Just In
- 7 hrs ago
ಕ್ರ್ಯಾಶ್ ಟೆಸ್ಟ್ನಲ್ಲಿ ಗರಿಷ್ಠ ರೇಟಿಂಗ್ ಪಡೆದುಕೊಂಡ ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು
- 8 hrs ago
ಕೇವಲ 40 ಸಾವಿರ ರೂ. ಬೆಲೆಗೆ ಬಿಡುಗಡೆಯಾಗಿದೆ 100 ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್
- 9 hrs ago
ಎರ್ಟಿಗಾದಲ್ಲಿ ಹೊಸ ಸಿಎನ್ಜಿ ರೂಪಾಂತರಗಳನ್ನು ಪರಿಚಯಿಸಲು ಸಜ್ಜಾದ ಮಾರುತಿ ಸುಜುಕಿ
- 9 hrs ago
ಏಪ್ರಿಲ್ ತಿಂಗಳ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಯಮಹಾ ಎಂಟಿ-15 ಬೈಕ್
Don't Miss!
- Sports
IPL 2022: ಕೆಎಲ್ ರಾಹುಲ್ ಹೋರಾಟ ವ್ಯರ್ಥ, ಲಕ್ನೋಗೆ ಮಣ್ಣು ಮುಕ್ಕಿಸಿದ ಆರ್ಸಿಬಿ ಟ್ರೋಫಿ ಕನಸು ಜೀವಂತ
- News
ವಿಮಾನ ಇಂಧನ ತೆರಿಗೆ ಕಡಿತ ಮಾಡುತ್ತಾ ಕೇಂದ್ರ ಸರ್ಕಾರ?
- Movies
ಹಿಜಾಬ್ ಧರಿಸಿ ಮುಸ್ಲಿಂ ಮಹಿಳೆಯರ ಪಾತ್ರ ಮಾಡುತ್ತಿರುವ ಸ್ಟಾರ್ ನಟಿಯರಿವರು
- Lifestyle
12 ಲಕ್ಷ ಖರ್ಚು ಮಾಡಿದ ನಾಯಿಯಾದ ಜಪಾನಿನ ವ್ಯಕ್ತಿ!
- Finance
ಮೇ 25ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Technology
ಅಪ್ಲಿಕೇಶನ್ ಡೆವಲಪರ್ಗಳಿಗೆ ಮತ್ತೊಮ್ಮೆ ಸಂದೇಶ ಕಳುಹಿಸಿದ ಆಪಲ್ ಕಂಪೆನಿ!
- Education
ESIC MTS 2022 : ಫೇಸ್ I ಫಲಿತಾಂಶ ಮತ್ತು ಫೇಸ್ II ಪ್ರವೇಶ ಪತ್ರ ಪ್ರಕಟ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಡುಗಡೆಗಾಗಿ ಸಿದ್ದವಾಗಿರುವ ಟಾಪ್ 5 ಹೈ ಸ್ಪೀಡ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಮಾದರಿಗಳಿವು!
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ಹೊಸ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿರುವುದು ಮಹತ್ವದ ಬದಲಾವಣೆಗೆ ಕಾರಣವಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿಗೊಳಿಸುವಲ್ಲಿ ಸ್ಟಾರ್ಟ್ಅಪ್ ಕಂಪನಿಗಳು ಯಶಸ್ವಿಯಾಗುತ್ತಿವೆ.

ದುಬಾರಿ ಇಂಧನ ದರ ಮತ್ತು ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ಪರಿಣಾಮಕಾರಿಯಾಗಿ ತಗ್ಗಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಹಲವಾರು ಪ್ರೋತ್ಸಾಹಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಹೊಸ ಯೋಜನೆಗಳಿಂದಾಗಿ ಕಳೆದ ಎರಡು ವರ್ಷದಿಂದ ಇವಿ ವಾಹನಗಳ ಮಾರಾಟದಲ್ಲಿ ಸಾಕಷ್ಟು ಏರಿಕೆಯಾಗಿದೆ.

