ಮಹೀಂದ್ರದಿಂದಲೂ ಕೆಫೆ ರೇಸರ್ ಜಾದೂ

Written By:

ಈಗಷ್ಟೇ ಹೀರೊ ಸ್ಲ್ಪೆಂಡರ್ ಕೆಫೆ ರೇಸರ್ ಕಾನ್ಸೆಪ್ಟ್ ಬೈಕ್‌ನ ಬಗ್ಗೆ ಮಾಹಿತಿ ಕೊಟ್ಟಿದ್ದೆವು. ಇದರ ಬೆನ್ನಲ್ಲೇ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಪ್ರತಿಷ್ಠಿತ 2014 ಆಟೋ ಎಕ್ಸ್ ಪೋದಲ್ಲಿ ಮಗದೊಂದು ಕೆಫೆ ರೇಸರ್ ಕಾನ್ಸೆಪ್ಟ್ ಪ್ರದರ್ಶನಗೊಂಡಿದೆ.

2014 ಆಟೋ ಎಕ್ಸ್ ಪೋ

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಮಹೀಂದ್ರ, ಮುಂಬೈ ತಲಹದಿಯ ಜೆಸಿ ಮೊಟೊ ಸಂಸ್ಥೆಯ ನೆರವಿನಿಂದ, ಸೆಂಚುರೊ ತಲಹದಿಯಲ್ಲಿ ಕೆಫೆ ರೇಸರ್ ಕಾನ್ಸೆಪ್ಟ್ ಅನಾವರಣಗೊಳಿಸಿದೆ.

ಮಹೀಂದ್ರ ಜೆಸಿಮೊಟೊ ಕೆಫೆ ರೇಸರ್

ಮೊದಲ ನೋಟದಲ್ಲೇ ಮಹೀಂದ್ರ ಜೆಸಿ ಮೊಟೊ ಕೆಫೆ ರೇಸರ್ ಬೈಕ್ ಹೆಚ್ಚು ಆಕರ್ಷಕವಾಗಿ ಗೋಚರಿಸುತ್ತಿದೆ.

ಮಹೀಂದ್ರ ಜೆಸಿಮೊಟೊ ಕೆಫೆ ರೇಸರ್

ಒಟ್ಟು ಎರಡು ಕಾನ್ಸೆಪ್ಟ್ ಬೈಕ್‌ಗಳನ್ನು ಮಹೀಂದ್ರ ಪ್ರದರ್ಶಿಸಿತ್ತು. ಇದೇ ಸಂದರ್ಭದಲ್ಲಿ ಸ್ಕ್ರಾಂಬ್ಲರ್ ಕಾನ್ಸೆಪ್ಟ್ ಸಹ ಮಹೀಂದ್ರ ಅನಾವರಣಗೊಳಿಸಿತ್ತು.

ಮಹೀಂದ್ರ ಜೆಸಿಮೊಟೊ ಕೆಫೆ ರೇಸರ್

ಇಲ್ಲಿ ಕಾಣಿಸಿಕೊಂಡಿರುವ ಪ್ರಮುಖ ಅಂಶವೆಂದರೆ ಎಕ್ಸಾಸ್ಟ್ ತುಂಬಾನೇ ಮೇಲ್ಗಡೆಯಾಗಿ ಲಗತ್ತಿಸಲಾಗಿದೆ. ಇದು ಬೈಕ್‌ನ ವಿಶಿಷ್ಟತೆಗೆ ಸಾಕ್ಷಿಯಾಗಿದೆ.

ಮಹೀಂದ್ರ ಜೆಸಿಮೊಟೊ ಕೆಫೆ ರೇಸರ್

ಇನ್ನು ಹೆಡ್‌ಲೈಟ್ ಮುಂದುಗಡೆ ಸೇಫ್ಟಿ ಗ್ರಿಲ್ ಪ್ರಧಾನ ಮಾಡಲಾಗಿದೆ. ಹಾಗೆಯೇ ವಿಶೇಷ ರೀತಿಯ ಸೀಟು ಹೊಂದಿಸಲಾಗಿದೆ.

ಮಹೀಂದ್ರ ಜೆಸಿಮೊಟೊ ಕೆಫೆ ರೇಸರ್

ಇವೆಲ್ಲವೂ ಒಂಥರ ವಿಂಟೇಜ್ ಬೈಕ್‌ನ ಅನುಭವ ನೀಡುತ್ತದೆ. ಸೆಂಚರೊ ಫ್ಲ್ಯಾಟ್‌ಫಾರ್ಮ್‌ನಿಂದ ಅಭಿವೃದ್ಧಿಪಡಿಸಿರುವುದರಿಂದ ಗ್ರಾಹರಿಂದ ಹೆಚ್ಚು ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದೆ.

ಮಹೀಂದ್ರ ಜೆಸಿಮೊಟೊ ಕೆಫೆ ರೇಸರ್

ಮಹೀಂದ್ರ ಜೆಸಿ ಮೊಟೊ ಕೆಫೆ ರೇಸರ್‌ ಬೈಕ್‌ನಲ್ಲಿ ಅಲ್ಯೂಮಿನಿಯಂ ಹಾಗೂ ಗ್ಲಾಸ್ ಫೈಬರ್ ಬಳಕೆ ಮಾಡಲಾಗಿದೆ. ಇದು 20 ಕೆ.ಜಿಯಷ್ಟು ಭಾರ ಕಡಿತಗೊಳಿಸುವಲ್ಲಿ ನೆರವಾಗಿದೆ.

ಮಹೀಂದ್ರ ಜೆಸಿಮೊಟೊ ಕೆಫೆ ರೇಸರ್

ಹಾಗಿದ್ದರೂ ನಿರ್ವಹಣೆಯಲ್ಲಿ ಯಾವುದೇ ರಾಜಿಗೆ ಸಂಸ್ಥೆ ತಯಾರಾಗಿಲ್ಲ. ಹಾಗೆಯೇ ಡಿಸ್ಕ್ ಬ್ರೇಕ್‌ಗಳಂತಹ ವೈಶಿಷ್ಟ್ಯಗಳನ್ನು ಪಡೆದಿದೆ.

English summary
Mahindra Two Wheelers has showcased a Cafe Racer style motorcycle at Auto Expo 2014. It’s the motorcycle that jcMoto was commissioned to build for Mahindra Two Wheelers and was unveiled at the 2014 Auto Expo.
Story first published: Wednesday, February 12, 2014, 12:13 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark