Just In
- 2 min ago
ಎಸ್ಬಿಐ ಜೊತೆಗೂಡಿ ಇವಿ ಕಾರುಗಳಿಗಾಗಿ ವಿಶೇಷ ಸಾಲ ಸೌಲಭ್ಯ ಘೋಷಣೆ ಮಾಡಿದ ಟಾಟಾ ಮೋಟಾರ್ಸ್
- 14 hrs ago
ವ್ಯಾಗನ್ಆರ್ ಕಾರಿಗೆ ಸೆಡ್ಡು ಹೊಡೆಯಲಿದೆ 2022ರ ಕಿಯಾ ರೇ ಫೇಸ್ಲಿಫ್ಟ್
- 14 hrs ago
ಜುಲೈ ಎಲೆಕ್ಟ್ರಿಕ್ ಕಾರುಗಳ ನೋಂದಣಿಯಲ್ಲಿ ಶೇ 3.5 ರಷ್ಟು ಏರಿಕೆ: ಶೇ 90 ರಷ್ಟು ಪಾಲು ಟಾಟಾಗೆ
- 15 hrs ago
30.9 ಕಿ.ಮೀ ಮೈಲೇಜ್ನೊಂದಿಗೆ ಮಾರುತಿ ಸ್ವಿಫ್ಟ್ ಸಿಎನ್ಜಿ ಕಾರು ಬಿಡುಗಡೆ
Don't Miss!
- News
ಸ್ವಾತಂತ್ರ್ಯ ದಿನಾಚರಣೆ: ಜನ ಸೇರದಂತೆ ತಡೆಯಲು ಕೇಂದ್ರ ರಾಜ್ಯಗಳಿಗೆ ಸೂಚನೆ
- Sports
Asia Cup 2022: ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯದಲ್ಲಿ ಈ ತಂಡ ಗೆಲ್ಲಲಿದೆ; ರಿಕಿ ಪಾಂಟಿಂಗ್
- Lifestyle
Today Rashi Bhavishya: ಶನಿವಾರದ ದಿನ ಭವಿಷ್ಯ: ತುಲಾ, ಮೇಷ, ಮಕರ, ಕುಂಭ ರಾಶಿಯ ವ್ಯಾಪಾರಸ್ಥರಿಗೆ ಶುಭ ದಿನ
- Movies
ಅತ್ತ ಪೊಲೀಸ್, ಇತ್ತ ರೌಡಿ ಇಬ್ಬರನ್ನೂ ಎದುರಿಸುತ್ತಿರುವ ಕಂಠಿ!
- Finance
ಕ್ರಿಪ್ಟೋ ವಹಿವಾಟು: 370 ಕೋಟಿ ರೂಪಾಯಿ ಜಪ್ತಿ ಮಾಡಿದ ಇಡಿ
- Technology
ರೆಡ್ಮಿ K50 ಅಲ್ಟ್ರಾ ಮತ್ತು ಶಿಯೋಮಿ ಪ್ಯಾಡ್ 5 ಪ್ರೊ 12.4 ಬಿಡುಗಡೆ! ವಿಶೇಷತೆ ಏನು?
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಸ್ಟೈಲಿಷ್ ವಿನ್ಯಾಸ, ಅತ್ಯಾಧುನಿಕ ತಂತಜ್ಞಾನದೊಂದಿಗೆ ಟ್ರಿಸಿಟಿ ತ್ರೀ ವೀಲರ್ ಸ್ಕೂಟರ್ ಪರಿಚಯಿಸಿದ ಯಮಹಾ
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಯಮಹಾ, ಯುರೋಪ್ ಮಾರುಕಟ್ಟೆಯಲ್ಲಿ ಟ್ರಿಸಿಟಿ ತ್ರೀ ವೀಲರ್‌ನ ನವೀಕರಿಸಿದ ಆವೃತ್ತಿಯನ್ನು ಪರಿಚಯಿಸಿದೆ. ಟ್ರಿಸಿಟಿ 125, 2014 ರಿಂದ ಯುರೋಪ್‌ನಾದ್ಯಂತ ಮಾರಾಟದಲ್ಲಿದೆ. ಕಳೆದ ಹಲವು ವರ್ಷಗಳಿಂದ ಇದು ನಿಕಾನ್ ತ್ರೀ ವೀಲರ್‌ನಂತೆಯೇ ಅನನ್ಯ ಗ್ರಾಹಕ ಶ್ರೇಣಿಯನ್ನು ಹೊಂದಿದೆ.

2022 ಮಾದರಿಯಲ್ಲಿ, 125cc ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಯುರೋ 5 ಮಾನದಂಡಗಳನ್ನು ಪೂರೈಸುತ್ತದೆ. ಇಲ್ಲಿನ ಗ್ರಾಹಕರಿಗೆ ಅನುಗುಣವಾಗಿ ವೇರಿಯಬಲ್ ವಾಲ್ವ್ ಆಕ್ಟಿವೇಶನ್ ಮತ್ತು ಎಂಜಿನ್ ಸ್ಟಾರ್ಟ್/ಸ್ಟಾಪ್ ಸಿಸ್ಟಮ್ ಜೊತೆಗೆ, ಪವರ್‌ಟ್ರೇನ್ ಯಮಹಾದ ಬ್ಲೂ ಕೋರ್ ತಂತ್ರಜ್ಞಾನವನ್ನು ಒಳಗೊಂಡಿದೆ.

ಈ ಎಂಜಿನ್ 7,500 rpm ನಲ್ಲಿ 9.0 bhp ಮತ್ತು 7,250 rpm ನಲ್ಲಿ 11.7 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಡ್ಯುಯಲ್ ಫ್ರಂಟ್ ವೀಲ್‌ಗಳೊಂದಿಗೆ ಎಲ್‌ಎಂಡಬ್ಲ್ಯೂ (ಲೀನಿಂಗ್ ಮಲ್ಟಿ ವೀಲ್) ಅಕರ್‌ಮ್ಯಾನ್ ಸ್ಟೀರಿಂಗ್ ವೀಲ್ ಅನ್ನು ಹೊಂದಿದೆ. ಈ ವಿನ್ಯಾಸದಿಂದಾಗಿಯೇ ಈ ಸ್ಕೂಟರ್ ಇತರ ಮಾದರಿಗಳಿಗಿಂತ ಭಿನ್ನವಾಗಿರುತ್ತದೆ.

ಯಮಹಾ ವಾಹನ ತಯಾರಕರು ಮುಂಭಾಗದಲ್ಲಿರುವ ಎರಡು ಚಕ್ರಗಳಿಗೆ ಅನುಗುಣವಾಗಿ ಪಿಕ್‌ಅಪ್ ಮತ್ತು ಸ್ಥಿರತೆಯನ್ನು ಹೆಚ್ಚಿಸಲು ಸಹಾಯ ಮಾಡುವಂತೆ ಸ್ಕೂಟರ್‌ಅನ್ನು ವಿನ್ಯಾಸಗೊಳಿಸಿದ್ದಾರೆ. ಆದರೆ ಮರುವಿನ್ಯಾಸಗೊಳಿಸಲಾದ ಚಾಸಿಸ್ ಯಂತ್ರದ ಸ್ಥಿರತೆ ಮತ್ತು ಸವಾರಿ ಸೌಕರ್ಯವನ್ನು ಇನ್ನಷ್ಟು ಸುಧಾರಿಸಬೇಕಿದ್ದು, ಇದು ಮುಂದಿನ ದಿನಗಳಲ್ಲಿ ಅಭಿವೃದ್ಧಿಗೊಳ್ಳುವ ನಿರೀಕ್ಷೆಯಿದೆ.

ಉತ್ತಮ ರೈಡಿಂಗ್ ಗುಣಮಟ್ಟಕ್ಕಾಗಿ ಜಪಾನಿನ ತಯಾರಕರು ಹಿಂದಿನ ಟ್ವಿನ್ ಅಬ್ಸಾರ್ಬರ್‌ಗಳನ್ನು ಸಹ ಮಾರ್ಪಡಿಸಿದ್ದಾರೆ. ಮುಂಭಾಗದಲ್ಲಿ 2022 ಯಮಹಾ ಟ್ರಿನಿಟಿ 125 ಡ್ಯುಯಲ್ 220 ಎಂಎಂ ಫ್ರಂಟ್ ಡಿಸ್ಕ್ ಯೂನಿಟ್ ಮತ್ತು ಸಿಂಗಲ್ 230 ಎಂಎಂ ರಿಯರ್ ಡಿಸ್ಕ್ ಅನ್ನು ಹೊಂದಿದೆ. ಇವು ವಾಹನ ನಿಯಂತ್ರಣಕ್ಕೆ ಬಹುಮುಖ್ಯ ಪಾತ್ರ ವಹಿಸುತ್ತವೆ.

ಯೂನಿಫೈಡ್ ಬ್ರೇಕಿಂಗ್ ಸಿಸ್ಟಮ್ ಎಂದು ಕರೆಯಲ್ಪಡುವ ಸಂಯೋಜಿತ ಬ್ರೇಕಿಂಗ್ ಸಿಸ್ಟಮ್ ಅನ್ನು ಯಮಹಾ ವಾಹನದಲ್ಲಿ ಬಳಸಲಾಗುತ್ತದೆ, ಇದು ಉತ್ತಮ ಸುರಕ್ಷತೆ ಮತ್ತು ಸ್ಥಿರತೆಗಾಗಿ ಬ್ರೇಕಿಂಗ್ ಸಮಯದಲ್ಲಿ ಮುಂಭಾಗ ಮತ್ತು ಹಿಂಭಾಗದ ಬ್ರೇಕ್‌ಗಳನ್ನು ತೊಡಗಿಸಿಕೊಳ್ಳುವ ಮೂಲಕ ಕಾರ್ಯನಿರ್ವಹಿಸುತ್ತದೆ. ಇದರಿಂದ ಚಾಲಕ ವೇಗದಲ್ಲೂ ಬ್ರೇಕಿಂಗ್ ನಿಯಂತ್ರಣವನ್ನು ಉತ್ತಮವಾಗಿ ನಿಯಂತ್ರಿಸಬಹುದು.

2022 ಯಮಹಾ ಟ್ರಿಸಿಟಿ 125 7.2 ಲೀಟರ್ ಫ್ಯೂಲ್ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದ್ದು, 156 ಕೆ.ಜಿ ತೂಗುತ್ತದೆ. ನವೀಕರಿಸಿದ ತ್ರಿಚಕ್ರ ವಾಹನವು 780 ಎಂಎಂ ಸೀಟ್ ಎತ್ತರವನ್ನು ಹೊಂದಿದ್ದು ಸೀಟಿನ ಅಡಿಯಲ್ಲಿ ಸಂಗ್ರಹಣೆಯು ಪೂರ್ಣ ಹೆಲ್ಮೆಟ್‌ಗೆ ಹೊಂದಿಕೊಳ್ಳುವಷ್ಟು ದೊಡ್ಡದಾಗಿದೆ.

ಮುಂಭಾಗದ ಕೌಂಟರ್ ಒಳಗೆ, ಗ್ರಾಹಕರು ದೈನಂದಿನ ವಸ್ತುಗಳನ್ನು ಸಂಗ್ರಹಿಸಲು ಶೇಖರಣಾ ಸ್ಥಳವನ್ನು ಕಾಣಬಹುದು. ಉಪಕರಣಗಳ ಪಟ್ಟಿಯು ಬ್ಲೂಟೂತ್ ಸಂಪರ್ಕದೊಂದಿಗೆ ಸಿಂಗಲ್ ಕಲರ್ಡ್ LCD ಉಪಕರಣ ಕನ್ಸೋಲ್ ಅನ್ನು ಸಹ ಒಳಗೊಂಡಿದೆ. ಇದನ್ನು Yamaha ನ MyRide ಅಪ್ಲಿಕೇಶನ್ ಮೂಲಕ ಸಂಪರ್ಕಿಸಬಹುದು.

2022 ಟ್ರಿಸಿಟಿ 125 ಯಮಹಾ ಐಕಾನ್ ಗ್ರೇ, ಮ್ಯಾಟ್ ಗ್ರೇ ಮತ್ತು ಮಿಲ್ಕಿ ವೈಟ್ ಎಂಬ ಮೂರು ವಿಭಿನ್ನ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಈ ಮೂರು-ಚಕ್ರ ವಾಹನದ ಮುಂಭಾಗವು ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎತ್ತರದ ವಿಂಡ್‌ಸ್ಕ್ರೀನ್, ಉಬ್ಬುವ ಸಿಂಗಲ್ ಪೀಸ್ ಸೀಟ್‌ಗಳೊಂದಿಗೆ ಪ್ರಮುಖ ಬಾಡಿ ಪ್ಯಾನೆಲ್‌ಗಳು, ಸೈಡ್ ಮೌಂಟೆಡ್ ಎಕ್ಸಾಸ್ಟ್ ಸಿಸ್ಟಮ್ ಮತ್ತು ಸಾಮಾನ್ಯಕ್ಕಿಂತ ದೊಡ್ಡ ಫುಟ್‌ಬೋರ್ಡ್ ಅನ್ನು ಒಳಗೊಂಡಿದೆ.

ಹೊಸ 155cc ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಟ್ರಿಸಿಟಿ 155 ಮತ್ತು ಯಮಹಾ ಏರಾಕ್ಸ್ 155 ನಿಂದ ಎರವಲು ಪಡೆಯಲಾಗಿದೆ, ಇದು 15 bhp ಮತ್ತು 14 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 125 ಮಾದರಿಯಂತೆ 155 ಮಾದರಿಯು ಯಮಹಾದ ವೇರಿಯಬಲ್ ವಾಲ್ವ್ ಆಕ್ಟಿವೇಶನ್ (ವಿವಿಎ) ತಂತ್ರಜ್ಞಾನವನ್ನು ಬಳಸಿಕೊಂಡು ಕಾರ್ಯಾಚರಿಸುತ್ತದೆ.

ಉನ್ನತ ಮಟ್ಟದ ಕಾರ್ಯಕ್ಷಮತೆಗೆ ರಾಜಿ ಮಾಡಿಕೊಳ್ಳದೆ ಅತ್ಯುತ್ತಮ ಕಡಿಮೆ-ಮಟ್ಟದ ಸೌಂಡ್ ಅನ್ನು ಹೊರಹಾಕುತ್ತದೆ. ಯಮಹಾ ಟ್ರಿಸಿಟಿ 125 ಬೆಲೆ ಯುರೋಗಳಲ್ಲಿ 44,299 ಮತ್ತು ಟ್ರಿಸಿಟಿ 155 ಬೆಲೆ 44,999 ಇದೆ. ಇದು ಕ್ರಮವಾಗಿ ಭಾರತೀಯ ರೂ.ಗಳಲ್ಲಾದರೆ ರೂ.3.50 ಲಕ್ಷ ಮತ್ತು ರೂ 4.08 ಲಕ್ಷಕ್ಕೆ ಸಮನಾಗಿರುತ್ತದೆ. (ಭಾರತೀಯ ತೆರಿಗೆ ಮತ್ತು ಸುಂಕವನ್ನು ಹೊರತುಪಡಿಸಿ)

125cc ಮತ್ತು 155cc ಎಂಜಿನ್‌ಗಳನ್ನು ಬಳಸುವ ಸ್ಕೂಟರ್‌ಗಳಿಗೆ ಇದು ನಂಬಲಾಗದಷ್ಟು ಹೆಚ್ಚಿನ ಬೆಲೆಯಾಗಿದೆ. ಆದರೂ ಈ ಸ್ಕೂಟರ್‌ಗಳು ತಕ್ಷಣವೇ ಭಾರತಕ್ಕೆ ಆಗಮಿಸುವುದಿಲ್ಲ, ಆದರೆ ನೀವು ಕಾರ್ಯಕ್ಷಮತೆ ಆಧಾರಿತ ಮ್ಯಾಕ್ಸಿ ಅಥವಾ ಮ್ಯಾಕ್ಸಿ-ಶೈಲಿಯ ಸ್ಕೂಟರ್‌ಗಳನ್ನು ಹುಡುಕುತ್ತಿದ್ದರೆ, Yamaha Aerox 155 ಮತ್ತು Aprilia SXR 160 ಅನ್ನು ಪರಿಶೀಲಿಸಬಹುದು, BMW C400 GT ಮಾದರಿಗಳು ಭಾರತದಲ್ಲಿ ಲಭ್ಯವಿದೆ.