ನೀವು ರೆಡಿನಾ; ಹೀರೊದಿಂದ ಬರುತ್ತಿದೆ ಸಾಲು ಸಾಲು ಬೈಕ್ಸ್

Written By:

ಇದು ನಿರೀಕ್ಷಿತವೇ? ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೊ ಹೋಂಡಾ ಗ್ರಾಹಕರ ಬೇಡಿಕೆಯನುಸಾರವಾಗಿ ಮುಂದಿನ ಒಂದು ವರ್ಷದೊಳಗೆ 15 ನೂತನ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮುಂದಾಗಿದೆ.

ಈ ಎಲ್ಲ ಬೈಕ್‌ಗಳನ್ನು ನೂತನ ಮಾಡೆಲ್ ಅನ್ನುವುದಕ್ಕಿಂತಲೂ 15 ಹೊಸ ಉತ್ಪನ್ನ ಎಂಬ ಶೀರ್ಷಿಕೆ ನೀಡುವುದು ಹೆಚ್ಚು ಉಚಿತವಾಗುವುದು. ಯಾಕೆಂದರೆ ಈಗಾಗಲೇ ರಸ್ತೆಗಳಲ್ಲಿ ಓಡಾಡುವ ಹೀರೊ ಬೈಕ್‌ಗಳಲ್ಲಿ ಈ ನೂತನ ತಂತ್ರಗಾರಿಕೆ ಹಾಗೂ ವೈಶಿಷ್ಟ್ಯಗಳು ಆಳವಡಿಕೆಯಾಗಲಿದೆ.

ಈ ಬಗ್ಗೆ ಮಾತನಾಡಿರುವ ಹೀರೊ ಮಹಾನಿರ್ದೇಶಕ ಪವನ್ ಮುಂಜಾಲ್, 2014ರ ದೆಹಲಿ ಆಟೋ ಎಕ್ಸ್ ಪೋದಲ್ಲಿ ಎಲ್ಲ ಹೊಸತನ ಹೊಂದಿರುವ ನೂತನ ಫ್ಲಾಟ್‌ಫಾರ್ಮ್ ಮಾದರಿಗಳನ್ನು ಪರಿಚಯಿಸುವುದಾಗಿ ಘೋಷಿಸಿದೆ. ಹಾಗಿದ್ದರೆ ಬನ್ನಿ ಹೀರೊದಿಂದ ಆಗಮನವಾಗಲಿರುವ 15 ನೂತನ ಉತ್ಪನ್ನಗಳ ಬಗ್ಗೆ ಸ್ಲೈಡರ್ ಮುಖಾಂತರ ಮಾಹತಿ ಪಡೆಯೋಣವೇ...

ಸ್ಲ್ಪೆಂಡರ್ ಐಸ್ಮಾರ್ಟ್ ಜತೆ ಐ3ಎಸ್ ತಂತ್ರಗಾರಿಗೆ

ಸ್ಲ್ಪೆಂಡರ್ ಐಸ್ಮಾರ್ಟ್ ಜತೆ ಐ3ಎಸ್ ತಂತ್ರಗಾರಿಗೆ

2014ರಲ್ಲಿ ಆಗಮನವಾಗಲಿರುವ ಸ್ಲ್ಪೆಂಡರ್ ಐಸ್ಮಾರ್ಟ್ ತಂತ್ರಗಾರಿಕೆಯನ್ನು ಹೊಂದಿರಲಿದೆ. ಇದು ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನ ಹೊಂದಿರುವ ದೇಶದ ಮೊದಲ ದ್ವಿಚಕ್ರ ವಾಹನ ಎನಿಸಿಕೊಳ್ಳಲಿದೆ. ಈ ಮೂಲಕ ಇಂಧನ ಕ್ಷಮತೆಯನ್ನು ಹೆಚ್ಚಿಸಲು ನೆರವಾಗಲಿದೆ.

ಮುಂದಿನ ಜನಾಂಗದ ಪ್ಲೆಶರ್ ಆಟೋಮ್ಯಾಟಿಕ್

ಮುಂದಿನ ಜನಾಂಗದ ಪ್ಲೆಶರ್ ಆಟೋಮ್ಯಾಟಿಕ್

ಹಾಗೆಯೇ ಮುಂದಿನ ಜನಾಂಗದ ಪ್ಲೆಶರ್ ಆಟೋಮ್ಯಾಟಿಕ್ ಸ್ಕೂಟರ್, ಹೀರೊ ರೇಂಜ್ ದ್ವಿಚಕ್ರ ವಾಹನ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಇದು ಇಂಟೆಗ್ರೇಟಡ್ ಬ್ರೇಕಿಂಗ್ ಸಿಸ್ಟಂ ಹೊಂದಿರಲಿದೆ. ಇದು ಹೋಂಡಾ ಆಟೋಮ್ಯಾಟಿಕ್ ಸ್ಕೂಟರ್‌ಗಳಲ್ಲಿರುವ ಕೊಂಬೊ ಬ್ರೇಕಿಂಗ್ ಸಿಸ್ಟಂಗೆ ಸಮಾನವಾಗಿರಲಿದೆ. ಪ್ರಸ್ತುತ ತಂತ್ರಜ್ಞಾನ ಹೀರೊದ ಎಲ್ಲ ಸ್ಕೂಟರ್‌ಗಳಿಗೆ ಆಳವಡಿಕೆಯಾಗಲಿದೆ.

ನೆಕ್ಸ್ಟ್ ಜನರೇಷನ್ ಪ್ಲೆಶರ್ ಆಟೋಮ್ಯಾಟಿಕ್ ಸ್ಕೂಟರ್

ನೆಕ್ಸ್ಟ್ ಜನರೇಷನ್ ಪ್ಲೆಶರ್ ಆಟೋಮ್ಯಾಟಿಕ್ ಸ್ಕೂಟರ್

ಇದರ ಜತೆಗೆ ಮುಂದಿನ ಜನಾಂಗದ ಪ್ಲೆಶರ್ ಆಟೋಮ್ಯಾಟಿಕ್ ಸ್ಕೂಟರ್ ಮೊಬೈಲ್ ಚಾರ್ಜಿಂಗ್ ಸಾಕೆಟ್, ಲಾಕಬೆಲ್ ಗ್ಲೋವ್ ಬಾಕ್ಸ್, ಲಗ್ಗೇಜ್ ಬಾಕ್ಸ್‌ನಲ್ಲಿ ಬೂಟ್ ಲೈಟ್, ಕಾಂಬಿನೇಷನ್ ಇಗ್ನಿಷನ್ ಲಾಕ್ ಜತೆ ಸೀಟ್ ಓಪನಿಂಗ್ ಮತ್ತು ಸೈಡ್ ಸ್ಟಾಂಡ್ ಇಂಡಿಕೇಟರ್‌ಗಳಂತಹ ಹೆಚ್ಚುವರಿ ಫೀಚರುಗಳಲ್ಲಿ ಲಭ್ಯವಿರಲಿದೆ.

