ಕಾರಿನಂತೆ ಬೈಕ್‌ಗಳಿಗೂ ಪವರ್ ಸ್ಟೀರಿಂಗ್ ಸಿಸ್ಟಮ್ ನೀಡುವ ಪ್ರಯೋಗದಲ್ಲಿದೆ ಯಮಹಾ ಕಂಪನಿ!

ಜಪಾನಿನ ಜನಪ್ರಿಯ ಮೋಟಾರ್‌ಸೈಕಲ್ ತಯಾರಿಕಾ ಕಂಪನಿಯಾದ ಯಮಹಾ ಮೋಟಾರ್ಸ್, ಕಾರಿನಂತೆ ದ್ವಿಚಕ್ರ ವಾಹನಗಳಲ್ಲೂ ಪವರ್ ಸ್ಟೀರಿಂಗ್ ತಂತ್ರಜ್ಞಾನವನ್ನು ಪರಿಚಯಿಸಲು ಕೆಲಸ ಮಾಡುತ್ತಿದೆ. ಪ್ರಸ್ತುತ ಕಂಪನಿಯು ತನ್ನ ಕೆಲವು ಹಳೆಯ ಬೈಕುಗಳಲ್ಲಿ ಈ ತಂತ್ರವನ್ನು ಬಳಸಿ ಪ್ರಯೋಗ ಮಾಡುತ್ತಿದೆ.

ಕಾರಿನಂತೆ ಬೈಕ್‌ಗಳಿಗೂ ಪವರ್ ಸ್ಟೀರಿಂಗ್ ಸಿಸ್ಟಮ್ ನೀಡುವ ಪ್ರಯೋಗದಲ್ಲಿದೆ ಯಮಹಾ ಕಂಪನಿ!

ಈ ತಂತ್ರಜ್ಞಾನವನ್ನು ಯಮಹಾ EPS ಸ್ಟೀರಿಂಗ್ ಸಪೋರ್ಟ್ ಸಿಸ್ಟಮ್ ಎಂಬ ಹೆಸರಿನೊಂದಿಗೆ ಈಗಾಗಲೇ ಅಧಿಕೃತವಾಗಿ ಪರಿಚಯಿಸಿದೆ. ಈ ತಂತ್ರಜ್ಞಾವು ಎಲೆಕ್ಟ್ರೋ ಮ್ಯಾಗ್ನೆಟಿಕ್ ಸೆಟ್-ಅಪ್ ಅನ್ನು ಹೊಂದಿದ್ದು, ಇದು ಸಕ್ರಿಯ ಸ್ಟೀರಿಂಗ್ ಡ್ಯಾಪರ್ ಅನ್ನು ಬಳಸುತ್ತದೆ. ಈ ಘಟಕವು ಆಕ್ಚುವೇಟರ್ ಮೂಲಕ ಕಡಿಮೆ ವೇಗದಲ್ಲಿ ಸ್ಟೀರಿಂಗ್ ಸಹಾಯವನ್ನು ಒದಗಿಸುವ ಮೂಲಕ ಮೋಟಾರ್‌ಸೈಕಲ್‌ನ ಸ್ಥಿರತೆಗೆ ಸಹಾಯ ಮಾಡುತ್ತದೆ.

ಕಾರಿನಂತೆ ಬೈಕ್‌ಗಳಿಗೂ ಪವರ್ ಸ್ಟೀರಿಂಗ್ ಸಿಸ್ಟಮ್ ನೀಡುವ ಪ್ರಯೋಗದಲ್ಲಿದೆ ಯಮಹಾ ಕಂಪನಿ!

ಈ ವ್ಯವಸ್ಥೆಯು ಹೆಚ್ಚಿನ ವೇಗದಲ್ಲಿ ಎಲೆಕ್ಟ್ರಾನಿಕ್ ಸ್ಟೀರಿಂಗ್ ಡ್ಯಾಪರ್ ಆಗಿ ಕಾರ್ಯನಿರ್ವಹಿಸುತ್ತದೆ. ಇನ್‌ಪುಟ್ ಅನ್ನು ಪತ್ತೆಹಚ್ಚಲು ಮತ್ತು ಅಳೆಯಲು ಈ ಹ್ಯಾಂಡಲ್ ಬಾರ್ ಟಾರ್ಕ್ ಸೆನ್ಸರ್ ಅನ್ನು ಬಳಸಿಕೊಳ್ಳುವಂತೆ ಕಂಪನಿ ಯೋಜಿಸಿದೆ. ಈಗಾಗಲೇ ತನ್ನ ಎಲೆಕ್ಟ್ರಿಕ್ ಬೈಸಿಕಲ್‌ನಲ್ಲಿ ಈ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿರುವುದಾಗಿ ಕಂಪನಿ ಹೇಳಿಕೊಂಡಿದೆ.

ಕಾರಿನಂತೆ ಬೈಕ್‌ಗಳಿಗೂ ಪವರ್ ಸ್ಟೀರಿಂಗ್ ಸಿಸ್ಟಮ್ ನೀಡುವ ಪ್ರಯೋಗದಲ್ಲಿದೆ ಯಮಹಾ ಕಂಪನಿ!

ಈಗ ಕಂಪನಿಯು ತನ್ನ ಹಳೆ ಬೈಕುಗಳು ಮತ್ತು ಪ್ರಸ್ತುತವಿರುವ ಹೊಸ ಮಾದರಿಗಳಲ್ಲಿ ಈ ತಂತ್ರಜ್ಞಾನವನ್ನು ಬಳಸುವ ಆಲೋಚನೆಯಲ್ಲಿರುವುದಾಗಿ ತಿಳಿಸಿದೆ. ಮಾಹಿತಿಯ ಪ್ರಕಾರ, ಈ ವ್ಯವಸ್ಥೆಯನ್ನು ಪ್ರಸ್ತುತ ಕಂಪನಿಯು ಆಸ್ಟ್ರೇಲಿಯಾದ ಮೋಟೋಕ್ರಾಸ್ ರೇಸರ್ ಜೇ ವಿಲ್ಸನ್ ಅವರ ಸಹಯೋಗದೊಂದಿಗೆ ಪರೀಕ್ಷಿಸುತ್ತಿದೆ.

ಕಾರಿನಂತೆ ಬೈಕ್‌ಗಳಿಗೂ ಪವರ್ ಸ್ಟೀರಿಂಗ್ ಸಿಸ್ಟಮ್ ನೀಡುವ ಪ್ರಯೋಗದಲ್ಲಿದೆ ಯಮಹಾ ಕಂಪನಿ!

ಆಲ್-ಜಪಾನ್ ಮೊಟೊಕ್ರಾಸ್ ಚಾಂಪಿಯನ್‌ಷಿಪ್‌ನಲ್ಲಿ ಆಲ್-ಜಪಾನ್ ಯಮಹಾ ಫ್ಯಾಕ್ಟರಿ ರೇಸ್ ತಂಡಕ್ಕಾಗಿ ರೈಡ್ ಮಾಡುತ್ತಿರುವ ಜೇ ವಿಲ್ಸನ್, ಈ ತಂತ್ರಜ್ಞಾನವನ್ನು ತಮ್ಮ 250 ಸಿಸಿ ಮತ್ತು 450 ಸಿಸಿ ಡರ್ಟ್ ಬೈಕ್‌ನಲ್ಲಿ ಬಳಸುತ್ತಿದ್ದಾರೆ. ಎಲೆಕ್ಟ್ರಾನಿಕ್ ಸ್ಟೀರಿಂಗ್ ಡ್ಯಾಪರ್ ತಂತ್ರಜ್ಞಾನವನ್ನು ಯಮಹಾ ಪರೀಕ್ಷಿಸುತ್ತಿರುವುದು ಇದೇ ಮೊದಲೇನಲ್ಲ, ಈ ಹಿಂದೆಯೂ ಹಲವು ಪ್ರಯೋಗಗಳನ್ನು ಮಾಡಿದೆ.

ಕಾರಿನಂತೆ ಬೈಕ್‌ಗಳಿಗೂ ಪವರ್ ಸ್ಟೀರಿಂಗ್ ಸಿಸ್ಟಮ್ ನೀಡುವ ಪ್ರಯೋಗದಲ್ಲಿದೆ ಯಮಹಾ ಕಂಪನಿ!

ಹೋಂಡಾ ಮೋಟಾರ್‌ಸೈಕಲ್ ಸಹ ಇಂತಹ ತಂತ್ರಜ್ಞಾನವನ್ನು ಹೊಂದಿದೆ. ಅದರ ಡಂಪಿಂಗ್ ದರಗಳು ಬದಲಾಗುತ್ತಿದ್ದು ECU ನಿಂದ ಸರಿಹೊಂದಿಸಬಹುದೆಂಬ ಚಿಂತನೆಯಲ್ಲಿದೆ. ಇದನ್ನು ಅನುಷ್ಠಾನಕ್ಕೆ ತರುವ ಮೂಲಕ ಹ್ಯಾಂಡಲ್ ಬಾರ್‌ನಲ್ಲಿ ಅನುಷ್ಠಾನಗೊಳಿಸಲಾದ ಯಮಹಾ ಆಕ್ಚುಯೇಟರ್ ಪರಿಕಲ್ಪನೆಯನ್ನು ಮತ್ತಷ್ಟು ವಿಸ್ತರಿಸುವ ಯೋಜನೆಯಲ್ಲಿದೆ.

ಕಾರಿನಂತೆ ಬೈಕ್‌ಗಳಿಗೂ ಪವರ್ ಸ್ಟೀರಿಂಗ್ ಸಿಸ್ಟಮ್ ನೀಡುವ ಪ್ರಯೋಗದಲ್ಲಿದೆ ಯಮಹಾ ಕಂಪನಿ!

ಯಮಹಾ ಮೋಟಾರ್‌ಸೈಕಲ್ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಇದನ್ನು ಏಪ್ರಿಲ್ 11, 2022 ರಂದು ಬಹಿರಂಗಪಡಿಸುವ ತವಕದಲ್ಲಿದೆ. ಈಗಾಗಲೇ ಇದರ ಬಗ್ಗೆ ಕಂಪನಿಯು ಮಾಧ್ಯಮಗಳಿಗೂ ಆಹ್ವಾನಗಳನ್ನು ಕಳುಹಿಸಿದೆ. ಆಹ್ವಾನ ಆಮಂತ್ರಣದಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಉಲ್ಲೇಖಿಸದಿದ್ದರೂ, ಉತ್ಪನ್ನವು ಸ್ಟೈಲಿಶ್ ಮತ್ತು ಸ್ಪೋರ್ಟಿಯಾಗಿರುತ್ತದೆ ಎಂದು ಖಂಚಿತ ಪಡಿಸಿದೆ. ಯಮಹಾದೊಂದಿಗೆ ಈ ಮಾದರಿಯು ರೋಮಾಂಚನಕಾರಿ ಅನುಭವ ನೀಡಲಿದೆ ಎಂದು ಹೇಳಿಕೊಂಡಿದೆ.

ಕಾರಿನಂತೆ ಬೈಕ್‌ಗಳಿಗೂ ಪವರ್ ಸ್ಟೀರಿಂಗ್ ಸಿಸ್ಟಮ್ ನೀಡುವ ಪ್ರಯೋಗದಲ್ಲಿದೆ ಯಮಹಾ ಕಂಪನಿ!

ಇನ್ನು ಯಮಹಾ ಕಂಪನಿ ಇತ್ತೀಚೆಗೆ ತನ್ನ ಹೊಸ ಆರ್3 ಬೈಕ್ ಅನ್ನು ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆ ಮಾಡಿದೆ. ನವೀಕರಿಸಿದ ಬಣ್ಣದ ಆಯ್ಕೆಯೊಂದಿಗೆ ಈ ಹೊಸ 2022 ಯಮಹಾ ಆರ್3 ಅನ್ನು ತೈವಾನ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. 2022ರ ಯಮಹಾ ಆರ್3 ಅದರ ಹೊಸ ಆರೆಂಜ್ ಪೇಂಟ್ ಸ್ಕೀಮ್‌ನೊಂದಿಗೆ ಮಿಡ್‌ನೈಟ್ ಬ್ಲ್ಯಾಕ್ ಮತ್ತು ರೇಸಿಂಗ್ ಬ್ಲೂ ಮುಂತಾದ ಇತರ ಬಣ್ಣ ಆಯ್ಕೆಗಳೊಂದಿಗೆ ಮಾರಾಟವಾಗಲಿದೆ.

ಕಾರಿನಂತೆ ಬೈಕ್‌ಗಳಿಗೂ ಪವರ್ ಸ್ಟೀರಿಂಗ್ ಸಿಸ್ಟಮ್ ನೀಡುವ ಪ್ರಯೋಗದಲ್ಲಿದೆ ಯಮಹಾ ಕಂಪನಿ!

