ಆಟೋ ಎಕ್ಸ್‌ಪೋದಲ್ಲಿ 'ಟಾರ್ಕ್' ಕಂಪನಿಯಿಂದ ಹೊಸ ಎಲೆಕ್ಟ್ರಿಕ್ ಬೈಕ್ ಅನಾವರಣ..!

ಭಾರತದ ಮಾರುಕಟ್ಟೆಯಲ್ಲಿ ಸದ್ಯ ಎಲೆಕ್ಟ್ರಿಕ್ ಕಾರು, ಬೈಕ್‌ಗಳ ಅಬ್ಬರ ಶುರುವಾಗಿದೆ. ಅದರಂತೆ ವಿವಿಧ ಕಂಪನಿಗಳು ತಮ್ಮ ಇವಿಗಳನ್ನು ಲಾಂಚ್ ಮಾಡುತ್ತಿವೆ. ಮುಂಬರುವ ಆಟೋ ಎಕ್ಸ್‌ಪೋ (ಜನವರಿ 2023)ದಲ್ಲಿ ಹೊಸ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಮತ್ತು ನವೀಕರಿಸಿದ ಕ್ರಾಟೋಸ್ ಆರ್ ಬೈಕ್ ಅನಾವರಣಗೊಳಿಸಲು ಟಾರ್ಕ್ ಮೋಟಾರ್ಸ್ ಸಜ್ಜಾಗಿದೆ.

ಈ ವರ್ಷ, ಟಾರ್ಕ್ ಮೋಟಾರ್ಸ್ ಕಂಪನಿಯು ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳನ್ನು ದೇಶೀಯ ಮಾರುಕಟ್ಟೆಯಲ್ಲಿ ಕ್ರಮವಾಗಿ ರೂ.1.08 ಲಕ್ಷ ಹಾಗೂ ರೂ.1.23 ಲಕ್ಷ (ಎಕ್ಸ್ ಶೋರೂಂ, ಪುಣೆ) ಬೆಲೆಗೆ ಪರಿಚಯಿಸಿತ್ತು. ಇವೆರಡು ಆಕ್ಸಿಯಲ್ ಫ್ಲಕ್ಸ್ ಮೋಟಾರ್ ಒಳಗೊಂಡಿರುವ ಮೊದಲ ಎಲೆಕ್ಟ್ರಿಕ್ ಬೈಕ್‌ಗಳಾಗಿವೆ ಎಂದು ಕಂಪನಿ ಹೇಳಿಕೊಂಡಿದೆ. ಆಸಕ್ತ ಗ್ರಾಹಕರು ಅಧಿಕೃತ ವೆಬ್‌ಸೈಟ್ ಮೂಲಕ ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳನ್ನು ಬುಕ್ ಮಾಡಬಹುದು.

ಆಟೋ ಎಕ್ಸ್‌ಪೋದಲ್ಲಿ ಟಾರ್ಕ್ ಹೊಸ ಎಲೆಕ್ಟ್ರಿಕ್ ಬೈಕ್ ಅನಾವರಣ..!

ಟಾರ್ಕ್ ಮೋಟಾರ್ಸ್‌ನ ಸಂಸ್ಥಾಪಕ ಮತ್ತು ಸಿಇಒ ಕಪಿಲ್ ಶೆಲ್ಕೆ ಆಟೋ ಎಕ್ಸ್‌ಪೋ 2023ರ ಬಗ್ಗೆ ಮಾತನಾಡಿದ್ದಾರೆ. 'ನಮ್ಮ ಸ್ವದೇಶಿ ವಾಹನಗಳನ್ನು ದೇಶದ ಹೊಸ ಪೀಳಿಗೆಯ ಯುವಜನರಿಗೆ ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ. ಕ್ರಾಟೋಸ್ ಮೋಟಾರ್‌ಸೈಕಲ್‌ಗಳು ಗ್ರಾಹಕರ ಮನಸ್ಸನ್ನು ಗೆದ್ದಿವೆ. ನಮ್ಮ ಹೊಸ ಪ್ರಗತಿಯನ್ನು ನಾವು ಆಶಿಸುತ್ತಿದ್ದೇವೆ. ಭಾರತದಲ್ಲಿ ನಮ್ಮ ವಾಹನಗಳಿಗೆ ಖರೀದಿದಾರರಿಂದ ಹೆಚ್ಚುತ್ತಿರುವ ಮೆಚ್ಚುಗೆಯನ್ನು ಕಂಡು ತುಂಬಾ ಸಂತೋಷವಾಗಿದೆ. ಅದು ಈ ರೀತಿಯೇ ಮುಂದುವರಿಯಲಿ ಎಂದು ನಮ್ಮ ಬಯಕೆ' ಎಂದು ಹೇಳಿದ್ದಾರೆ.

ಹೊಸ ವರ್ಷದಿಂದ ಬಹುತೇಕ ಕಂಪನಿಗಳು ತಮ್ಮ ವಾಹನ ಮಾದರಿಗಳ ಬೆಲೆಯನ್ನು ಹೆಚ್ಚಿಸಲಿವೆ. ಅದರಂತೆ ಜನವರಿ 1, 2023ರಿಂದ ಮಾರುಕಟ್ಟೆಯಲ್ಲಿ ಕ್ರಾಟೋಸ್ ಎಲೆಕ್ಟ್ರಿಕ್ ಬೈಕ್‌ನ ಬೆಲೆ 1,32,499 ರೂಪಾಯಿ, ಕ್ರಾಟೋಸ್ ಆರ್ ಬೈಕ್‌ ಬೆಲೆ 1,47,499 ರೂಪಾಯಿ ಆಗಲಿದೆ (ಮಹಾರಾಷ್ಟ್ರದಲ್ಲಿ ಸಬ್ಸಿಡಿ ನಂತರ ಎರಡು ಬೆಲೆಗಳು ಎಕ್ಸ್ ಶೋರೂಂ ಆಧರಿಸಿದೆ) ಎಂದು ಟಾರ್ಕ್ ಮೋಟಾರ್ಸ್ ಹೇಳಿದೆ. ಏರುತ್ತಿರುವ ಇನ್ ಪುಟ್ ವೆಚ್ಚವನ್ನು ಸರಿದೂಗಿಸಲು ಬೆಲೆ ಏರಿಕೆ ಮಾಡುವುದು ಅನಿವಾರ್ಯ ಎಂದು ಕಂಪನಿ ತಿಳಿಸಿದೆಯಂತೆ.

ಟಾರ್ಕ್ ಮೋಟಾರ್ಸ್‌ ಅಭಿವೃದ್ಧಿಪಡಿಸಿರುವ ಹೊಸ ಕ್ರಾಟೋಸ್ ಬೈಕಿನಲ್ಲಿ 7.5kW ಎಲೆಕ್ಟ್ರಿಕ್ ಮೋಟರ್ ಹೊಂದಿದ್ದು, ಇದು 4 kWh ಲಿಥಿಯಂ-ಐಯಾನ್ ಬ್ಯಾಟರಿಯಿಂದ ಚಾಲಿತವಾಗಲಿದೆ. ಇದು 10 bhp ಗರಿಷ್ಠ ಪವರ್ ಮತ್ತು 28 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಸಂಪೂರ್ಣ ಚಾರ್ಜ್‌ ಮಾಡಿದರೆ ಗರಿಷ್ಠ 120 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಹೇಳಬಹುದು. ಇದು 4 ಸೆಕೆಂಡುಗಳಲ್ಲಿ 0-40 kmph ವೇಗವನ್ನು ಪಡೆಯುತ್ತದೆ. ಗರಿಷ್ಠ 100 kmph ಟಾಪ್ ಸ್ವೀಡ್ ಅನ್ನು ಹೊಂದಿದೆ.

ಕ್ರಾಟೋಸ್ ಆರ್ ಮೋಟಾರ್‌ಸೈಕಲ್ ಎಂಜಿನ್ ಕಾರ್ಯಕ್ಷಮತೆ ಕುರಿತು ಮಾತನಾಡುವುದಾದರೆ, ಈ ಬೈಕ್ 9kW ಎಲೆಕ್ಟ್ರಿಕ್ ಮೋಟಾರ್ ಹೊಂದಿದ್ದು, 12 bhp ಗರಿಷ್ಠ ಪವರ್ ಮತ್ತು 38 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದರ ಗರಿಷ್ಠ ವೇಗ ಗಂಟೆಗೆ 105 ಕಿ.ಮೀ ಇದ್ದು, ಸದ್ಯ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಲಭ್ಯವಿರುವ ಈ ಬೈಕ್ ವೇಗದ ಚಾರ್ಜಿಂಗ್ ಆಯ್ಕೆಯೊಂದಿಗೆ ಸಿಗಲಿದೆ. ಹಾಗಾಗಿ, ಇದು ಕೇವಲ 60 ನಿಮಿಷಗಳಲ್ಲಿ ಶೇಕಡ 80 ರಷ್ಟು ಪೂರ್ತಿ ಚಾರ್ಜ್ ಆಗಲಿದೆ.

ಭಾರತದ ಕಂಪನಿ ಟಾರ್ಕ್ ಮೋಟಾರ್ಸ್‌ ರೆಡಿ ಮಾಡುವ ಕ್ರಾಟೋಸ್ ಮತ್ತು ಕ್ರಾಟೋಸ್-ಆರ್ ಎರಡರಲ್ಲೂ ಇಕೋ, ಸಿಟಿ ಮತ್ತು ಸ್ಪೋರ್ಟ್ಸ್ ಎಂಬ 3 ರೈಡಿಂಗ್ ಮೋಡ್‌ಗಳಿವೆ. ಈ ಎಲೆಕ್ಟ್ರಿಕ್ ಬೈಕ್‌ಗಳು ರಿವರ್ಸ್ ಮೋಡ್ ಅನ್ನು ಹೊಂದಿದ್ದು, ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ರೇರ್ ಮೊನೊಶಾಕ್ ಮೂಲಕ ಸಸ್ಪೆನ್ಶನ್ ಅನ್ನು ನಿರ್ವಹಿಸಲಾಗುತ್ತದೆ. ಕ್ರಾಟೋಸ್‌ನ ಎರಡು ತುದಿಗಳಲ್ಲಿಯು ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ ಎಂದು ಹೇಳಬಹುದು. ಕೆಂಪು, ಬಿಳಿ, ನೀಲಿ ಮತ್ತು ಕಪ್ಪು ಬಣ್ಣಗಳ ಆಯ್ಕೆಯಲ್ಲಿ ಈ ಬೈಕುಗಳು ಖರೀದಿಗೆ ದೊರೆಯಲಿವೆ.

ದೇಶೀಯ ಮಾರುಕಟ್ಟೆಯಲ್ಲಿ ತನ್ನ ವಾಹನಗಳಿಗೆ ಇರುವ ಭಾರೀ ಬೇಡಿಕೆಯನ್ನು ಗಮನದಲ್ಲಿ ಇಟ್ಟುಕೊಂಡು ಟಾರ್ಕ್ ಮೋಟಾರ್ಸ್ ಆದಷ್ಟು ಬೇಗನೇ ಮಹಾರಾಷ್ಟ್ರದ ಚಕ್ಕನ್‌ನಲ್ಲಿ ಹೊಸ ಉತ್ಪಾದನಾ ಘಟಕ ತೆರೆಯಲು ರೆಡಿಯಾಗಿದೆ. ಇಲ್ಲಿ ತಿಂಗಳಿಗೆ ಸರಿ-ಸುಮಾರು 4,000-5,000 ಯುನಿಟ್‌ ಎಲೆಕ್ಟ್ರಿಕ್ ಬೈಕ್ ಉತ್ಪಾದಿಸುವ ಯೋಜನೆಯನ್ನು ಕಂಪನಿ ಹೊಂದಿದೆ. ಈ ನೂತನ ಬೈಕುಗಳು ಅಟಿಫೀಶಿಯಲ್ ಇಂಟಲಿಜೆನ್ಸ್ ಆಧಾರಿತ ಟಾರ್ಕ್ ಇನ್ಶೂಟಿವ್ ರೆಸ್ಪಾನ್ಸ್ ಆಪರೇಟಿಂಗ್ ಸಿಸ್ಟಂ- ಟಿ‍‍ಐಆರ್ಒ‍ಎಸ್ ಎಂಬ ಡ್ರೈವ್ ಟ್ರೇನ್ ಟೆಕ್ನಾಲಜಿಯನ್ನು ಹೊಂದಿವೆ.

Most Read Articles

Kannada
English summary
New electric bike unveiled by company torque at auto expo
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X