ಉತ್ತಮ ಮೈಲೇಜ್, ಕೈಗೆಟುಕುವ ಬೆಲೆಯೊಂದಿಗೆ ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಬೈಕ್‌ಗಳಿವು

ವಿಶ್ವ ಮೋಟಾರ್‌ಸೈಕಲ್ ದಿನದ ವಿಶೇಷ ವರದಿಯ ಭಾಗವಾಗಿ ಭಾರತದಲ್ಲಿ ಮಾರಾಟಕ್ಕಿರುವ ಕೈಗೆಟುಕುವ ಬೆಲೆಯ ಟಾಪ್ ಬೈಕ್‌ಗಳನ್ನು ಪಟ್ಟಿ ಮಾಡಲಾಗಿದೆ. ಪ್ರೇಮಿಗಳ ದಿನದಂತೆಯೇ ನಿನ್ನೆ (ಜೂನ್ 21) ಮೋಟಾರ್ ಸೈಕಲ್ ಡೇ ಆಚರಿಸಲಾಯಿತು.

ಉತ್ತಮ ಮೈಲೇಜ್, ಕೈಗೆಟುಕುವ ಬೆಲೆಯೊಂದಿಗೆ ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಬೈಕ್‌ಗಳಿವು

ಈ ದಿನವನ್ನು ವಿಶೇಷವಾಗಿ ಗುರುತಿಸಲು ಪ್ರಸ್ತುತ ಭಾರತದಲ್ಲಿ ಮಾರಾಟವಾಗುತ್ತಿರುವ ಕೆಲವು ಕೈಗೆಟುಕುವ ದ್ವಿಚಕ್ರ ವಾಹನಗಳ ಕುರಿತು ಈ ಲೇಖನದಲ್ಲಿ ಆಸಕ್ತಿಕರ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಪಟ್ಟಿ ಮಾಡಿರುವ ಪ್ರತಿ ಬೈಕಿನ ವಿನ್ಯಾಸ, ವೈಶಿಷ್ಟ್ಯಗಳನ್ನು ವಿವರಿಸಲಾಗಿದೆ.

ಉತ್ತಮ ಮೈಲೇಜ್, ಕೈಗೆಟುಕುವ ಬೆಲೆಯೊಂದಿಗೆ ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಬೈಕ್‌ಗಳಿವು

ಹೀರೋ ಸ್ಪ್ಲೆಂಡರ್ ಪ್ಲಸ್

ಕಡಿಮೆ ವೆಚ್ಚ, ಅತಿ ಕಡಿಮೆ ನಿರ್ವಹಣಾ ವೆಚ್ಚ ಮತ್ತು ಉತ್ತಮ ಮೈಲೇಜ್ ಸಾಮರ್ಥ್ಯಕ್ಕೆ ಹೀರೋ ಸ್ಪ್ಲೆಂಡರ್ ಪ್ಲಸ್ ಹೆಸರುವಾಸಿಯಾಗಿದೆ. ಹಾಗಾಗಿಯೇ ಭಾರತದ ಬಹುತೇಕ ರಾಜ್ಯಗಳಲ್ಲಿ ಈ ಬೈಕ್‌ಗಳನ್ನು ಹೇರಳವಾಗಿ ಕಾಣಬಹುದು. ಈ ದ್ವಿಚಕ್ರ ವಾಹನವು ದಶಕಗಳಿಂದ ಅಸ್ತಿತ್ವದಲ್ಲಿದ್ದು, ಇನ್ನೂ ಕೂಡ ಉತ್ತಮ ಮಾರಾಟದ ಬೆಳವಣಿಗೆಯನ್ನು ಸಾಧಿಸುತ್ತಿದೆ.

ಉತ್ತಮ ಮೈಲೇಜ್, ಕೈಗೆಟುಕುವ ಬೆಲೆಯೊಂದಿಗೆ ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಬೈಕ್‌ಗಳಿವು

ಇದು ಅತ್ಯಂತ ಒರಟಾದ ನೋಟವನ್ನು ಹೊಂದಿರುವ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಅಗ್ಗದ ಮೋಟಾರ್‌ಸೈಕಲ್ ಆಗಿದೆ. ದಟ್ಟವಾದ ಕ್ರ್ಯಾಶ್ ಕ್ವಾರ್ಟ್ಜ್, ಮೋಲ್ಡ್ ಫೂಟಿಂಗ್, ಹಿಂಭಾಗದಲ್ಲಿ ಕ್ಯಾರಿಯರ್ ಮುಂತಾದ ವಿವಿಧ ವಿಶೇಷ ವೈಶಿಷ್ಟ್ಯಗಳನ್ನು ಈ ಬೈಕ್‌ನಲ್ಲಿ ನೀಡಲಾಗಿದೆ.

ಉತ್ತಮ ಮೈಲೇಜ್, ಕೈಗೆಟುಕುವ ಬೆಲೆಯೊಂದಿಗೆ ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಬೈಕ್‌ಗಳಿವು

ಈ ಮೋಟಾರ್‌ಸೈಕಲ್‌ನಲ್ಲಿ 115cc DTS ಎಂಜಿನ್ ಅನ್ನು ಬಳಸಲಾಗಿದ್ದು, ಇದು 8.48 bhp ಪವರ್ ಮತ್ತು 9.81 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ 4 ಸ್ಪೀಡ್ ಗೇರ್ ಬಾಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತದೆ. ಬೈಕ್ ಆಫ್ ರೋಡ್ ಪ್ರಯಾಣಕ್ಕಾಗಿ 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಅಂತೆಯೇ, ಇದರ ವ್ಹೀಲ್‌ಬೇಸ್ 1,285mm ಇದ್ದು, ಪ್ರತಿ ಲೀಟರ್‌ಗೆ 70 ಕಿಮೀ ಮೈಲೇಜ್ ನೀಡುತ್ತದೆ.

ಉತ್ತಮ ಮೈಲೇಜ್, ಕೈಗೆಟುಕುವ ಬೆಲೆಯೊಂದಿಗೆ ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಬೈಕ್‌ಗಳಿವು

ಹೀರೋ ಗ್ಲಾಮರ್ 125

ಗ್ಲಾಮರ್ 125 ಹೀರೋನ ಮತ್ತೊಂದು ಕಡಿಮೆ ಬೆಲೆಯ ಉತ್ಪನ್ನವಾಗಿದೆ. ಇದು 125 ಸಿಸಿ ಬೈಕ್ ಆಗಿದ್ದು ಇದರ ಬೆಲೆಯು ರೂ. 76,500 ನಿಂದ ಆರಂಬಾಗಿ ರೂ. 82,300 ದರದಲ್ಲಿ ಮಾರಾಟವಾಗುತ್ತಿದೆ. ಹೀರೋ ಈ ದ್ವಿಚಕ್ರ ವಾಹನವನ್ನು ವಿವಿಧ ಆಯ್ಕೆಗಳಲ್ಲಿ ಮಾರಾಟಕ್ಕೆ ನೀಡುತ್ತಿದೆ.

ಉತ್ತಮ ಮೈಲೇಜ್, ಕೈಗೆಟುಕುವ ಬೆಲೆಯೊಂದಿಗೆ ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಬೈಕ್‌ಗಳಿವು

ಹೀರೋ ಗ್ಲಾಮರ್ ಪ್ಲಸ್ 125, ಹೀರೋ ಗ್ಲಾಮರ್ 100 ಮಿಲಿಯನ್ ಎಡಿಷನ್, ಹೀರೋ ಗ್ಲಾಮರ್ ಡಿಸ್ಕ್ ಬ್ರೇಕ್, ಹೀರೋ ಗ್ಲಾಮರ್ ಪ್ಲಸ್ ಡಿಸ್ಕ್ ಬ್ರೇಕ್ ಮತ್ತು ಹೀರೋ ಗ್ಲಾಮರ್ 100 ಮಿಲಿಯನ್ ಎಡಿಷನ್ ಡಿಸ್ಕ್ ಎಂಬ ಆಯ್ಕೆಗಳೊಂದಿಗೆ ಮಾರಾಟ ಮಾಡುತ್ತಿದೆ. ಜೊತೆಗೆ ವಿವಿಧ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

ಉತ್ತಮ ಮೈಲೇಜ್, ಕೈಗೆಟುಕುವ ಬೆಲೆಯೊಂದಿಗೆ ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಬೈಕ್‌ಗಳಿವು

ಈ ಬೈಕ್‌ನಲ್ಲಿ ಸ್ಪೋರ್ಟ್ಸ್ ರೆಡ್, ಟೆಕ್ನೋ ಬ್ಲೂ, ರೇಡಿಯಂಟ್ ರೆಡ್, ಮ್ಯಾಟ್ ವರ್ನಿಯರ್ ಗ್ರೇ, ಮಿಡ್‌ನೈಟ್ ಬ್ಲ್ಯಾಕ್ ಬಣ್ಣದ ಆಯ್ಕೆಗಳನ್ನು ನೀಡಲಾಗಿದೆ. ಈ ಬೈಕ್ 124.7 cc ಸಾಮರ್ಥ್ಯದ PS6 ಮೋಟಾರ್ ಅನ್ನು ಬಳಸುತ್ತದೆ. ಈ ಮೋಟಾರ್ ಗರಿಷ್ಠ 10.72 bhp ಪವರ್ ಮತ್ತು 10.6 Nm ಟಾರ್ಕ್ ಅನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. ಪ್ರತಿ ಲೀಟರ್‌ಗೆ 60 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ.

ಉತ್ತಮ ಮೈಲೇಜ್, ಕೈಗೆಟುಕುವ ಬೆಲೆಯೊಂದಿಗೆ ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಬೈಕ್‌ಗಳಿವು

ಹೋಂಡಾ ಶೈನ್

ಹೋಂಡಾ ಶೈನ್ ಭಾರತದಲ್ಲಿ ಮಾರಾಟವಾಗುವ ಅತ್ಯುತ್ತಮ ಪ್ರಯಾಣಿಕ ಬೈಕ್‌ಗಳಲ್ಲಿ ಒಂದಾಗಿದ್ದು, ಶೈನ್ ಅನ್ನು ಭಾರತದಲ್ಲಿ ಮೊದಲ ಬಾರಿಗೆ ಏಪ್ರಿಲ್ 2006 ರಲ್ಲಿ ಬಿಡುಗಡೆ ಮಾಡಲಾಯಿತು. ಈ ಬೈಕಿನ ಡ್ರಮ್ ಬ್ರೇಕ್ ರೂಪಾಂತರ ರೂ. 76,314 ಬೆಲೆಯಿದ್ದು, ಡಿಸ್ಕ್ ಬ್ರೇಕ್ ರೂಪಾಂತರ ರೂ. 80,314 ಬೆಲೆಯಲ್ಲಿ ಮಾರಾಟಕ್ಕೆ ಲಭ್ಯವಿದೆ.

ಉತ್ತಮ ಮೈಲೇಜ್, ಕೈಗೆಟುಕುವ ಬೆಲೆಯೊಂದಿಗೆ ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಬೈಕ್‌ಗಳಿವು

ಇದು 2009ರ ಹೊತ್ತಿಗೆ ಭಾರತದಲ್ಲಿ ಹೆಚ್ಚು ಮಾರಾಟವಾದ 125cc ಬೈಕ್ ಆಗಿ ಖ್ಯಾತಿ ಪಡೆದಿದೆ. ಈ ದ್ವಿಚಕ್ರ ವಾಹನದಲ್ಲಿ ಹೋಂಡಾ 124.7 ಸಿಸಿ ಎಂಜಿನ್ ಬಳಸಿದೆ. ಇದು 10.50 bhp ಮತ್ತು 11 Nm ಟಾರ್ಕ್ ಅನ್ನು ಹೊರಸೂಸುವ ಸಾಮರ್ಥ್ಯ ಹೊಂದಿದೆ. ಇದು ಪ್ರತಿ ಲೀಟರ್ ಗೆ 60 ರಿಂದ 65 ಕಿ.ಮೀ ಮೈಲೇಜ್ ನೀಡುತ್ತದೆ.

ಉತ್ತಮ ಮೈಲೇಜ್, ಕೈಗೆಟುಕುವ ಬೆಲೆಯೊಂದಿಗೆ ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಬೈಕ್‌ಗಳಿವು

ಟಿವಿಎಸ್ ರೈಡರ್

ಟಿವಿಎಸ್ ರೈಡರ್ ಕಡಿಮೆ ಬೆಲೆಯ ಸ್ಪೋರ್ಟ್ಸ್ ಬೈಕ್ ಮಾದರಿಯ ಮೋಟಾರ್ ಸೈಕಲ್ ಆಗಿದೆ. ಇದರ ಕಾರ್ಯಕ್ಷಮತೆ, ನೋಟದ ವಿಷಯದಲ್ಲಿ ಭವ್ಯವಾದ ಉತ್ಪನ್ನವಾಗಿದೆ. ಇದು 125 ಸಿಸಿ ಮೋಟಾರ್ ಸೈಕಲ್ ಆಗಿದ್ದು, 124.8cc ಏರ್ ಕೂಲ್ಡ್ ಮತ್ತು ಆಯಿಲ್ ಕೂಲ್ಡ್, 3 ವಾಲ್ವ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ.

ಉತ್ತಮ ಮೈಲೇಜ್, ಕೈಗೆಟುಕುವ ಬೆಲೆಯೊಂದಿಗೆ ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಬೈಕ್‌ಗಳಿವು

ಈ ಮೋಟಾರ್ ಗರಿಷ್ಠ 11.2 bhp ಪವರ್ ಮತ್ತು 11.2 Nm ಟಾರ್ಕ್ ಅನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. ಬೈಕ್ ನಲ್ಲಿ 5 ಸ್ಪೀಡ್ ಗೇರ್ ಬಾಕ್ಸ್ ನೀಡಲಾಗಿದೆ. ಬೈಕ್‌ನಲ್ಲಿ ಇಕೋ ಮತ್ತು ಪವರ್ ಎಂಬ ಎರಡು ರೀತಿಯ ರೈಡಿಂಗ್ ಮೋಡ್‌ಗಳನ್ನು ನೀಡಲಾಗುತ್ತದೆ. ಈ ಬೈಕ್ ಕೇವಲ 5.9 ಸೆಕೆಂಡುಗಳಲ್ಲಿ ಗಂಟೆಗೆ 60 ಕಿಮೀ ವೇಗವನ್ನು ತಲುಪುತ್ತದೆ.

ಉತ್ತಮ ಮೈಲೇಜ್, ಕೈಗೆಟುಕುವ ಬೆಲೆಯೊಂದಿಗೆ ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಬೈಕ್‌ಗಳಿವು

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಮೇಲೆ ತಿಳಿಸಲಾದ ದ್ವಿಚಕ್ರ ವಾಹನ ಮಾದರಿಗಳು ಭಾರತದಲ್ಲಿ ಮಾರಾಟವಾಗುವ ಕಡಿಮೆ ಬೆಲೆಯ ಬೈಕುಗಳಾಗಿವೆ. ಅಂತೆಯೇ, ಮೇಲೆ ನೀಡಲಾದ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಬೆಲೆಗಳಾಗಿದ್ದು, ಆನ್-ರೋಡ್ ಸರ್ಕಾರದ ತೆರಿಗೆಗಳು ಮತ್ತು ವಿಮೆಗಳನ್ನು ಸೇರಿಸಿ ಬೆಲೆ ಮತ್ತಷ್ಟು ಹೆಚ್ಚಾಗುತ್ತದೆ. ಈ ಬೈಕ್‌ಗಳು ಮೈಲೇಜ್ ಬಯಸುವವರಿಗೆ ಉತ್ತಮ ಆಯ್ಕೆಯಾಗಿವೆ.

Most Read Articles

Kannada
English summary
Top bikes sold in India with good mileage and affordable prices
Story first published: Wednesday, June 22, 2022, 18:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X