ಯಮಹಾ ಆರ್3 ಬೈಕಿನಲ್ಲಿನ ಹೊಸ ಆರೆಂಜ್ ಪೇಂಟ್ ಸ್ಕೀಮ್ ಕುರಿತು ಹೇಳುವುದಾದರೆ, ಬಣ್ಣವು ಮೋಟಾರ್‌ಸೈಕಲ್ ಎದ್ದು ಕಾಣಲು ಸಹಾಯ ಮಾಡುತ್ತದೆ ಮತ್ತು ಬೂದು ಬಣ್ಣದ ಕೆಳಭಾಗದ ಡ್ಯುಯಲ್-ಟೋನ್ ಫಿನಿಶ್ ಮೋಟಾರ್‌ಸೈಕಲ್‌ನ ಸ್ಪೋರ್ಟಿ ಸ್ವಭಾವವನ್ನು ಒತ್ತಿಹೇಳುತ್ತದೆ. ಯಮಹಾ ಆರ್3 ಬೈಕ್ ಆಕರ್ಷಕ ಗ್ರಾಫಿಕ್ಸ್ ಬೈಕಿಗೆ ಹೆಚ್ಚಿನ ಸ್ಪೋರ್ಟಿ ಲುಕ್ ಅನ್ನು ನೀಡುತ್ತದೆ.

ಕಾರಿನಂತೆ ಬೈಕ್‌ಗಳಿಗೂ ಪವರ್ ಸ್ಟೀರಿಂಗ್ ಸಿಸ್ಟಮ್ ನೀಡುವ ಪ್ರಯೋಗದಲ್ಲಿದೆ ಯಮಹಾ ಕಂಪನಿ!

ಯಮಹಾ ಮೋಟಾರ್ ತನ್ನ ಆರ್15ಎಸ್ ವಿ3 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷ ಬಿಡುಗಡೆಗೊಳಿಸಿತ್ತು ಈ ಹೊಸ ಯಮಹಾ ಆರ್15ಎಸ್ ವಿ3 ಬೈಕ್ ಹೆಚ್ಚು ಕೈಗೆಟುಕುವ ದರದ ಸ್ಪೋರ್ಟ್ಸ್ ಬೈಕ್ ಆಗಿದೆ. ಮೊದಲು ಆರ್15ಎಸ್ ನೇಮ್‌ಪ್ಲೇಟ್ ಅನ್ನು ಮೊದಲ ತಲೆಮಾರಿನ ಆರ್15 ಅನ್ನು ಹೆಚ್ಚು ಟೋನ್-ಡೌನ್ ಆವೃತ್ತಿಯಾಗಿ ಬಳಸಲಾಗುತ್ತಿತ್ತು ಮತ್ತು ಈಗ ಅದು ಬಹುತೇಕ ಒಂದೇ ರೀತಿಯ ಗುರುತನ್ನು ಹೊಂದಿದೆ.

ಕಾರಿನಂತೆ ಬೈಕ್‌ಗಳಿಗೂ ಪವರ್ ಸ್ಟೀರಿಂಗ್ ಸಿಸ್ಟಮ್ ನೀಡುವ ಪ್ರಯೋಗದಲ್ಲಿದೆ ಯಮಹಾ ಕಂಪನಿ!

ಇನ್ನು ಯಮಹಾ ಕಂಪನಿಯು ಆರ್3 ಬೈಕನ್ನು ಭಾರತೀಯ ಮಾರುಕಟ್ಟೆಗೆ ಮರಳಿ ತರಬಹುದು ಎಂದು ನಿರೀಕ್ಷಿಸಲಾಗಿದೆ. ಈ ಹೊಸ ಯಮಹಾ ಆರ್3 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಅಪಾಚೆ ಆರ್ಆರ್310 ಮತ್ತು ಕೆಟಿಎಂ ಆರ್ಸಿ390 ಬೈಕ್‌ಗಳೊಂದಿಗೆ ಸ್ಪರ್ಧಿಸಲಿದೆ.

Most Read Articles

Kannada
Read more on ಯಮಹಾ yamaha
English summary
Yamaha motorcycle working on power steering system for bikes details
Story first published: Thursday, March 31, 2022, 15:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X