ಸ್ಮಾರ್ಟ್ ಕೀ ಫೀಚರ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಜನಪ್ರಿಯ ಹೋಂಡಾ ಆಕ್ಟಿವಾ ಸ್ಕೂಟರ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಆಕ್ಟಿವಾ 6G ಸ್ಮಾರ್ಟ್ ಕೀ ವೆರಿಯೆಂಟ್ ಅನ್ನು ಬಿಡುಗಡೆಗೊಳಿಸಿತು. ಅತ್ಯಾಧುನಿಕ ಫೀಚರ್ ಹೊಂದಿರುವ ಹೊಸ ಹೋಂಡಾ ಆಕ್ಟಿವಾ 6G ಸ್ಮಾರ್ಟ್ ಕೀ ವೆರಿಯೆಂಟ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಬೆಲೆ
ಜಪಾನಿನ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ಮೋಟಾರ್ ಸೈಕಲ್ ತನ್ನ ಆಕ್ಟಿವಾ 6G ಸ್ಮಾರ್ಟ್ ಕೀ ವೆರಿಯೆಂಟ್ ಅನ್ನು ದೆಹಲಿ ಎಕ್ಸ್ ಶೋರೂಂ ಪ್ರಕಾರ, ರೂ.80,537 ಬೆಲೆಯಲ್ಲಿ ಬಿಡುಗಡೆಗೊಳಿಸಿದೆ. ಇನ್ನು ಹೋಂಡಾ ಆಕ್ಟಿವಾ ಸ್ಕೂಟರ್ ಇತರ ರೂಪಾಂತರಗಳ ಬೆಲೆಗಳು, ಹೋಂಡಾ ಡಿಲಕ್ಸ್ ರೂಪಾಂತರದ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 77,036 ಆಗಿದೆ. ಇದು ಹೊಸ ಸ್ಮಾರ್ಟ್ ಕೀ ವೆರಿಯೆಂಟ್ ಬೆಲೆಗಿಂತ ರೂ.3,501 ಕಡಿಮೆಯಾಗಿದೆ.

ಎಂಜಿನ್
ಈ ಹೊಸ ಹೋಂಡಾ ಆಕ್ಟಿವಾ 6G ಸ್ಮಾರ್ಟ್ ಕೀ ರೂಪಂತರದಲ್ಲಿ ಆಕ್ಟಿವಾ ಸರಣಿಯಲ್ಲಿಯಲ್ಲಿರುವ ಇತರ ರೂಪಾಂತರಗಳಂತೆಯೇ ಅದೇ ಎಂಜಿನ್ ಅನ್ನು ಮುಂದುವರೆಸುತ್ತದೆ. ಇದರರ್ಥ ಈ ಹೊಸ ಹೋಂಡಾ ಆಕ್ಟಿವಾ 6G ಸ್ಮಾರ್ಟ್ ಕೀ ರೂಪಾಂತರದಲ್ಲಿ ಅದೇ 109.51 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಳಾಗಿದೆ. ಈ ಎಂಜಿನ್ 7.7 ಬಿಹೆಚ್‍ಪಿ ಪವರ್ ಮತ್ತು 8.9 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಫೀಚರ್ಸ್
ಹೊಸ ಹೋಂಡಾ ಆಕ್ಟಿವಾ 6G ಸ್ಮಾರ್ಟ್ ಕೀ ರೂಪಂತರವು ಅತ್ಯಾಧುನಿಕ ಫಿಚರ್ಸ್ ಗಳೊಂದಿಗೆ ಬರುತ್ತಿದೆ. ಈ ಹೊಸ ರೂಪಾಂತರವು ಹೆಸರಿಗೆ ತಕ್ಕಂತೆ ಸ್ಮಾರ್ಟ್ ಫೀಚರ್ಸ್ ಗಳನ್ನು ಹೊಂದಿವೆ. ಈ ಹೊಸ ರೂಪಾಂತರದಲ್ಲಿರುವ ಫಿಚರ್ಸ್ ಗಳಂದರೆ, ಸ್ಮಾರ್ಟ್ ಅನ್ ಲಾಕ್, ಸ್ಮಾರ್ಟ್ ಫ್ರೈಂಡ್ ಮತ್ತು ಸ್ಮಾರ್ಟ್ ಸೇಫ್ ನಂತಹ ಫೀಚರ್ಸ್ ಗಳನ್ನು ಸಕ್ರಿಯಗೊಳಿಸುವ ಸ್ಮಾರ್ಟ್ ಕೀಯೊಂದಿಗೆ ಬರುತ್ತದೆ. ಈ ಸ್ಮಾರ್ಟ್ ಫೀಚರ್ಸ್ ಗಳು ಬಳಕೆದಾರರಿಗೆ ಉತ್ತಮ ಪ್ರಯೋಜನೆಕಾರಿಯಾಗಿದೆ.

ಈ ಹೊಸ ಸ್ಮಾರ್ಟ್ ಕೀ ರೂಪಾಂತರದಲ್ಲಿ, ಹ್ಯಾಂಡಲ್ ಬಾರ್, ಸ್ಟೋರೇಜ್ ಮತ್ತು ಫ್ಯೂಯಲ್ ಪಿಲ್ಲರ್ ಕ್ಯಾಪ್ ಅನ್ನು ರಿಮೋಟ್ ಬಳಸಿ ಲಾಕ್ ಮತ್ತು ಅನ್ ಲಾಕ್ ಅನ್ನು ಮಾಡಬಹುದಾಗಿದೆ. ಈ ಸ್ಮಾರ್ಟ್ ಸೇಫ್ ಫೀಚರ್ ಕಳ್ಳತನದಿಂದ ರಕ್ಷಿಸಕೊಳ್ಳಬಹುದು. ಇನ್ನು ಉಳಿದಂತೆ ಆಕ್ಟಿವಾ ಸ್ಕೂಟರ್ ನಲ್ಲಿರುವ ಇತರ ಎಲ್ಲಾ ಪೀಚರ್ಸ್ ಗಳನ್ನು ಒಳಗೊಂಡಿದೆ. ಈ ಹೊಸ ಆಕ್ಟಿವಾ 6G ಸ್ಮಾರ್ಟ್ ಕೀ ರೂಪಂತರವು ಹೊಸ ಅತ್ಯಾಧುನಿಕ ಪೀಚರ್ಸ್ ಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತದೆ.

ಇನ್ನು ಈ ಹೊಸ ಹೋಂಡಾ ಆಕ್ಟಿವಾ 6G ಸ್ಮಾರ್ಟ್ ಕೀ ರೂಪಂತರದಲ್ಲಿ ಸ್ಮಾರ್ಟ್ ಫೈಂಡ್ ಫೀಚರ್ಸ್ ಅನ್ನು ಹೊಂದಿದ್ದು, ಈ ಫೀಚರ್ ಮೂಲಕ ಬಳಕೆದಾರರಿಗೆ 10 ಮೀಟರ್ ಗಳಷ್ಟು ದೂರದಿಂದ ಸುಲಭವಾಗಿ ತಮ್ಮ ಸ್ಕೂಟರ್ ಅನ್ನು ಪತ್ತೆಹಚ್ಚಬಹುದು. ಈ ಪೀಚರ್ ಹೆಚ್ಚು ಉಪಯೋಗಕ್ಕೆ ಬರುವುದು ದೊಡ್ಡ ಮಾಲ್ ಅಥವಾ ದೊಡ್ಡ ಪಾರ್ಕಿಂಗ್ ಲಾಟ್ ಗಳಲ್ಲಿ ಆಗಿದೆ. ಇನ್ನು ಸ್ಮಾರ್ಟ್ ಸ್ಟಾರ್ಟ್ ಫೀಚರ್ ಕೂಡ ಹೆಚ್ಚು ಉಪಯುಕ್ತ ಫೀಚರ್ ಆಗಿದೆ. ಈ ಫೀಚರ್ ಮೂಲಕ ಬಳಕೆದಾರರು ಸ್ಕೂಟರ್ ಅನ್ನು ದೂರದಿಂದಲೇ ಸ್ಟಾರ್ಟ್ ಮಾಡಬಹುದು.

ಹೊಸ ಹೋಂಡಾ ಆಕ್ಟಿವಾ 6G ಸ್ಮಾರ್ಟ್ ಕೀ ರೂಪಾಂತರವು 6 ವಿಭಿನ್ನ ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ ಮತ್ತು ಆಸಕ್ತ ಗ್ರಾಹಕರು ರೆಬೆಲ್ ರೆಡ್ ಮೆಟಾಲಿಕ್, ಪಿಯರ್ ಸೈರನ್ ಬ್ಲೂ, ಡೀಸೆಂಟ್ ಬ್ಲೂ, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಪರ್ಲ್ ಪ್ರೆಶಿಯಸ್ ವೈಟ್ ಮತ್ತು ಬ್ಲ್ಯಾಕ್ ಬಣ್ಣಗಳನ್ನು ಆಯ್ಕೆ ಮಾಡಬಹುದು. ಈ ಬಣ್ಣ ಆಯ್ಕೆಗಳು ಹೋಂಡಾ ಆಕ್ಟಿವಾ ಇತರ ರೂಪಾಂತರಗಳಲ್ಲಿ ಲಭ್ಯವಿದೆ.

ಬಣ್ಣಗಳು
ಈ ಹೊಸ ಹೋಂಡಾ ಆಕ್ಟಿವಾ 6G ಸ್ಮಾರ್ಟ್ ಕೀ ರೂಪಂತರವು 6 ರೀತಿಯ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಈ ಸ್ಕೂಟರ್ ರೆಬೆಲ್ ರೆಡ್ ಮೆಟಾಲಿಕ್, ಪಿಯರ್ ಸೈರನ್ ಬ್ಲೂ, ಡೀಸೆಂಟ್ ಬ್ಲೂ, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಪರ್ಲ್ ಪ್ರೆಶಿಯಸ್ ವೈಟ್ ಮತ್ತು ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಇದರಲ್ಲಿ ಗ್ರಾಹಕರು ತಮ್ಮ ಮೆಚ್ಚಿನ ಬಣ್ಣದ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಬಣ್ಣಗಳ ಆಯ್ಕೆಯು ಹೋಂಡಾ ಆಕ್ಟಿವಾ ಸ್ಕೂಟರ್ ಇತರ ರೂಪಾಂತರಗಳಲ್ಲಿಯು ಲಭ್ಯವಿದೆ,

ಹೊಸ ಹೋಂಡಾ ಆಕ್ಟಿವಾ 6G ಸ್ಮಾರ್ಟ್ ಕೀ ರೂಪಂತರದ ಬಿಡುಗಡೆಯೊಂದಿಗೆ, ಆಕ್ಟಿವಾ ಸರಣಿಯು ಮತ್ತಷ್ಟು ವಿಸ್ತರಣೆಯಾಗಿದೆ. ಹೋಂಡಾ ಆಕ್ಟಿವಾ ಹೊಸ ಸ್ಮಾರ್ಟ್ ಕೀ ರೂಪಾಂತರದೊಂದಿಗೆ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆಯಲಿದೆ. ಇನ್ನು ಹೊಸ ಸ್ಮಾರ್ಟ್ ಕೀ ರೂಪಾಂತರದ ಮೂಲಕ ಇತರ ಸ್ಕೂಟರ್ ಮಾದರಿಗೆ ಪೈಪೋಟಿ ನೀಡುವುದರೊಂದಿಗೆ ಹೆಚ್ಚು ಯುವ ಗ್ರಾಹಕರನ್ನು ಸೆಳೆಯಲು ನೆರವಾಗುತ್ತದೆ. ಹೋಂಡಾ ಆಕ್ಟಿವಾ ಭಾರತೀಯ ಮಾರುಕಟ್ಟೆಯಲ್ಲಿ ಹಲವು ವರ್ಷಗಳಿಂದ ಅತಿ ಹೆಚು ಮಾರಾಟವಾಗುವ ಸ್ಕೂಟರ್ ಆಗಿದೆ.

Most Read Articles

Kannada
English summary
Honda activa 6g smart key top things details in kannada
Story first published: Wednesday, January 25, 2023, 11:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X