ಹೀಗಾಗಿ ಮಾರುಕಟ್ಟೆಯಲ್ಲಿ ವಿವಿಧ ಇವಿ ಸ್ಕೂಟರ್ ಹಾಗೂ ಬೈಕ್ ಮಾದರಿಗಳು ಬಿಡುಗಡೆಯಾಗುತ್ತಿದ್ದು, ಹೊಸ ಇವಿ ಮೋಟಾರ್‌ಸೈಕಲ್‌ಗಳು ಗ್ರಾಹಕರ ಪ್ರಮುಖ ಆಕರ್ಷಣೆಯಾಗುತ್ತಿವೆ. ಅದರಲ್ಲೂ ಹೈ ಸ್ಪೀಡ್ ಇವಿ ಮೋಟಾರ್‌ಸೈಕಲ್‌ಗಳು ಭವಿಷ್ಯದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಹೊಸ ಇವಿ ಮೋಟಾರ್‌ಸೈಕಲ್‌ಗಳ ತಾಂತ್ರಿಕ ಮಾಹಿತಿಯು ಇಲ್ಲಿದೆ.

ಆಲ್ಟ್ರಾವಯೊಲೆಟ್ ಎಫ್77
ಹೊಸ ಆಲ್ಟ್ರಾವಯೊಲೆಟ್ ಹೊಸ ಎಫ್77 ಸ್ಪೋರ್ಟಿ ಸೂಪರ್ ಎಲೆಕ್ಟ್ರಿಕ್ ಬೈಕ್ ಮಾದರಿಯು ಈಗಾಗಲೇ ಭಾರತದಲ್ಲಿ ಬಿಡುಗಡೆಯಾಗಿದ್ದು, ಹೊಸ ಇವಿ ಬೈಕ್ 2022ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ವಿತರಣೆಗೊಳ್ಳುವ ಸಾಧ್ಯತೆಗಳಿವೆ. ಹೊಸ ಎಫ್77 ಹೈ ಪರ್ಫಾಮೆನ್ಸ್ ಬೈಕ್ ಬಿಡುಗಡೆಯ ನಂತರ ಆಲ್ಟ್ರಾವಯೊಲೆಟ್ ಕಂಪನಿಯು ಇದುವರೆಗೆ ಸುಮಾರು 40 ಸಾವಿರ ಯುನಿಟ್‌ಗಳಿಗೆ ಬುಕ್ಕಿಂಗ್ ಪಡೆದುಕೊಂಡಿದ್ದು, ಕಂಪನಿಯು ಶೇ.90ರಷ್ಟು ಸ್ವದೇಶಿ ಕಂಪನಿಗಳ ಬಿಡಿಭಾಗಗಳೊಂದಿಗೆ ಹೊಸ ಬೈಕ್ ಅಭಿವೃದ್ದಿಪಡಿಸುವ ಗುರಿ ತಲುಪಿದೆ.

ಆಲ್ಟ್ರಾವಯೊಲೆಟ್ ಕಂಪನಿಯ ಸದ್ಯ ಅನಾವರಣಗೊಳಿಸಿರುವ ಹೊಸ ಎಫ್77 ಸೂಪರ್ ಎಲೆಕ್ಟ್ರಿಕ್ ಬೈಕ್ ಬೆಲೆಯು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಆನ್ ರೋಡ್ ಪ್ರಕಾರ ಆರಂಭಿಕ ಆವೃತ್ತಿಗೆ ರೂ.3 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ.3.25 ಲಕ್ಷ ಬೆಲೆ ನಿಗದಿಪಡಿಸಲಾಗಿದ್ದು, ಎಫ್77 ಬೈಕ್ ಪ್ರತಿ ಚಾರ್ಜ್‌ಗೆ ರೈಡಿಂಗ್ ಮೋಡ್ ಆಧಾರದ ಮೇಲೆ ಕನಿಷ್ಠ 140ಕಿ.ಮಿನಿಂದ ಗರಿಷ್ಠ 150 ಕಿ.ಮೀ ಮೈಲೇಜ್ ಹಿಂದಿರುಗಿಸಬಲ್ಲದು.

ಎಂಫ್ಲಕ್ಸ್ ಎಲೆಕ್ಟ್ರಿಕ್ ಬೈಕ್
ದೇಶಿಯ ಮಾರುಕಟ್ಟೆಯಲ್ಲಿನ ಪ್ರಮುಖ ಇವಿ ಬೈಕ್ ಉತ್ಪಾದನಾ ಕಂಪನಿಗಳಲ್ಲಿ ಎಂಫ್ಲಕ್ಸ್ ಕೂಡಾ ಒಂದಾಗಿದ್ದು, ಕಂಪನಿಯು ಶೀಘ್ರದಲ್ಲೇ ವಿವಿಧ ಪ್ರೀಮಿಯಂ ಇವಿ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಎಂಫ್ಲಕ್ಸ್ ಕಂಪನಿಯು ತನ್ನ ಬಹುನೀರಿಕ್ಷಿತ ಟೂ ಹಾಗೂ ಟೂ ಪ್ಲಸ್ ಎಲೆಕ್ಟ್ರಿಕ್ ಬೈಕ್‌ಗಳ ಟೀಸರ್ ಅನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಪ್ರತಿ ಗಂಟೆಗೆ 180 ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ ಎಂಫ್ಲಕ್ಸ್ ಇವಿ ಬೈಕ್ ಮಾದರಿಗಳು ಪ್ರತಿ ಚಾರ್ಜ್‌ಗೆ 160 ರಿಂದ 200 ಕಿ.ಮೀ ತನಕ ಮೈಲೇಜ್ ಹಿಂದಿರುಗಿಸಲಿವೆ.

ಇವೊಲೆಟ್ ಹಾಕ್ ಎಲೆಕ್ಟ್ರಿಕ್ ಬೈಕ್
ಗುರುಗ್ರಾಮ ಮೂಲದ ಇವೊಲೆಟ್ ಕಂಪನಿಯು ಹಾಕ್ ಎಲೆಕ್ಟ್ರಿಕ್ ಬೈಕ್ ಅನ್ನು ಅನಾವರಣಗೊಳಿಸಿ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಈ ಬೈಕಿನಲ್ಲಿರುವ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 100 ಕಿ.ಮೀವರೆಗೂ ಚಲಿಸುತ್ತದೆ. ಈ ಬ್ಯಾಟರಿಯನ್ನು 3 - 4 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದು.

ಈ ಎಲೆಕ್ಟ್ರಿಕ್ ಬೈಕ್ ಆಕರ್ಷಕವಾದ ಸ್ಪೋರ್ಟಿ ಲುಕ್ ಹೊಂದಿರುವ ಕಾರಣಕ್ಕೆ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ತನ್ನತ್ತ ಸೆಳೆದಿದೆ. ಈ ಬೈಕಿನ ನೋಟ, ಮುಂಭಾಗದಲ್ಲಿರುವ ಹೆಡ್‍ಲೈಟ್ ಹಾಗೂ ಬೈಕಿನ ಸುತ್ತಲಿರುವ ಪ್ಯಾನೆಲ್‍ಗಳು ಜನರನ್ನು ಈ ಬೈಕಿನತ್ತ ಆಕರ್ಷಿಸುತ್ತವೆ. ಪ್ರತಿ ಗಂಟೆಗೆ 180 ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ ಈ ಬೈಕ್ ರೂ. 2 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದೆ.

