Just In
- 4 hrs ago
ಎಲೆಕ್ಟ್ರಿಕ್, ಹೈಬ್ರಿಡ್ ಕಾರುಗಳಲ್ಲಿ ಮಾತ್ರ ರಿಜನರೇಟಿವ್ ಬ್ರೇಕಿಂಗ್ ಏಕೆ ಲಭ್ಯವಿದೆ: ಇದರ ಉಪಯೋಗವೇನು?
- 4 hrs ago
ಹೊಸ ನವೀಕರಣಗಳೊಂದಿಗೆ ಸಿಎಫ್ಮೋಟೋ 150ಎನ್ಕೆ ಬೈಕ್ ಬಿಡುಗಡೆ
- 6 hrs ago
ಏಪ್ರಿಲ್ ತಿಂಗಳ ಟಿವಿಎಸ್ ವಾಹನ ಮಾರಾಟ ವರದಿ: ರಫ್ತಿನಲ್ಲಿ ದಾಖಲೆ ನಿರ್ಮಾಣ
- 7 hrs ago
ಎಲೆಕ್ಟ್ರಿಕ್ ಕಾರ್ ಆಗಿ ಪರಿವರ್ತನೆಗೊಂಡು ಮಿಂಚುತ್ತಿದೆ 1954ರ ಫಿಯೆಟ್ ಕಾರು
Don't Miss!
- News
ಒಂದು ಲೀ ಪೆಟ್ರೋಲ್ ಇದ್ದಿದ್ದರೆ ಶಿಶು ಪ್ರಾಣ ಉಳಿಯುತ್ತಿತ್ತಾ? ಲಂಕಾದಲ್ಲೊಂದು ದುರಂತ
- Sports
GT vs RR: ಅಂತಿಮ ಓವರ್ನಲ್ಲಿ ಅತಿ ಹೆಚ್ಚು ಬಾರಿ ರನ್ ಚೇಸ್ ಮಾಡಿದ ಗುಜರಾತ್ ಟೈಟನ್ಸ್ ದಾಖಲೆ
- Lifestyle
ಮೇ. 30ಕ್ಕೆ ಶನಿ ಜಯಂತಿ: ಶನಿ ಧೈಯ್ಯಾ, ಶನಿ ದೋಷವಿದ್ದರೆ ಈ ಪರಿಹಾರಗಳನ್ನು ಮಾಡಿ
- Finance
ಮೇ 24ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
'ಯುಗಾಂತರ' ಧಾರಾವಾಹಿಗೆ ಪ್ರಾಮಾಣಿಕ ಐಎಎಸ್ ಅಧಿಕಾರಿ ಪ್ರೇರಣೆ: ವಾಹಿನಿ ಮುಖ್ಯಸ್ಥರ ಸ್ಪಷ್ಟನೆಯೇನು?
- Technology
ಭಾರತದಲ್ಲಿ ಎಲ್ಜಿ OLED 2022 ಸ್ಮಾರ್ಟ್ ಟಿವಿ ಸರಣಿ ಅನಾವರಣ!
- Education
BSF Recruitment 2022 : 281 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
5 ನಿಮಿಷಗಳಲ್ಲಿ ಪೂರ್ಣ ಚಾರ್ಜ್ ತಂತ್ರಜ್ಞಾನ:ಸ್ಟೋರ್‌ಡಾಟ್‌ನೊಂದಿಗೆ ಓಲಾ ಒಪ್ಪಂದ
ಓಲಾ ಎಲೆಕ್ಟ್ರಿಕ್ ಪ್ರಸ್ತುತ ದೇಶದ ಅತಿದೊಡ್ಡ ಎಲೆಕ್ಟ್ರಿಕ್ ಸ್ಕೂಟರ್ ತಯಾರಕಾ ಕಂಪನಿಯಾಗುವ ಹಾದಿಯಲ್ಲಿದೆ. ಈ ನಡುವೆ ಕಂಪನಿಯು ತನ್ನ ಚಾರ್ಜಿಂಗ್ ತಂತ್ರಜ್ಞಾನವನ್ನು ಸಹ ಸುಧಾರಿಸುವ ನಿಟ್ಟಿನಲ್ಲಿ ಓಲಾ ಎಲೆಕ್ಟ್ರಿಕ್ ಸ್ಟೋರ್‌ಡಾಟ್ ಎಂಬ ಕಂಪನಿಯೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ.

ಇದು ಫಾಸ್ಟ್ ಚಾರ್ಜಿಂಗ್ ಸೆಲ್ ತಂತ್ರಜ್ಞಾನದ ಮೇಲೆ ಕಾರ್ಯನಿರ್ವಹಿಸುತ್ತದೆ. ಈ ತಂತ್ರಜ್ಞಾನದ ಮೂಲಕ ಕೇವಲ 5 ನಿಮಿಷಗಳಲ್ಲಿ ಪೂರ್ಣ-ಚಾರ್ಜ್ ಆಗುವ ಚಾರ್ಜರ್ ಅನ್ನು ತಯಾರಿಸಲಿದ್ದಾರೆ. ಇತ್ತೀಚೆಗೆ, ಕಂಪನಿಯ ಸಿಇಒ ಭವಿಶ್ ಅಗರ್ವಾಲ್ ಈ ಮಾಹಿತಿಯನ್ನು ಟ್ವಿಟ್ಟರ್ ಹಂಚಿಕೊಂಡಿದ್ದಾರೆ. ಭವಿಷ್ಯದ ಸೆಲ್ ತಂತ್ರಜ್ಞಾನದ ಮೇಲೆ ಬೃಹತ್ ಹೂಡಿಕೆಗಳನ್ನು ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ಈ ಮೂಲಕ ಅವರು ಭಾರತದಲ್ಲಿ ಸಂಪೂರ್ಣ ಇವಿ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಿಲು ಯೋಜಿಸುತ್ತಿರುವುದಾಗಿ ತಿಳಿದುಬಂದಿದೆ. ಇದರಲ್ಲಿ ದ್ವಿಚಕ್ರ ವಾಹನಗಳು, ನಾಲ್ಕು ಚಕ್ರಗಳು, ಹಡಗುಗಳನ್ನು ಜಾಗತಿಕವಾಗಿ ಉತ್ಪಾದಿಸಬೇಕಾಗಿದೆ ಎಂದು ಅವರು ಹೇಳಿದರು. ಓಲಾ ಎಲೆಕ್ಟ್ರಿಕ್‌ನ ಈ ಹೂಡಿಕೆಯು ಜಾಗತಿಕ ಮಟ್ಟದಲ್ಲಿ ಮೊದಲ ಪ್ರಮುಖ ಹೂಡಿಕೆಯಾಗಿದೆ.

ಕಂಪನಿಯು ತನ್ನ ಆಧುನಿಕ ಕೋಶ (ಸೆಲ್) ರಸಾಯನಶಾಸ್ತ್ರ ಮತ್ತು ಉತ್ಪಾದನೆಯೊಂದಿಗೆ ಬ್ಯಾಟರಿಗಳು ಮತ್ತು ಇತರ ಪವರ್ ಜೆನರೇಟ್ ವ್ಯವಸ್ಥೆಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಸುಧಾರಿಸಲು ಬಯಸುತ್ತದೆ. ಈ ಹೂಡಿಕೆಯ ಅಡಿಯಲ್ಲಿ, ಓಲಾ ಎಲೆಕ್ಟ್ರಿಕ್ ಈಗ ಎಕ್ಸ್ಎಫ್‌ಸಿ ಬ್ಯಾಟರಿ ತಂತ್ರಜ್ಞಾನವನ್ನು ಬಳಸಬಹುದು ಎನ್ನಲಾಗಿದೆ.

ಇದರೊಂದಿಗೆ, ಸ್ಟೋರ್ಡಾಟ್ ಫಾಸ್ಟ್ ಚಾರ್ಜ್ ತಂತ್ರಜ್ಞಾನಕ್ಕೆ ಸಂಪರ್ಕಿಸುವ ಬ್ಯಾಟರಿಯನ್ನು ಉತ್ಪಾದಿಸುವ ಹಕ್ಕನ್ನು ಸಹ ಓಲಾ ಹೊಂದಿದೆ. ಓಲಾ ಫ್ಯೂಚರ್ ಫ್ಯಾಕ್ಟರಿಯಿಂದ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಎಸ್ಎಐಎಲ್ ಅನ್ನು ಉತ್ಪಾದಿಸಲು ಕಂಪನಿಯು ಗಿಗಾಫ್ಯಾಕ್ಟರಿಯನ್ನು ಸ್ಥಾಪಿಸಲು ಯೋಜಿಸಿದೆ.

ಕಂಪನಿಯು ಈಗಾಗಲೇ ಆಧುನಿಕ ರಸಾಯನಶಾಸ್ತ್ರ ಸೆಲ್ ಬ್ಯಾಟರಿ ಸಂಗ್ರಹಣೆಗಾಗಿ ಸರ್ಕಾರದ ಪಿಎಲ್ಐ ಯೋಜನೆಗೆ ತನ್ನ ಹರಾಜನ್ನು ಸಲ್ಲಿಸಿದೆ. ಇದು ಓಲಾಗೆ ದೊಡ್ಡ ವ್ಯವಹಾರವಾಗಲಿದೆ, ಹಾಗೆಯೇ ಸ್ಟೋರ್ ಡಾಟ್ ಸಹ 2 ನಿಮಿಷಗಳ ಚಾರ್ಜಿಂಗ್ ತಂತ್ರಜ್ಞಾನದಲ್ಲಿ ಕೆಲಸ ಮಾಡುತ್ತಿದೆ.

ಓಲಾ ಕಂಪನಿಯು ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಪ್ರಾರಂಭಿಸಿದ್ದು, ಓಲಾ ಎಲೆಕ್ಟ್ರಿಕ್ ವರ್ಷಾಂತ್ಯದ ವೇಳೆಗೆ ಭಾರತದಾದ್ಯಂತ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಾಗಿ ಇಂತಹ 4,000ಕ್ಕೂ ಹೆಚ್ಚು ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಬಿಪಿಸಿಎಲ್ ಪೆಟ್ರೋಲ್ ಪಂಪ್ ಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಪ್ರಸ್ತುತ ಹೈಪರ್ಚಾರ್ಜರ್ಗಳನ್ನು ಸ್ಥಾಪಿಸಲಾಗುತ್ತಿದೆ.

ಇದರೊಂದಿಗೆ ಕಂಪನಿಯು ವಸತಿ ಸಂಕೀರ್ಣಗಳಲ್ಲಿ ಗ್ರಾಹಕರಿಗಾಗಿ ಚಾರ್ಜಿಂಗ್ ಕೇಂದ್ರಗಳನ್ನು ಸಹ ಸ್ಥಾಪಿಸುತ್ತಿದೆ. ಓಲಾ ಎಲೆಕ್ಟ್ರಿಕ್‌ನ ಹೈಪರ್‌ಚಾರ್ಜ್ಡ್ ಚಾರ್ಜಿಂಗ್ ಕೇಂದ್ರಗಳು ಜೂನ್ 2022 ರವರೆಗೆ ಉಚಿತವಾಗಿರುತ್ತವೆ, ಅಂದರೆ ಈ ಚಾರ್ಜಿಂಗ್ ಕೇಂದ್ರಗಳಲ್ಲಿ ಗ್ರಾಹಕರು ಜೂಜ್‌ವರೆಗೆ ಸ್ಕೂಟರ್ ಅನ್ನು ಚಾರ್ಜ್ ಮಾಡಲು ಹಣವನ್ನು ಪಾವತಿಸಬೇಕಾಗಿಲ್ಲ.

ಅಕ್ಟೋಬರ್ 2021 ರಲ್ಲಿ ಓಲಾ ಎಲೆಕ್ಟ್ರಿಕ್ ತನ್ನ ಮೊದಲ ಹೈಪರ್‌ರ್ಚಾರ್ಜರ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಕಂಪನಿಯು ತನ್ನ 'ಹೈಪರ್‌ರ್ಚಾರ್ಜರ್' ಸೆಟಪ್ ಅಡಿಯಲ್ಲಿ ತನ್ನ ಗ್ರಾಹಕರಿಗೆ ಚಾರ್ಜಿಂಗ್ ಬೆಂಬಲವನ್ನು ಸ್ಥಾಪಿಸುವುದಾಗಿ ಹೇಳಿತ್ತು, ಈ ನಿಟ್ಟಿನಲ್ಲಿ ಭಾರತದ 400 ನಗರಗಳಲ್ಲಿ 1,00,000ಕ್ಕೂ ಹೆಚ್ಚು ಸ್ಥಳಗಳಲ್ಲಿ ಸೇವೆ ಒದಗಿಸುತ್ತದೆ.

ಓಲಾ ಎಲೆಕ್ಟ್ರಿಕ್‌ನ ಹೈಪರ್‌ರ್ಚಾರ್ಜರ್‌ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕೇವಲ 18 ನಿಮಿಷಗಳಲ್ಲಿ ಶೇ50 ರಷ್ಟು ಚಾರ್ಜ್ ಮಾಡಬಹುದು. ಇನ್ನು ಕಂಪನಿಯು ಪ್ರತಿ ಸ್ಕೂಟರ್‌ನೊಂದಿಗೆ ಹೋಮ್ ಚಾರ್ಜರ್ ಘಟಕವನ್ನು ಸ್ಟ್ಯಾಂಡರ್ಡ್‌ಗೆ ಅನುಗುಣವಾಗಿ ನೀಡುತ್ತಿದೆ. ಕಂಪನಿಯು ಭವಿಷ್ಯದಲ್ಲಿ ಎಲೆಕ್ಟ್ರಿಕ್ ಕಾರನ್ನು ಸಹ ತರಲಿರುವ ಕಾರಣ ಚಾರ್ಜಿಂಗ್ ತಂತ್ರಜ್ಞಾನದ ಮೇಲೆ ಹೆಚ್ಚು ಹೂಡಿಕೆ ಮಾಡುತ್ತಿದೆ.

ಕಂಪನಿಯು ಎಲೆಕ್ಟ್ರಿಕ್ ಕಾರನ್ನು ತರಲು ತಯಾರಿ ನಡೆಸುತ್ತಿದೆ, 2023 ರಲ್ಲಿ ಎಲೆಕ್ಟ್ರಿಕ್ ಕಾರನ್ನು ತರಬಹುದು ಎಂದು ಈ ಹಿಂದೆ ಭವಿಶ್ ಅಗರ್ವಾಲ್ ಹೇಳಿದ್ದರು. ಓಲಾ ತನ್ನ ದ್ವಿಚಕ್ರ ವಾಹನವನ್ನು ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಈಗಾಗಲೇ ಬಿಡುಗಡೆ ಮಾಡಿದೆ. ಇದೀಗ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡುವುದರೊಂದಿಗೆ ಕಂಪನಿಯು ನಾಲ್ಕು ಚಕ್ರಗಳ ಎಲೆಕ್ಟ್ರಿಕ್ ಮಾರುಕಟ್ಟೆಯಲ್ಲೂ ಲಗ್ಗೆಯಿಡಲಿದೆ.

ಭಾರತದಾದ್ಯಂತ ಹೈಪರ್‌ಚಾರ್ಜ್ ನೆಟ್‌ವರ್ಕ್ ಅನ್ನು ಹೊರತರುವುದಾಗಿ Ola ಕೆಲವು ತಿಂಗಳ ಹಿಂದೆ ಬಹಿರಂಗಪಡಿಸಿತ್ತು. ಈ ಯೋಜನೆಯಲ್ಲಿ ಕಂಪನಿಯು ಭಾರತದ 400 ನಗರಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಚಾರ್ಜಿಂಗ್ ಪಾಯಿಂಟ್‌ಗಳನ್ನು ತೆರೆಯಲು ಯೋಜಿಸಿದೆ, ಇದಕ್ಕಾಗಿ $ 2 ಬಿಲಿಯನ್‌ಗಿಂತಲೂ ಹೆಚ್ಚು ವೆಚ್ಚವಾಗಲಿದೆ.

ಈ ತಂತ್ರಜ್ಞಾನ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಾದರೆ ದೊಡ್ಡ ಕ್ರಾಂತಿಯನ್ನೇ ತರಬಹುದು. ಗ್ರಾಹಕರು 5 ನಿಮಿಷಗಳಲ್ಲಿ ಚಾರ್ಜ್ ಮಾಡುವ ಸೌಲಭ್ಯವನ್ನು ಪಡೆದರೆ, ಅದು ಓಲಾ ಎಲೆಕ್ಟ್ರಿಕ್‌ಗೆ ಮಾತ್ರವಲ್ಲದೆ ಇಡೀ ಎಲೆಕ್ಟ್ರಿಕ್ ವಾಹನ ವಿಭಾಗಕ್ಕೆ ಪ್ರಯೋಜನಕಾರಿಯಾಗಲಿದೆ.