Just In
Don't Miss!
- Sports
ವಿಂಡೀಸ್ ಪ್ರವಾಸದಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ, ಸಂಜು ಸ್ಯಾಮ್ಸನ್ಗೆ ಸಿಗಲಿದೆ ಮತ್ತೊಂದು ಅವಕಾಶ?
- News
ಅಮೃತ್ ನಗರೋತ್ಥಾನ ಯೋಜನೆಯಡಿ ಬೆಂಗಳೂರು ಪೂರ್ವ ವಲಯಕ್ಕೆ 450 ಕೋಟಿ ಮಂಜೂರು
- Movies
ಹಿಂದಿಗೆ ಹೋಗುತ್ತಿದೆ ಏಳು ವರ್ಷ ಹಳೆಯ ಕನ್ನಡ ಸಿನಿಮಾ: ಅಕ್ಷಯ್-ಶಾಹಿದ್ ನಡುವೆ ಪೈಪೋಟಿ!
- Finance
ಸರ್ವೀಸ್ ಚಾರ್ಜ್ ಬಗ್ಗೆ ಗ್ರಾಹಕರು ದೂರು ನೀಡುವುದು ಹೇಗೆ?
- Lifestyle
ಯಾರೂ ಇಲ್ಲದಿದ್ದಾಗ ಪುರುಷ ಈ ರೀತಿ ವಿಲಕ್ಷಣವಾಗಿ ವರ್ತಿಸುತ್ತಾನೆ, ಗೊತ್ತಾ? ಇದನ್ನು ಓದಿದ್ರೆ ನೀವು ಶಾಕ್ ಆಗೋದು ಪಕ್ಕಾ!
- Technology
ಜಬ್ರೋನಿಕ್ಸ್ ಡ್ರಿಪ್ ಸ್ಮಾರ್ಟ್ವಾಚ್ ಬಿಡುಗಡೆ! ಲಾಂಗ್ ಬ್ಯಾಟರಿ ಬ್ಯಾಕ್ಅಪ್ ವಿಶೇಷ!
- Education
Karnataka Second PUC Results 2022 : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರತಿಗಳು ಜು.6ರಿಂದ ಲಭ್ಯ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ಪ್ರತಿ ಚಾರ್ಜ್‌ಗೆ 300ಕಿ.ಮೀ ಗಿಂತಲೂ ಅಧಿಕ ಮೈಲೇಜ್ ನೀಡಲಿದೆ ಉನ್ನತೀಕರಿಸಿದ ಸಿಂಪಲ್ ಒನ್ ಇವಿ ಸ್ಕೂಟರ್
ಸಿಂಪಲ್ ಎನರ್ಜಿ(Simple Energy) ಕಂಪನಿಯು ತನ್ನ ಹೊಸ ಸಿಂಪಲ್ ಒನ್ ಇವಿ ಸ್ಕೂಟರ್ ಮಾದರಿಯನ್ನುಬಿಡುಗಡೆಗೊಳಿಸಿ ವಿತರಣೆಗೆ ಸಿದ್ದವಾಗುತ್ತಿದ್ದು, ಕಂಪನಿಯು ಹೊಸ ಸ್ಕೂಟರ್ ವಿತರಣೆಗೂ ಮುನ್ನ ಹೊಸ ಸ್ಕೂಟರ್‌ನಲ್ಲಿ ಮತ್ತಷ್ಟು ಬದಲಾವಣೆಗಳನ್ನು ಪರಿಚಯಿಸುತ್ತಿದೆ.

ಹೊಸ ಸಿಂಪಲ್ ಒನ್ ಇವಿ ಸ್ಕೂಟರ್ ಮಾದರಿಯು ಈಗಾಗಲೇ ತಾಂತ್ರಿಕ ಅಂಶಗಳಲ್ಲಿ, ಬ್ಯಾಟರಿ ರೇಂಜ್ ಮತ್ತು ಬೆಲೆ ವಿಚಾರವಾಗಿ ಗ್ರಾಹಕರನ್ನು ಸೆಳೆಯುತ್ತಿದ್ದು, ಹೊಸ ಸ್ಕೂಟರ್ ವಿತರಣೆಗೂ ಮುನ್ನ ಮತ್ತಷ್ಟು ಸುಧಾರಿತ ತಾಂತ್ರಿಕ ಅಂಶಗಳೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸುವುದು ಖಚಿತವಾಗಿದೆ.

ಸಿಂಪಲ್ ಒನ್ ಇವಿ ಸ್ಕೂಟರ್ ಮಾದರಿಯನ್ನು ಬಿಡುಗಡೆಗೊಳಿಸಿ ಬುಕ್ಕಿಂಗ್ ಆರಂಭಿಸಿರುವ ಸಿಂಪಲ್ ಎನರ್ಜಿ ಕಂಪನಿಯು ಮುಂಬರುವ ಜೂನ್‌ನಿಂದ ವಿತರಣೆ ಆರಂಭಿಸುವುದಾಗಿ ಹೇಳಿಕೊಂಡಿದ್ದು, ವಿತರಣೆ ಆರಂಭಕ್ಕೂ ಮುನ್ನ ಹೊಸ ಸ್ಕೂಟರ್‌ನಲ್ಲಿ ಕಂಪನಿಯು ಬ್ಯಾಟರಿ ರೇಂಜ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಕಾರ್ಯಕ್ಷಮತೆಯಲ್ಲಿ ಮಹತ್ವದ ಬದಲಾವಣೆಯನ್ನು ಪರಿಚಯಿಸಿದೆ.

ಉನ್ನತೀಕರಿಸಿದ ಎಲೆಕ್ಟ್ರಿಕ್ ಸ್ಕೂಟರಿನ ಮೋಟಾರ್‌ನಲ್ಲಿ ಉತ್ತಮ ದಕ್ಷತೆಗಾಗಿ ಥರ್ಮಲ್ ಮ್ಯಾನೇಜ್‌ಮೆಂಟ್‌ನೊಂದಿಗೆ ಅಭಿವೃದ್ದಿಪಡಿಸಿರುವ ಸಿಂಪಲ್ ಎನರ್ಜಿ ಕಂಪನಿಯು ಒಂದೇ ಚಾರ್ಜ್‌ನಲ್ಲಿ ಹೆಚ್ಚು ರೇಂಜ್ ಬಯಸುವ ಗ್ರಾಹಕರಿಗೆ ಹೆಚ್ಚುವರಿ ಬ್ಯಾಟರಿ ಪ್ಯಾಕ್ ಅಳವಡಿಸಿಕೊಳ್ಳುವ ಅವಕಾಶ ನೀಡುತ್ತಿದೆ.

ಸಿಂಪಲ್ ಎನರ್ಜಿ ಕಂಪನಿಯು ಹೊಸ ಇವಿ ಸ್ಕೂಟರ್‌ನಲ್ಲಿ ಈಗಾಗಲೇ 4.5KW ಎಲೆಕ್ಟ್ರಿಕ್ ಮೋಟಾರ್ ಜೊತೆಗೆ 4.8kWh ಲೀಥಿಯಂ ಅಯಾನ್ ಬ್ಯಾಟರಿ(ಡ್ಯುಯಲ್ ಬ್ಯಾಟರಿ) ಜೋಡಣೆ ಮಾಡಿದ್ದು, ಪ್ರತಿ ಚಾರ್ಚ್‌ಗೆ ವಿವಿಧ ರೈಡ್ ಮೋಡ್‌ಗಳ ಚಾಲನಾ ಶೈಲಿ ಆಧಾರದ ಮೇಲೆ ಕನಿಷ್ಠ 203 ಕಿ.ಮೀ ನಿಂದ ಗರಿಷ್ಠ 236 ಕಿ.ಮೀ ಮೈಲೇಜ್ ಹಿಂದಿರುಗಿಸುವುದಾಗಿ ಖಾತ್ರಿಪಡಿಸಿದೆ.

ಇದರ ಜೊತೆಗೆ ಇನ್ನು ಹೆಚ್ಚಿನ ಮೈಲೇಜ್ ಬಯಸುವ ಗ್ರಾಹಕರಿಗೆ ಕಂಪನಿಯು ಹೆಚ್ಚುವರಿಯಾಗಿ 1.6 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅನ್ನು ಆಯ್ಕೆ ರೂಪದಲ್ಲಿ ಜೋಡಣೆ ಮಾಡಲಾಗುವುದು ಎಂಬ ಮಾಹಿತಿ ಹಂಚಿಕೊಂಡಿದ್ದು, ಹೆಚ್ಚುವರಿ ಬ್ಯಾಟರಿ ಪ್ಯಾಕ್ ಮೂಲಕ ಸಿಂಪಲ್ ಒನ್ ಸ್ಕೂಟರ್ ಮಾಲೀಕರು 300 ಕಿ.ಮೀ ಗಿಂತಲೂ ಹೆಚ್ಚು ದೂರ ಪ್ರಯಾಣಿಸಬಹುದಾಗಿದೆ.

1.6 kWh ಸಾಮರ್ಥ್ಯದ ಹೆಚ್ಚುವರಿ ಬ್ಯಾಟರಿ ಪ್ಯಾಕ್ ಅನ್ನು ಕಂಪನಿಯು ಹೊಸ ಸ್ಕೂಟರಿನ ಬೂಟ್ ಸ್ಪೆಸ್‌ನಲ್ಲಿ ಸುಲಭವಾಗಿ ಇರಿಸುವಂತೆ ವಿನ್ಯಾಸಗೊಳಿಸಿದ್ದು, ಇದು ದೂರದ ಪ್ರಯಾಣಕ್ಕೆ ಹೆಚ್ಚು ಸಹಕಾರಿಯಾಗಲಿದೆ.

ಈಗಾಗಲೇ ಹೊಸ ಸ್ಕೂಟರ್ ಮಾದರಿಗಾಗಿ ಬುಕ್ಕಿಂಗ್ ಸಲ್ಲಿಸಿರುವ ಗ್ರಾಹಕರು ಕೂಡಾ ಹೊಸ ಬ್ಯಾಟರಿ ಆಯ್ಕೆಗೆ ಅವಕಾಶ ನೀಡಿದ್ದು, ಅಂತಿಮ ಹಂತದ ಪಾವತಿ ಸಮಯದಲ್ಲಿ ಗ್ರಾಹಕರು ಹೆಚ್ಚುವರಿ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಆರಿಸಿಕೊಳ್ಳಲು ಅವಕಾಶ ನೀಡಿದೆ.

ಸಿಂಪಲ್ ಎನರ್ಜಿ ಕಂಪನಿಯು ಸದ್ಯ ಸ್ಟ್ಯಾಂಡರ್ಡ್ ಸಿಂಪಲ್ ಒನ್ ಇವಿ ಸ್ಕೂಟರ್ ಬೆಲೆಯನ್ನು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 1.10 ಲಕ್ಷಕ್ಕೆ ನಿಗದಿಪಡಿಸಿದ್ದು, ಹೆಚ್ಚುವರಿ ಬ್ಯಾಟರಿ ಪ್ಯಾಕ್ ಆಯ್ಕೆ ಮಾಡುವ ಗ್ರಾಹಕರು ರೂ. 1.44 ಲಕ್ಷ ದರ ಪಾವತಿ ಮಾಡಬೇಕಾಗುತ್ತದೆ.

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ವಿಶ್ವದಲ್ಲೇ ಅತಿ ಹೆಚ್ಚು ಮೈಲೇಜ್ ಹೊಂದಿರುವ ಇವಿ ಸ್ಕೂಟರ್ ಎಂಬ ಹೆಗ್ಗೆಳಿಕೆಗೆ ಪಾತ್ರವಾಗಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಸ್ಪೋರ್ಟಿ ವಿನ್ಯಾಸದೊಂದಿಗೆ ಅತ್ಯುತ್ತಮ ತಂತ್ರಜ್ಞಾನ ಸೌಲಭ್ಯಗಳನ್ನು ಹೊಂದಿದೆ.

ಹೊಸ ಸ್ಕೂಟರ್‌ನಲ್ಲಿ ತ್ರಿಕೊನಾಕಾರದ ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಹೆಡ್‌ಲ್ಯಾಂಪ್, ಸೈಡ್ ಬೈ ಟರ್ನ್ ಸಿಗ್ನಲ್ ಇಂಡಿಕೇಟರ್, ಫ್ಲ್ಯಾಟ್ ಫುಟ್‌ಬೋರ್ಡ್, ಅಯಾಲ್ ವ್ಹೀಲ್, ಸ್ಪೋರ್ಟಿ ರಿಯರ್ ವ್ಯೂ ಮಿರರ್, 30-ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಹೊಂದಿದೆ.

ಸಿಂಪಲ್ ಒನ್ ಸ್ಕೂಟರ್ ಮಾದರಿಯಲ್ಲಿ 1024x600 ಫಿಕ್ಸೆಲ್ ಹೊಂದಿರುವ 7 ಇಂಚಿನ ಟಚ್‌ಸ್ಕ್ರೀನ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂಥ್ ಮತ್ತು 4ಜಿ ಇಂಟರ್‌ನೆಟ್ ಸಂಪರ್ಕಕ್ಕಾಗಿ ಕನೆಕ್ಟೆಡ್ ಟೆಕ್ನಾಲಜಿ ನೀಡಲಾಗಿದೆ. ಕನೆಕ್ಟೆಡ್ ಫೀಚರ್ಸ್‌ನಲ್ಲಿ ಜಿಯೋ ಫೆನ್ಸಿಂಗ್, ಮ್ಯೂಜಿಕ್ ಕಂಟ್ರೋಲ್, ಎಸ್ಒಎಸ್ ಮೆಸೇಜ್, ವೆಹಿಕಲ್ ಟ್ರ್ಯಾಕಿಂಗ್, ಡ್ಯಾಕುಮೆಂಟ್ ಸ್ಟೋರೇಜ್, ಫೈಂಡ್ ಮೈ ಬೈಕ್ ಸೌಲಭ್ಯಗಳಿವೆ.

ಈ ಮೂಲಕ ಪ್ರತಿ ಗಂಟೆಗೆ 105 ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ ಹೊಸ ಸಿಂಪಲ್ ಒನ್ ಸ್ಕೂಟರ್ 72 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಕೇವಲ 2.95 ಸೆಕೆಂಡುಗಳಲ್ಲಿ ಸೊನ್ನೆಯಿಂದ 40 ಕಿ.ಮೀ ಕ್ವಿಕ್ ಸ್ಪೀಡ್ ಪಡೆದುಕೊಳ್ಳಲಿದ್ದು, ಹೊಸ ಸ್ಕೂಟರ್ ಅನ್ನು ಸಿಂಪಲ್ ಕಂಪನಿಯು ಟ್ಯೂಬಲರ್ ಫ್ರೆಮ್ ಬಳಕೆ ಮಾಡಿದೆ.

ಇನ್ನು ಸಿಂಪಲ್ ಎನರ್ಜಿ ಕಂಪನಿಯು ದೇಶದ 13 ರಾಜ್ಯಗಳ ಪ್ರಮುಖ ನಗರಗಳಲ್ಲಿ ಸದ್ಯ ಮಾರಾಟ ಸೌಲಭ್ಯವನ್ನು ಆರಂಭಿಸುತ್ತಿದ್ದು, ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ಹೆಚ್ಚಿದಂತೆ ಇವಿ ಸ್ಕೂಟರ್ ಮಾರಾಟ ಸೌಲಭ್ಯವು ಹಂತ-ಹಂತವಾಗಿ ದೇಶದ ಪ್ರಮುಖ ದೇಶಗಳಲ್ಲಿ ವಿಸ್ತರಣೆಯಾಗಲಿದೆ.

ಸದ್ಯ ನಮ್ಮ ಬೆಂಗಳೂರಿನಲ್ಲಿಯೇ ಹೊಸ ಇವಿ ಸ್ಕೂಟರ್ ಮಾದರಿಯ ಉತ್ಪಾದನಾ ಪ್ರಕ್ರಿಯೆಯನ್ನು ನಡೆಸುತ್ತಿರುವ ಸಿಂಪಲ್ ಎನರ್ಜಿ ಕಂಪನಿಯು ಶೀಘ್ರದಲ್ಲಿಯೇ ಎರಡನೇ ಘಟಕವನ್ನು ತಮಿಳುನಾಡಿನ ಧರ್ಮಪುರಿಯಲ್ಲಿ ಆರಂಭಿಸುವ ಯೋಜನೆಯಲ್ಲಿದೆ.

ಎರಡನೇ ಉತ್ಪಾದನಾ ಘಟಕವು ಸುಮಾರು 600 ಎಕರೆ ವಿಸ್ತಾರವಾಗಿದ್ದು, ಹೊಸ ಘಟಕ ನಿರ್ಮಾಣ ಮತ್ತು ಹೊಸ ಇವಿ ವಾಹನಗಳ ಅಭಿವೃದ್ದಿಗಾಗಿ ಕಂಪನಿಯು ಸುಮಾರು ರೂ. 2,500 ಕೋಟಿ ಬಂಡವಾಳವನ್ನು ಹಂತ-ಹಂತವಾಗಿ ಹೂಡಿಕೆ ಮಾಡುತ್ತಿದೆ.

ಸಿಂಪಲ್ ಎನರ್ಜಿ ಕಂಪನಿಯು ರೂ.2,500 ಕೋಟಿ ಬಂಡವಾಳದಲ್ಲಿ ರೂ. 1 ಸಾವಿರ ಕೋಟಿಯನ್ನು ಎರಡನೇ ಉತ್ಪಾದನಾ ಘಟಕದ ನಿರ್ಮಾಣಕ್ಕಾಗಿ ಮತ್ತು ಇನ್ನುಳಿದ ರೂ. 1,500 ಕೋಟಿ ಬಂಡವಾಳವನ್ನು ಮುಂದಿನ ಐದು ವರ್ಷಗಳಿಗೆ ಹಂತ-ಹಂತವಾಗಿ ಆರ್ ಅಂಡ್ ಡಿ, ಟೆಸ್ಟಿಂಗ್ ಟ್ರ್ಯಾಕ್ ಸೇರಿದಂತೆ ಮಾರುಕಟ್ಟೆ ವಿಸ್ತರಣೆಯ ಮೇಲೆ ಹೂಡಿಕೆ ಮಾಡಲಿದೆ.