ನೆಕ್ಸ್ಟ್ ಜನರೇಷನ್ ಸಿಬಿಝಡ್ ಎಕ್ಸ್‌ಟ್ರೀಮ್

ನೆಕ್ಸ್ಟ್ ಜನರೇಷನ್ ಸಿಬಿಝಡ್ ಎಕ್ಸ್‌ಟ್ರೀಮ್

ಇನ್ನು 150 ಸಿಸಿ ಪ್ರೀಮಿಯಂ ಸಿಬಿಝಡ್ ಎಕ್ಸ್‌ಟ್ರೀಮ್ ಬೈಕ್‌ನಲ್ಲಿ ಎಲೆಕ್ಟ್ರಾನಿಕ್ ಇಂಮೊಬಿಲೈಜರ್ ತಂತ್ರಗಾರಿಕೆ ಆಳವಡಿಕೆಯಾಗಲಿದೆ. ಇಂದೊಂದು ಕಳ್ಳತನ ವಿರೋಧಿ ತಂತ್ರಜ್ಞಾನವಾಗಿದ್ದು, ನೈಜ ಕೀ ಬಳಸದೆ ಗಾಡಿ ಸ್ಟಾರ್ಟ್ ಮಾಡಿದ್ದಲ್ಲಿ ಎಚ್ಚರಿಸಲಿದೆ. ಇದರ ಜತೆಗೆ ಸೈಡ್ ಸ್ಟಾಂಡ್ ಸ್ವಿಚ್, ತಾಜಾ ವಿನ್ಯಾಸ ಹಾಗೂ ಗ್ರಾಫಿಕ್ಸ್, ಎಲ್‌ಇಡಿ ಟೈಲ್ ಲೈಟ್ ಹಾಗೂ ಮೊಬೈಲ್ ಚಾರ್ಜರ್ ಪಾಯಿಂಟ್‌ಗಳನ್ನು ಪಡೆಯಲಿದೆ.

ನೆಕ್ಸ್ಟ್ ಜನರೇಷನ್ 223ಸಿಸಿ ಕರಿಜ್ಮಾ ಆರ್ ಆಂಡ್ ಝಡ್‌ಎಂಆರ್

ನೆಕ್ಸ್ಟ್ ಜನರೇಷನ್ 223ಸಿಸಿ ಕರಿಜ್ಮಾ ಆರ್ ಆಂಡ್ ಝಡ್‌ಎಂಆರ್

ಅಂತರಾಷ್ಟ್ರೀಯ ಪಾಲುದಾರಿಕೆ ಹೊಂದಿರುವ ಎರಿಕ್ ಬ್ಯುಯಲ್ ರೇಸಿಂಗ್‌ನಿಂದ ತಂತ್ರಜ್ಞಾನ ಆಮದು ಮಾಡಿಕೊಳ್ಳಲಿರುವ ಹೀರೊ, ಈ ತಂತ್ರಜ್ಞಾನವನ್ನು ನೂತನ ಕರಿಜ್ಮಾದಲ್ಲಿ ಆಳವಡಿಸಲಿದೆ.

ನೆಕ್ಸ್ಟ್ ಜನರೇಷನ್ 223ಸಿಸಿ ಕರಿಜ್ಮಾ ಆರ್ ಆಂಡ್ ಝಡ್‌ಎಂಆರ್

ನೆಕ್ಸ್ಟ್ ಜನರೇಷನ್ 223ಸಿಸಿ ಕರಿಜ್ಮಾ ಆರ್ ಆಂಡ್ ಝಡ್‌ಎಂಆರ್

ನೂತನ ಕರಿಜ್ಮಾವು, ಟ್ವಿನ್ ಹೆಡ್‌ಲೈಟ್, ಸ್ಪೋರ್ಟಿ ಹ್ಯಾಂಡಲ್ ಬಾರ್, ಮಸಲರ್ ಫ್ರಂಟ್ ಫೆಂಡರ್, ಹೊಸತಾದ ಮಫ್ಲರ್ ಕವರ್, ಬಲ್ಬ್ ವಿಂಕಟ್, ಸ್ಪೋರ್ಟಿ ಸಿಟಿಂಗ್ ಹಾಗೂ ಹೆಚ್ಚು ಅಗಲವಾದ ಚಕ್ರಗಳನ್ನು ಪಡೆದುಕೊಳ್ಳಲಿದೆ.

