ರೆನಾಲ್ಟ್ ಕ್ವಿಡ್‌ಗೆ ಸೆಡ್ಡು ಹೊಡಿಯಲಿದೆಯೇ ಹೊಸ ಮಾರುತಿ ಆಲ್ಟೊ ಕೆ10: ಎರಡರಲ್ಲಿ ಯಾವುದು ಬೆಸ್ಟ್?

ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ, ಆಲ್ಟೊ ಕೆ10 ನ ಹೊಸ-ಪೀಳಿಗೆಯ ನವೀಕೃತ ಆವೃತ್ತಿಯನ್ನು ಇಂದು ಬಿಡುಗಡೆ ಮಾಡಿದೆ.

Recommended Video

Maruti Alto K10 Launched At Rs 3.99 Lakh | What’s New On The Hatchback? Dual-Jet VVT & AMT

ಈ ಹೊಸ ಮಾರುತಿ ಆಲ್ಟೊ ಕೆ10 ಅನ್ನು ಭಾರತದಲ್ಲಿ 3.99 ಲಕ್ಷ ರೂಪಾಯಿ (ಎಕ್ಸ್‌ ಶೋರೂಂ) ಬೆಲೆಯಲ್ಲಿ ಪರಿಚಯಿಸಲಾಗಿದೆ.

ರೆನಾಲ್ಟ್ ಕ್ವಿಡ್‌ಗೆ ಸೆಡ್ಡು ಹೊಡಿಯಲಿದೆಯೇ ಮಾರುತಿ ಆಲ್ಟೊ ಕೆ10: ಎರಡರಲ್ಲಿ ಯಾವುದು ಬೆಸ್ಟ್?

ವಿನ್ಯಾಸ, ವೈಶಿಷ್ಟ್ಯಗಳಿಂದ ಹಿಡಿದು ಎಂಜಿನ್‌ವರೆಗೆ ಹಲವು ಬದಲಾವಣೆಗಳೊಂದಿಗೆ ಹೊಸ ಆಲ್ಟೊ ಕೆ10 ಮಾದರಿಯನ್ನು ತರಲಾಗಿದೆ. ಪ್ರಸ್ತುತ ಭಾರತದಲ್ಲಿ ಮಾರುತಿ ಆಲ್ಟೊ ಕೆ10ಗೆ ಪ್ರತಿಸ್ಪರ್ಧಿಯಾದ ರೆನಾಲ್ಟ್ ಕ್ವಿಡ್ ಕೂಡ ಉತ್ತಮ ಬೇಡಿಕೆಯನ್ನು ಹೊಂದಿದೆ. ಹಾಗಾದರೆ ಎರಡು ಮಾದರಿಗಳಲ್ಲಿ ಯಾವುದು ಉತ್ತಮ ಹಾಗೂ ಬೆಲೆ, ವೈಶಿಷ್ಟ್ಯ, ಎಂಜಿನ್‌ ಪರ್ಫಾಮೆನ್ಸ್ ವಿಷಯದಲ್ಲಿ ಎರಡೂ ಹೇಗಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ...

ರೆನಾಲ್ಟ್ ಕ್ವಿಡ್‌ಗೆ ಸೆಡ್ಡು ಹೊಡಿಯಲಿದೆಯೇ ಮಾರುತಿ ಆಲ್ಟೊ ಕೆ10: ಎರಡರಲ್ಲಿ ಯಾವುದು ಬೆಸ್ಟ್?

ಬೆಲೆ

ಮಾರುತಿ ಆಲ್ಟೊ K10 ನ ಮ್ಯಾನುವಲ್ ರೂಪಾಂತರವು ರೂ. 3.99 ಲಕ್ಷ (ಎಕ್ಸ್‌ ಶೋರೂಂ) ಆರಂಭಿಕ ಬೆಲೆಯಲ್ಲಿ ಲಭ್ಯವಾಗಲಿದೆ. ತನ್ನ ಉನ್ನತ ವೇರಿಯೆಂಟ್‌ಗಳಿಗೆ ತಕ್ಕಂತೆ ಇದು ರೂ. 5.34 ಲಕ್ಷದವರೆಗೂ ಬೆಲೆ ಏರಿಕೆಯಾಗಲಿದೆ. ಇನ್ನು ಇದರಲ್ಲಿ ಆಟೊಮ್ಯಾಟಿಕ್ ವೇರಿಯೆಂಟ್ ಬೆಲೆಯು ರೂ. 5.50 ಲಕ್ಷದಿಂದ ಪ್ರಾರಂಭವಾಗಿ ರೂ 5.84 ಲಕ್ಷದವರೆಗೆ ಹೋಗುತ್ತದೆ.

ರೆನಾಲ್ಟ್ ಕ್ವಿಡ್‌ಗೆ ಸೆಡ್ಡು ಹೊಡಿಯಲಿದೆಯೇ ಮಾರುತಿ ಆಲ್ಟೊ ಕೆ10: ಎರಡರಲ್ಲಿ ಯಾವುದು ಬೆಸ್ಟ್?

ರೆನಾಲ್ಟ್ ಕ್ವಿಡ್ ಮ್ಯಾನುವಲ್ ವೇರಿಯೆಂಟ್ ರೂ. 4.64 ಲಕ್ಷದಿಂದ (ಎಕ್ಸ್‌ ಶೋರೂಂ) ಪ್ರಾರಂಭವಾಗಿ ರೂ. 5.64 ಲಕ್ಷದವರೆಗು ಹೋಗುತ್ತದೆ, ಆಟೊಮ್ಯಾಟಿಕ್ ರೂಪಾಂತರವು ರೂ. 5.79 ಲಕ್ಷದಿಂದ ಪ್ರಾರಂಭವಾಗಿ ರೂ. 6.09 ಲಕ್ಷದವರೆಗು ಹೋಗುತ್ತದೆ. ಇದು ಕೂಡ ತನ್ನ ವಿಭಾಗದಲ್ಲಿ ಕೈಗೆಟುಕುವ ಮಾದರಿಯಾಗಿ ಉತ್ತಮ ಬೇಡಿಕೆಯನ್ನು ಹೊಂದಿದೆ.

ರೆನಾಲ್ಟ್ ಕ್ವಿಡ್‌ಗೆ ಸೆಡ್ಡು ಹೊಡಿಯಲಿದೆಯೇ ಮಾರುತಿ ಆಲ್ಟೊ ಕೆ10: ಎರಡರಲ್ಲಿ ಯಾವುದು ಬೆಸ್ಟ್?

ವೈಶಿಷ್ಟ್ಯಗಳು

ವೈಶಿಷ್ಟ್ಯಗಳ ವಿಷಯದಲ್ಲಿ, ಮಾರುತಿ ಸುಜುಕಿ ಆಲ್ಟೊ K10 ರಿಮೋಟ್-ಕೀ, ಸ್ಮಾರ್ಟ್‌ಪ್ಲೇ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ ಸಪೋರ್ಟ್ ಮತ್ತು ಸ್ಟೀರಿಂಗ್-ಮೌಂಟೆಡ್ ಆಡಿಯೊ ಕಂಟ್ರೋಲ್‌ಗಳೊಂದಿಗೆ ಬರುತ್ತದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಇದರಲ್ಲಿ ಮೊದಲ ಬಾರಿಗೆ ನೀಡಲಾಗಿದೆ.

ರೆನಾಲ್ಟ್ ಕ್ವಿಡ್‌ಗೆ ಸೆಡ್ಡು ಹೊಡಿಯಲಿದೆಯೇ ಮಾರುತಿ ಆಲ್ಟೊ ಕೆ10: ಎರಡರಲ್ಲಿ ಯಾವುದು ಬೆಸ್ಟ್?

ಇದು ಇಲ್ಲಿಯವರೆಗೆ ದೊಡ್ಡ ಕಾರುಗಳಲ್ಲಿ ಮಾತ್ರ ಕಂಡುಬಂದಿರುವ ವೈಶಿಷ್ಟ್ಯವಾಗಿದೆ. ಉಳಿದಂತೆ USB ಪೋರ್ಟ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮ್ಯಾನುವಲ್ A/C ನಂತಹ ವೈಶಿಷ್ಟ್ಯಗಳನ್ನು ಹೊಸ ಮಾರುತಿ ಆಲ್ಟೊ K10 ನಲ್ಲಿ ಒದಗಿಸಲಾಗಿದೆ.

ರೆನಾಲ್ಟ್ ಕ್ವಿಡ್‌ಗೆ ಸೆಡ್ಡು ಹೊಡಿಯಲಿದೆಯೇ ಮಾರುತಿ ಆಲ್ಟೊ ಕೆ10: ಎರಡರಲ್ಲಿ ಯಾವುದು ಬೆಸ್ಟ್?

ರೆನಾಲ್ಟ್ ಕ್ವಿಡ್ ವಿಷಯಕ್ಕೆ ಬಂದರೆ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ವಾಯ್ಸ್ ಐಡೆಂಟಿಫಿಕೇಷನ್, ಪಿಯಾನೋ ಬ್ಲ್ಯಾಕ್ ಸೆಂಟರ್ ಕನ್ಸೋಲ್, ಡಿಜಿಟಲ್ ಎಲ್ಇಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಏರ್ ಕಂಡಿಷನರ್, ಫ್ರಂಟ್ ಪವರ್ ವಿಂಡೋಸ್, ಸ್ಪೀಡ್ ಯುಎಸ್‌ಬಿ ಚಾರ್ಜರ್, ಎಲೆಕ್ಟ್ರಿಕ್ ಒಆರ್‌ವಿಎಂಗಳು, ಡೇ-ನೈಟ್ ಐಆರ್‌ವಿಎಂ, ಟ್ರಾಫಿಕ್ ಅಸಿಸ್ಟೆನ್ಸ್ ಅನ್ನು ಕ್ವಿಡ್‌ನಲ್ಲಿ ನೀಡಲಾಗಿದೆ.

