Just In
- 40 min ago
ಇಂದಿನಿಂದ ಸ್ಕಾರ್ಪಿಯೋ-ಎನ್ ಕಾರು ಮಾದರಿಯ ಟೆಸ್ಟ್ ಡ್ರೈವ್ ಆರಂಭಿಸಿದ ಮಹೀಂದ್ರಾ
- 1 hr ago
ಬೈಕ್ ನೀಡಿದ್ದ ಮೊದಲ ದಿನವೇ ಕಣ್ಮರೆಯಾಗಿದ್ದ ಧೋನಿ: ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಶ್ರೀನಿವಾಸನ್
- 1 hr ago
ನೀವು ಖರೀದಿಸಬಹುದಾದ ಅತ್ಯುತ್ತಮ ಸೆಕೆಂಡ್ ಹ್ಯಾಂಡ್ ಆಟೋಮ್ಯಾಟಿಕ್ ಹ್ಯಾಚ್ಬ್ಯಾಕ್ ಕಾರುಗಳಿವು...
- 3 hrs ago
ಮ್ಯಾಗ್ನೈಟ್ ಕಾರು ಮಾದರಿಯಲ್ಲಿ ಪ್ರಮುಖ ವೆರಿಯೆಂಟ್ಗಳನ್ನು ತೆಗೆದುಹಾಕಿದ ನಿಸ್ಸಾನ್
Don't Miss!
- News
ಮಹಾರಾಷ್ಟ್ರದಲ್ಲಿ ಭಾರೀ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
- Sports
ನತದೃಷ್ಟ ಪಂತ್: ಈತ ಶತಕ ಬಾರಿಸಿದರೆ ಭಾರತಕ್ಕೆ ಸೋಲು ಖಚಿತ ಎನ್ನುತ್ತಿವೆ ಅಂಕಿಅಂಶಗಳು!
- Movies
'ಸ್ಮೋಕಿಂಗ್ ಕಾಳಿ' ಪೋಸ್ಟರ್ ತೆಗೆದುಹಾಕಲು ಕೆನಡಾದ ಭಾರತೀಯ ಹೈಕಮಿಷನ್ ಕೋರಿಕೆ!
- Finance
ಎಲ್ಐಸಿ ಷೇರು ಖರೀದಿಸಲು ಮೋತಿಲಾಲ್ ಓಸ್ವಾಲ್ ಸಲಹೆ
- Technology
ಸಾರ್ವಜನಿಕರೇ ನಿಮ್ಮ ಮನೆ ಮೇಲೆ ಮೊಬೈಲ್ ಟವರ್ ಹಾಕಿಸುವ ಮುನ್ನ ಎಚ್ಚರ?
- Lifestyle
ಮಾನ್ಸೂನ್ ಸಮಯದಲ್ಲಿ ಜೀರ್ಣಕ್ರಿಯೆ ಸುಧಾರಿಸಲು ಇಂಥಾ ಆಹಾರಗಳಿಂದ ದೂರವಿರಿ
- Education
AIFD Recruitment 2022 : 5 ಪ್ಯಾಧ್ಯಾಪಕ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ಅತ್ಯಾಧುನಿಕ ತಂತ್ರಜ್ಞಾನ ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾದ ಒಕಿನಾವ ಓಖಿ 90 ಇ-ಸ್ಕೂಟರ್
ಓಕಿನಾವಾ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿರುವ ಎಲೆಕ್ಟ್ರಿಕ್ ವಾಹನ ತಯಾರಿಕ ಕಂಪನಿಯಾಗಿದ್ದು, ಈ ಕಂಪನಿ ಸ್ಕೂಟರ್‌ಗಳು ಗ್ರಾಹಕರಿಗೆ ಕೈಗೆಟುಕುವ ಮತ್ತು ದೀರ್ಘ-ಶ್ರೇಣಿಯ ಆಯ್ಕೆಗಳನ್ನು ಒದಗಿಸುತ್ತಿವೆ. ಈಗ ಕಂಪನಿಯು Okhi 90 ಹೆಸರಿನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

