ಆರ್‌ಇ ಹಿಮಾಲಯನ್ ಮಾದರಿಗೆ ಪೈಪೋಟಿಯಾಗಿ ಯೆಜ್ಡಿ ಹೊಸ ಅಡ್ವೆಂಚರ್ ಬೈಕ್ ಬಿಡುಗಡೆ

ಮಹೀಂದ್ರಾ ಒಡೆತನದ ಕ್ಲಾಸಿಕ್ ಲೆಜೆಂಡ್ ಕಂಪನಿಯು ಯೆಜ್ಡಿ ಬ್ರ್ಯಾಂಡ್‌ಗೆ ಹೊಸ ರೂಪ ನೀಡುವ ಮೂಲಕ ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ಮೂರು ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಟು ಸ್ಟ್ರೋಕ್ ಕ್ರೇಜ್‌ಗೆ ಆಧುನಿಕ ವೈಶಿಷ್ಟ್ಯತೆ ನೀಡಿದೆ.

ಆರ್‌ಇ ಹಿಮಾಲಯನ್ ಮಾದರಿಗೆ ಪೈಪೋಟಿಯಾಗಿ ಯೆಜ್ಡಿ ಹೊಸ ಅಡ್ವೆಂಚರ್ ಬೈಕ್ ಬಿಡುಗಡೆ

ಕ್ಲಾಸಿಕ್ ಲೆಜೆಂಡ್ ಪ್ರೈವೆಟ್ ಲಿಮಿಟೆಡ್ ಕಂಪನಿಯು ಜಾವಾ ಹೊಸ ಬೈಕ್‌ಗಳ ಬಿಡುಗಡೆಯ ನಂತರ ಇದೀಗ ಕಂಪನಿಯು ಯೆಜ್ಡಿ ಹೊಸ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಯೆಜ್ಡಿ ಹೊಸ ಬೈಕ್ ಮಾದರಿಗಳು ರೋಡ್‌ಸ್ಟರ್, ಸ್ಕ್ರ್ಯಾಂಬ್ಲರ್ ಮತ್ತು ಅಡ್ವೆಂಚರ್ ವೈಶಿಷ್ಟ್ಯತೆಯೊಂದಿಗೆ ಖರೀದಿಗೆ ಲಭ್ಯವಿರಲಿವೆ. ಇದರಲ್ಲಿ ಅಡ್ವೆಂಚರ್ ಮಾದರಿಯು ಸಾಕಷ್ಟು ಆಕರ್ಷಕವಾಗಿದ್ದು, ಹೊಸ ಬೈಕ್ ಮೂಲಕ ಯೆಜ್ಡಿ ಕಂಪನಿಯು ಆರ್‌ಇ ಹಿಮಾಲಯನ್ ಮಾದರಿಗೆ ಭರ್ಜರಿ ಪೈಪೋಟಿ ನೀಡಲಿದೆ.

ಆರ್‌ಇ ಹಿಮಾಲಯನ್ ಮಾದರಿಗೆ ಪೈಪೋಟಿಯಾಗಿ ಯೆಜ್ಡಿ ಹೊಸ ಅಡ್ವೆಂಚರ್ ಬೈಕ್ ಬಿಡುಗಡೆ

ಯೆಜ್ಡಿ ಬ್ರ್ಯಾಂಡ್ ಅಡಿ ಕ್ಲಾಸಿಕ್ ಲೆಜೆಂಡ್ ಕಂಪನಿಯು ಗ್ರಾಹಕರ ಬೇಡಿಕೆಯಂತೆ ಯೆಜ್ಡಿ ರೋಡ್‌ಸ್ಟರ್, ಯೆಜ್ಡಿ ಸ್ಕ್ರ್ಯಾಂಬ್ಲರ್ ಮತ್ತು ಯೆಜ್ಡಿ ಅಡ್ವೆಂಚರ್ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್‌ಗಳಲ್ಲಿ ಅಡ್ವೆಂಚರ್ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 2.09 ಲಕ್ಷ ಬೆಲೆ ಹೊಂದಿದೆ.

