ಅತ್ಯಂತ ದುಬಾರಿ ವೆಸ್ಪಾ ಎಲೆಗಂಟ್ ಸ್ಕೂಟರ್ ಅನಾವರಣ

Written By:

ವೆಸ್ಪಾ ಎಕ್ಸ್‌ಕ್ಲೂಸಿವ್ ಬಿಡುಗಡೆ ಮಾಡಿರುವ ಕೆಲವೇ ವಾರಗಳಲ್ಲಿ ಮಗದೊಂದು ಸಿಹಿ ಸುದ್ದಿ ಬಿತ್ತರಿಸಿರುವ ಇಟಲಿ ಮೂಲದ ಐಕಾನಿಕ್ ವಾಹನ ತಯಾರಕ ಸಂಸ್ಥೆಯಾಗಿರುವ ಪಿಯಾಜಿಯೊ, ಮಗದೊಂದು ಅತ್ಯಾಕರ್ಷಕ ಪ್ರೀಮಿಯಂ ಸ್ಕೂಟರ್ ಎಲೆಗಂಟ್ ಸೀಮಿತ ಆವೃತ್ತಿಯನ್ನು ಭಾರತದಲ್ಲಿ ಅನಾವರಣಗೊಳಿಸಿದೆ.

ಹೊಸ ವೆಸ್ಪಾ ಎಲೆಗಂಟ್ ಪ್ರೀಮಿಯಂ ಸ್ಕೂಟರ್ ಸೆಪ್ಟೆಂಬರ್ 20ರಂದು ಅಧಿಕೃತವಾಗಿ ಬಿಡುಗಡೆಯಾಗಲಿದ್ದು, ಇದೇ ಸಂದರ್ಭದಲ್ಲಿ ವಿತರಣೆ ಪ್ರಕ್ರಿಯೆ ಸಹ ಆರಂಭವಾಗಲಿದೆ ಎಂದು ಸಂಸ್ಥೆಯು ಪುಣೆಯಲ್ಲಿ ಇಂದು (ಮಂಗಳವಾರ) ಏರ್ಪಡಿಸಿದ್ದ ಅನಾವರಣ ಕಾರ್ಯಕ್ರಮದ ವೇಳೆ ಸ್ಪಷ್ಟಪಡಿಸಿದೆ.

ಅತ್ಯಂತ ದುಬಾರಿ ವೆಸ್ಪಾ ಎಲೆಗಂಟ್ ಸ್ಕೂಟರ್ ಅನಾವರಣ

ಮುಂಬರುವ ಹಬ್ಬದ ಆವೃತ್ತಿಯನ್ನು ಗಮನದಲ್ಲಿಟ್ಟುಕೊಂಡು ಎಲೆಗಂಟ್ ಪ್ರೀಮಿಯಂ ಸ್ಕೂಟರ್ ಪರಿಚಯಿಸಲಾಗಿದೆ. ಇದು ಸೀಮಿತ ಯುನಿಟ್‌ಗಳಲ್ಲಿ ಮಾತ್ರ ಲಭ್ಯವಾಗಲಿದ್ದು, ದೇಶದಲ್ಲಿ ಮಾರಾಟವಾಗಲಿರುವ ಅತ್ಯಂತ ದುಬಾರಿ ವೆಸ್ಪಾ ಸ್ಕೂಟರ್ ಎನಿಸಿಕೊಳ್ಳಲಿದ್ದು, ದರ ಮಾಹಿತಿ ಬಿಡುಗಡೆ ವೇಳೆಯಷ್ಟೇ ಬಹಿರಂಗವಾಗಲಿದೆ.

ಅತ್ಯಂತ ದುಬಾರಿ ವೆಸ್ಪಾ ಎಲೆಗಂಟ್ ಸ್ಕೂಟರ್ ಅನಾವರಣ

ಮೂಲತ: ವೆಸ್ಪಾ ಎಲೆಗಂಟ್ ಮಾದರಿಯು ವಿಎಕ್ಸ್‌ ಮಾದರಿಯ ಕಾಸ್ಮೆಟಿಕ್ ರೂಪವಾಗಿದ್ದು, ವಿಶೇಷವಾಗಿಯೂ ಭಾರತ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡು ತಯಾರಿಸಲಾಗಿದೆ.

ವಿಶಿಷ್ಟತೆಗಳು

ವಿಶಿಷ್ಟತೆಗಳು

ಬೀಜ್ ಮೆರಗಿನ ವಿಭಜಿತ ಸೀಟು,

ಹಿಂದುಗಡೆ ಕ್ರೋಮ್ ಸ್ಪರ್ಶದ ಸಹ ಸವಾರ ಗ್ರಾಬ್ ರೈಲ್,

ಎಲೆಗಂಟ್ ಬ್ಯಾಡ್ಜ್

ಲಗ್ಗೇಜ್‌ಗಾಗಿ ಮುಂದುಗಡೆ ಮಡಚಬಹುದಾದ ಕ್ಯಾರಿಯರ್

ವಿಶೇಷ ಬಣ್ಣಗಳು (ಪಿಯರ್ಲ್ ವೈಟ್, ಮರಕೆಖ್ ಬ್ರೌನ್)

ವೃತ್ತಾಕಾರದ ಹೆಡ್ ಲೈಟ್,

ಟ್ಯೂಬ್‌ಲೆಸ್ ಚಕ್ರಗಳು

ಅತ್ಯಂತ ದುಬಾರಿ ವೆಸ್ಪಾ ಎಲೆಗಂಟ್ ಸ್ಕೂಟರ್ ಅನಾವರಣ

ಅಂದ ಹಾಗೆ ತಾಂತ್ರಿಕ ಮಾನದಂಡಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ. ಇದು 4 ಸ್ಟ್ರೋಕ್, ಏರ್ ಕೂಲ್ಡ್ 125 ಸಿಸಿ ಎಂಜಿನ್‌ನಿಂದ ನಿಯಂತ್ರಿಸ್ಪಡಲಿದ್ದು 10 ಪಿಎಸ್ ಪವರ್ (10.06 ಎನ್‌ಎಂ ಟಾರ್ಕ್) ಹೊಂದಿರಲಿದೆ. ಅಂತೆಯೇ ಸಿವಿಟಿ ಟ್ರಾನ್ಸ್‌ಮಿಷನ್ ಮುಖಾಂತರ ಹಿಂದಿನ ಚಕ್ರಗಳಿಗೆ ಶಕ್ತಿ ರವಾನೆಯಾಗಲಿದೆ.

ಅತ್ಯಂತ ದುಬಾರಿ ವೆಸ್ಪಾ ಎಲೆಗಂಟ್ ಸ್ಕೂಟರ್ ಅನಾವರಣ

ಅದೇ ರೀತಿ ಮುಂದುಗಡೆ ಸಿಂಗಲ್ ಸೈಡಡ್ ಟ್ರೈಲಿಂಗ್ ಲಿಂಕ್ ಮತ್ತು ಹಿಂದುಗಡೆ ಸಿಂಗಲ್ ಸೈಡಡ್ ಕಾಯಿಲ್ ಸ್ಪ್ರಿಂಗ್ ಅಂತೆಯೇ ಮುಂದುಗಡೆ ಹಾಗೂ ಹಿಂದುಗಡೆ ಡ್ರಮ್ ಬ್ರೇಕ್ ಸೌಲಭ್ಯ ಇರಲಿದೆ.

ಅತ್ಯಂತ ದುಬಾರಿ ವೆಸ್ಪಾ ಎಲೆಗಂಟ್ ಸ್ಕೂಟರ್ ಅನಾವರಣ

ಒಟ್ಟಿನಲ್ಲಿ ಇದು ದೇಶಕ್ಕೆ ಪರಿಚಯವಾಗುತ್ತಿರುವ ಐದನೇ ಹಾಗೂ ಎರಡನೇ ವೆಸ್ಪಾ ಸೀಮಿತ ಆವೃತ್ತಿಯ ಸ್ಕೂಟರ್ ಆಗಿರಲಿದೆ. ಇದುವರೆಗೆ ವೆಸ್ಪಾ ಎಲ್‌ಎಕ್ಸ್, ವೆಸ್ಪಾ ವಿಎಕ್ಸ್, ವೆಸ್ಪಾ ಎಸ್ ಮತ್ತು ವೆಸ್ಪಾ ಎಕ್ಸ್‌ಕ್ಲೂಸಿವ್ ಸೀಮಿತ ಆವೃತ್ತಿಯ ಸ್ಕೂಟರುಗಳನ್ನು ಬಿಡುಗಡೆ ಮಾಡಲಾಗಿದೆ.

English summary
Limited Edition ‘Vespa Elegante’ sooter revealed at pune.
Story first published: Tuesday, September 16, 2014, 14:30 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark