ಬಹುನಿರೀಕ್ಷಿತ ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ ಇಎಕ್ಸ್ ಸ್ಕೂಟರ್‌ ಭಾರತದಲ್ಲಿ ಬಿಡುಗಡೆ

ದೇಶೀಯ ದ್ವಿಚಕ್ರ ವಾಹನ ತಯಾರಿಕಾ ಕಂಪನಿಗಳಿಗೆ ತೀವ್ರ ತೀವ್ರ ಪೈಪೋಟಿ ನೀಡಲು ಜಪಾನ್ ಮೂಲದ 'ಸುಜುಕಿ' ಭಾರತದ ಮಾರುಕಟ್ಟೆಯಲ್ಲಿ ಹೊಸ ಬರ್ಗ್‌ಮ್ಯಾನ್ ಸ್ಟ್ರೀಟ್ ಇಎಕ್ಸ್ ಮ್ಯಾಕ್ಸಿ-ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಸದ್ಯ ಈ ಸ್ಕೂಟರ್‌ ಲುಕ್ ಯುವ ಜನರಿಗೆ ಇಷ್ಟವಾಗುತ್ತಿದೆ. ಆದರೆ, ಬೆಲೆ ವಿಚಾರಕ್ಕೆ ಬಂದರೆ ಕೊಂಚ ದುಬಾರಿಯಾಗಿದೆ.

ಬರ್ಗ್‌ಮ್ಯಾನ್ ಸ್ಟ್ರೀಟ್ ಇಎಕ್ಸ್ ಭಾರತದಲ್ಲಿ ಜಪಾನ್ ದ್ವಿಚಕ್ರ ವಾಹನ ತಯಾರಕ ಕಂಪನಿ ಸುಜುಕಿ ಮಾರಾಟ ಮಾಡುವ ಮ್ಯಾಕ್ಸಿ-ಸ್ಕೂಟರ್‌ನ ಹೊಸ ಟಾಪ್-ಸ್ಪೆಕ್ ರೂಪಾಂತರವಾಗಿದೆ ಎಂದು ಹೇಳಬಹುದು. ಇದು ಪ್ರಮುಖ ಮೆಕ್ಯಾನಿಕಲ್ ಅಪ್‌ಡೇಟ್ ಸೇರಿದಂತೆ ಹಲವು ಹೊಸ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಬಂದಿದೆ. ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ ಇಎಕ್ಸ್ ಬೆಲೆ ಬರೋಬ್ಬರಿ 1,12,300 ರೂ. (ಎಕ್ಸ್ ಶೋ ರೂಂ) ಇದೆ. ಆದರೆ, ಅದರ ಫೀಚರ್ ಖರೀದಿದಾರರನನ್ನು ತನ್ನತ್ತ ಆಕರ್ಷಿಸಲಿದೆ.

ನೂತನ ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ ಇಎಕ್ಸ್ ಎಂಜಿನ್ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ, ಬಲಿಷ್ಠ 124 ಸಿಸಿ ಸಿಂಗಲ್-ಸಿಲಿಂಡರ್ ಎಂಜಿನ್, ಸುಜುಕಿ ಇಕೋ ಪರ್ಫಾರ್ಮೆನ್ಸ್ ಆಲ್ಫಾ ಎಂಜಿನ್‌ನ ನವೀಕರಿಸಿದ ಆವೃತ್ತಿಯಿಂದ ಪವರ್ ಅನ್ನು ಪಡೆಯುತ್ತದೆ. ಅದು 7,000 rpm ನಲ್ಲಿ 8.5 bhp ಗರಿಷ್ಠ ಪವರ್ ಮತ್ತು 5,000 rpm ನಲ್ಲಿ 10.2Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಉತ್ತಮ ಮೈಲೇಜ್ ಅನ್ನು ನೀಡಲು ಸಹಕಾರಿಯಾಗಿದೆ.

ಬರ್ಗ್‌ಮ್ಯಾನ್ ಸ್ಟ್ರೀಟ್ ಇಎಕ್ಸ್‌ನ ಎಂಜಿನ್ ಆಟೋ ಸ್ಟಾರ್ಟ್/ಸ್ಟಾಪ್ ವ್ಯವಸ್ಥೆ ಹೊಂದಿದ್ದು, ಇದು ಇಂಧನ ಬಳಕೆ ಜೊತೆಗೆ ಎಮಿಷನ್ (ಹೊರಸೂಸುವಿಕೆ) ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೂತನ ಬರ್ಗ್‌ಮ್ಯಾನ್ ಸ್ಟ್ರೀಟ್ ಇಎಕ್ಸ್ ಹೊಸ ಸೈಲೆಂಟ್ ಸ್ಟಾರ್ಟರ್ ಸಿಸ್ಟಮ್ ಅನ್ನು ಸಹ ಹೊಂದಿದ್ದು, ಅದು ಟ್ರಾಫಿಕ್‌ನಲ್ಲಿ ನಿಲ್ಲಿಸಿದ ನಂತರ, ರೈಡರ್ ಥ್ರೊಟಲ್ಸ್ ಮಾಡಿದಾಗ ಅದರ ಸ್ವಿಚ್ ಆಫ್ ಸ್ಟೇಟ್‌ನಿಂದ (ಆಟೋ ಸ್ಟಾರ್ಟ್/ಸ್ಟಾಪ್) ಸೈಲೆಂಟ್ ಆಗಿ ಎಂಜಿನ್ ಅನ್ನು ಮರುಪ್ರಾರಂಭಿಸುತ್ತದೆ.

ಹೊಸ ಟಾಪ್-ಸ್ಪೆಕ್ ಇಎಕ್ಸ್ ರೂಪಾಂತರ ಮತ್ತು ಇತರೆ ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ ಮಾದರಿಗಳ ನಡುವಿನ ಇತರ ಪ್ರಮುಖ ಯಾಂತ್ರಿಕ ವ್ಯತ್ಯಾಸವೆಂದರೆ ಇದು ದೊಡ್ಡದಾದ 12-ಇಂಚಿನ ಮೀಲ್ ಗಳು, ಜೊತೆಗೆ ವಿಶಾಲವಾದ 100/80 ಸೆಕ್ಷನ್ ಟೈರ್‌ ಅನ್ನು ಹೊಂದಿದೆ. ಅಲ್ಲದೆ, ಬರ್ಗ್‌ಮ್ಯಾನ್ ಸ್ಟ್ರೀಟ್ ಇಎಕ್ಸ್, ಸುಜುಕಿ ಮ್ಯಾಕ್ಸಿ-ಸ್ಕೂಟರ್‌ನ ಏಕೈಕ ಆವೃತ್ತಿಯಾಗಿದೆ. ಇಷ್ಟೇ ಅಲ್ಲದೆ, ರೈಡ್ ಕನೆಕ್ಟ್ ಸಿಸ್ಟಮ್‌ನೊಂದಿಗೆ ಬ್ಲೂಟೂತ್-ಸಕ್ರಿಯಗೊಂಡಿರುವ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಅನ್ನು ಹೊಂದಿದೆ.

ನೂತನ ಬರ್ಗ್‌ಮ್ಯಾನ್ ಸ್ಟ್ರೀಟ್ ಇಎಕ್ಸ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಅನ್ನು ಹೊಂದಿದೆ. ಅಲ್ಲದೆ, ಇನ್ ಕಾಮಿಂಗ್ ಕಾಲ್, SMS ಮತ್ತು WhatsApp ಅಲರ್ಟ್, ಮಿಸ್ಡ್ ಕಾಲ್ ಮತ್ತು ಓದದಿರುವ SMS ಅಲರ್ಟ್, ಅತಿಯಾದ ವೇಗ, ಫೋನ್ ಬ್ಯಾಟರಿ ಮಟ್ಟದ ಪ್ರದರ್ಶನ ಹಾಗೂ ಅಂದಾಜು ಸಮಯದಂತಹ ವೈಶಿಷ್ಟ್ಯಗಳನ್ನು ಅನುಮತಿಸುವ ಸಾಧನ ಕ್ಲಸ್ಟರ್‌ನೊಂದಿಗೆ ಸವಾರರು ತಮ್ಮ ಫೋನ್‌ಗಳನ್ನು ಸಿಂಕ್ ಮಾಡಲು ಈ ವ್ಯವಸ್ಥೆಯಲ್ಲಿ ಅವಕಾಶ ಇದೆ ಎಂದು ಹೇಳಬಹುದು.

ಹೊಸ ಬರ್ಗ್‌ಮ್ಯಾನ್ ಸ್ಟ್ರೀಟ್ ಇಎಕ್ಸ್ ಬಿಡುಗಡೆ ಕುರಿತು ಮಾತನಾಡಿದ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಸತೋಶಿ ಉಚಿಡಾ, 'ನಮ್ಮ ಬರ್ಗ್‌ಮ್ಯಾನ್ ಸ್ಟ್ರೀಟ್ ಭಾರತೀಯ ಗ್ರಾಹಕರಿಂದ ಪಡೆದ ಉತ್ತಮ ಪ್ರತಿಕ್ರಿಯೆಯಿಂದಾಗಿ ನೂತನ ಬರ್ಗ್‌ಮ್ಯಾನ್ ಸ್ಟ್ರೀಟ್ ಇಎಕ್ಸ್ ಅನ್ನು ಬಿಡುಗಡೆ ಮಾಡಲು ನಮ್ಮನ್ನು ಪ್ರೇರೇಪಿಸಿತು. ಈ ಸ್ಕೂಟರ್, ಇತ್ತೀಚಿನ ತಂತ್ರಜ್ಞಾನವನ್ನು ಒಳಗೊಂಡಿದೆ. ಇದರ ಸವಾರರಿಗೆ ಸಾಟಿಯಿಲ್ಲದ ಅನುಭವವನ್ನು ನೀಡುತ್ತದೆ. ಜೊತೆಗೆ ಭಾರತದಲ್ಲಿ ಐಷಾರಾಮಿ ಸ್ಕೂಟರ್ ರೈಡಿಂಗ್‌ನ ಹೊಸ ಯುಗಕ್ಕೆ ನಾಂದಿ ಹಾಡಲಿದೆ' ಎಂದು ಹೇಳಿದ್ದಾರೆ.

ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ ಇಎಕ್ಸ್ ಕಂಪನಿಯ ಮ್ಯಾಕ್ಸಿ ಸ್ಕೂಟರ್‌ಗಳಲ್ಲಿ ಹೊಸ ಉನ್ನತ-ಸಾಲಿನ ರೂಪಾಂತರವಾಗಿದೆ. ಹೊಸ ಬರ್ಗ್‌ಮ್ಯಾನ್ ಸ್ಟ್ರೀಟ್ ಇಎಕ್ಸ್ ತನ್ನೊಂದಿಗೆ ಕೆಲವು ಬದಲಾವಣೆಗಳನ್ನು ತರುತ್ತದೆ. ಅದು ಸುಜುಕಿ ಮ್ಯಾಕ್ಸಿ-ಸ್ಕೂಟರ್‌ನ ಇತರೆ ರೂಪಾಂತರಗಳಿಂದ ಭಿನ್ನವಾಗಿರುವಂತೆ ಮಾಡಲು ಸಹಾಯ ಮಾಡುತ್ತದೆ. ಇದರಿಂದಾಗಿ ಈ ಸ್ಕೂಟರ್‌ ಬೆಲೆಯು 19 ಸಾವಿರ ರೂ. ಹೆಚ್ಚಳವಾಗಿದೆ. ಹೊಂಡಾ ಗ್ರಾಸಿಯಾ, ಹೀರೊ ಮಾಸ್‌ಟ್ರೋ 125, ಟಿವಿಎಸ್ ಎನ್‌ಟೊರ್ಕ್ 125, ಹೊಂಡಾ ಆಕ್ಟಿವಾ 125, ಯಮಹಾ ಫ್ಯಾಸಿನೊ 125ಗಳಿಗೆ ಬರ್ಗ್‌ಮಾನ್ ಸ್ಟ್ರೀಟ್ ಭಾರೀ ಪೈಪೋಟಿ ನೀಡಲಿದೆ.

Most Read Articles

Kannada
English summary
Suzuki bergman street ex scooter has been launched India
Story first published: Wednesday, December 7, 2022, 15:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X