ಇತರ ಮಾದರಿಗಳು

ಇತರ ಮಾದರಿಗಳು

ನೆಕ್ಸ್ಟ್ ಜನರೇಷನ್ 100ಸಿಸಿ ಎಚ್‌ಎಫ್ ಡಾನ್ ಮತ್ತು ಎಚ್‌ಎಫ್ ಡಿಲಕ್ಸ್: ಸೈಡ್ ಸ್ಟಾಂಡ್ ಇಂಡಿಕೇಟರ್ ಮತ್ತು ಕ್ಲಿಯರ್ ವಿಂಕರ್.

ಹೀರೊದಿಂದ 15 ನೂತನ ಮಾದರಿಗಳು ಪ್ರದರ್ಶನ

ಆಲ್ ನ್ಯೂ ಎಚ್‌ಎಫ್ ಡಿಲಕ್ಸ್ ಇಕೊ: ಲೆಗ್ ಗಾರ್ಡ್‌ನಲ್ಲಿ ಸ್ಟೈಲಿಷ್ ಏರ್ ಫಾಯಿಲ್ಸ್, ಸ್ಟೈಲಿಷ್ ಏರೋ ಮಿರರ್.

ಹೀರೊದಿಂದ 15 ನೂತನ ಮಾದರಿಗಳು ಪ್ರದರ್ಶನ

ಹೊಸ 100ಸಿಸಿ ಸ್ಲ್ಪೆಂಡರ್ ಪ್ರೊ ಮತ್ತು 125 ಸಿಸಿ ಸೂಪರ್ ಸ್ಲ್ಪೆಂಡರ್: ಹೊಸತಾದ ಗ್ರಾಫಿಕ್ಸ್, ಡಯಲ್ ಡಿಸೈನ್, ಮತ್ತು ಸೈಡ್ ಸ್ಟಾಂಡ್ ಇಂಡಿಕೇಟರ್.

ಹೀರೊದಿಂದ 15 ನೂತನ ಮಾದರಿಗಳು ಪ್ರದರ್ಶನ

ನೆಕ್ಸ್ಟ್ ಜನರೇಷನ್ 100ಸಿಸಿ ಪ್ಯಾಶನ್ ಪ್ರೊ: ಸೈಡ್ ಸ್ಟಾಂಡ್ ಇಂಡಿಕೇಟರ್, ಸರ್ವೀಸ್ ರಿಮೈಂಡರ್ ಮತ್ತು ಸ್ಟೈಲಿಷ್ ಆಲ್ ಬ್ಯಾಕ್ ಸ್ಯಾರಿ ಗಾರ್ಡ್. ಇದರ ಜತೆಗೆ ತಾಜಾ ಗ್ರಾಫಿಕ್ಸ್, ಹೊಸತಾದ ಡೈಯಲ್ ಡಿಸೈನ್ ಹಾಗೂ ನೂತನ ದೇಹ ಬಣ್ಣ.

ಹೀರೊದಿಂದ 15 ನೂತನ ಮಾದರಿಗಳು ಪ್ರದರ್ಶನ

ನೆಕ್ಸ್ಟ್ ಜನರೇಷನ್ ಗ್ಲಾಮರ್ ಆಂಡ್ ಗ್ಲಾಮರ್ ಎಫ್‌ಐ: ಹಾಗೆಯೇ ಕೊನೆಯದಾಗಿ ನೆಕ್ಸ್ಟ್ ಜನರೇಷನ್ ಗ್ಲಾಮರ್ ಮತ್ತು ಗ್ಲಾಮರ್ ಎಫ್‌ಐ ಆವೃತ್ತಿಗಳು ತಾಜಾ ರೇಸಿಂಗ್ ಗ್ರಾಫಿಕ್ಸ್ ಮತ್ತು ಡೈಯಲ್ ಡಿಸೈನ್ ಪಡೆದುಕೊಳ್ಳಲಿದೆ.

English summary
This was expected, but big news nevertheless. India's largest two wheeler maker, Hero MotoCorp has showcased its 2014 product lineup. This includes a total of 15 new models, most of which consist of existing models, but with major updates to design and technological features.
Story first published: Saturday, October 12, 2013, 4:02 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark