ಸ್ವೀಡಿಷ್ ಬ್ರಾಂಡ್ ಖರೀದಿಗೆ ಬಜಾಜ್ ಕೆಟಿಎಂ ಹೊಂಚು

Posted By:

ಸ್ವೀಡಿಷ್‌ನ ಜನಪ್ರಿಯ ಮೋಟಾರ್‌ಸೈಕಲ್ ಬ್ರಾಂಡ್ ಆಗಿರುವ ಹಸ್ಕ್ವಾರ್ನಾ (Husqvarna) ಆಫ್ ರೋಡ್ ಬೈಕಿಂಗ್‌ಗೆ ಹೆಸರಾಂತರಾಗಿದೆ. ಪ್ರಸ್ತುತ ಈ ಸೂಪರ್ ಬೈಕ್‌ಗಳು ಶೀಘ್ರದಲ್ಲೇ ಇಂಡಿಯನ್ ಟಚ್ ಪಡೆಯಲಿದೆ. ಅದೇಗೆ ಅಂತೀರಾ..? ಬಿಎಂಡಬ್ಲ್ಯು ಮೋಟರ್ಡ್ ಮಾಲಿಕತ್ವ ಹೊಂದಿರುವ ಈ ಮೋಟಾರ್‌ಸೈಕಲ್ ಬ್ರಾಂಡ್ ಮಾರಾಟಕ್ಕಿದ್ದು, ಬಜಾಜ್ ಆಟೋ ಮಾಲಿಕತ್ವ ಹೊಂದಿರುವ ಕೆಟಿಎಂ ಖರೀದಿಸುವ ಸಾಧ್ಯತೆಗಳಿವೆ.

ಬಿಎಂಡಬ್ಲ್ಯು ಮೋಟರ್ಡ್ (BMW Motorrad), ಸ್ವೀಡಿಷ್ ಬ್ರಾಂಡ್ ಹಸ್ಕ್ವಾರ್ನಾ ಖರೀದಿಸಿದ ಕೆಲವೇ ವರ್ಷಗಳಲ್ಲಿ ಮಾರಾಟಕ್ಕಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ. 2008ನೇ ಇಸವಿಯಲ್ಲಿ ಎಂವಿ ಆಗಸ್ಟಾದಿಂದ (MV Augusta) ಹಸ್ಕ್ವಾರ್ನಾ ಖರೀದಿಸಿದ್ದ ಬಿಎಂಡಬ್ಲ್ಯು ಇದರ ಉತ್ಪಾದನೆಗಾಗಿ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡಿತ್ತು.

ಮೂಲಗಳ ಪ್ರಕಾರ ನೂತನ ಬ್ರಾಂಡ್ ಉತ್ಪಾದನೆ, ಸಂಶೋಧನೆ ಹಾಗೂ ಅಭಿವೃದ್ಧಿಗಾಗಿ ಬಿಎಂಡಬ್ಲ್ಯು ಸಾಕಷ್ಟು ಸಮಯ ವ್ಯಯ ಮಾಡಿತ್ತು. ಹಾಗಿದ್ದರೂ ಯಾಕೆ ಮಾರಾಟ ಮಾಡಲು ಆಲೋಚಿಸುತ್ತಿದೆ ಎಂಬುದು ನಿಗೂಢವಾಗಿದೆ.

ಅಂದ ಹಾಗೆ ಕೆಟಿಎಂ-ಹಸ್ಕ್ವಾರ್ನಾ ವ್ಯವಹಾರ ಬಜಾಜ್ ಆಟೋ ಪಾಲಿಗೆ ಧನಾತ್ಮಕ ಪ್ರಭಾವ ಬೀರುವ ಸಾಧ್ಯತೆಯಿದೆ. ಕೆಟಿಎಂ ಮಾಲಿಕತ್ವ ಮೂಲಕ ಬಜಾಜ್ ಈಗಾಗಲೇ ಸಾಕಷ್ಟು ಮುನ್ನಡೆ ಸಾಧಿಸಿವೆ. ಭಾರತದಲ್ಲಿ ಕೆಟಿಎಂ ಬೈಕ್‌ಗಳನ್ನು ಕೇವಲ ಉತ್ಪಾದನೆ ಮಾತ್ರ ಮಾಡಲಾಗುತ್ತಿಲ್ಲ, ಬದಲಾಗಿ ವಿದೇಶಗಳಿಗೂ ರಫ್ತು ಮಾಡಲಾಗುತ್ತಿದೆ. ಈ ಮೂಲಕ ತಾಂತ್ರಿಕತೆಯಲ್ಲಿ ಗಮನಾರ್ಹ ಲಾಭ ಪಡೆಯಿತ್ತಲ್ಲದೆ ಪಲ್ಸರ್ 200ಎನ್‌ಎಸ್‌ ಆವೃತ್ತಿಯಲ್ಲಿ ಇದು ಕಂಡುಬಂದಿತ್ತು.

ಒಟ್ಟಿನಲ್ಲಿ ಹಸ್ಕ್ವಾರ್ನಾ ಖರೀದಿಯಾದಲ್ಲಿ ಇನ್ನು ಮುಂದೆ ದೇಶದ ಕೆಟಿಎಂ ಶೋ ರೂಂಗಳಲ್ಲಿ ಹಸ್ಕ್ವಾರ್ನಾ ಬೈಕ್‌ಗಳನ್ನು ನೋಡಸಿಗಬಹುದು. ಎಲ್ಲದಕ್ಕೂ ಮುಂದಿನ ಬೆಳವಣಿಗಳನ್ನು ಕಾದು ನೋಡಬೇಕಾಗಿದೆ.

ಹಾಗಿದ್ದರೆ ಬನ್ನಿ ಕೆಳಗಡೆಯ ಫೋಟೊ ಫೀಚರ್ ಮೂಲಕ ಹಸ್ಕ್ವಾರ್ನಾ ಬೈಕ್‌ಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಪ್ರಯತ್ನಿಸೋಣವೇ...

Husqvarna Nuda900R

Husqvarna Nuda900R

Husqvarna Nuda900 Ra

Husqvarna Nuda900 Ra

Husqvarna CR65c

Husqvarna CR65c

Husqvarna Strada 650

Husqvarna Strada 650

Husqvarna TC250

Husqvarna TC250

Husqvarna TC499

Husqvarna TC499

Husqvarna TE449

Husqvarna TE449

Husqvarna TXC250

Husqvarna TXC250

Husqvarna TXC511

Husqvarna TXC511

Husqvarna WR250b

Husqvarna WR250b

Husqvarna WRE125

Husqvarna WRE125

English summary
Husqvarna, the Swedish motorcycle brand famous for its off-road and super motor bikes will soon get an Indian touch. Reports say the BMW Motorrad owned motorcycle brand is for sale and KTM, which is part owned by Bajaj Auto is in advanced talks to buy Husqvarna
Story first published: Saturday, February 2, 2013, 12:05 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark