ರೇಸಿಂಗ್ ಜಗತ್ತಿಗೆ ಫಾರ್ಮುಲಾ ಇ ಎಲೆಕ್ಟ್ರಿಕ್ ಕಾರು ಎಂಟ್ರಿ
ಹಲವು ಕಾರಣಗಳಿಂದಾಗಿ ಮುಂಬರುವ ಫ್ರಾಂಕ್‌ಫರ್ಟ್ ಮೋಟಾರ್ ಶೋ ಹೆಚ್ಚಿನ ಪ್ರಾಮುಖ್ಯತೆಯನ್ನು ಗಿಟ್ಟಿಸಿಕೊಳ್ಳುತ್ತಿದೆ. ಹಲವಾರು ಕಾನ್ಸೆಪ್ಟ್ ಮಾಡೆಲ್‌ಗಳ ಜತೆಗೆ ನೂತನ ಕಾರುಗಳು ಬಿಡುಯಾಗುವುದು ಸಾಮಾನ್ಯವಾಗಿ ಕಂಡುಬರುತ್ತಿರುವ ದೃಶ್ಯವಾಗಿದೆ.
ಇದಕ್ಕೊಂದು ಸೇರ್ಪಡೆಯೆಂಬಂತೆ ಫಾರ್ಮುಲಾ ಒನ್ ವಿದ್ಯುತ್ ಚಾಲಿತ ಕಾರು ಇದೇ ಬರುವ ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ಪ್ರದರ್ಶನವಾಗಲಿದೆ. ಅಷ್ಟೇ ಅಲ್ಲದೆ ಎಫ್‌ಐಎ ಫಾರ್ಮುಲಾ ಇ ಚಾಂಪಿಯನ್‌ಶಿಪ್ ರೇಸಿಂಗ್‌ನಲ್ಲೂ ಭಾಗವಹಿಸಲಿದೆ.
ಫಾರ್ಮುಲಾ ಒನ್ ಇ ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲೂ ಎಫ್1 ರೇಸಿಂಗ್‌ಗೆ ಸಮಾನವಾದ ಕಾರುಗಳಿರಲಿದ್ದು, ಆದರೆ ಪೆಟ್ರೋಲ್ ಬದಲು ಎಲೆಕ್ಟ್ರಿಕ್ ಎಂಜಿನ್ ಹೊಂದಿರಲಿದೆ.

ಎಫ್1 ರೇಸ್
ಫಾರ್ಮುಲಾ ಇ ಚಾಸೀಸ್ ಎಂದು ಅರಿಯಲ್ಪಡುವ ಎಫ್1 ಇ ಕಾರನ್ನು ರೆನೊ ಹಾಗೂ ಸ್ಪಾರ್ಕ್ ರೇಸಿಂಗ್ ಟೆಕ್ನಾಲಜಿ ಜಂಟಿಯಾಗಿ ಅಭಿವೃದ್ಧಿಪಡಿಸಿದೆ.

ತಂತ್ರಜ್ಞಾನ
ಎಲೆಕ್ಟ್ರಾನಿಕ್ ನಿಯಂತ್ರಿತ ತಂತ್ರಗಾರಿಕೆ ಅಭಿವೃದ್ಧಿಯಲ್ಲೂ ರೆನೊ ಕಾರ್ಯಮಗ್ನವಾಗಿದೆ.

ಉದ್ಘಾಟನಾ ಟೂರ್ನಿ
ಉದ್ಘಾಟನಾ ರೇಸಿಂಗ್ ಟೂರ್ನಿಯಲ್ಲಿ ಗರಿಷ್ಠ 10 ತಂಡಗಳು ಭಾಗವಹಿಸುವ ಸಾಧ್ಯತೆಗಳಿವೆ. ಅಲ್ಲದೆ ಎಫ್1 ನಲ್ಲಿರುವಂತೆಯೇ ಎಲ್ಲ ತಂಡಗಳು ತಲಾ 2 ಡ್ರೈವರುಗಳನ್ನು ಹೊಂದಿರಲಿದೆ.

ರೇಸ್
ಈ ವರೆಗೆ 18 ತಂಡಗಳು ಆಸಕ್ತಿ ತೋರಿದ್ದರೂ 3 ತಂಡಗಳು ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸುವುದಾಗಿ ಖಚಿತಪಡಿಸಿದೆ.

ವೇಳಾಪಟ್ಟಿ
ಅಂದ ಹಾಗೆ ಸೆಪ್ಟಂಬರ್‌ನಲ್ಲಿ ಆರಂಭವಾಗಲಿರುವ ರೇಸ್ ಜೂನ್ 2015ರ ವರೆಗೆ ಸಾಗಲಿದೆ. ಬ್ಯಾಕಾಂಕ್, ಬ್ಯೂನಸ್ ಐರಿಸ್, ಲಂಡನ್, ರೋಮ್, ಲಾಸ್ ಏಜಂಲೀಸ್, ಮಿಯಾಮಿ, ರಿಯೊ ಡಿ ಜನೈರೊ ಹಾಗೂ ಬರ್ಲಿನ್‌ಗಳಂತಹ ನಗರಗಳಲ್ಲಿ ರೇಸ್ ನಡೆಯಲಿದೆ.

ವೇಗ
ಫಾರ್ಮುಲಾ ಇ ರೇಸ್ ಕಾರುಗಳು ಪ್ರತಿ ಗಂಟೆಗೆ 217 ಕೀ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.


Click it and Unblock the Notifications