ಮಹೀಂದ್ರ ಎಲೆಕ್ಟ್ರಿಕ್ ಸ್ಕೂಟರ್ 'ಜಿನ್ಜಿ' ಭಾರತಕ್ಕೂ ಬರುತ್ತಾ?

By Nagaraja

ಎಲ್ಲ ಹೊಸತನದಿಂದ ಕೂಡಿದ 'ಮಹೀಂದ್ರ ಜಿನ್ಜಿ' (GenZe) ಎಲೆಕ್ಟ್ರಿಕ್ ಸ್ಕೂಟರ್ ಇನ್ನೇನು ಕೆಲವೇ ತಿಂಗಳಲ್ಲಿ ಅಮೆರಿಕ ಮಾರುಕಟ್ಟೆಯನ್ನು ತಲುಪಲಿದೆ. ವರದಿಗಳ ಪ್ರಕಾರ ಮಹೀಂದ್ರ ಎಲೆಕ್ಟ್ರಿಕ್ ಸ್ಕೂಟರ್ ಪ್ರಸಕ್ತ ಸಾಲಿನ ಮಧ್ಯಂತರ ಅವಧಿಯಲ್ಲಿ ಅಮೆರಿಕ ಪ್ರವೇಶಿಸಲಿದೆ.

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಅಮೆರಿಕದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಜಿನ್ಜಿ, ಕ್ಯಾಲಿಫೋರ್ನಿಯಾದ ಪಾಲೊ ಅಲ್ಟೊದಲ್ಲಿ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿತ್ತು. ಜಾಗತಿಕ ಹಸಿರು ವಾಹನಗಳಲ್ಲಿ ಗುರುತಿಸಿಕೊಂಡಿರುವ ಮಹೀಂದ್ರ ಜಿನ್ಜಿ ಹಗುರ ಭಾರದ ವಿದ್ಯುತ್ ಚಾಲಿತ ಸ್ಕೂಟರ್ ಆಗಿದೆ. ಇದು ದೈನಂದಿನ ಬಳಕೆಗೆ ಹೇಳಿ ಮಾಡಿಸಿದಂತಿದೆ.

ಮಹೀಂದ್ರ ಎಲೆಕ್ಟ್ರಿಕ್ ಸ್ಕೂಟರ್ 'ಜಿನ್ಜಿ' ಭಾರತಕ್ಕೂ ಬರುತ್ತಾ?

ಸದ್ಯ ಅಮೆರಿಕಕ್ಕೆ ಪರಿಚಯವಾಗಿರುವ ಜಿನ್ಜಿ ನಿಕಟ ಭವಿಷ್ಯದಲ್ಲೇ ಭಾರತ ಸೇರಿದಂತೆ ಚೀನಾ ರಾಷ್ಟ್ರಗಳನ್ನು ಪ್ರವೇಶಿಸುವ ಸಾಧ್ಯತೆಯಿದೆ.

ಮಹೀಂದ್ರ ಎಲೆಕ್ಟ್ರಿಕ್ ಸ್ಕೂಟರ್ 'ಜಿನ್ಜಿ' ಭಾರತಕ್ಕೂ ಬರುತ್ತಾ?

ಅಂದ ಹಾಗೆ ಮಹೀಂದ್ರ ಜಿನ್ಜಿ ಎಂಬುದು ಒಂದು ಸೀಟಿನ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ಹಿಂದಿನ ಸೀಟಿನ ಬದಲಾಗಿ ಬೃಹತಾಕಾರದ ಸ್ಟೋರೆಜ್ ಪ್ರದೇಶ ನೀಡಲಾಗಿದೆ.

ಮಹೀಂದ್ರ ಎಲೆಕ್ಟ್ರಿಕ್ ಸ್ಕೂಟರ್ 'ಜಿನ್ಜಿ' ಭಾರತಕ್ಕೂ ಬರುತ್ತಾ?

ನಿಮ್ಮ ದೈನಂದಿಗಳ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಈ ಬಕೆಟ್ ಗಾತ್ರದ ಸ್ಟೋರೆಜ್ ಜಾಗ ಸಾಕಾಗಲಿದೆ. ಇದರಲ್ಲಿ ತರಕಾರಿಯಿಂದ ಹಿಡಿದು ಸಣ್ಣ ಪ್ರಮಾಣದ ಲಗ್ಗೇಜ್ ಬ್ಯಾಗ್ ಕೂಡಾ ಲಗತ್ತಿಸಬಹುದು. ಅಂದರೆ ಸಿಟಿ ಪ್ರದೇಶದ ಚಾಲನೆಯಲ್ಲಿ ಪರಿಪೂರ್ಣವೆನಿಸಲಿದೆ.

ಮಹೀಂದ್ರ ಎಲೆಕ್ಟ್ರಿಕ್ ಸ್ಕೂಟರ್ 'ಜಿನ್ಜಿ' ಭಾರತಕ್ಕೂ ಬರುತ್ತಾ?

ಅಷ್ಟೇ ಅಲ್ಲ, ಸೀಟಿನ ಅಡಿಯಲ್ಲೂ ಲ್ಯಾಪ್‌ಟಾಪ್ ಹಾಗೂ ಸ್ಮಾರ್ಟ್ ಫೋನ್ ಇಡಬಹುದಾಗಿದೆ. ಇದೇ ಸಂದರ್ಭದಲ್ಲಿ ಯುಎಸ್‌ಬಿ ಪೋರ್ಟ್ ಮುಖಾಂತರ ಚಾರ್ಜ್ ಕೂಡಾ ಮಾಡಿಸಬಹುದು.

ಮಹೀಂದ್ರ ಎಲೆಕ್ಟ್ರಿಕ್ ಸ್ಕೂಟರ್ 'ಜಿನ್ಜಿ' ಭಾರತಕ್ಕೂ ಬರುತ್ತಾ?

ಇಲ್ಲಿ ಸಾಂಪ್ರದಾಯಿಕ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಬದಲಾಗಿ ವಾಟರ್ ಫ್ರೂಪ್, 7 ಇಂಚಿನ ಟಚ್ ಸ್ಕ್ರೀನ್ ಡಿಸ್‌ಪ್ಲೇ ನೋಡಬಹುದಾಗಿದೆ. ಬ್ಲೂಟೂತ್ ಸಂಪರ್ಕಿತ ಡಿಸ್‌ಪ್ಲೇ ಪರದೆಯಲ್ಲಿ ಬ್ಯಾಟರಿ ಚಾರ್ಜ್ ಸಹಿತ ಇನ್ನಿತರ ಅಗತ್ಯ ಮಾಹಿತಿಗಳನ್ನು ಕಲೆ ಹಾಕಬಹುದಾಗಿದೆ.

ಮಹೀಂದ್ರ ಎಲೆಕ್ಟ್ರಿಕ್ ಸ್ಕೂಟರ್ 'ಜಿನ್ಜಿ' ಭಾರತಕ್ಕೂ ಬರುತ್ತಾ?

ಹಾಗಿದ್ದರೂ ತಾಂತ್ರಿಕ ವೈಶಿಷ್ಟ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ಮಹೀಂದ್ರ ಬಹಿರಂಗಪಡಿಸಿಲ್ಲ. ಇದು ಲಿಥಿಯಂ ಇಯಾನ್ ಬ್ಯಾಟರಿಯಿಂದ ನಿಯಂತ್ರಿಸಲ್ಪಡುವ ಸಾಧ್ಯತೆಯಿದೆ. ಇದರ ಸಣ್ಣದಾದ 1.4 ಕೆಡಬ್ಲ್ಯು ಎಲೆಕ್ಟ್ರಿಕ್ ಮೋಟಾರು ಗಂಟೆಗೆ 50 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಮಹೀಂದ್ರ ಎಲೆಕ್ಟ್ರಿಕ್ ಸ್ಕೂಟರ್ 'ಜಿನ್ಜಿ' ಭಾರತಕ್ಕೂ ಬರುತ್ತಾ?

ಅಂತಿಮವಾಗಿ ದರದ ಬಗ್ಗೆ ಮಾತನಾಡುವುದಾದ್ದಲ್ಲಿ ಮಹೀಂದ್ರ ಜಿನ್ಜಿ ಅಮೆರಿಕದಲ್ಲಿ 3,000 ಅಮೆರಿಕನ್ ಡಾಲರುಗಳಷ್ಟು ದುಬಾರಿಯಾಗಿರಲಿದೆ. ಅಂದರೆ ಇದನ್ನು ರುಪಾಯಿಗೆ ಪರಿವರ್ತಿಸಿದಾಗ 1.80,000 ಲಕ್ಷ ರು.ಗಳಷ್ಟು ಬೆಲೆಬಾಳಲಿದೆ.

ಮಹೀಂದ್ರ ಎಲೆಕ್ಟ್ರಿಕ್ ಸ್ಕೂಟರ್ 'ಜಿನ್ಜಿ' ಭಾರತಕ್ಕೂ ಬರುತ್ತಾ?

ಅಷ್ಟಕ್ಕೂ ಮಹೀಂದ್ರ ಜಿನ್ಜಿ ಭಾರತದಲ್ಲಿ ಲಾಂಚ್ ಆದ್ದಲ್ಲಿ ಯಶ ಸಾಧಿಸಲಿದೆಯೇ? ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

ಮಹೀಂದ್ರ ಎಲೆಕ್ಟ್ರಿಕ್ ಸ್ಕೂಟರ್ 'ಜಿನ್ಜಿ' ಭಾರತಕ್ಕೂ ಬರುತ್ತಾ?

ಮಹೀಂದ್ರ ಜಿನ್ಜಿ

Most Read Articles

Kannada
English summary
Mahindra GenZe is an all-electric scooter which the company will launch in the United States by the middle of this year.
Story first published: Wednesday, April 16, 2014, 16:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X