ಹೊಸ ಇವಿ ದ್ವಿಚಕ್ರ ವಾಹನಗಳೊಂದಿಗೆ ಮರಳಿ ಮಾರುಕಟ್ಟೆ ಪ್ರವೇಶಿಸಲು ಸಜ್ಜಾದ ಎಲ್ಎಂಎಲ್

ಭಾರತದಲ್ಲಿ ಇವಿ ವಾಹನಗಳಿಗೆ ಬೇಡಿಕೆಯು ಹೆಚ್ಚುತ್ತಿದ್ದು, ಹಲವಾರು ವಾಹನ ತಯಾರಕ ಕಂಪನಿಗಳು ಇವಿ ಉತ್ಪಾದನೆಯತ್ತ ಗಮನಹರಿಸುತ್ತಿವೆ. ಈ ನಿಟ್ಟಿನಲ್ಲಿ ಹೊಸ ಪ್ರಯತ್ನಕ್ಕೆ ಕೈಹಾಕಿರುವ ಎಲ್ಎಂಎಲ್ ಕಂಪನಿಯು ಭವಿಷ್ಯ ವಾಹನಗಳ ಉತ್ಪಾದನೆ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದೆ.

ಹೊಸ ಇವಿ ದ್ವಿಚಕ್ರ ವಾಹನಗಳೊಂದಿಗೆ ಮರಳಿ ಮಾರುಕಟ್ಟೆ ಪ್ರವೇಶಿಸಲು ಸಜ್ಜಾದ ಎಲ್ಎಂಎಲ್

ಲೋಹಿಯಾ ಮೋಟಾರ್ಸ್ ಲಿಮಿಟೆಡ್(LML) ಕಂಪನಿಯು ಎಲೆಕ್ಟ್ರಿಕ್ ವಾಹನ ಉದ್ಯಮ ಮೇಲೆ ಭಾರೀ ಪ್ರಮಾಣದ ಹೂಡಿಕೆಗೆ ಸಿದ್ದವಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ಎರಡು ಹೊಸ ಇವಿ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಹೊಸ ಇವಿ ದ್ವಿಚಕ್ರ ವಾಹನಗಳೊಂದಿಗೆ ಮರಳಿ ಮಾರುಕಟ್ಟೆ ಪ್ರವೇಶಿಸಲು ಸಜ್ಜಾದ ಎಲ್ಎಂಎಲ್

ಹೊಸ ಇವಿ ದ್ವಿಚಕ್ರ ವಾಹನಗಳಿಗಾಗಿ ಕಂಪನಿಯು ಈಗಾಗಲೇ ಕೇಂದ್ರ ಸಾರಿಗೆ ಇಲಾಖಲೆಯಲ್ಲಿ ಟ್ರೇಡ್ ಮಾರ್ಕ್ ಸಲ್ಲಿಸಿದ್ದು, ಟ್ರೇಡ್ ಮಾರ್ಕ್ ಅರ್ಜಿಯಲ್ಲಿ ಕಂಪನಿಯು ಹೊಸ ಇವಿ ದ್ವಿಚಕ್ರಗಳನ್ನು ಸ್ಟಾರ್ ಮತ್ತು ಹೈಪರ್‌ಬೈಕ್ ಹೆಸರುಗಳೊಂದಿಗೆ ಬಿಡುಗಡೆ ಮಾಡುವ ಸುಳಿವು ನೀಡಿದೆ.

ಹೊಸ ಇವಿ ದ್ವಿಚಕ್ರ ವಾಹನಗಳೊಂದಿಗೆ ಮರಳಿ ಮಾರುಕಟ್ಟೆ ಪ್ರವೇಶಿಸಲು ಸಜ್ಜಾದ ಎಲ್ಎಂಎಲ್

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ವೇಗವಾಗಿ ಹೆಚ್ಚುತ್ತಿದ್ದು, ಅನೇಕ ಸ್ಟಾರ್ಟ್ಅಪ್ ಕಂಪನಿಗಳು ತಮ್ಮ ಹೊಸ ಇವಿ ಮಾದರಿಗಳೊಂದಿಗೆ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ಪ್ರವೇಶಿಸುತ್ತಿವೆ. ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಸದ್ಯ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವು ಅಗ್ರಸ್ಥಾನದಲ್ಲಿದ್ದು, ಕೆಳದ ಎರಡು ವರ್ಷಗಳಲ್ಲಿ ಹಲವಾರು ಸ್ಟಾರ್ಟ್ಅಪ್ ಕಂಪನಿಗಳು ವಿವಿಧ ಮಾದರಿಯ ಇವಿ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿವೆ.

ಹೊಸ ಇವಿ ದ್ವಿಚಕ್ರ ವಾಹನಗಳೊಂದಿಗೆ ಮರಳಿ ಮಾರುಕಟ್ಟೆ ಪ್ರವೇಶಿಸಲು ಸಜ್ಜಾದ ಎಲ್ಎಂಎಲ್

ಎಲೆಕ್ಟ್ರಿಕ್ ವಾಹನ ಉದ್ಯಮದಲ್ಲಿ ಹೊಸ ನೀರಿಕ್ಷೆಯೊಂದಿಗೆ ಭಾರತದಲ್ಲಿ ವೆಸ್ಪಾ ಸ್ಕೂಟರ್ ತಯಾರಕ ಕಂಪನಿಯಾಗಿರುವ ಎಲ್ಎಂಎಲ್ ಕಂಪನಿಯು ಕೂಡಾ ಸಹಭಾಗೀತ್ವ ಯೋಜನೆ ಅಡಿ ಇವಿ ದ್ವಿಚಕ್ರ ವಾಹನ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ.

ಹೊಸ ಇವಿ ದ್ವಿಚಕ್ರ ವಾಹನಗಳೊಂದಿಗೆ ಮರಳಿ ಮಾರುಕಟ್ಟೆ ಪ್ರವೇಶಿಸಲು ಸಜ್ಜಾದ ಎಲ್ಎಂಎಲ್

ಹೊಸ ಯೋಜನೆ ಅಡಿಯಲ್ಲಿ ಕಂಪನಿಯು ಮುಂದಿನ ಎರಡು ವರ್ಷದೊಳಗೆಗ ಮೂರು ಹೊಸ ಎಲೆಕ್ಟ್ರಿಕ್ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದ್ದು, ಇದಕ್ಕಾಗಿ ಕಂಪನಿಯು ರೂ. 1 ಸಾವಿರ ಕೋಟಿ ಹೂಡಿಕೆಯೊಂದಿಗೆ ಹೊಸ ಕಾರ್ಖಾನೆಯನ್ನು ಸ್ಥಾಪಿಸಲು ಯೋಜಿಸುತ್ತಿದೆ.

ಹೊಸ ಇವಿ ದ್ವಿಚಕ್ರ ವಾಹನಗಳೊಂದಿಗೆ ಮರಳಿ ಮಾರುಕಟ್ಟೆ ಪ್ರವೇಶಿಸಲು ಸಜ್ಜಾದ ಎಲ್ಎಂಎಲ್

1972ರಲ್ಲಿ ಮೊದಲ ಬಾರಿಗೆ ದ್ವಿಚಕ್ರ ವಾಹನಗಳನ್ನು ಆರಂಭಿಸಿದ್ದ ಉತ್ತರಪ್ರದೇಶದ ಕಾನ್ಪುರ್ ಮೂಲದ ಎಲ್ಎಂಎಲ್ ಕಂಪನಿಯು ಹಲವಾರು ಜನಪ್ರಿಯ ವಾಹನಗಳನ್ನು ಬಿಡುಗಡೆ ಮಾಡಿತ್ತು.1984ರ ವೇಳೆಗೆ ತನ್ನ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಆಗಿ ಗುರುತಿಸಿಕೊಂಡ ಎಲ್ಎಂಎಲ್ ಕಂಪನಿಯು ತದನಂತರ ವೆಸ್ಪಾ ಸ್ಕೂಟರ್‌ಗಳನ್ನು ಭಾರತದಲ್ಲಿ ತಯಾರಿಸಲು ಪಿಯಾಜಿಯೊ ಜೊತೆ ಒಪ್ಪಂದ ಮಾಡಿಕೊಂಡಿತು.