ರೆನಾಲ್ಟ್ ಕ್ವಿಡ್‌ಗೆ ಸೆಡ್ಡು ಹೊಡಿಯಲಿದೆಯೇ ಮಾರುತಿ ಆಲ್ಟೊ ಕೆ10: ಎರಡರಲ್ಲಿ ಯಾವುದು ಬೆಸ್ಟ್?

ಸುರಕ್ಷತೆ

ಸುರಕ್ಷತೆಯ ದೃಷ್ಟಿಯಿಂದ ಮಾರುತಿ ಸುಜುಕಿ ಆಲ್ಟೊ ಕೆ 10 ಎರಡು ಮುಂಭಾಗದ ಏರ್‌ಬ್ಯಾಗ್‌ಗಳನ್ನು ಹೊಂದಿದೆ, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್, ಎಬಿಎಸ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್, ಪ್ರಿ-ಟೆನ್ಷನರ್ ಮತ್ತು ಫೋರ್ಸ್ ಲಿಮಿಟರ್ ಫ್ರಂಟ್ ಸೀಟ್ ಬೆಲ್ಟ್ ಇತ್ಯಾದಿಗಳನ್ನು ಪಡೆದುಕೊಂಡಿದೆ.

ರೆನಾಲ್ಟ್ ಕ್ವಿಡ್‌ಗೆ ಸೆಡ್ಡು ಹೊಡಿಯಲಿದೆಯೇ ಮಾರುತಿ ಆಲ್ಟೊ ಕೆ10: ಎರಡರಲ್ಲಿ ಯಾವುದು ಬೆಸ್ಟ್?

Renault Kwid ನ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಡ್ರೈವರ್ ಮತ್ತು ಪ್ಯಾಸೆಂಜರ್ ಏರ್‌ಬ್ಯಾಗ್‌ಗಳು, ಎಂಜಿನ್ ಇಮೊಬಿಲೈಜರ್, EBD ಜೊತೆಗೆ ABS, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್, ಡ್ರೈವರ್ ಮತ್ತು ಪ್ಯಾಸೆಂಜರ್ ಸೀಟ್ ಬೆಲ್ಟ್ ರಿಮೈಂಡರ್, ಓವರ್‌ಸ್ಪೀಡ್ ಅಲರ್ಟ್, ರಿಯರ್ ELR (ತುರ್ತು ಲಾಕಿಂಗ್ ರಿಟ್ರಾಕ್ಟರ್) ಸೀಟ್ ಬೆಲ್ಟ್‌ಗಳು, ಸೆಂಟ್ರಲ್ ಲಾಕಿಂಗ್, ರಿಮೋಟ್ ಕೀಲೆಸ್ ಎಂಟ್ರಿ ಇತ್ಯಾದಿಗಳನ್ನು ನೀಡಲಾಗಿದೆ.

ರೆನಾಲ್ಟ್ ಕ್ವಿಡ್‌ಗೆ ಸೆಡ್ಡು ಹೊಡಿಯಲಿದೆಯೇ ಮಾರುತಿ ಆಲ್ಟೊ ಕೆ10: ಎರಡರಲ್ಲಿ ಯಾವುದು ಬೆಸ್ಟ್?

ಎಂಜಿನ್

ಹೊಸ ಆಲ್ಟೊ K10 ಅನ್ನು 1.0-ಲೀಟರ್ K10C ಎಂಜಿನ್‌ನೊಂದಿಗೆ ನೀಡಲಾಗಿದೆ. ಈ ಎಂಜಿನ್ 66 bhp ಪವರ್ ಮತ್ತು 89 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸಬಲ್ಲದು. ಐಡಲ್ ಸ್ಟಾರ್ಟ್/ಸ್ಟಾಪ್ ಫಂಕ್ಷನ್ ಅನ್ನು ಇದರಲ್ಲಿ ನೀಡಲಾಗಿರುವುದರಿಂದ ಮೈಲೇಜ್ ಕೂಡ ಉತ್ತಮವಾಗಿರುತ್ತದೆ.

ರೆನಾಲ್ಟ್ ಕ್ವಿಡ್‌ಗೆ ಸೆಡ್ಡು ಹೊಡಿಯಲಿದೆಯೇ ಮಾರುತಿ ಆಲ್ಟೊ ಕೆ10: ಎರಡರಲ್ಲಿ ಯಾವುದು ಬೆಸ್ಟ್?

ಹೊಸ ಆಲ್ಟೊ ಕೆ10 ಅನ್ನು ಎಜಿಎಸ್ ಗೇರ್‌ಬಾಕ್ಸ್‌ನೊಂದಿಗೆ ಸ್ಟ್ಯಾಂಡರ್ಡ್ 5-ಸ್ಪೀಡ್ ಮ್ಯಾನುವಲ್‌ನೊಂದಿಗೆ ಜೋಡಿಸಲಾಗಿದೆ. ಇದರ AMT ರೂಪಾಂತರವು 24.9 kmpl ಮತ್ತು ಮ್ಯಾನುವಲ್ ರೂಪಾಂತರವು 24.39 kmpl ಮೈಲೇಜ್ ನೀಡುತ್ತವೆ.

ರೆನಾಲ್ಟ್ ಕ್ವಿಡ್‌ಗೆ ಸೆಡ್ಡು ಹೊಡಿಯಲಿದೆಯೇ ಮಾರುತಿ ಆಲ್ಟೊ ಕೆ10: ಎರಡರಲ್ಲಿ ಯಾವುದು ಬೆಸ್ಟ್?

ರೆನಾಲ್ಟ್ ಕ್ವಿಡ್ ಎಂಜಿನ್ ಕುರಿತು ಮಾತನಾಡುವುದಾದರೆ 0.8-ಲೀಟರ್ ಪೆಟ್ರೋಲ್ ಮತ್ತು 1.0-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಕ್ರಮವಾಗಿ 53 Bhp ಪವರ್ ಮತ್ತು 72 Nm ಟಾರ್ಕ್ ಮತ್ತು 67 Bhp ಪವರ್ ಮತ್ತು 91 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ರೆನಾಲ್ಟ್ ಕ್ವಿಡ್‌ಗೆ ಸೆಡ್ಡು ಹೊಡಿಯಲಿದೆಯೇ ಮಾರುತಿ ಆಲ್ಟೊ ಕೆ10: ಎರಡರಲ್ಲಿ ಯಾವುದು ಬೆಸ್ಟ್?

ಇದಕ್ಕೆ 5-ಸ್ಪೀಡ್ ಮ್ಯಾನುವಲ್ ಮತ್ತು ಆಟೊಮ್ಯಾಟಿಕ್ ಗೇರ್‌ಬಾಕ್ಸ್ ನೀಡಲಾಗಿದೆ. ಇದರ ಮ್ಯಾನುವಲ್ (0.8-ಲೀಟರ್) 20.7 kmpl, ಮ್ಯಾನುಯಲ್ (1.0-ಲೀಟರ್) 21.7 kmpl ಮತ್ತು ಆಟೊಮ್ಯಾಟಿಕ್ (1.0-ಲೀಟರ್) 22 kmpl ಮೈಲೇಜ್ ನೀಡುತ್ತದೆ.

ರೆನಾಲ್ಟ್ ಕ್ವಿಡ್‌ಗೆ ಸೆಡ್ಡು ಹೊಡಿಯಲಿದೆಯೇ ಮಾರುತಿ ಆಲ್ಟೊ ಕೆ10: ಎರಡರಲ್ಲಿ ಯಾವುದು ಬೆಸ್ಟ್?

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಪ್ರತಿ ತಿಂಗಳು ಹ್ಯಾಚ್‌ಬ್ಯಾಕ್ ಮಾರಾಟದಲ್ಲಿ ಮಾರುತಿ ಸುಜುಕಿ ಆಲ್ಟೊದ ಸಾಧನೆ ಅದ್ಭುತವಾಗಿದ್ದು, ವ್ಯಾಗನ್ಆರ್, ಸ್ವಿಫ್ಟ್ ಮತ್ತು ಬಲೆನೊ ನಂತರ ಈ ಬೇಬಿ ಕಾರು ಅಗ್ರ 5 ಹ್ಯಾಚ್‌ಬ್ಯಾಕ್‌ಗಳಲ್ಲಿ ಸ್ಥಾನ ಪಡೆದುಕೊಂಡಿರುವುದು ಗಮನಾರ್ಹ. ಇದೀಗ ಹೊಸ K10 ಆವೃತ್ತಿಯ ಆಗಮನದೊಂದಿಗೆ Renault Kwid ಮಾರುತಿ ಸುಜುಕಿಯಿಂದ ಹೆಚ್ಚು ಸವಾಲನ್ನು ಎದುರಿಸಲಿದೆ.

Most Read Articles

Kannada
English summary
Maruti Alto K10 going to compete with Renault Kwid Which is the best
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X