ಯೆಜ್ಡಿ ಕಂಪನಿಯು ಹೊಸ ಅಡ್ವೆಂಚರ್ ಮಾದರಿಯನ್ನು ಒಂದೇ ವೆರಿಯೆಂಟ್‌‌ನಲ್ಲಿ ಬಿಡುಗಡೆ ಮಾಡಿದ್ದು, ಅಡ್ವೆಂಚರ್ ಮಾದರಿಯು ವಿವಿಧ ಬಣ್ಣಗಳ ಆಯ್ಕೆಗೆ ಅನುಗುಣವಾಗಿ ಆರಂಭಿಕ ಮಾದರಿಯು ರೂ. 2.09 ಲಕ್ಷ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 2.18 ಲಕ್ಷ ಬೆಲೆ ಹೊಂದಿದೆ.

ಆರ್‌ಇ ಹಿಮಾಲಯನ್ ಮಾದರಿಗೆ ಪೈಪೋಟಿಯಾಗಿ ಯೆಜ್ಡಿ ಹೊಸ ಅಡ್ವೆಂಚರ್ ಬೈಕ್ ಬಿಡುಗಡೆ

ಅಡ್ವೆಂಚರ್ ಮಾದರಿಯು ವಿಶೇಷವಾಗಿ ದೂರದ ಪ್ರಯಾಣಕ್ಕೆ ಮತ್ತು ಸಾಹಸಿ ಬೈಕ್ ರೈಡಿಂಗ್ ಅನುಭವಕ್ಕಾಗಿ ವಿಶೇಷವಾಗಿ ಅಭಿವೃದ್ದಿಗೊಳಿಸಲಾಗಿದ್ದು, ಹೊಸ ಅಡ್ವೆಂಚರ್ ಹೊಸ ಬೈಕ್ ಮಾದರಿಯು ಎಲ್ಲರ ನೀರಿಕ್ಷೆಯೆಂತೆ ಹಲವು ವೈಶಿಷ್ಟ್ಯತೆಯೊಂದಿಗೆ ಬಿಡುಗಡೆಯಾಗಿದೆ.

ಆರ್‌ಇ ಹಿಮಾಲಯನ್ ಮಾದರಿಗೆ ಪೈಪೋಟಿಯಾಗಿ ಯೆಜ್ಡಿ ಹೊಸ ಅಡ್ವೆಂಚರ್ ಬೈಕ್ ಬಿಡುಗಡೆ

ಡಬಲ್ ಕ್ರೇಡಲ್ ಚಾಸಿಸ್ ಅನ್ನು ಹೊಂದಿರುವ ಈ ಬೈಕ್ ಮಾದರಿಯು ರೋಡ್‌ಸ್ಟರ್ ಮತ್ತು ಸ್ಕ್ರ್ಯಾಂಬ್ಲರ್ ಮಾದರಿಗಳಿಂತಲೂ ಹೆಚ್ಚು ಶಕ್ತಿಶಾಲಿಯಾಗಿದ್ದು, ಅಡ್ವೆಂಚರ್ ಮಾದರಿಯಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್, ಟೈಲ್ ಲ್ಯಾಂಪ್ ಮತ್ತು ಇಂಡಿಕೇಟರ್ ಸೆಟಪ್ ನೀಡಲಾಗಿದೆ. ಹಾಗೆಯೇ ದೂರದ ಪ್ರಯಾಣಕ್ಕೆ ಅನುಕೂಲಕರವಾಗಿ ಈ ಬೈಕಿನಲ್ಲಿ ಗೊಡ್ಡ ಗಾತ್ರದ ವಿಂಡ್‌ಸ್ಕ್ರೀನ್‌ನೊಂದಿಗೆ ಫಸ್ಟ್ ಇನ್-ಸೆಗ್ಮೆಂಟ್ ವೈಶಿಷ್ಟ್ಯತೆಯ ಟಿಲ್ಟ್-ಹೊಂದಾಣಿಕೆ ಸೌಲಭ್ಯವನ್ನು ಸಹ ಪಡೆಯುತ್ತದೆ.

ಆರ್‌ಇ ಹಿಮಾಲಯನ್ ಮಾದರಿಗೆ ಪೈಪೋಟಿಯಾಗಿ ಯೆಜ್ಡಿ ಹೊಸ ಅಡ್ವೆಂಚರ್ ಬೈಕ್ ಬಿಡುಗಡೆ

ಹೊಸ ಬೈಕ್ ಮಾದರಿಯ ಆಸನಗಳು ಉತ್ತಮ ಸ್ಥಳಾವಕಾಶ ಹೊಂದಿದ್ದು, ಎಲ್‌ಸಿಡಿ ಪರದೆಗಳನ್ನು 15-ಡಿಗ್ರಿಗಳಿಗೆ ಸರಿಹೊಂದಿಸಬಹುದಾಗಿದೆ. ಹಾಗೆಯೇ ಹೊಸ ಬೈಕ್‌ಗಳಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಅಡ್ವೆಂಚರ್ ಮಾದರಿಯಲ್ಲಿ ಪ್ರಮಾಣಿತ ಸಾಧನಗಳಾಗಿವೆ.

ಆರ್‌ಇ ಹಿಮಾಲಯನ್ ಮಾದರಿಗೆ ಪೈಪೋಟಿಯಾಗಿ ಯೆಜ್ಡಿ ಹೊಸ ಅಡ್ವೆಂಚರ್ ಬೈಕ್ ಬಿಡುಗಡೆ

ಇದಲ್ಲದೆ ಹೊಸ ಅಂಡ್ವೆಂಚರ್ ಮಾದರಿಯಲ್ಲಿ ಕಂಪನಿಯು 15.1-ಲೀಟರ್ ಇಂಧನ ಟ್ಯಾಂಕ್ ಅನ್ನು ಪಡೆದುಕೊಂಡಿದ್ದು, ಇದು ಅತ್ಯುತ್ತಮ ಮೈಲೇಜ್‌ನೊಂದಿಗೆ ಅಡ್ವೆಂಚರ್ ಮಾದರಿಯಾಗಿದೆ. ಇದರಲ್ಲಿ ಸ್ಟ್ಯಾಂಡರ್ಡ್ ಫೀಚರ್ಸ್‌‌ಗಳೊಂದಿಗೆ ಜೊತೆಗೆ ಹೊಸದಾಗಿ ಹೆಡ್‌ಲೈಟ್ ಗ್ರಿಲ್, ನ್ಯಾಕಲ್ ಗಾರ್ಡ್‌ಗಳು, ಆಕ್ಸಿಲರಿ ಲೈಟಿಂಗ್, ಸೈಡ್ ಪ್ಯಾನಿಯೆರ್ಸ್, ಟಾಪ್ ಪ್ಯಾನಿಯೆರ್ಸ್ ಮತ್ತು ಆಕ್ಸಿಲರಿ ಲೈಟ್ಸ್ ಮತ್ತು ಜೆರಿ ಕ್ಯಾನ್‌ಗಳನ್ನು ಆಕ್ಸಿಸರಿಸ್ ಪ್ಯಾಕೇಜ್‌ನಲ್ಲಿ ಸೇರ್ಪಡೆಗೊಳಿಸಲಾಗಿದೆ.

ಆರ್‌ಇ ಹಿಮಾಲಯನ್ ಮಾದರಿಗೆ ಪೈಪೋಟಿಯಾಗಿ ಯೆಜ್ಡಿ ಹೊಸ ಅಡ್ವೆಂಚರ್ ಬೈಕ್ ಬಿಡುಗಡೆ

ಹೊಸ ಅಡ್ವೆಂಚರ್ ಮೋಟಾರ್‌ಸೈಕಲ್‌‌ನಲ್ಲಿ ಫ್ರೀ ಲೋಡ್ ಹೊಂದಾಣಿಕೆಯ 180 ಎಂಎಂ ಹಿಂಬದಿಯ ಮೊನೊ-ಶಾಕ್ ಸಸ್ಷೆಷನ್‌ನೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಹೊಂದಿದ್ದು, ರೋಡ್, ಆಫ್-ರೋಡ್ ಮತ್ತು ರೈನ್ ರೈಡಿಂಗ್ ಮೋಡ್ ಹೊಂದಿದೆ.

ಆರ್‌ಇ ಹಿಮಾಲಯನ್ ಮಾದರಿಗೆ ಪೈಪೋಟಿಯಾಗಿ ಯೆಜ್ಡಿ ಹೊಸ ಅಡ್ವೆಂಚರ್ ಬೈಕ್ ಬಿಡುಗಡೆ

ಹೊಸ ಅಡ್ವೆಂಚರ್ ಮಾದರಿಯಲ್ಲಿ ಯಜ್ಡಿ ಕಂಪನಿಯು 220 ಎಂಎಂ ಗ್ರೌಂಡ್ ಕ್ಲಿಯರೆನ್ಸ್‌ ನೀಡಿದ್ದು,ಇದು ಹೆಚ್ಚಿನ ಮಟ್ಟದ ಆಫ್-ರೋಡ್ ಸಾಮರ್ಥ್ಯದೊಂದಿಗೆ 334ಸಿಸಿ, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಪಡೆದುಕೊಂಡಿದೆ.

ಆರ್‌ಇ ಹಿಮಾಲಯನ್ ಮಾದರಿಗೆ ಪೈಪೋಟಿಯಾಗಿ ಯೆಜ್ಡಿ ಹೊಸ ಅಡ್ವೆಂಚರ್ ಬೈಕ್ ಬಿಡುಗಡೆ

ಹೊಸ ಅಡ್ವೆಂಚರ್ ಮಾದರಿಯು 334ಸಿಸಿ, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್‌ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆ ಹೊಂದಿರಲಿದ್ದು, 29.7 ಬಿಎಚ್‌ಪಿ ಮತ್ತು 29.9 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೊಸ ಬೈಕ್ ಮಾದರಿಯಲ್ಲಿ ಮೇಲಿನ ಎರಡು ಸಾಮಾನ್ಯ ಮಾದರಿಗಳು ಡ್ಯುಯಲ್ ಎಕ್ಸಾಸ್ಟ್ ಹೊಂದಿದ್ದರೆ ಅಡ್ವೆಂಚರ್ ಮಾದರಿಯು ಮಾತ್ರ ಸಿಂಗಲ್ ಸೈಡ್ ಎಕ್ಸಾಸ್ಟ್ ಹೊಂದಿದ್ದು, ಹೊಸ ಬೈಕ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 2,09,900 ಬೆಲೆ ಹೊಂದಿರಲಿದೆ.

ಆರ್‌ಇ ಹಿಮಾಲಯನ್ ಮಾದರಿಗೆ ಪೈಪೋಟಿಯಾಗಿ ಯೆಜ್ಡಿ ಹೊಸ ಅಡ್ವೆಂಚರ್ ಬೈಕ್ ಬಿಡುಗಡೆ

ಈ ಮೂಲಕ ಕ್ಲಾಸಿಕ್ ಲೆಜೆಂಡ್ ಕಂಪನಿಯು ಯೆಜ್ಡಿ ಹೊಸ ಮಾದರಿಯ ಮೂಲಕ ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರಮುಖ ಕ್ಲಾಸಿಕ್, ಅಡ್ವೆಂಚರ್ ಬೈಕ್ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುವ ತವಕದಲ್ಲಿದ್ದು, ಮುಂಬರುವ ದಿನಗಳಲ್ಲಿ ಹೊಸ ಬೈಕ್ ಮಾದರಿಗಳು ಯಾವ ರೀತಿ ಬೇಡಿಕೆ ಪಡೆದುಕೊಳ್ಳಲಿವೆ ಎನ್ನುವುದನ್ನು ಕಾಯ್ದುನೋಡಬೇಕಿದೆ.

Most Read Articles

Kannada
Read more on ಯೆಜ್ಡಿ yezdi
English summary
Yezdi adventure india launch price rs 2 09 lakh details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X