5 ಬಿಹೆಚ್‍ಪಿ ಪವರ್ ಮತ್ತು 37 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಡ್ಯೂಕ್ ಸರಣಿ ಬೈಕ್‌ಗಳಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದ ಕೆಟಿಎಂ

ಪರ್ಫಾಮೆನ್ಸ್ ಎಂಜಿನ್ ನೊಂದಿಗೆ 6-ಸ್ಪೀಡ್ ಸೀಕ್ವೆನ್ಷಿಯಲ್ ಟ್ರಾನ್ಸ್‌ಮಿಷನ್‌, ಬೈ-ಡೈರೆಕ್ಷನಲ್ ಕ್ವಿಕ್ ಶಿಫ್ಟರ್ ಜೊತೆಗೆ ಸ್ಲಿಪ್ಪರ್/ಅಸಿಸ್ಟ್ ಕ್ಲಚ್ ಅನ್ನು ಸಹ ಹೊಂದಿದ್ದು, ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಂ ಎರಡು ವಿಧಾನಗಳನ್ನು ನೀಡಲಾಗಿದೆ.

ಡ್ಯೂಕ್ ಸರಣಿ ಬೈಕ್‌ಗಳಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದ ಕೆಟಿಎಂ

ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಂ ಅನ್ನು ಸ್ಟ್ರೀಟ್ ಮತ್ತು ಆಫ್‌-ರೋಡ್ ಮಾದರಿಯಲ್ಲಿದ್ದು, ಹಿಂಬದಿಯ ಚಕ್ರಗಳನ್ನು ಒಂದು ಹಂತಕ್ಕೆ ಸ್ಲಿಪ್ ಮಾಡಲು ಅನುಮತಿಸುವುದರ ಜೊತೆಗೆ ಇದು ಆಫ್-ರೋಡ್ ನಿರ್ವಹಣೆಯನ್ನು ಸುಲಭಗೊಳಿಸುತ್ತದೆ.

ಡ್ಯೂಕ್ ಸರಣಿ ಬೈಕ್‌ಗಳಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದ ಕೆಟಿಎಂ

ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಬದಲಾಯಿಸಬಹುದಾದ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ನೀಡಲಾಗಿದ್ದು, ಕೆಟಿಎಂ 390 ಅಡ್ವೆಂಚರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಜಿ310 ಜಿಎಸ್ ಬೈಕಿಗೆ ಪೈಪೋಟಿಯನ್ನು ನೀಡುತ್ತದೆ. ಎರಡನೆಯದು ಇದು ಸ್ವಲ್ಪ ಹೆಚ್ಚು ಕೈಗೆಟುಕುವ ಮಾದರಿಯಾಗಿದ್ದು, ಕಡಿಮೆ ಕಾರ್ಯಕ್ಷಮತೆಯೊಂದಿಗೆ ಮತ್ತು ಹೆಚ್ಚಿನ ಸಲಕರಣೆಗಳನ್ನು ನೀಡುತ್ತದೆ.

Most Read Articles

Kannada
Read more on ಕೆಟಿಎಂ ktm
English summary
Ktm duke new colours launched in india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X