ಹೊಸ ಇವಿ ದ್ವಿಚಕ್ರ ವಾಹನಗಳೊಂದಿಗೆ ಮರಳಿ ಮಾರುಕಟ್ಟೆ ಪ್ರವೇಶಿಸಲು ಸಜ್ಜಾದ ಎಲ್ಎಂಎಲ್

ಇದೀಗ ಕಂಪನಿಯು ಹೊಸ ತಲೆಮಾರಿನ ಇವಿ ವಾಹನಗಳೊಂದಿಗೆ ಪ್ರತ್ಯೇಕ ಹೂಡಿಕೆಯ ಮೂಲಕ ಮರಳಿ ಮಾರುಕಟ್ಟೆಗೆ ಪ್ರವೇಶಿಸಲು ಸಿದ್ದವಾಗುತ್ತಿದ್ದು, ಹರಿಯಾಣ ಮೂಲದ ಸೈರಾ ಎಲೆಕ್ಟ್ರಿಕ್ ಆಟೋ ಸಹಯೋಗದಲ್ಲಿ ಎಲ್ಎಂಎಲ್ ಕಂಪನಿಯು ಹೊಸ ಇವಿ ವಾಹನಗಳನ್ನು ಉತ್ಪಾದಿಸಲಿದೆ.

ಹೊಸ ಇವಿ ದ್ವಿಚಕ್ರ ವಾಹನಗಳೊಂದಿಗೆ ಮರಳಿ ಮಾರುಕಟ್ಟೆ ಪ್ರವೇಶಿಸಲು ಸಜ್ಜಾದ ಎಲ್ಎಂಎಲ್

ಹರಿಯಾಣದ ಬವಾಲ್‌ನಲ್ಲಿರುವ ಈ ಸ್ಥಾವರದಲ್ಲಿ ತಿಂಗಳಿಗೆ 18,000 ದ್ವಿಚಕ್ರ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಎಲ್ಎಂಎಲ್ ಕಂಪನಿಯು ಭಾರತದಲ್ಲಿ ಹೀರೋ ಎಲೆಕ್ಟ್ರಿಕ್, ಓಲಾ ಎಲೆಕ್ಟ್ರಿಕ್, ಎಥರ್ ಎನರ್ಜಿ ಮತ್ತು ಓಕಿನಾವಾ ಮುಂತಾದ ಪ್ರಮುಖ ಇವಿ ವಾಹನ ತಯಾರಕರೊಂದಿಗೆ ಸ್ಪರ್ಧಿಸಲಿದೆ.

ಹೊಸ ಯೋಜನೆ ಅಡಿಯಲ್ಲಿ ಕಂಪನಿಯು ಮುಂದಿನ ಎರಡು ವರ್ಷದೊಳಗೆಗ ಮೂರು ಹೊಸ ಎಲೆಕ್ಟ್ರಿಕ್ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದ್ದು, ಮುಂದಿನ ಒಂದು ವರ್ಷದೊಳಾಗಿ ಹೊಸ ಉತ್ಪಾದನಾ ಘಟಕದಲ್ಲಿ ಕಾರ್ಯಾಚರಣೆ ಆರಂಭಿಸಲಿದೆ.

ಹೊಸ ಇವಿ ದ್ವಿಚಕ್ರ ವಾಹನಗಳೊಂದಿಗೆ ಮರಳಿ ಮಾರುಕಟ್ಟೆ ಪ್ರವೇಶಿಸಲು ಸಜ್ಜಾದ ಎಲ್ಎಂಎಲ್

ಹೊಸ ಎಲೆಕ್ಟ್ರಿಕ್ ವಾಹನಗಳನ್ನು ವಿನ್ಯಾಸಗೊಳಿಸಲು ಜಪಾನ್ ಮತ್ತು ಯುರೋಪ್‌ನಲ್ಲಿರುವ ಪ್ರಮುಖ ಎಂಜಿನಿಯರಿಂಗ್ ಸಂಸ್ಥೆಗಳೊಂದಿಗೆ ಸಹಭಾಗೀತ್ವ ಯೋಜನೆ ಅಡಿ ಹೊಸ ವಾಹನಗಳನ್ನು ಅಭಿವೃದ್ದಿಪಡಿಸಲಾಗುತ್ತಿದ್ದು,ಎಲ್ಎಂಎಲ್ ಕಂಪನಿಯು ಸೈರಾ ಕಂಪನಿಯ ಜೊತೆ ಮಾತ್ರವಲ್ಲದೆ ಇದು ಇರಾಕಿಟ್ ಎಜೆ ಕಂಪನಿಯ ಸಹಯೋಗದಲ್ಲೂ ಭಾರತದಲ್ಲಿ ಎಲೆಕ್ಟ್ರಿಕ್ ಹೈಪರ್‌ಬೈಕ್ ಅನ್ನು ಉತ್ಪಾದಿಸಲಿದೆ.

ಹೊಸ ಇವಿ ದ್ವಿ ಚಕ್ರ ವಾಹನಗಳೊಂದಿಗೆ ಮರಳಿ ಮಾರುಕಟ್ಟೆ ಪ್ರವೇಶಿಸಲು ಸಜ್ಜಾದ ಎಲ್ಎಂಎಲ್

ಜರ್ಮನಿ ಮೂಲದ ಇ ರಾಕಿಟ್ ಎಜೆ ವಿಶೇಷ ರೀತಿಯ ಎಲೆಕ್ಟ್ರಿಕ್ ಹೈಪರ್ ಬೈಕ್‌ಗಳು ಭಾರತದಲ್ಲಿ ಹೊಸ ಸಂಚನ ಮೂಡಿಸಲಿದ್ದು, ಹೊಸ ಹೈಪರ್ ಬೈಕ್ ಮಾದರಿಯು ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

ಹೊಸ ಇವಿ ದ್ವಿ ಚಕ್ರ ವಾಹನಗಳೊಂದಿಗೆ ಮರಳಿ ಮಾರುಕಟ್ಟೆ ಪ್ರವೇಶಿಸಲು ಸಜ್ಜಾದ ಎಲ್ಎಂಎಲ್

ಪೆಡಲಿಂಗ್ ಮೂಲಕವೂ ಚಾಲನೆ ಮಾಡಬಹುದಾದ ಸೌಲಭ್ಯ ಹೊಂದಿರುವ ಇ ರಾಕಿಟ್ ಎಜೆ ಬೈಕ್ ಮಾದರಿಯು ಗಂಟೆಗೆ 90 ಕಿಮೀ ವೇಗದಲ್ಲಿ ಓಡಿಸಬಹುದು. ಈ ಇ-ಬೈಕ್‌ನಲ್ಲಿ ಅಡ್ವಾನ್ಸ್ ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟರ್ ಅನ್ನು ಬಳಸಲಾಗಿದ್ದು, ಇದರ ಸಹಾಯದಿಂದ ಇದು ಪೂರ್ಣ ಚಾರ್ಜ್‌ನಲ್ಲಿ 150 ಕಿ.ಮೀ ಗಿಂತಲೂ ಹೆಚ್ಚಿನ ವ್ಯಾಪ್ತಿಯನ್ನು ಪಡೆಯುತ್ತದೆ.

ಹೊಸ ಇವಿ ದ್ವಿ ಚಕ್ರ ವಾಹನಗಳೊಂದಿಗೆ ಮರಳಿ ಮಾರುಕಟ್ಟೆ ಪ್ರವೇಶಿಸಲು ಸಜ್ಜಾದ ಎಲ್ಎಂಎಲ್

ಎಲ್‌ಎಂಎಲ್ ಕಂಪನಿಯು ಇ ರಾಕಿಟ್ ಎಜೆ ಬೈಕ್ ಮಾದರಿಯನ್ನ ಮುಂದಿನ ವರ್ಷ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಪ್ರಾರಂಭಿಸುವುದಾಗಿ ಈಗಾಗಲೇ ಘೋಷಿಸಿದ್ದು, ಸೈರಾ ಕಂಪನಿಯೊಂದಿಗೆ ಇವಿ ವಾಹನ ಉತ್ಪಾದನೆಯನ್ನು ಮುಂದಿನ ವರ್ಷ ಆಗಸ್ಟ್ ಅಥವಾ ಸೆಪ್ಟೆಂಬರ್ ಹೊತ್ತಿಗೆ ಆರಂಭಿಸಲಿದೆ.

Most Read Articles

Kannada
English summary
Lml star lml hyperbike ev names trademarked in india
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X