ಒಕಿನಾವಾ ಓಖಿ 90 ತನ್ನ ಹಿಂದಿನ ಮಾದರಿಗಳಂತೆ ಸಾಂಪ್ರದಾಯಿಕ ವಿನ್ಯಾಸವನ್ನು ಹೊಂದಿದ್ದು, ಓಖಿ 90 ಇ-ಸ್ಕೂಟರ್ ಎಕ್ಸ್ ಶೋರೂಂ (ಪ್ಯಾನ್ ಇಂಡಿಯಾ) ಬೆಲೆ 1,21,866 ರೂ. ಇದೆ. ಆಯಾ ಭೂಪ್ರದೇಶದಲ್ಲಿ ನೀಡಲಾಗುವ ಸಬ್ಸಿಡಿಯನ್ನು ಅವಲಂಬಿಸಿ ಬೆಲೆಗಳು ವಿವಿಧ ರಾಜ್ಯಗಳಲ್ಲಿ ಬದಲಾಗಲಿವೆ.

ಒಕಿನಾವಾ ಓಖಿ 90 ಸ್ಪೆಕ್ಸ್ & ರೇಂಜ್
ಒಕಿನಾವಾ ಓಖಿ 90 ಬೈಕಿನಲ್ಲಿ ಸಿಂಗಲ್ ಮಿಡ್ ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ ಅನ್ನು ಅಳವಡಿಸಲಾಗಿದ್ದು, ಇದು ಬೆಲ್ಟ್-ಡ್ರೈವ್ ಸೆಟಪ್ ಸಹಾಯದಿಂದ ಹಿಂಭಾಗದ ಚಕ್ರವನ್ನು ಓಡುವಂತೆ ಮಾಡುತ್ತದೆ. ಈ ಎಲೆಕ್ಟ್ರಿಕ್ ಮೋಟರ್ ಗರಿಷ್ಠ 3,800 ವ್ಯಾಟ್ (5.08 ಬಿಹೆಚ್‌ಪಿ) ವಿದ್ಯುತ್ ಉತ್ಪಾದನೆಯನ್ನು ಹೊಂದಿದ್ದು, ಗಂಟೆಗೆ 80-90 ಕಿ.ಮೀ ಗರಿಷ್ಠ ವೇಗವನ್ನು ತಲುಪಲು ಅನುವು ಮಾಡಿಕೊಡುತ್ತದೆ.

ಒಕಿನಾವಾ ಓಖಿ 90ನಲ್ಲಿರುವ ಎಲೆಕ್ಟ್ರಿಕ್ ಮೋಟರ್ 3.6 ಕಿಲೋವ್ಯಾಟ್ ಲಿಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ನಿಂದ ನಿರ್ಮಿತವಾಗಿದ್ದು, ಇದನ್ನು ಸ್ಕೂಟರ್‌ನಿಂದ ಬೇರ್ಪಡಿಸಿ ಮಾಲೀಕರು ಎಲ್ಲಿ ಬೇಕಾದರೂ ಚಾರ್ಜ್ ಮಾಡಿಕೊಳ್ಳಬಹುದು.

ಬ್ಯಾಟರಿ ಪ್ಯಾಕ್ ಅನ್ನು ಒಂದು ಬಾರಿ ಚಾರ್ಜ್ ಮಾಡಿದರೆ 160 ಕಿಲೋಮೀಟರ್ ಮೈಲೇಜ್ ನೀಡಲಿದೆ. ಓಖಿ 90ರ ಬ್ಯಾಟರಿ ಪ್ಯಾಕ್ ಅನ್ನು ಕೇವಲ ಒಂದು ಗಂಟೆಯಲ್ಲಿ ಶೇಕಡಾ 80 ರಷ್ಟು ಚಾರ್ಜ್ ಮಾಡಬಹುದು. ಒಂದು ಪೂರ್ಣ ಚಾರ್ಜ್ 3-4 ಗಂಟೆಗಳ ಸಮಯ ತೆಗೆದುಕೊಳ್ಳಬಹುದು. ಒಕಿನಾವಾ ಆಟೋಟೆಕ್ ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಎರಡಕ್ಕೂ ಮೂರು ವರ್ಷಗಳ ವಾರಂಟಿಯನ್ನು ಕಂಪನಿ ನೀಡುತ್ತಿದೆ.

ಒಕಿನಾವಾ ಓಖಿ 90 ಎಲೆಕ್ಟ್ರಿಕ್ ಸ್ಕೂಟರ್ 2,220 ಎಂಎಂ ಉದ್ದ ಮತ್ತು 1,160 ಎಂಎಂ ಎತ್ತರವಿದೆ. ಇ-ಸ್ಕೂಟರ್ 710 ಎಂಎಂ ಅಗಲವಿದ್ದು, ವ್ಹೀಲ್ ಬೇಸ್ 1,520 ಎಂಎಂ ಉದ್ದವಿದೆ. ಒಕಿನಾವಾ ಓಖಿ 175 ಮಿಮೀ ಗ್ರೌಂಡ್ ಕ್ಲಿಯರೆನ್ಸ್ ನೀಡುತ್ತದೆ. ಈ ಸ್ಕೂಟರ್ ಗರಿಷ್ಠ 250 ಕಿಲೋಮೀಟರ್ ಲೋಡಿಂಗ್ ಸಾಮರ್ಥ್ಯವನ್ನು ಹೊಂದಿದೆ.

ಒರಟು ರಸ್ತುಗಳನ್ನು ನಿಭಾಯಿಸಲು ಒಕಿನಾವಾ ಓಖಿ 90 ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್‌ಗಳನ್ನು ನೀಡಲಾಗಿದೆ. ಬ್ರೇಕಿಂಗ್ ಕರ್ತವ್ಯಗಳನ್ನು ಎರಡೂ ಚಕ್ರಗಳ ಮೇಲಿನ ಡಿಸ್ಕ್ ಬ್ರೇಕ್‌ಗಳ ಮೂಲಕ ನಿರ್ವಹಿಸಲಾಗುತ್ತದೆ, ಇದು ಎಲೆಕ್ಟ್ರಾನಿಕ್ ಎಬಿಎಸ್ ಸಿಸ್ಟಮ್‌ನ ಸಹಾಯದಿಂದ ಚಾಲಿತವಾಗಿದ್ದು, ಪ್ರಯಾಣದಲ್ಲಿ ಸ್ಕೂಟರ್ ಅನ್ನು ಚಾರ್ಜ್ ಮಾಡಲು ಪುನರುತ್ಪಾದಕ ಶಕ್ತಿಗೆ ಅನುವು ಮಾಡಿಕೊಡುತ್ತದೆ.

ಒಕಿನಾವಾ ಓಖಿ 90 16-ಇಂಚಿನ ಅಲಾಯ್ ವ್ಹೀಲ್‌ಗಳನ್ನು ಹೊಂದಿದ್ದು, ಇದು ತನ್ನ ಆವೃತ್ತಿಯಲ್ಲಿ ಅತಿದೊಡ್ಡದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಅಲಾಯ್ ವ್ಹೀಲ್‌ಗಳನ್ನು 100/80-16 (ಮುಂಭಾಗ) ಮತ್ತು 120/80 9 (ಹಿಂಭಾಗದ) ಟ್ಯೂಬ್ ಲೆಸ್ ಟೈರ್‌ಗಳಲ್ಲಿ ಶೋ ಮಾಡಲಾಗಿದೆ.

ಒಕಿನಾವಾ ಓಖಿ 90 ಡಿಸೈನ್ & ಫೀಚರ್ಸ್
ಒಕಿನಾವಾ ಓಖಿ 90 ತನ್ನ ಹಿಂದಿನ ಮಾದರಿಗಳಂತೆ ಸಾಂಪ್ರದಾಯಿಕ ವಿನ್ಯಾಸವನ್ನು ಹೊಂದಿದೆ. ಮುಂಭಾಗದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ದೊಡ್ಡ ಎಲ್ಇಡಿ ಹೆಡ್ಲ್ಯಾಂಪ್ ಅನ್ನು ಹೊಂದಿದೆ, ಇದರ ವಿನ್ಯಾಸವು ಇವಿ ತಯಾರಕರ ಲೋಗೋದಿಂದ ಪ್ರೇರಿತವಾಗಿದೆ.

ಕಂಪನಿಯು ಓಖಿ 90 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಗ್ರಾಹಕರಿಗೆ ಸುಲಭ ಪ್ರಯಾಣಕ್ಕೆ ಅನುಭವವನ್ನು ನೀಡಲು ವಿನ್ಯಾಸಗೊಳಿಸಿದೆ. ಇದಲ್ಲದೆ, ಎಲ್ಇಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಸಹ ನೀಡಲಾಗಿದೆ, ಇದು ಸವಾರನಿಗೆ ವೇಗ, ಶ್ರೇಣಿ ಮತ್ತು ಬ್ಯಾಟರಿ ಚಾರ್ಜ್ ಮುಂತಾದ ಹಲವು ಮಾಹಿತಿಯನ್ನು ನೀಡುತ್ತದೆ.

ಮುಂಭಾಗದಲ್ಲಿ ದೊಡ್ಡ ಡೇಟೈಮ್ ರನ್ನಿಂಗ್ ಲೈಟ್‌ಗಳು ಮತ್ತು ಇಂಡಿಕೇಟರ್‌ಗಳು ಸಹ ಕಂಡುಬರುತ್ತವೆ, ಇವೆರಡೂ ಪೂರ್ಣ ಎಲ್ಇಡಿ ಘಟಕಗಳಾಗಿವೆ. ಸ್ಕೂಟರ್‌ನ ಹಿಂಭಾಗದಲ್ಲಿ ಎಲ್ಇಡಿ ಟೇಲ್‌ಲೈಟ್ ಮತ್ತು ಹಿಂಬದಿ ಸವಾರನಿಗೆ ಗ್ರಾಬ್ ರೈಲ್ ಅನ್ನುಬ ಅಳವಡಿಸಲಾಗಿದೆ.

ಒಕಿನಾವಾ ಓಖಿ 90 ಬೈಕಿನಲ್ಲಿ ದೊಡ್ಡ 40-ಲೀಟರ್ ಬೂಟ್, ಹೆಚ್ಚುವರಿ ಸ್ಟೋರೇಜ್‌ಗಾಗಿ ಗ್ಲೋವ್ಬಾಕ್ಸ್ ಮತ್ತು ಮೊಬೈಲ್ ಸಾಧನಗಳನ್ನು ಚಾರ್ಜ್ ಮಾಡಲು ಯುಎಸ್‌ಬಿ ಪೋರ್ಟ್ ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸೈಡ್ ಸ್ಟ್ಯಾಂಡ್ ಸೆನ್ಸರ್, ಡಿಜಿಟಲ್ ಸ್ಪೀಡೋಮೀಟರ್, ಆಟೋಮ್ಯಾಟಿಕ್ ಲಾಕಿಂಗ್, ಆಂಟಿ-ಥೆಫ್ಟ್ ಅಲಾರಂ, ರಿಯಲ್-ಟೈಮ್ ಟ್ರ್ಯಾಕಿಂಗ್‌ಗಾಗಿ ಜಿಪಿಎಸ್ ಮತ್ತು ಫೈಂಡ್ ಮೈ ಡಿವೈಸ್ ಸಿಸ್ಟಮ್ ಇತರ ವೈಶಿಷ್ಟ್ಯಗಳನ್ನು ಹೋಂದಿದ್ದು, ಈ ವೈಶಿಷ್ಟ್ಯಗಳಲ್ಲಿ ಹೆಚ್ಚಿನವುಗಳನ್ನು ಒಕಿನಾವಾ ಕನೆಕ್ಟ್ ಅಪ್ಲಿಕೇಶನ್ ಬಳಸಿ ಪ್ರವೇಶಿಸಬಹುದು.

ಓಖಿ 90 ಜನಪ್ರಿಯ ಇ-ಸ್ಕೂಟರ್ 90 ಭಾರತೀಯ ಮಾರುಕಟ್ಟೆಯಲ್ಲಿ Ola S1 Pro, Simple One, Bajaj Chetak ಮತ್ತು TVS iQube ಜೊತೆಗೆ Ather 450X ನಂತಹ ಅನೇಕ ಇತರ ಎಲೆಕ್ಟ್ರಿಕ್ ಸ್ಕೂಟರ್ಗಳೊಂದಿಗೆ ಸ್ಪರ್ಧಿಸುತ್ತಿದೆ. ಅದರ ಶ್ರೀಮಂತ ವೈಶಿಷ್ಟ್ಯ ಪಟ್ಟಿ ಮತ್ತು ಆಕರ್ಷಕ ಬೆಲೆಯೊಂದಿಗೆ, ಒಕಿನಾವಾ ಓಖಿ 90 ಮಾರುಕಟ್ಟೆಯಲ್ಲಿ ತನ್ನ ಪ್ರತಿಸ್ಪರ್ಧಿಗಳನ್ನು ಹೇಗೆ ಎದುರಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.