ಜಿಟಿ 120 ಬೈಕ್
ಸೈಬೋರ್ಗ್ ಕಂಪನಿಯು ಈಗಾಗಲೇ ಯೋಧ ಎಲೆಕ್ಟ್ರಿಕ್ ಕ್ರೂಸರ್ ಬೈಕ್ ಮತ್ತು ಬಾಬ್-ಇ ಡರ್ಟ್ ಬೈಕ್‌ಗಳನ್ನು ಅನಾವರಣಗೊಳಿಸಿದ್ದು, ಇದೀಗ ಹೈ-ಸ್ಪೀಡ್ ವೈಶಿಷ್ಟ್ಯತೆಯ ಜಿಟಿ 120 ಎಲೆಕ್ಟ್ರಿಕ್ ಸ್ಪೋರ್ಟ್ ಬೈಕ್ ಮಾದರಿಯನ್ನು ಅನಾವರಣಗೊಳಿಸಿದೆ. ಹೊಸ ಜಿಟಿ 120 ಎಲೆಕ್ಟ್ರಿಕ್ ಸ್ಪೋರ್ಟ್ ಬೈಕ್ ಮಾದರಿಯು ಮೊದಲೆರಡು ಬೈಕ್ ಮಾದರಿಗಳಂತೆ ಪ್ರಮುಖ ತಾಂತ್ರಿಕ ವೈಶಿಷ್ಟ್ಯತೆಗಳನ್ನು ಹೊಂದಿದ್ದರೂ ಎಲೆಕ್ಟ್ರಿಕ್ ಮೋಟಾರ್ ಮತ್ತು ಗರಿಷ್ಠ ವೇಗದಲ್ಲಿ ಮಿಂಚಲಿದ್ದು, 6000 ವೊಲ್ಟ್ ಮೋಟಾರ್ ಪವರ್ ಮೂಲಕ ಇದು ಪ್ರತಿ ಗಂಟೆಗೆ 125 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ.

ಹೊಸ ಇವಿ ಸ್ಪೋರ್ಟ್ ಬೈಕ್ ಮಾದರಿಯಲ್ಲಿ ಕಂಪನಿಯು 4.68 kWH ಲೀಥಿಯಂ ಅಯಾನ್ ಬ್ಯಾಟರಿ ಬಳಕೆ ಮಾಡಿದ್ದು, 125 ಕಿ.ಮೀ ಟಾಪ್ ಸ್ಪೀಡ್‌ನೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 180 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಹೊಸ ಬೈಕಿನಲ್ಲಿ 260 ಎಂಎಂ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ ಎನ್ನುವ ಮೂರು ರೈಡಿಂಗ್ ಮೋಡ್ ನೀಡಲಾಗಿದ್ದು, ರಿವರ್ಸ್ ಮೋಡ್, ವಿವಿಧ ರೀತಿದ ಶಬ್ದಗಳನ್ನು ಒಳಗೊಂಡಿರುವ ಪಾರ್ಕಿಂಗ್ ಅಸಿಸ್ಟ್ ಸೌಲಭ್ಯಗಳನ್ನು ಬೈಕ್ ಚಾಲನೆಯನ್ನು ಸುಲಭವಾಗಿಸುತ್ತದೆ.

ಹಾಪ್ ಒಕ್ಸ್ ಎಲೆಕ್ಟ್ರಿಕ್ ಬೈಕ್
ಜೈಪುರ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಹಾಪ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯು ಸ್ಥಳೀಯವಾಗಿ ತಯಾರಿಸಿದ ಒಕ್ಸ್ ಹೈ-ಸ್ಪೀಡ್ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆ ಮಾಡಲು ಸಿದ್ಧವಾಗುತ್ತಿದೆ.

ಹಾಪ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯು ಹೊಸ ಹೈ-ಸ್ಪೀಡ್ ಎಲೆಕ್ಟ್ರಿಕ್ ಬೈಕ್ ಮಾದರಿಯಲ್ಲಿ ಪ್ರತಿ ಚಾರ್ಜ್‌ಗೆ 120 ಕಿ.ಮೀ ಗಿಂತ ಹೆಚ್ಚು ರೇಂಜ್ ಅನ್ನು ಹೊಂದಿರುವ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, ಪ್ರತಿ ಗಂಟೆಗೆ 150 ಕಿ.ಮೀ ಟಾಪ್ ಸ್ಪೀಡ್ ಹೊಂದಿರಲಿದೆ. ಹೊಸ ಬೈಕ್ ಮಾದರಿಯು ಮುಂಬರುವ ಮೇ ಅಥವಾ ಜೂನ್ ವೇಳೆಗೆ ಬಿಡುಗಡೆಯಾಗಲಿದ್ದು, ಇದು ರೂ. 1.80 ಲಕ್ಷದಿಂದ ರೂ.2 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಲಿದೆ.