ಇವಿ ಸ್ಕೂಟರ್ ನೊಂದಣಿ ಪಟ್ಟಿಯಲ್ಲಿ ಓಲಾ ಎಲೆಕ್ಟ್ರಿಕ್ ಮೊದಲ ತಿಂಗಳ ಮಾರಾಟ ವರದಿ ಬಹಿರಂಗ

ಓಲಾ ಎಲೆಕ್ಟ್ರಿಕ್ ಕಂಪನಿಯು ದೇಶಾದ್ಯಂತ ಪ್ರಮುಖ ನಗರಗಳಲ್ಲಿ ತನ್ನ ಹೊಸ ಎಸ್‍1 ಮತ್ತು ಎಸ್1 ಪ್ರೊ ಇವಿ ಸ್ಕೂಟರ್ ವಿತರಣೆ ಆರಂಭಿಸಿದ್ದು, ಡಿಸೆಂಬರ್ 15ರಿಂದ ಆರಂಭಗೊಂಡಿರುವ ವಿತರಣೆ ಪ್ರಕ್ರಿಯೆಯೂ ಇದೀಗ ತೀವ್ರಗೊಂಡಿದೆ.

ಇವಿ ಸ್ಕೂಟರ್ ಮಾರಾಟ: ಮೊದಲ ತಿಂಗಳ ಮಾರಾಟ ವರದಿ ಪ್ರಕಟಿಸಿದ ಓಲಾ ಎಲೆಕ್ಟ್ರಿಕ್

ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಾಗಿ ಓಲಾ ಕಂಪನಿಯು ಇದುವರೆಗೆ ಸುಮಾರು 1 ಲಕ್ಷಕ್ಕೂ ಅಧಿಕ ಬುಕ್ಕಿಂಗ್ ಪಡೆದುಕೊಂಡಿದ್ದು, ಕಂಪನಿಯು ಮೊದಲ ತಿಂಗಳ ಇವಿ ಸ್ಕೂಟರ್ ಮಾರಾಟ ವರದಿಯನ್ನು ಪ್ರಕಟಿಸಿದೆ. ಕಂಪನಿಯು ಡಿಸೆಂಬರ್ 15ರಿಂದ ಡಿಸೆಂಬರ್ 31ರ ತನಕ ಕೇವಲ 111 ಇವಿ ಸ್ಕೂಟರ್‌ಗಳನ್ನು ಮಾತ್ರವೇ ವಿತರಣೆ ಮಾಡಿದ್ದು, ಓಲಾ ಇವಿ ಸ್ಕೂಟರ್ ಮಾರಾಟ ವರದಿಯನ್ನು ಫೆಡರೇಶನ್ ಆಫ್ ಆಟೋಮೊಬೈಲ್ಸ್ ಡೀಲರ್ಸ್ ಅಸೋಸಿಯೇಷನ್ ​​ಅಧ್ಯಕ್ಷ ವಿಂಕೇಶ್ ಗುಲಾಟಿ ಅವರು ಆರ್‌ಟಿಒದಲ್ಲಿ ನೋಂದಾಯಿಸಲಾದ ಓಲಾ ಸ್ಕೂಟರ್‌ಗಳ ಡೇಟಾವನ್ನು ಹಂಚಿಕೊಂಡಿದ್ದಾರೆ.

ಇವಿ ಸ್ಕೂಟರ್ ಮಾರಾಟ: ಮೊದಲ ತಿಂಗಳ ಮಾರಾಟ ವರದಿ ಪ್ರಕಟಿಸಿದ ಓಲಾ ಎಲೆಕ್ಟ್ರಿಕ್

ಆರ್‌ಟಿಒದಲ್ಲಿ ನೋಂದಾಯಿಸಲಾದ ಓಲಾ ಸ್ಕೂಟರ್‌ಗಳ ಡೇಟಾ ಪ್ರಕಾರ 111 ಸ್ಕೂಟರ್‌ಗಳನ್ನು ಮಾರಾಟಗೊಂಡಿದ್ದು, ಇದರಲ್ಲಿ 60 ಸ್ಕೂಟರ್‌ಗಳು ಕರ್ನಾಟಕದಲ್ಲಿ ಮತ್ತು 25 ಸ್ಕೂಟರ್‌ಗಳು ತಮಿಳುನಾಡಿನಲ್ಲಿ, 15 ಸ್ಕೂಟರ್‌ಗಳು ಮಹಾರಾಷ್ಟ್ರದಲ್ಲಿ ಮತ್ತು 11 ಸ್ಕೂಟರ್‌ಗಳು ರಾಜಸ್ಥಾನದಲ್ಲಿ ನೋಂದಣಿಯಾಗಿವೆ.

ಇವಿ ಸ್ಕೂಟರ್ ಮಾರಾಟ: ಮೊದಲ ತಿಂಗಳ ಮಾರಾಟ ವರದಿ ಪ್ರಕಟಿಸಿದ ಓಲಾ ಎಲೆಕ್ಟ್ರಿಕ್

ಮೊದಲ ಬ್ಯಾಚ್‌ನಲ್ಲಿ ಕೆಲವೇ ಘಟಕಗಳನ್ನು ಮಾರಾಟ ಮಾಡಿರುವುದಾಗಿ ಹೇಳಿಕೊಂಡಿರುವ ಓಲಾ ಎಲೆಕ್ಟ್ರಿಕ್ ಸಿಇಒ ಭಾವಿಶ್ ಅಗರವಾಲ್ ಅವರು ಎರಡನೇ ಬ್ಯಾಚ್‌ನಲ್ಲಿ ಹೆಚ್ಚಿನ ಸಂಖ್ಯೆಯ ಇವಿ ಸ್ಕೂಟರ್‌ಗಳು ನೊಂದಣಿ ಪಡೆದುಕೊಳ್ಳಲಿವೆ ಎಂದಿದ್ದಾರೆ.

ಇವಿ ಸ್ಕೂಟರ್ ಮಾರಾಟ: ಮೊದಲ ತಿಂಗಳ ಮಾರಾಟ ವರದಿ ಪ್ರಕಟಿಸಿದ ಓಲಾ ಎಲೆಕ್ಟ್ರಿಕ್

ಮೊದಲ ಬ್ಯಾಚ್‌ನಲ್ಲಿದ್ದ ಸ್ಕೂಟರ್‌ಗಳನ್ನು ವಿತರಣೆ ಆರಂಭಕ್ಕಾಗಿ ನೊಂದಣಿ ಮಾಡಲಾಗಿದ್ದು, ಎರಡನೇ ಬ್ಯಾಚ್ ಮೂಲಕ ವಿವಿಧ ನಗರಗಳಲ್ಲಿ ವಿತರಣೆ ಮಾಡುತ್ತಿರುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಎರಡನೇ ಬ್ಯಾಚ್‌ನಲ್ಲಿರುವ ಸ್ಕೂಟರ್‌ಗಳ ಮಾರಾಟ ಸಂಖ್ಯೆಯು ಜನವರಿ ಅವಧಿಯಲ್ಲಿನ ಇವಿ ಸ್ಕೂಟರ್ ಮಾರಾಟ ಪಟ್ಟಿಯಲ್ಲಿ ಪ್ರಕಟಗೊಳ್ಳಲಿದ್ದು, ಹಂತ-ಹಂತವಾಗಿ ಇವಿ ಸ್ಕೂಟರ್ ಉತ್ಪಾದನೆ ಹೆಚ್ಚಿಸುತ್ತಿರುವುದಾಗಿ ಓಲಾ ಎಲೆಕ್ಟ್ರಿಕ್ ತನ್ನ ಗ್ರಾಹಕರಿಗೆ ಮಾಹಿತಿ ರವಾನಿಸಿದೆ.

ಇವಿ ಸ್ಕೂಟರ್ ಮಾರಾಟ: ಮೊದಲ ತಿಂಗಳ ಮಾರಾಟ ವರದಿ ಪ್ರಕಟಿಸಿದ ಓಲಾ ಎಲೆಕ್ಟ್ರಿಕ್

ಇನ್ನು ಓಲಾ ಎಲೆಕ್ಟ್ರಿಕ್ ಕಂಪನಿಯು ಇವಿ ಗ್ರಾಹಕರಿಗಾಗಿ ಹೊಸ ಆಫರ್ ನೀಡಿದ್ದು, ಎಸ್1 ಮಾದರಿಗಾಗಿ ಬುಕ್ಕಿಂಗ್ ಸಲ್ಲಿಸಿರುವ ಗ್ರಾಹಕರಿಗೆ ಕಂಪನಿಯು ಎಸ್1 ಪ್ರೊ ಮಾದರಿಯನ್ನು ವಿತರಣೆ ಮಾಡುವುದಾಗಿ ಮಾಹಿತಿ ನೀಡಿದ್ದು, ತಾಂತ್ರಿಕವಾಗಿ ಒಂದೇ ಆಗಿರುವ ಎಸ್1 ಮತ್ತು ಎಸ್1 ಪ್ರೊ ಮಾದರಿಯನ್ನು ಖರೀದಿಸುವ ಅವಕಾಶ ನೀಡಿದೆ.

ಇವಿ ಸ್ಕೂಟರ್ ಮಾರಾಟ: ಮೊದಲ ತಿಂಗಳ ಮಾರಾಟ ವರದಿ ಪ್ರಕಟಿಸಿದ ಓಲಾ ಎಲೆಕ್ಟ್ರಿಕ್

ಎಂಟ್ರಿ ಲೆವಲ್ ಎಸ್1 ಮಾದರಿಗಾಗಿ ಬುಕ್ಕಿಂಗ್ ಸಲ್ಲಿಸಿರುವ ಗ್ರಾಹಕರು ಎಸ್1 ಪ್ರೊ ಖರೀದಿಸಲು ಕೆಲವು ಷರತ್ತು ಹಾಕಿರುವ ಕಂಪನಿಯು ತಾಂತ್ರಿಕ ವೈಶಿಷ್ಟ್ಯತೆಯೊಂದಿಗೆ ಎಸ್1 ಮಾದರಿಯನ್ನು ಉಚಿತವಾಗಿ ಎಸ್1 ಪ್ರೊ ಮಾದರಿಗೆ ಅಪ್‌ಗ್ರೆಡ್ ಮಾಡುವುದಾಗಿ ತಿಳಿಸಿದ್ದು, ಒಂದು ವೇಳೆ ಸಾಫ್ಟ್‌ವೇರ್, ಹೆಚ್ಚಿನ ಮೈಲೇಜ್ ರೇಂಜ್ ಬೇಕಿದ್ದಲ್ಲಿ ಹೆಚ್ಚುವರಿಯಾಗಿರುವ ರೂ.30 ಸಾವಿರ ಪಾವತಿಸಿ ಅಪ್‌ಗ್ರೆಡ್ ಮಾಡಿಕೊಳ್ಳುವ ಅವಕಾಶ ನೀಡಿದೆ.

ಇವಿ ಸ್ಕೂಟರ್ ಮಾರಾಟ: ಮೊದಲ ತಿಂಗಳ ಮಾರಾಟ ವರದಿ ಪ್ರಕಟಿಸಿದ ಓಲಾ ಎಲೆಕ್ಟ್ರಿಕ್

ಓಲಾ ಎಲೆಕ್ಟ್ರಿಕ್ ಕಂಪನಿಯು ಮೊದಲ ಹಂತವಾಗಿ ಬೆಂಗಳೂರು, ಚೆನ್ನೈ ಮುಂಬೈ ಮತ್ತು ಜೈಪುರ್‌ನಲ್ಲಿ ಸ್ಕೂಟರ್ ವಿತರಣೆ ಆರಂಭಿಸಿದ್ದು, ಎರಡನೇ ಹಂತದಲ್ಲಿ ಮುಂಬೈ, ಹೈದ್ರಾಬಾದ್, ಅಹಮದಾಬಾದ್, ಪುಣೆ ಮತ್ತು ವೈಜಾಗ್‌ನಲ್ಲಿ ಇವಿ ಸ್ಕೂಟರ್ ವಿತರಣೆಗೆ ಚಾಲನೆ ನೀಡಲಾಗುತ್ತಿದೆ.

ಇವಿ ಸ್ಕೂಟರ್ ಮಾರಾಟ: ಮೊದಲ ತಿಂಗಳ ಮಾರಾಟ ವರದಿ ಪ್ರಕಟಿಸಿದ ಓಲಾ ಎಲೆಕ್ಟ್ರಿಕ್

ಓಲಾ ಹೊಸ ಎಸ್1 ಇವಿ ಸ್ಕೂಟರ್ ಮಾದರಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 99,999 ಬೆಲೆ ಹೊಂದಿದ್ದರೆ ಎಸ್1 ಪ್ರೊ ಮಾದರಿಯು ರೂ. 1,29,999 ಬೆಲೆ ಹೊಂದಿದ್ದು, ಅತ್ಯತ್ತಮ ಕಾರ್ಯಕ್ಷಮತೆ, ಗರಿಷ್ಠ ಮೈಲೇಜ್, ಪ್ರೀಮಿಯಂ ಫೀಚರ್ಸ್ ಮತ್ತು ಬಜೆಟ್ ಬೆಲೆಯು ಹೊಸ ಸ್ಕೂಟರ್ ಆಯ್ಕೆ ಮೌಲ್ಯವನ್ನು ಹೆಚ್ಚಿಸಿವೆ.

ಇವಿ ಸ್ಕೂಟರ್ ಮಾರಾಟ: ಮೊದಲ ತಿಂಗಳ ಮಾರಾಟ ವರದಿ ಪ್ರಕಟಿಸಿದ ಓಲಾ ಎಲೆಕ್ಟ್ರಿಕ್

ಓಲಾ ಕಂಪನಿಯು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಕುರಿತಾದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಉಪಯಕ್ತ ಮಾಹಿತಿಯುಳ್ಳ ಆ್ಯಪ್ ಕೂಡಾ ಅಭಿವೃದ್ದಿಪಡಿಸಿದ್ದು, ಹೊಸ ಆ್ಯಪ್ ಮೂಲಕ ವಾಹನ ಖರೀದಿ, ವಿತರಣೆ, ಗ್ರಾಹಕ ಸೇವೆ, ಇನ್ಸುರೆನ್ಸ್, ಮೌಲ್ಯ ವರ್ಧಿತ ಸೇವೆಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.

ಇವಿ ಸ್ಕೂಟರ್ ಮಾರಾಟ: ಮೊದಲ ತಿಂಗಳ ಮಾರಾಟ ವರದಿ ಪ್ರಕಟಿಸಿದ ಓಲಾ ಎಲೆಕ್ಟ್ರಿಕ್

ಹೊಸ ಎಸ್1 ವೆರಿಯೆಂಟ್‌‌ನಲ್ಲಿ ಓಲಾ ಕಂಪನಿಯು 2.98kWh ಮತ್ತು ಎಸ್1 ಪ್ರೊ ಮಾದರಿಯಲ್ಲಿ 3.97kWh ಲೀಥಿಯಂ ಅಯಾನ್ ಬ್ಯಾಟರಿ ಜೋಡಣೆ ಮಾಡಿದ್ದು, ಪ್ರತಿ ಚಾರ್ಜ್‌ಗೆ ಎಸ್1 ಮಾದರಿಯು ಗರಿಷ್ಠ 121 ಕಿ.ಮೀ ಮೈಲೇಜ್ ಹಿಂದಿರುಗಿಸಿದರೆ ಎಸ್1 ಪ್ರೊ ಮಾದರಿಯು ಪ್ರತಿ ಚಾರ್ಜ್‌ಗೆ 181 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಇವಿ ಸ್ಕೂಟರ್ ಮಾರಾಟ: ಮೊದಲ ತಿಂಗಳ ಮಾರಾಟ ವರದಿ ಪ್ರಕಟಿಸಿದ ಓಲಾ ಎಲೆಕ್ಟ್ರಿಕ್

ಇದರಲ್ಲಿ ಎಸ್1 ಮಾದರಿಯು ಗಂಟೆಗೆ 90 ಕಿ.ಮೀ ಟಾಪ್ ಸ್ಪೀಡ್‌ ಹೊಂದಿದ್ದರೆ ಎಸ್1 ಪ್ರೊ ಮಾದರಿಯು ಪ್ರತಿ ಗಂಟೆಗೆ 115ಕಿ.ಮೀ ಟಾಪ್ ಸ್ಪೀಡ್‌ ಹೊಂದಿದ್ದು, ಎಸ್1 ಮಾದರಿಯಲ್ಲಿ ನಾರ್ಮಲ್ ಮತ್ತು ಸ್ಪೋರ್ಟ್ ರೈಡ್ ಮೋಡ್‌ಗಳಿದ್ದರೆ ಎಸ್1 ಪ್ರೊ ಮಾದರಿಯಲ್ಲಿ ನಾರ್ಮಲ್, ಸ್ಪೋರ್ಟ್ ಮತ್ತು ಹೈಪರ್ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ.

ಇವಿ ಸ್ಕೂಟರ್ ಮಾರಾಟ: ಮೊದಲ ತಿಂಗಳ ಮಾರಾಟ ವರದಿ ಪ್ರಕಟಿಸಿದ ಓಲಾ ಎಲೆಕ್ಟ್ರಿಕ್

ಹಾಗೆಯೇ ಓಲಾ ಇವಿ ಸ್ಕೂಟರ್‌ಗಳು ಅತ್ಯುತ್ತಮ ವಿನ್ಯಾಸದೊಂದಿಗೆ ಗರಿಷ್ಠ ಮಟ್ಟದ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಂಡಿದ್ದು, ಹೊಸ ಸ್ಕೂಟರ್‌ಗಳಲ್ಲಿ ಟ್ವಿನ್ ಪಾಡ್ ಎಲ್ಇಡಿ ಸೆಟ್ಅಪ್, ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಟೈಲ್‌ಲ್ಯಾಂಪ್, ಕೌಂಟ್‌ರ್ಡ್ ಸೀಟ್, ಅಲಾಯ್ ವ್ಹೀಲ್, 36-ಲೀಟರ್ ಸಾಮರ್ಥ್ಯ ಅಂಡರ್ ಸೀಟ್ ಸ್ಪೋರೇಜ್, ರಿಯರ್ ಗ್ರ್ಯಾಬ್ ರೈಲ್ಸ್, ಫ್ರಂಟ್ ಸ್ಟೋರೇಜ್ ಪ್ಯಾಕೇಟ್, ಲಗೇಜ್ ಹುಕ್ ಮತ್ತು ಹತ್ತು ವಿವಿಧ ಬಣ್ಣಗಳ ಆಯ್ಕೆ ಹೊಂದಿದೆ.

ಇವಿ ಸ್ಕೂಟರ್ ಮಾರಾಟ: ಮೊದಲ ತಿಂಗಳ ಮಾರಾಟ ವರದಿ ಪ್ರಕಟಿಸಿದ ಓಲಾ ಎಲೆಕ್ಟ್ರಿಕ್

ಹೊಸ ಸ್ಕೂಟರ್‌ಗಳು 1,859 ಎಂಎಂ ಉದ್ದ, 712 ಎಂಎಂ ಅಗಲ, 1,160 ಎಂಎಂ ಎತ್ತರ, 1,359 ಎಂಎಂ ವ್ಹೀಲ್ ಬೆಸ್, 792 ಎಂಎಂ ಸೀಟ್ ಹೈಟ್, 125 ಕೆ.ಜಿ ತೂಕ ಹೊಂದಿದ್ದು, ಮುಂಭಾಗದಲ್ಲಿ ಸಿಂಗಲ್ ಫೋರ್ಕ್ ಸಸ್ಫೆಷನ್ ಮತ್ತು ಹಿಂಬದಿಯಲ್ಲಿ ಮೊನೊ ಶಾಕ್ ಸಸ್ಷೆಷನ್‌ನೊಂದಿಗೆ ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಜೋಡಣೆ ಹೊಂದಿವೆ.

ಇವಿ ಸ್ಕೂಟರ್ ಮಾರಾಟ: ಮೊದಲ ತಿಂಗಳ ಮಾರಾಟ ವರದಿ ಪ್ರಕಟಿಸಿದ ಓಲಾ ಎಲೆಕ್ಟ್ರಿಕ್

ಜೊತೆಗೆ ಹೊಸ ಸ್ಕೂಟರ್‌ನಲ್ಲಿ 7-ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್ ಮತ್ತು ಶಟರ್‌ಪ್ರೂಫ್ ಸ್ಕ್ರೀನ್‌ನೊಂದಿಗೆ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆನ್ ಬೋರ್ಡ್ ನ್ಯಾನಿಗೇಷನ್‌ಗಾಗಿ ಇಸಿಮ್ ಇಂಟರ್‌ನೆಂಟ್ ಕನೆಕ್ಟಿವಿಟಿ, ಸ್ಮಾಟ್‌ಫೋರ್ಟ್ ಮೂಲಕ ವಿವಿಧ ತಾಂತ್ರಿಕ ಅಂಶಗಳನ್ನು ನಿಯಂತ್ರಿಸಲು ಕನೆಕ್ಟೆಡ್ ಫೀಚರ್ಸ್ ಸಹ ನೀಡಲಾಗಿದೆ.

Most Read Articles

Kannada
English summary
Ola electric delivers 111 units s1 and s1 pro in december details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X